HOME » NEWS » National-international » GUJARAT MUNICIPAL ELECTIONS RESULTS KEJRIWAL OWAISI AND MAYAWATI PARTY SPOILS CONGRESS GAME SNATCHES 37 SEATS MAK

ಗುಜರಾತ್​ ಮುನ್ಸಿಪಲ್ ಚುನಾವಣೆ; ಕಾಂಗ್ರೆಸ್ ಸ್ಥಾನಗಳನ್ನು ಕಸಿದುಕೊಂಡರಾ ಓವೈಸಿ, ಕೇಜ್ರಿವಾಲ್, ಮಾಯಾವತಿ​?

ಮೊದಲ ಬಾರಿಗೆ ಗುಜರಾತ್​ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಎಪಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ಅಹಮದಾಬಾದ್‌ನಲ್ಲಿ ಅಸದುದ್ದೀನ್ ಒವೈಸಿ ಪಕ್ಷ 7 ಸ್ಥಾನಗಳನ್ನು ಗೆದ್ದಿದ್ದರೆ, ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ 3 ಸ್ಥಾನಗಳನ್ನು ಗೆದ್ದಿದೆ.

news18-kannada
Updated:February 24, 2021, 5:01 PM IST
ಗುಜರಾತ್​ ಮುನ್ಸಿಪಲ್ ಚುನಾವಣೆ; ಕಾಂಗ್ರೆಸ್ ಸ್ಥಾನಗಳನ್ನು ಕಸಿದುಕೊಂಡರಾ ಓವೈಸಿ, ಕೇಜ್ರಿವಾಲ್, ಮಾಯಾವತಿ​?
ಅರವಿಂದ ಕೇಜ್ರಿವಾಲ್​-ಮಾಯಾವತಿ-ಓವೈಸಿ.
  • Share this:
ಗುಜರಾತ್​; ಕಳೆದ ವಾರ ಗುಜರಾತ್​ ಮುನ್ಸಿಪಲ್​ಗೆ ಚುನಾವಣೆ ನಡೆದಿದ್ದು ಅದರ ಫಲಿತಾಂಶ ನಿನ್ನೆ ಹೊರಬಿದ್ದಿತ್ತು. ಈ ಚುನಾವಣೆಯಲ್ಲಿ ಭಾರತೀಯ ಭಾರತೀಯ ಜನತಾ ಪಕ್ಷ ಸ್ಪಷ್ಟ ಗೆಲುವು ಸಾಧಿಸಿದೆ. ಅಲ್ಲದೆ, ಗುಜರಾತ್​ನಲ್ಲಿ ಚುನಾವಣೆ ನಡೆದ ಎಲ್ಲಾ 6 ಮಹಾನಗರ ಪಾಲಿಕೆಗಳಲ್ಲೂ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸಫಲವಾಗಿದೆ. ಈ ನಡುವೆ ಎಲ್ಲಾ ಮಹಾನಗರ ಪಾಲಿಕೆಗಳಲ್ಲೂ ಬಿಜೆಪಿ ತನ್ನ ಸದಸ್ಯರ ಸಂಖ್ಯೆಗಳನ್ನು ದ್ವಗುಣಗೊಳಿಸಿಕೊಂಡಿದ್ದರೆ, ಕಾಂಗ್ರೆಸ್​ ದಿನದಿಂದ ದಿನಕ್ಕೆ ನೆಲ ಕಚ್ಚುತ್ತಿದೆ. ಈ ಚುನಾವಣೆಯಲ್ಲೂ ಅತ್ಯಂತ ಹೀನಾಯವಾಗಿ ಸೋಲನುಭವಿಸಿದೆ. ಕಾಂಗ್ರೆಸ್​ ಪಾಲಿಗೆ ಅತ್ಯಂತ ಹೀನಾಯ ಫಲಿತಾಂಶ ಅಂದರೆ ಅದು ಸೂರತ್​ ಪುರಸಭೆ. ಇಲ್ಲಿ ಕಾಂಗ್ರೆಸ್​ ಶೂನ್ಯ ಸಾಧನೆ ಮಾಡುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.

ಆದರೆ, ಮೊದಲ ಬಾರಿಗೆ ಗುಜರಾತ್​ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಎಪಿ 27 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ಅಹಮದಾಬಾದ್‌ನಲ್ಲಿ ಅಸದುದ್ದೀನ್ ಒವೈಸಿ ಪಕ್ಷ 7 ಸ್ಥಾನಗಳನ್ನು ಗೆದ್ದಿದ್ದರೆ, ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ 3 ಸ್ಥಾನಗಳನ್ನು ಗೆದ್ದಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಒಟ್ಟಾರೆ 119 ಸ್ಥಾನಗಳನ್ನು ಕಳೆದುಕೊಂಡಿದೆ.

ಆರು ಪುರಸಭೆ ಚುನಾವಣೆಗಳಲ್ಲಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್​ ಬಲವನ್ನು ಮತ್ತಷ್ಟು ಕುಗ್ಗಿಸಿದೆ. ಆರು ಕ್ಷೇತ್ರಗಳಲ್ಲಿ ಒಟ್ಟು 576 ಸ್ಥಾನಗಳಲ್ಲಿ 483 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕಾಂಗ್ರೆಸ್ 55 ಸ್ಥಾನಗಳನ್ನು ಪಡೆದಿದೆ. ಇತರರು 38 ಸ್ಥಾನಗಳನ್ನು ಪಡೆದಿದ್ದಾರೆ (ಆಮ್ ಆದ್ಮಿ ಪಕ್ಷದ 27 ಸ್ಥಾನಗಳನ್ನು ಒಳಗೊಂಡಿದೆ). ಈ ಫಲಿತಾಂಶದ ಮೂಲಕ ಕಳೆದ ಚುನಾವಣೆಯ ದಾಖಲೆಯನ್ನು ಬಿಜೆಪಿ ಮುರಿದಿದೆ. 2015 ರ ಚುನಾವಣೆಯಲ್ಲಿ ಬಿಜೆಪಿ 389 ಸ್ಥಾನಗಳನ್ನು ಗೆದ್ದಿತ್ತು. 2015 ರ ಚುನಾವಣೆಯಲ್ಲಿ ಕಾಂಗ್ರೆಸ್ 174 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅಹಮದಾಬಾದ್‌ನಲ್ಲಿ ಒವೈಸಿ ನೇತೃತ್ವದ ಎಐಐಎಂ ಮತ್ತು ಸೂರತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸುವ ಮೂಲಕ ಅಧೀಕೃತವಾಗಿ ಗುಜರಾತ್​ ರಾಜಕೀಯದಲ್ಲಿ ಎಂಟ್ರಿ ಪಡೆದಂತಾಗಿದೆ.

ಅಹಮದಾಬಾದ್: ಸ್ಥಾನಗಳು - 192, ಬಿಜೆಪಿ - 159, ಕಾಂಗ್ರೆಸ್ - 25, ಇತರರು 8

ಅಹಮದಾಬಾದ್ ಮಹಾನಗರ ಪಾಲಿಕೆಯ 192 ಸ್ಥಾನಗಳಲ್ಲಿ ಬಿಜೆಪಿ 159 ಗೆದ್ದರೆ, ಕಾಂಗ್ರೆಸ್ 25 ಸ್ಥಾನಗಳನ್ನು ಗೆದ್ದಿದೆ. ಎಐಐಎಂಐಎಂ 7 ಮತ್ತು ಇಂಡಿಪೆಂಡೆಂಟ್ ಒಂದು ಸ್ಥಾನವನ್ನು ಗೆದ್ದಿದೆ.

ಸೂರತ್: ಒಟ್ಟು ಸ್ಥಾನಗಳು - 120, ಬಿಜೆಪಿ - 93, ಕಾಂಗ್ರೆಸ್ - 00, ಆಮ್ ಆದ್ಮಿ ಪಕ್ಷ - 27, ಇತರರು 08

ಸೂರತ್‌ನ 120 ಸ್ಥಾನಗಳ ಪೈಕಿ ಬಿಜೆಪಿ 93 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರ ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಮತ್ತೊಂದೆಡೆ, ಆಮ್ ಆದ್ಮಿ ಪಕ್ಷವು ಸೂರತ್‌ನಲ್ಲಿ 27 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೂರತ್‌ನಲ್ಲಿ ಎಎಪಿ ಸಾಧನೆ ಎಲ್ಲರಿಗೂ ಆಘಾತಕಾರಿಯಾಗಿದೆ ಎಂದು ಬಣ್ಣಿಸಲಾಗುತ್ತಿದೆ.ವಡೋದರಾ: ಒಟ್ಟು ಸ್ಥಾನಗಳು - 76, ಬಿಜೆಪಿ - 69, ಕಾಂಗ್ರೆಸ್ - 07, ಇತರರು 00

ವಡೋದರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಬಿಜೆಪಿ ಅಧಿಕಾರ ವಶಪಡಿಸಿಕೊಂಡಿದೆ. ವಡೋದರಾದ 76 ಸ್ಥಾನಗಳಲ್ಲಿ 69 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಕೇವಲ 7 ಸ್ಥಾನಗಳನ್ನು ಗೆದ್ದಿದೆ.

ರಾಜ್‌ಕೋಟ್: ಒಟ್ಟು ಸ್ಥಾನಗಳು - 72, ಬಿಜೆಪಿ - 68, ಕಾಂಗ್ರೆಸ್ - 04, ಇತರರು 00

ಭಾರತೀಯ ಜನತಾ ಪಕ್ಷ ಈ ಬಾರಿ ರಾಜ್‌ಕೋಟ್ ಮನ್ಪಾ ಚುನಾವಣೆಯಲ್ಲಿ 72 ಸ್ಥಾನಗಳ ಪೈಕಿ 68 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಭಾರತೀಯ ಜನತಾ ಪಕ್ಷದ ಈ ಸಿದ್ಧಾಂತದಲ್ಲಿ ಚುನಾವಣೆ ಎದುರಿಸಿದ ರಾಜ್‌ಕೋಟ್ ನಗರದ ಅನೇಕ ಯುವಕರು ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 38 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 34 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ  ಬಿಜೆಪಿ 68 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಕೇವಲ ನಾಲ್ಕು ಸ್ಥಾನಗಳನ್ನು ಗೆದ್ದಿದೆ.

ಇದನ್ನೂ ಓದಿ: ಪಾಂಡಿಚೇರಿ ಸರ್ಕಾರ ಬೀಳಿಸಿದ ಬಿಜೆಪಿ ಕೆಲಸ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ; ಶಿವಸೇನೆ ಎಚ್ಚರಿಕೆ!

ಜಮ್ನಗರ: ಒಟ್ಟು ಸ್ಥಾನಗಳು - 64, ಬಿಜೆಪಿ - 50, ಕಾಂಗ್ರೆಸ್ - 11, ಬಿಎಸ್​ಪಿ 03

ಜಮ್ನಗರ ಮಹಾನಗರ ಪಾಲಿಕೆಯ 60 ಸ್ಥಾನಗಳಲ್ಲಿ 50 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಗೆದ್ದಿದೆ. 11 ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗಿವೆ. ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳು ಮೂರು ಸ್ಥಾನಗಳಲ್ಲಿ ಗೆದ್ದಿದ್ದಾರೆ. 2015 ರಲ್ಲಿ ಜಮ್ನಗರ ನಿಗಮದ 64 ಸ್ಥಾನಗಳ ಪೈಕಿ ಬಿಜೆಪಿಗೆ 38 ಸ್ಥಾನಗಳು ದೊರೆತಿವೆ. ಕಾಂಗ್ರೆಸ್ 24 ಸ್ಥಾನಗಳನ್ನು ಕಳೆದುಕೊಂಡರೆ. ಎರಡು ಸ್ಥಾನಗಳು ಇತರ ಪಕ್ಷಗಳ ಪಾಲಾಗಿದ್ದವು.

ಭಾವನಗರ: ಒಟ್ಟು ಸ್ಥಾನಗಳು - 52, ಬಿಜೆಪಿ - 44, ಕಾಂಗ್ರೆಸ್ - 08, ಇತರರು 00

ಭಾವನಗರ ಪುರಸಭೆಯಲ್ಲಿ ಬಿಜೆಪಿ 52 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿದೆ. ಭಾವನಗರದಲ್ಲಿ 500 ಕ್ಕಿಂತ ಕಡಿಮೆ ಮುನ್ನಡೆ ಹೊಂದಿರುವ 3 ಅಭ್ಯರ್ಥಿಗಳು ಗೆದ್ದಿದ್ದಾರೆ.
Published by: MAshok Kumar
First published: February 24, 2021, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories