ಗುಜರಾತ್ನಲ್ಲಿ ಬಿಜೆಪಿ ಗೆಲುವಿನ (BJP) ಜಯಭೇರಿ ಬಾರಿಸುತ್ತಿದೆ. ಈ ಹಿಂದೆ ತಾನೇ ನಿರ್ಮಿಸಿದ್ದ ಇತಿಹಾಸವನ್ನು ಮುರಿದು ಹೊಸ ದಾಖಲೆಯನ್ನೇ ನಿರ್ಮಿಸುವ ಉತ್ಸಾಹದಲ್ಲಿದೆ. ಅಲ್ಲದೇ ಗುಜರಾತ್ ಚುನಾವಣೆಯ (Gujarat Assembly Elections Results Today) ಇತಿಹಾಸದಲ್ಲೇ ಇದುವರೆಗೆ ಯಾವುದೇ ಒಂದು ಪಕ್ಷ 150 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿರಲಿಲ್ಲ. 1985ರಲ್ಲಿ ಕಾಂಗ್ರೆಸ್ 149 ಸ್ಥಾನಗಳಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿತ್ತು. ಆದರೆ ಇಂದಿನ ಚುನಾವಣೆಯ ಫಲಿತಾಂಶದ (Election Results 2022) ಮೂಲಕ ಈ ಸಂಖ್ಯೆಯನ್ನೂ ಮೀರಿ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳೂ ತೋರುತ್ತಿದೆ.
11:30ರ ಅಪ್ಡೇಟ್ ಪ್ರಕಾರ ಗುಜರಾತ್ನಲ್ಲಿ ಬಿಜೆಪಿ 156 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 4 ಕ್ಷೇತ್ರಗಳಲ್ಲಿ ಈಗಾಗಲೇ ಗೆಲುವು ಸಾಧಿಸಿದೆ. 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಅಧಿಕಾರದ ಗದ್ದುಗೆಯತ್ತ ಬಿಜೆಪಿ ನಡೆ
ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆಗೆ ಏರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಇದನ್ನೂ ಓದಿ: Gujarat Election Result 2022: ಈ 10 ಜನಪ್ರಿಯ ನಾಯಕರ ಪ್ರತಿಷ್ಠೆ ಕಣಕ್ಕೆ, ಫಲಿತಾಂಶದಿಂದ ಭವಿಷ್ಯ ನಿರ್ಧಾರ
ಗುಜರಾತ್ನಲ್ಲಿ ಬಹುಮತಕ್ಕೆ ಎಷ್ಟು ಸ್ಥಾನ ಅಗತ್ಯವಿದೆ?
ಗುಜರಾತ್ನಲ್ಲಿ ಒಟ್ಟು 182 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತ ಸಾಧಿಸಲು ಬೇಕಾದ ಬಹುಮತದ ಸಂಖ್ಯೆ 92 ಆಗಿದೆ. ಇನ್ನು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡರೆ ಗುಜರಾತ್ ಚುನಾವಣೆ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ