ಅಕ್ರಮ ಮದ್ಯ ಮಾರಾಟ ಎಂದು ಆರೋಪಿಸಿ ಮಹಿಳಾ ಮನೆ ಮೇಲೆ ದಾಳಿ: ಜಿಗ್ನೇಶ್​, ಹಾರ್ದಿಕ್​, ಅಲ್ಪೇಶ್​ ವಿರುದ್ಧ ಎಫ್​ಐಆರ್​​


Updated:July 7, 2018, 9:43 PM IST
ಅಕ್ರಮ ಮದ್ಯ ಮಾರಾಟ ಎಂದು ಆರೋಪಿಸಿ ಮಹಿಳಾ ಮನೆ ಮೇಲೆ ದಾಳಿ: ಜಿಗ್ನೇಶ್​, ಹಾರ್ದಿಕ್​, ಅಲ್ಪೇಶ್​ ವಿರುದ್ಧ ಎಫ್​ಐಆರ್​​
  • Share this:

ನ್ಯೂಸ್​-18 ಕನ್ನಡನವದೆಹಲಿ(ಜುಲೈ.07): ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುಜರಾತ್​ ಶಾಸಕ ಜಿಗ್ನೇಶ್​ ಮೇವಾನಿ, ಕಾಂಗ್ರೆಸ್​ ಎಂಎಲ್​ಎ ಅಲ್ಪೇಶ್​ ಥಾಕೂರ್​​ ಮತ್ತು ಪಾಟೀದಾರ್​ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್​ ಪಟೇಲ್​ ಮಹಿಳೆಯೊಬ್ಬರ ಮನೆ ಮೇಲೆ ದಾಳಿ ನಡೆಸಿದ್ದು, ಈ ಪ್ರಕರಣ ಸಂಬಂಧ ಮೂವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.


ಗುಜರಾತ್​ನ ಗಾಂಧಿನಗರದ ಸಮೀಪವೊಂದರ ಮಹಿಳಾ ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಹಿನ್ನಲ್ಲೆಯಲ್ಲಿ ಮದ್ಯ ಮಾರಾಟ ಜಾಲ ಪತ್ತೆ ಹಚ್ಚಲು ಮುಂದಾದ ಕಾಂಗ್ರೆಸ್ ಶಾಸಕ ಥಾಕೂರ್, ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಹಾರ್ದಿಕ್ ಪಟೇಲ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಚನ ಬೆನ್ ಮಕ್ವಾನ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಕಾಂಚನ ಬೆನ್ ಅವರು ಮೂವರ ವಿರುದ್ಧ ಗಾಂಧಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ದೂರಿನಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಹಾರ್ದಿಕ್ ಪಟೇಲ್, ಜಿಗ್ಗೇಶ್ ಮೇವಾನಿ ಮತ್ತು ಅಲ್ಪೇಶ್ ಥಾಕೂರ್ ತಮ್ಮ ಬೆಂಬಲಿಗರೊಂದಿಗೆ ದಾಳಿ ನಡೆಸಿದರು. ನಮ್ಮ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ, ಮದ್ಯದ ಬಾಟಲಿಗಳನ್ನು ತಂದಿಟ್ಟು, ಅಕ್ರಮ ಮದ್ಯೆ ಮಾರಾಟ ಮಾಡಲಾಗುತ್ತಿದೆ  ಎಂದು ಆರೋಪಿಸಿದ್ದಾರೆ ಎಂದು ಬರೆದಿದ್ದಾರೆ ಎನ್ನಲಾಗಿದೆ.


First published:July 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ