• Home
  • »
  • News
  • »
  • national-international
  • »
  • Gujarat Election: ಗುಜರಾತ್‌ ಚುನಾವಣೆ: ಪೋಸ್‌ ನೀಡಿ ಫೋಟೋ ಪೋಸ್ಟ್‌ ಮಾಡಿದ್ದ ಐಎಎಸ್‌ ಅಧಿಕಾರಿ ವಜಾ

Gujarat Election: ಗುಜರಾತ್‌ ಚುನಾವಣೆ: ಪೋಸ್‌ ನೀಡಿ ಫೋಟೋ ಪೋಸ್ಟ್‌ ಮಾಡಿದ್ದ ಐಎಎಸ್‌ ಅಧಿಕಾರಿ ವಜಾ

ಐಎಎಸ್ ಅಭಿಷೇಕ್ ಸಿಂಗ್

ಐಎಎಸ್ ಅಭಿಷೇಕ್ ಸಿಂಗ್

ಭಾರೀ ಕುತೂಹಲ ಮೂಡಿಸಿರುವ ಗುಜರಾತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಪ್ರಚಾರದ ಕಾವು ಹೆಚ್ಚಾಗಿದೆ. 182 ಸದಸ್ಯರನ್ನು ಆಯ್ಕೆ ಮಾಡಲು ಎರಡು ಹಂತಗಳಲ್ಲಿ ಅಂದರೆ ಡಿಸೆಂಬರ್ 1 ರಿಂದ 5 ರವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

  • Trending Desk
  • Last Updated :
  • Karnataka, India
  • Share this:

    ದೆಹಲಿ: ತಮ್ಮ ಸರ್ಕಾರಿ ಅಧಿಕೃತ ಸ್ಥಾನವನ್ನು ಪಬ್ಲಿಸಿಟಿ ಸ್ಟಂಟ್‌ ಆಗಿ ಬಳಸಿಕೊಂಡ ಹಿನ್ನೆಲೆಯಲ್ಲಿ ಗುಜರಾತ್‌ ಚುನಾವಣಾ (Gujarat Election) ಕರ್ತವ್ಯದಿಂದ ವಜಾಗೊಂಡಿರುವ ಐಎಎಸ್‌ ಅಧಿಕಾರಿ ಅಭಿಷೇಕ್‌ ಸಿಂಗ್‌ ಅವರು (IAS officer Abhishek Singh) ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಸಾರ್ವಜನಿಕ ಕರ್ತವ್ಯಕ್ಕಾಗಿ ವರದಿ ಮಾಡುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ (Social Media) ಹಾಕಿದ್ದ ಪೋಸ್ಟ್‌ ನಲ್ಲಿ ಏನೂ ತಪ್ಪಿಲ್ಲ‌.‌ ಇದು ಪ್ರಚಾರ ಅಥವಾ ಸ್ಟಂಟ್‌ ಅಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ.


    ಗುಜರಾತ್ ಚುನಾವಣಾ ಕರ್ತವ್ಯದಿಂದ ವಜಾಗೊಂಡಿರುವ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್‌ ಹಾಕಿದ್ದು ಇದರಲ್ಲಿ ತಮ್ಮದು ಸ್ಟಂಟ್‌ ಅಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಪೋಸ್ಟ್‌ನ ಹಿಂದಿನ ಉದ್ದೇಶಗಳನ್ನು ವಿವರಿಸಿದ್ದಾರೆ.


    ಹೊಸ ಪೋಸ್ಟ್​ನಲ್ಲೇನಿದೆ?
    "ಸಾರ್ವಜನಿಕ ಸೇವಕ, ಸಾರ್ವಜನಿಕರ ಹಣದಿಂದ ಖರೀದಿಸಿದ ಕಾರಿನಲ್ಲಿ, ಸಾರ್ವಜನಿಕ ಕರ್ತವ್ಯಕ್ಕೆ ವರದಿ ಮಾಡುವುದು, ಸಾರ್ವಜನಿಕ ಅಧಿಕಾರಿಗಳೊಂದಿಗೆ ಸಾರ್ವಜನಿಕರಿಗೆ ಸಂವಹನ ಮಾಡುವುದು... ಇದು ಪ್ರಚಾರ ಅಥವಾ ಸ್ಟಂಟ್ ಅಲ್ಲ" ಎಂದಿದ್ದಾರೆ. ಅಲ್ಲದೇ ಈ ಉತ್ತರ ಪ್ರದೇಶ ಕೇಡರ್ ಅಧಿಕಾರಿ, ಚುನಾವಣಾ ಆಯೋಗದ ಕ್ರಮವನ್ನು ನಮ್ರತೆಯಿಂದ ಸ್ವೀಕರಿಸುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.


    ಅಭಿಷೇಕ್ ಸಿಂಗ್ ಅವರನ್ನು ಅಹಮದಾಬಾದ್‌ನ ಬಾಪುನಗರ ಮತ್ತು ಅಸರ್ವಾ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನಾಗಿ ನಿಯೋಜಿಸಲಾಗಿತ್ತು. ಸಿಂಗ್ ಅವರು ಸಾಮಾಜಿಕ ಜಾಲತಾಣ ಇನ್‌ ಸ್ಟಾಗ್ರಾಂ ಹಾಗೂ ಟ್ವಿಟ್ಟರ್‌ ನಲ್ಲಿ ತಮ್ಮ ಎರಡು ಫೋಟೋಗಳನ್ನು ಹಂಚಿಕೊಂಡಿದ್ದರು.


    ಫೋಸ್‌ ನೀಡಿದ ಫೋಟೋ ಪೋಸ್ಟ್‌ ಮಾಡಿದ್ದ ಅಧಿಕಾರಿ
    ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿರುವ ಒಂದು ಫೋಟೋದಲ್ಲಿ ಅವರು ಮುಂಭಾಗದಲ್ಲಿ "ವೀಕ್ಷಕ" ಎಂದು ಬರೆದಿರುವ ಅಧಿಕೃತ ಕಾರಿನ ಪಕ್ಕದಲ್ಲಿ ನಿಂತು ಪೋಸ್‌ ನೀಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು ಇನ್ನೂ ಮೂವರು ಅಧಿಕಾರಿಗಳು ಮತ್ತು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯ ಜೊತೆ ನಿಂತು ಫೋಟೋ ತೆಗೆಸಿಕೊಂಡು ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಗಳಿಗೆ ಗುಜರಾತ್ ಚುನಾವಣೆಗೆ ವೀಕ್ಷಕರಾಗಿ ಸೇರ್ಪಡೆಗೊಂಡಿದ್ದೇನೆ ಎಂಬುದಾಗಿ ಶೀರ್ಷಿಕೆ ನೀಡಿದ್ದರು.


    ಇನ್ನು ಟ್ವಿಟರ್‌ ಹಾಗೂ ಇನ್‌ ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾದ ಅಭಿಷೇಕ್‌ ಸಿಂಗ್‌ ಅವರ ಫೋಟೋ ಸ್ಟಂಟ್‌ ಅನ್ನು ಚುನಾವಣಾ ಆಯೋಗ ಬಹಳ ಗಂಭೀರವಾಗಿ ಪರಿಗಣಿಸಿದೆ. ತಕ್ಷಣವೇ ಕ್ರಮ ಕೈಗೊಂಡ ಚುನಾವಣಾ ಆಯೋಗ ಅಭಿಷೇಕ್‌ ಸಿಂಗಗ್​ರನ್ನು ಸಾಮಾನ್ಯ ವೀಕ್ಷಕ ಕರ್ತವ್ಯದಿಂದ ತಕ್ಷಣವೇ ತೆಗೆದು ಹಾಕಿದೆ. ಅಲ್ಲದೇ ಮುಂದಿನ ಆದೇಶದವರೆಗೆ ಯಾವುದೇ ಚುನಾವಣಾ ಸಂಬಂಧಿತ ಕರ್ತವ್ಯದಿಂದ ಅವರನ್ನು ಡಿಬಾರ್ ಮಾಡಲಾಗಿದೆ ಎಂಬುದಾಗಿ ಆದೇಶ ನೀಡಿದೆ.


    ಇದನ್ನೂ ಓದಿ: Man Suicide: ಹದಗೆಟ್ಟ ರಸ್ತೆಯಲ್ಲಿ ಜೀವಬಿಟ್ಟ ಗರ್ಭಿಣಿ ಪತ್ನಿ, ಆಘಾತ ಸಹಿಸಲಾಗದೇ ನೇಣಿಗೇರಿದ ಪತಿ!


    ಅಧಿಕಾರಿಯು ತಕ್ಷಣವೇ ಕ್ಷೇತ್ರವನ್ನು ತೊರೆದು ಅವರ ಪೋಷಕ ವರ್ಗಕ್ಕೆ ವರದಿ ಮಾಡುವಂತೆ ಆದೇಶಿಸಲಾಗಿದೆ. ಅವರ ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದ ಕಾರು ಸೇರಿದಂತೆ ಗುಜರಾತ್‌ನಲ್ಲಿ ಅವರಿಗೆ ಒದಗಿಸಲಾದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಸಹ ವಾಪಸ್‌ ಪಡೆಯಲಾಗಿದೆ. ಅಲ್ಲದೇ ಅಭೀಷೇಕ್‌ ಸಿಂಗ್ ಅವರ ಸ್ಥಾನಕ್ಕೆ ಮತ್ತೊಬ್ಬ ಐಎಎಸ್ ಅಧಿಕಾರಿ ಕ್ರಿಶನ್ ಬಾಜ್‌ಪೇಯ್ ಅವರನ್ನು ನೇಮಿಸಲಾಗಿದೆ.


    ಇದನ್ನೂ ಓದಿ: Hindu-Muslim Love Story: ಹಿಂದೂ ಹುಡುಗನ ಪ್ರೀತಿಸಿ, ಮದ್ವೆಯಾದ ಮುಸ್ಲಿಂ ಯುವತಿ! ಸನಾತನ ಧರ್ಮ ಸ್ವೀಕರಿಸಿದವಳಿಗೆ ಸಂತರ ಆಶೀರ್ವಾದ


    ಇನ್ನು, ಭಾರೀ ಕುತೂಹಲ ಮೂಡಿಸಿರುವ ಗುಜರಾತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಪ್ರಚಾರದ ಕಾವು ಹೆಚ್ಚಾಗಿದೆ. 182 ಸದಸ್ಯರನ್ನು ಆಯ್ಕೆ ಮಾಡಲು ಎರಡು ಹಂತಗಳಲ್ಲಿ ಅಂದರೆ ಡಿಸೆಂಬರ್ 1 ರಿಂದ 5 ರವರೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. 1998 ರಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಈ ಬಾರಿಯೂ ಪ್ರತಿಪಕ್ಷಗಳನ್ನು ಸೋಲಿಸಿ ಮತ್ತೆ ಸರ್ಕಾರ ರಚಿಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

    Published by:ಗುರುಗಣೇಶ ಡಬ್ಗುಳಿ
    First published: