• Home
  • »
  • News
  • »
  • national-international
  • »
  • Gujarat Fire Blast: ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ

Gujarat Fire Blast: ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ

ಸೂರತ್​ನಲ್ಲಿ ಉಂಟಾದ ಅಗ್ನಿ ಅವಘಡ

ಸೂರತ್​ನಲ್ಲಿ ಉಂಟಾದ ಅಗ್ನಿ ಅವಘಡ

ONGC Fire Blast: ಸೂರತ್​ನಲ್ಲಿರುವ ಹಝಿರಾ ಪ್ರೋಸೆಸಿಂಗ್ ಪ್ಲಾಂಟ್​ನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ (ಓಎನ್​ಜಿಸಿ)​ಯಲ್ಲಿ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಒಂದರ ಹಿಂದೆ ಒಂದರಂತೆ ಒಟ್ಟು ಮೂರು ಸ್ಫೋಟಗಳು ಸಂಭವಿಸಿವೆ

  • Share this:

ಅಹಮದಾಬಾದ್ (ಸೆ. 24): ಗುಜರಾತ್​ನ ಸೂರತ್​ನಲ್ಲಿರುವ ಹಝಿರಾ ಪ್ರೋಸೆಸಿಂಗ್ ಪ್ಲಾಂಟ್​ನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್ (ಓಎನ್​ಜಿಸಿ)ಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಒಂದರ ಹಿಂದೆ ಒಂದರಂತೆ ಒಟ್ಟು ಮೂರು ಸ್ಫೋಟಗಳು ಸಂಭವಿಸಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ನಿದ್ರೆಯಲ್ಲಿದ್ದ ಜನರು ಭಾರೀ ಶಬ್ದ ಕೇಳಿದ ಕೂಡಲೆ ಬೆಚ್ಚಿಬಿದ್ದಿದ್ದಾರೆ. ಶಬ್ದ ಕೇಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸುತ್ತಮುತ್ತಲೂ ಬೆಂಕಿ ಆವರಿಸಿದ್ದರಿಂದ ಎಲ್ಲೆಡೆ ಹೊಗೆ ಆವರಿಸಿತ್ತು. ಒಂದು ಟರ್ಮಿನಲ್​ನಲ್ಲಿ ಸ್ಫೋಟ ಸಂಭವಿಸಿದ್ದು, ಅದು ಮತ್ತೊಂದು ಟರ್ಮಿನಲ್​ಗೆ ಹರಡಿ ಎಲ್ಲೆಡೆ ಬೆಂಕಿ ಕಾಣಿಸಿಕೊಂಡಿತು. ನಸುಕಿನ ಜಾವ ಬೆಂಕಿ ಹೊತ್ತಿದ್ದರಿಂದ ಕಪ್ಪು ಆಕಾಶ ಕೆಂಪಗಾಗಿ ಕಾಣುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಸಂಪೂರ್ಣವಾಗಿ ಬೆಂಕಿ ಕಡಿಮೆಯಾಗಿಲ್ಲ. ಆದರೆ, ನಸುಕಿನ ಜಾವದಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದರಿಂದ ಪ್ಲಾಂಟ್​ನಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಓಎನ್​ಜಿಸಿ ಹೇಳಿಕೆ ನೀಡಿದೆ. ಆದರೆ, ಮೂಲಗಳ ಪ್ರಕಾರ, ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದು, ಇನ್ನೂ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರು ಬೆಂಕಿ ಅವಘಡದಲ್ಲಿ ಸಿಲುಕಿರುವ ಸಾಧ್ಯತೆಗಳು ಹೆಚ್ಚಾಗಿವೆ.

ಗ್ಯಾಸ್​ ಪ್ಲಾಂಟ್​ನಲ್ಲಿ ಸ್ಫೋಟ ಸಂಭವಿಸಿದ್ದರಿಂದ ಹಲವು ಕಿಲೋ ಮೀಟರ್​ಗಳವರೆಗೆ ಗ್ಯಾಸ್​ನ ವಾಸನೆ ಹರಡಿತ್ತು. ನಿದ್ರೆಯಲ್ಲಿದ್ದ ಕೆಲವರು ಭೂಕಂಪವಾಗುತ್ತಿದೆ ಎಂದುಕೊಂಡರು. ನಂತರ ಬೆಳಗಾಗುತ್ತಿದ್ದಂತೆ ವಾಸ್ತವ ವಿಷಯ ತಿಳಿಯಿತು. ಇದರಿಂದ ಕೆಲಕಾಲ ಹಝೀರ ಪ್ಲಾಂಟ್​ನ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Published by:Sushma Chakre
First published: