ಅಹಮದಾಬಾದ್(ಡಿ.05): ಗುಜರಾತ್ ವಿಧಾನಸಭೆ ಚುನಾವಣೆ 2022 ರ (Gujarat Assembly Elections) ಎರಡನೇ ಹಂತದ ಮತದಾನ (Second Phase Election) ನಡೆಯುತ್ತಿದೆ. ಅಹಮದಾಬಾದ್ನ ರಾನಿಪ್ ಪ್ರದೇಶದ ನಿಶಾನ್ ಪಬ್ಲಿಕ್ ಸ್ಕೂಲ್ನಲ್ಲಿ ನಿರ್ಮಿಸಲಾದ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (ಪಿಎಂ ನರೇಂದ್ರ ಮೋದಿ ಮತದಾನ) ಮತ ಚಲಾಯಿಸಿದರು. ಬೂತ್ನಲ್ಲಿ ಪ್ರಧಾನಿ ಮೋದಿಯನ್ನು ನೋಡಿದ ಮತದಾರರು (Voters) ಸಂತಸ ವ್ಯಕ್ತಪಡಿಸಿದರು. ಪ್ರಧಾನಿ ಕೂಡ ಮತದಾರರ ಶುಭಾಶಯಗಳನ್ನು ಸ್ವೀಕರಿಸಿದರು. ಬೂತ್ನಿಂದ ಹೊರಬಂದ ಪ್ರಧಾನಿ ಮೋದಿ ಕೂಡ ಶಾಯಿಯ ಗುರುತು ತೋರಿಸಿದರು. ಮತದಾನ ಮಾಡಿದ ನಂತರ ಪ್ರಧಾನಿ ಮೋದಿ ಅವರು ತಮ್ಮ ಹಿರಿಯ ಸಹೋದರ ಸೋಮ್ ಮೋದಿ ಅವರ ಮನೆಗೆ ತೆರಳಿದ್ದಾರೆ.
ಸುದ್ದಿ ಸಂಸ್ಥೆ ANI ವರದಿ ಪ್ರಕಾರ, ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯನ್ನು ಬಿಟ್ಟು ಕಾಲ್ನಡಿಗೆಯಲ್ಲಿ ಮತಗಟ್ಟೆಗೆ ತಲುಪಿದರು. ಇಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಪ್ರಧಾನಿ ಮೋದಿ ಅವರು 2017 ಮತ್ತು 2019 ರಲ್ಲೂ ಇದೇ ಶಾಲೆಯಲ್ಲಿ ಮತ ಚಲಾಯಿಸಿದ್ದರು.
ಇದನ್ನೂ ಓದಿ: Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್ ಪ್ಲಾನ್!
ಚುನಾವಣಾ ಆಯೋಗ ಮತ್ತು ಗುಜರಾತ್ ಜನತೆಗೆ ಅಭಿನಂದನೆಗಳು
ಮತದಾನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ, ದೇಶದ ನಾಗರಿಕರು, ಗುಜರಾತ್, ಹಿಮಾಚಲ ಮತ್ತು ದೆಹಲಿಯ ಮತದಾರರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಚುನಾವಣಾ ಆಯೋಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ವಿಶ್ವದಲ್ಲಿ ಭಾರತದ ಪ್ರಜಾಪ್ರಭುತ್ವದ ಪ್ರತಿಷ್ಠೆಯನ್ನು ಹೆಚ್ಚಿಸಿದ ಚುನಾವಣಾ ಸಂಪ್ರದಾಯವನ್ನು ಅವರು ಅದ್ಭುತವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಈ ಚುನಾವಣೆಯಲ್ಲಿ ಕಂಡುಬಂದಿದೆ. ಇದರೊಂದಿಗೆ ಗುಜರಾತ್ ಜನತೆಯನ್ನು ಶ್ಲಾಘಿಸುತ್ತಾ ಗುಜರಾತ್ ಜನತೆ ಸತ್ಯವನ್ನು ಒಪ್ಪಿಕೊಳ್ಳುವ ಸ್ವಭಾವ ಹೊಂದಿದ್ದಾರೆ ಎಂದರು. ಈ ಸ್ವಭಾವದಿಂದಾಗಿ ಅವರು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Gujarat polls second phase: PM Modi casts vote in Ahmedabad
Read @ANI Story | https://t.co/EcAkh4vCca
#GujaratAssemblyPolls #PMModi pic.twitter.com/qSXJDBNZc4
— ANI Digital (@ani_digital) December 5, 2022
ಮತದಾನ ಮಾಡುವಂತೆ ಪ್ರಧಾನಿ ಜನರಿಗೆ ಮನವಿ
ಇದಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದರು. ‘ಗುಜರಾತ್ ಎರಡನೇ ಹಂತದ ಚುನಾವಣೆಯಲ್ಲಿ ಮತದಾನ ಮಾಡುವ ಎಲ್ಲರೂ ಅದರಲ್ಲೂ ಯುವಕರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನಾನು ಮನವಿ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಬಿಗ್ ಶಾಕ್, 26 ಕೈ ನಾಯಕರು ಬಿಜೆಪಿಗೆ ಸೇರ್ಪಡೆ!
ಈ ಬಾರಿ ಪ್ರಧಾನಿ ಮೋದಿ ಗುಜರಾತ್ಗಾಗಿ 31 ರ್ಯಾಲಿಗಳನ್ನು ಮಾಡಿದ್ದಾರೆ
ಶುಕ್ರವಾರ (ಡಿಸೆಂಬರ್ 2) ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗಾಗಿ ತಮ್ಮ ಪ್ರಚಾರವನ್ನು ಮುಕ್ತಾಯಗೊಳಿಸಿದ ಅವರು 31 ರ್ಯಾಲಿಗಳನ್ನು ಉದ್ದೇಶಿಸಿ ಮತ್ತು ಮೂರು ದೊಡ್ಡ ರೋಡ್ಶೋಗಳನ್ನು ನಡೆಸಿದರು. ಪ್ರಧಾನಿ ಮೋದಿಯವರ ಸಾರ್ವಜನಿಕ ಸಂಪರ್ಕದ ಪ್ರಮುಖ ಅಂಶವೆಂದರೆ ಗುರುವಾರ (ಡಿಸೆಂಬರ್ 1) ಅಹಮದಾಬಾದ್ನಲ್ಲಿ ಅವರ ರೋಡ್ಶೋ, ಇದನ್ನು ಬಿಜೆಪಿ ಮೂಲಗಳು ದೇಶದ "ಉದ್ದದ ಮತ್ತು ಅತೀ ದೊಡ್ಡ" ರೋಡ್ ಶೋ ಎಂದು ಬಣ್ಣಿಸಿದೆ. ಇದು ಸುಮಾರು 50 ಕಿಲೋಮೀಟರ್ ಉದ್ದದ ರೋಡ್ ಶೋ ಆಗಿದ್ದು, ನಗರದ 13 ವಿಧಾನಸಭಾ ಸ್ಥಾನಗಳು ಮತ್ತು ಗಾಂಧಿನಗರದ ಒಂದು ವಿಧಾನಸಭಾ ಕ್ಷೇತ್ರದ ಮೂಲಕ ಸಾಗಿತ್ತು.
ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ ಗುಜರಾತ್ನ 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಾರಂಭವಾಯಿತು ಎಂಬುವುದು ಉಲ್ಲೇಖನೀಯ. ಈ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ 69 ಮಹಿಳೆಯರು ಸೇರಿದಂತೆ ಒಟ್ಟು 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡೂ ಹಂತದ ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ