Jignesh Mevani: ಬೇಲ್ ಪಡೆದ ನಂತರ ಮತ್ತೊಮ್ಮೆ ಅರೆಸ್ಟ್ ಆದ ದಲಿತ ಶಾಸಕ ಮೇವಾನಿ!

Jignesh Mevani: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಶಾಸಕರನ್ನು ಬಂಧಿಸಿದ ನಂತರ ಇಂದು ಮಧ್ಯಾಹ್ನ ಅಸ್ಸಾಂನ ಸ್ಥಳೀಯ ನ್ಯಾಯಾಲಯವು ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ನೀಡಿದೆ. ದಲಿತ ಶಾಸಕನನ್ನು ಮತ್ತೆ ಬಂಧಿಸಲಾಗಿದೆ.

ಜಿಗ್ನೇಶ್ ಮೇವಾನಿ

ಜಿಗ್ನೇಶ್ ಮೇವಾನಿ

  • Share this:
ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧದ ವಿವಾದಾತ್ಮಕ ಟ್ವೀಟ್‌ಗಳ (Controversial Tweet) ಪ್ರಕರಣದಲ್ಲಿ ಜಾಮೀನು (Bail) ಪಡೆದ ಕೆಲವೇ ಕ್ಷಣಗಳಲ್ಲಿ ಗುಜರಾತ್ ಶಾಸಕ (Gujarat MLA) ಜಿಗ್ನೇಶ್ ಮೇವಾನಿ (Jignesh Mevani) ಅವರನ್ನು ಅಸ್ಸಾಂ ಪೊಲೀಸರು (Assam Police) ಮತ್ತೆ ಬಂಧಿಸಿದ್ದಾರೆ. ಮಹಿಳಾ ಪೊಲೀಸ್ (Lady Police) ಅಧಿಕಾರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಇದೀಗ ಅವರನ್ನು ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಅಸ್ಸಾಂನಲ್ಲಿ ದೂರು ದಾಖಲಿಸಿದ ನಂತರ ಗುಜರಾತ್‌ನ ಸ್ವತಂತ್ರ ಶಾಸಕರನ್ನು ಅಸ್ಸಾಂ ಪೊಲೀಸರು ಗುಜರಾತ್‌ನ ಪಾಲನ್‌ಪುರ ಸರ್ಕ್ಯೂಟ್ ಹೌಸ್‌ನಿಂದ ಏಪ್ರಿಲ್ 20 ರಂದು ಬಂಧಿಸಿದರು. ಅಸ್ಸಾಂನ ಸ್ಥಳೀಯ ನ್ಯಾಯಾಲಯ ಇಂದು ಮಧ್ಯಾಹ್ನ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ವಿಚಾರಣೆ ಪ್ರಾರಂಭವಾಗುವ ಮೊದಲು, ಪೊಲೀಸರು ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇವಾನಿಯನ್ನು ಎತ್ತಿಕೊಂಡರು.

ವಡ್ಗಾಮ್ ಶಾಸಕರನ್ನು ಬಿಗಿ ಭದ್ರತೆಯ ನಡುವೆ ಕೊಕ್ರಜಾರ್ ಜೈಲಿನಿಂದ ಬಾರ್ಪೇಟಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ.

ಅಸ್ಸಾಂನ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಮೇವಾನಿ ವಿರುದ್ಧ ಎರಡು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.ಒಂದು ಬಾರ್‌ಪೇಟಾದಲ್ಲಿ ಮತ್ತು ಇನ್ನೊಂದು ಗೋಲ್‌ಪಾರಾದಲ್ಲಿ.

ಮಹಿಳಾ ಪೊಲೀಸ್​ಗೆ ಕಿರುಕುಳ

ಮೂಲಗಳ ಪ್ರಕಾರ, ಬಾರ್ಪೇಟಾದಲ್ಲಿ ಎಫ್‌ಐಆರ್ ದಾಖಲಿಸಿದ ಮಹಿಳಾ ಪೊಲೀಸ್ ಅಧಿಕಾರಿ, ಮೇವಾನಿ ಅವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವಾಗ ತನ್ನ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆ ಆತನನ್ನು ತಡೆಯಲು ಯತ್ನಿಸಿದಾಗ ಮೇವಾನಿ ಆಕೆಯನ್ನು ತಳ್ಳಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

“ಜಿಗ್ನೇಶ್ ಮೇವಾನಿಯವರ ವಿರುದ್ಧ ಇನ್ನೂ ಎರಡು ಜಿಲ್ಲೆಗಳಾದ ಬಾರ್ಪೇಟಾ ಮತ್ತು ಗೋಲ್ಪಾರಾದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪುನಃ ಬಂಧಿಸಲು ಪೊಲೀಸರು ಕೊಕ್ರಜಾರ್‌ಗೆ ಆಗಮಿಸಿದ್ದಾರೆ ಎಂದು ತಿಳಿಯುವುದು ತುಂಬಾ ದುಃಖಕರವಾಗಿದೆ. ಅವರ ವಿರುದ್ಧ ಎರಡು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ನಾವು ಕೇಳಿದ್ದೇವೆ. ಇದು ಸಂಭವಿಸುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು ನಾವು ಅದಕ್ಕೆ ಸಿದ್ಧರಾಗಿದ್ದೇವೆ ಎಂದು ಮೇವಾನಿ ಅವರ ವಕೀಲ ಅಂಗ್‌ಶುಮನ್ ಬೋರಾ ಹೇಳಿದ್ದಾರೆ.

ಇದನ್ನೂ ಓದಿ: Congress: ಮೇ 13ರಿಂದ 3 ದಿನ ಕಾಂಗ್ರೆಸ್ ಚಿಂತನ ಶಿಬಿರ: 2024ರ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ

ಕಾಂಗ್ರೆಸ್ ಆಕ್ಷೇಪ

ಹೊಸ ಎಫ್‌ಐಆರ್‌ಗಳಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಹಿಳಾ ಪೊಲೀಸ್ ಅಧಿಕಾರಿ ಮೇವಾನಿ ಅವರಿಗೆ ಬೆಂಗಾವಲು ಏಕೆ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸುವ ಬಗ್ಗೆ ಸಾಕಷ್ಟು ದನಿಯೆತ್ತಿದ್ದ ಜಿಗ್ನೇಶ್ ಮೇವಾನಿ ಅವರನ್ನು ಏಪ್ರಿಲ್ 20 ರಂದು ಬಂಧಿಸಿದ ನಂತರ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು ಮತ್ತು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅದು ಅವರ ಕಸ್ಟಡಿಯನ್ನು ಏ.25ರ ವರೆಗೆ ವಿಸ್ತರಿಸಿತು.

ಇದನ್ನೂ ಓದಿ: Jignesh Mevani: ಗುಜರಾತ್ ದಲಿತ ಶಾಸಕ ಜಿಗ್ನೇಶ್ ಮೇವಾನಿ ಅರೆಸ್ಟ್

ಅಸ್ಸಾಂ ಪೊಲೀಸರು ಮೇವಾನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟುಹಾಕಲು ಸಂಚು, ಸಮುದಾಯವನ್ನು ಅವಮಾನಿಸುವುದು, ಕೆಲವು ದಿನಗಳ ಹಿಂದೆ ಅವರು ಹಂಚಿಕೊಂಡ ಟ್ವೀಟ್‌ನ ಆಧಾರದ ಮೇಲೆ ಶಾಂತಿಯ ವಾತಾವರಣವನ್ನು ಕದಡುವುದು ಮುಂತಾದ ಪ್ರಕರಣಗಳನ್ನು ದಾಖಲಿಸಿದ್ದಾರೆ.
Published by:Divya D
First published: