• Home
  • »
  • News
  • »
  • national-international
  • »
  • Gujarat Election Result 2022: ಬಿಜೆಪಿಯ ದಾಖಲೆ ನಿರ್ಮಿಸಿ ಗೆಲ್ಲುತ್ತೆ; ಅಮಿತ್ ಶಾ ಭವಿಷ್ಯ ನಿಜವಾಯ್ತು ನೋಡಿ!

Gujarat Election Result 2022: ಬಿಜೆಪಿಯ ದಾಖಲೆ ನಿರ್ಮಿಸಿ ಗೆಲ್ಲುತ್ತೆ; ಅಮಿತ್ ಶಾ ಭವಿಷ್ಯ ನಿಜವಾಯ್ತು ನೋಡಿ!

ಅಮಿತ್ ಶಾ

ಅಮಿತ್ ಶಾ

ಚುನಾವಣೆಗೂ ಮುನ್ನ ನಡೆದ ಸಂದರ್ಶನದಲ್ಲಿ ಅಮಿತ್ ಶಾ ಬಿಜೆಪಿ ಪಕ್ಷವು ಗುಜರಾತ್‌ನಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

  • Share this:

ಗುರುವಾರ ನಡೆದ ಗುಜರಾತ್ ಚುನಾವಣೆಯಲ್ಲ (Gujarat Election Result 2022)  ಬಿಜೆಪಿ 182 ಸದಸ್ಯ ಬಲದ ಅಸೆಂಬ್ಲಿಯಲ್ಲಿ 157 ಸ್ಥಾನಗಳಲ್ಲಿ ದಾಖಲೆ ಮುರಿಯುವ ಮೂಲಕ ಮುನ್ನಡೆ ಸಾಧಿಸಿದೆ. ಪಾಟಿದಾರ್ ಹಾಗೂ ಬುಡಕಟ್ಟು ಸಮುದಾಯಗಳಲ್ಲಿ ಆಮ್ ಆದ್ಮಿ ಪಾರ್ಟಿ (AAP) ಲಾಭ ಗಳಿಸಿದ್ದು, 2017 ರ ಚುನಾವಣೆಯಲ್ಲಿ ಗಳಿಸಿದ ಲಾಭವನ್ನು ಬಳಸಿಕೊಳ್ಳುವಲ್ಲಿ ವಿಫಲವಾದ ಕಾಂಗ್ರೆಸ್ (Congress) ಈ ಬಾರಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಡಿಸೆಂಬರ್ 12 ರಂದು ಭೂಪೇಂದ್ರ ಪಟೇಲ್ (Bhupendra Patel)  ಗುಜರಾತ್ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷ ಗುರುವಾರ ಪ್ರಕಟಿಸಿದೆ.


ಸೋಮವಾರ ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್ ತಿಳಿಸಿದ್ದಾರೆ.


ಕಾಂಗ್ರೆಸ್ ದಾಖಲೆ ಮುರಿದ ಬಿಜೆಪಿ
ಇದೀಗ ಬಿಜೆಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಇದುವರೆಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ್ದ ಕಾಂಗ್ರೆಸ್ ದಾಖಲೆಯನ್ನು ನುಚ್ಚುನೂರಾಗಿಸಿದೆ. ಚುನಾವಣೆಗೂ ಮುನ್ನ ನಡೆದ ಸಂದರ್ಶನದಲ್ಲಿ ಅಮಿತ್ ಶಾ ಬಿಜೆಪಿ ಪಕ್ಷವು ಗುಜರಾತ್‌ನಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದ ವಿಡಿಯೋ ಇದೀಗ ವೈರಲ್ ಆಗಿದೆ. ಶಾ ಸಂದರ್ಶನದಲ್ಲಿ ಬಿಜೆಪಿಯು ಈವರೆಗಿನ ದಾಖಲೆಗಳನ್ನು ಮುರಿದು ಅತ್ಯದ್ಭುತ ರೀತಿಯಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದರು.
ಅಮಿತಾ ಶಾ ಊಹೆ ಗುಜರಾತ್‌ನಲ್ಲಿ ನಿಜವಾಯಿತು
ಇದುವರೆಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ದಾಖಲೆ ಕಾಂಗ್ರೆಸ್‌ನದಾಗಿದ್ದು 1985ರಲ್ಲಿ ಮಾಧವ್ ಸಿಂಗ್ ಸೋಲಂಕಿ ಸರ್ಕಾರ 149 ಸ್ಥಾನಗಳನ್ನು ಗೆದ್ದಿತ್ತು ಈ ದಾಖಲೆಯನ್ನು ಬಿಜೆಪಿ ಸರಕಾರ ಮೀರಿಸಲಿದೆಯೇ ಎಂದು ಸಂದರ್ಶಕರು ಅಮಿತ್ ಷಾ ಅವರನ್ನು ಪ್ರಶ್ನಿಸಿದ್ದರು.


ಇದನ್ನೂ ಓದಿ: Jai Ram Thakur: ಕರ್ನಾಟಕದ ಅಳಿಯನ ಹಿಮಾಚಲ ಜಯಭೇರಿ!


ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಸೀಟು ನೀವು ದೊರಕಿಸಿಕೊಡುತ್ತೀರಿ ಎಂದು ಕೇಳಿದ್ದರು. ಸೀಟುಗಳ ಹಂಚಿಕೆಯಲ್ಲಿ ನಾನು ಇದೀಗ ಉತ್ತರ ನೀಡುವುದು ಅವಸರದ ಹೇಳಿಕೆಯಾಗಬಹುದು. ಆದರೂ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಇಲ್ಲಿಯವರೆಗೆ ದಾಖಲಿಸಿರುವ ಮತಗಳನ್ನು ಮೀರಿ ದಾಖಲೆಯ ಮತಗಳನ್ನು ಜಯಿಸಲಿದೆ ಎಂದು ತಿಳಿಸಿದ್ದರು. ಬಿಜೆಪಿಯು ಸರ್ವಾನುಮತದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂಬುದಾಗಿ ನಾನು ದೃಢನಿಶ್ಚಯದಿಂದ ಹೇಳಬಲ್ಲೆ ಎಂದು ಅಮಿತ್ ಷಾ ತಿಳಿಸಿದ್ದರು.


ಪ್ರಧಾನಿ ಹಾಗೂ ಗೃಹ ಸಚಿವರಿಂದ ಟ್ವೀಟ್
ಇದೀಗ ಗುಜರಾತ್‌ನಲ್ಲಿ ಬಿಜೆಪಿ ದಾಖಲೆ ನಿರ್ಮಿಸಿ ಗೆದ್ದಿದ್ದು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತೀಯ ಜನತಾ ಪಕ್ಷವನ್ನು ಅಭಿನಂದಿಸಿದ್ದಾರೆ. ಬಿಜೆಪಿಯ ಉತ್ತಮ ಆಡಳಿತದಲ್ಲಿ ಜನತಾ ಜನಾರ್ದನನ ಅಚಲ ನಂಬಿಕೆಯ ವಿಜಯವಾಗಿದೆ. ಗುಜರಾತ್‌ಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರು ದಾಖಲೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮೂರು ದಾಖಲೆಗಳನ್ನು ಮಾಡಿರುವುದಾಗಿ ತಿಳಿಸಿರುವ ಬಿಜೆಪಿ ರಾಜಾಧ್ಯಕ್ಷ ಸಿ.ಆರ್.ಪಾಟೀಲ್ ಅತಿ ಹೆಚ್ಚು ಸ್ಥಾನ ಗಳಿಸಿ ಪಕ್ಷ ದಾಖಲೆ ನಿರ್ಮಿಸಿದೆ. ಅತಿ ಹೆಚ್ಚು ಮತ ಗಳಿಸಿದೆ. ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದೆ ಇದು ಬಿಜೆಪಿಗೆ ಸಂದ ಜಯ ಎಂದು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Gujarat Election Result 2022: ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷದ ಉಗಮ! 10 ವರ್ಷಕ್ಕೇ ಈ ಸಾಧನೆ


ಬಿಜೆಪಿಯ ಮೇಲಿರುವ ಅಚಲವಾದ ನಂಬಿಕೆಯ ಪ್ರತೀಕವಾಗಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯವನ್ನು ತಂದುಕೊಟ್ಟ ರಾಜ್ಯದ ಎಲ್ಲಾ ಮತದಾರರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ" ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: