• Home
  • »
  • News
  • »
  • national-international
  • »
  • Gujarat Election 2022: ಬಿಜೆಪಿಯಿಂದ ಮೊದಲ ಲಿಸ್ಟ್​ ಔಟ್​; 38 ಹಾಲಿ ಶಾಸಕರಿಗೆ ಗೇಟ್ ಪಾಸ್​!

Gujarat Election 2022: ಬಿಜೆಪಿಯಿಂದ ಮೊದಲ ಲಿಸ್ಟ್​ ಔಟ್​; 38 ಹಾಲಿ ಶಾಸಕರಿಗೆ ಗೇಟ್ ಪಾಸ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, 182 ಸೀಟುಗಳ ಪೈಕಿ 160 ಕ್ಷೇತ್ರಗಳಲ್ಲಿ 38 ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದೆ.

  • News18 Kannada
  • Last Updated :
  • Karnataka, India
  • Share this:

ನವದೆಹಲಿ (ನ.10): ಡಿಸೆಂಬರ್​ 1 ಮತ್ತು 5ರಂದು ಗುಜರಾತ್​​ (Gujarat) ವಿಧಾನಸಭೆಗೆ 2 ಹಂತಗಳಲ್ಲಿ ಚುನಾವಣೆ (Assembly Election) ನಡೆಯಲಿದೆ. ಒಟ್ಟು 182 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಿಗೆ ಇವತ್ತು ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​ ಅಭ್ಯರ್ಥಿಗಳನ್ನ (Candidate) ಘೋಷಿಸಿದ್ದಾರೆ. ಐವರು ಸಚಿವರು ಸೇರಿದಂತೆ 38 ಹಾಲಿ ಶಾಸಕರಿಗೆ (MLA) ಟಿಕೆಟ್ ನಿರಾಕರಿಸಲಾಗಿದೆ. ಕಳೆದ ತಿಂಗಳು ಮೊರ್ಬಿಯಲ್ಲಿ ಸೇತುವೆ ಕುಸಿದು 135 ಮಂದಿ ಸಾವನ್ನಪ್ಪಿದ್ದು, ಮೊರ್ಬಿ ಶಾಸಕ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬ್ರಿಜೇಶ್ ಮೆರ್ಜಾ ಅವರು ಬಿಜೆಪಿ ಘೋಷಿಸಿದ 160 ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ.160 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ


182 ಕ್ಷೇತ್ರಗಳಿಗೆ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದೆ. ಇದ್ರಲ್ಲಿ ಐವರು ಹಾಲಿ ಗುಜರಾತ್​ ಸಚಿವರಿಗೆ ಬಿಜೆಪಿ ಟಿಕೆಟ್​ ಕೊಟ್ಟಿಲ್ಲ. ಅಷ್ಟೇ ಅಲ್ಲ 33 ಹಾಲಿ ಬಿಜೆಪಿ ಶಾಸಕರನ್ನೂ ಕೈಬಿಟ್ಟು ಹೊಸಬರು, ಯುವಕರು, ಮಾಜಿ ಶಾಸಕರುಗಳಿಗೆ ಬಿಜೆಪಿ ಟಿಕೆಟ್​​ ಘೋಷಿಸಿದೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ 14 ಮಹಿಳೆಯರು, 13 ಪರಿಶಿಷ್ಟ ಜಾತಿ ಮುಖಂಡರು ಮತ್ತು 24 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.


himachal pradesh election scheduled on november 12 2022 and gujarat election is not scheduled yethimachal pradesh election scheduled on november 12 2022 and gujarat election is not scheduled yet
ಸಾಂದರ್ಭಿಕ ಚಿತ್ರ

ಬ್ರಿಜೇಶ್​​ ಮಿರ್ಜಾ ಕೈ ತಪ್ಪಿದ ಟಿಕೆಟ್


ಕಳೆದ ತಿಂಗಳು (ಅ​ 30ರಂದು) ಮೊರ್ಬಿ ತೂಗುಸೇತುವೆ ಕಳಚಿಬಿತ್ತು. 200ಕ್ಕೂ ಹೆಚ್ಚು ಜನ ನೀರಲ್ಲಿ ಬಿದ್ರು. 134 ಜನ ಸಾವನ್ನಪ್ಪಿದ್ರು. ಘಟನೆ ದಿನ ಸ್ಥಳದಲ್ಲಿದ್ದ ಮಾಜಿ ಶಾಸಕ ಕಾಂತಿಲಾಲ್ ಅಮರ್ತಿಯಾ ಸೊಂಟಕ್ಕೆ ಸೇಫ್ಟಿ ಟೈರ್​ ಕಟ್ಕೊಂಡು ತಕ್ಷಣ ನೀರಿಗೆ ಜಿಗಿದಿದ್ರು. ನೀರಲ್ಲಿ ಮುಳುಗ್ತಿದ್ದ ಹಲವರನ್ನ ರಕ್ಷಣೆ ಮಾಡಲು ಸಹಾಯ ಮಾಡಿದ್ರು. ಈ ವಿಡಿಯೋ ದೊಡ್ಡ ಸುದ್ದಿ ಮಾಡ್ತು. ಈಗ ಅದೇ ಕಾಂತಿಲಾಲ್​​ಗೆ ಮೊರ್ಬಿಯಿಂದ ಟಿಕೆಟ್​ ಕೊಟ್ಟಿದೆ. ​ಮೊರ್ಬಿ ದುರಂತಕ್ಕೆ 134 ಜನರ ಸಾವಿಗೆ ಉದ್ಯೋಗ ಖಾತೆ ಸಚಿವ ಹಾಗು ಮೊರ್ಬಿ ಶಾಸಕ ಬ್ರಿಜೇಶ್​​ ಮಿರ್ಜಾರನ್ನ ಹೊಣೆ ಮಾಡಿದ್ದು ಟಿಕೆಟ್​​ ನೀಡಿಲ್ಲ
ನಿಮಾಬೆನ್ ಆಚಾರ್ಯ ಕೈ ತಪ್ಪಿದ ಟಿಕೆಟ್​


2012 ಮತ್ತು 2017ರಲ್ಲಿ ಕಚ್ ಜಿಲ್ಲೆಯ ಭುಜ್ ಕ್ಷೇತ್ರದಿಂದ ಗೆದ್ದಿದ್ದ ಗುಜರಾತ್ ವಿಧಾನಸಭೆ ಸ್ಪೀಕರ್ ನಿಮಾಬೆನ್ ಆಚಾರ್ಯ ಅವರಿಗೂ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ.


ಹಾಲಿ ಸಿಎಂ ಭೂಪೇಂದ್ರ ಪಟೇಲ್ ಅವರು 2017ರ ಚುನಾವಣೆಯಲ್ಲಿ ಗೆದ್ದಿದ್ದ ಘಟ್ಲೋಡಿಯಾದಿಂದಲೇ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಅವರು ಮಜುರಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇನ್ನು ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾಗೆ ಜಮ್ನಾಗರ್​ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಲಾಗಿದೆ. ವಿರಾಮ್​ಗಮ್​ ಕ್ಷೇತ್ರದಿಂದ ಹಾರ್ದಿಕ್​ ಪಟೇಲ್​​ಗೆ ಟಿಕೆಟ್​ ಘೋಷಣೆ ಮಾಡಲಾಗಿದೆ.


ವಿಜಯ್​ ರೂಪಾನಿ ಕೈ ತಪ್ಪಿದ ಟಿಕೆಟ್​


ಗುಜರಾತ್​ ಮಾಜಿ ಸಿಎಂ ವಿಜಯ್​ ರೂಪಾನಿಗೆ ಟಿಕೆಟ್​ ಕೈತಪ್ಪಿದೆ. 2012, 2017ರಲ್ಲಿ ಗೆದ್ದಿದ್ದ ಗುಜರಾತ್​ ಸ್ಪೀಕರ್​ ನಿಮಾಬೆನ್​ ಆಚಾರ್ಯ ಅವ್ರಿಗೂ ಬಿಜೆಪಿ ಟಿಕೆಟ್​ ನೀಡಿಲ್ಲ. ಮಾಜಿ ಉಪಮುಖ್ಯಮಂತ್ರಿ ನಿತಿನ್​ ಪಟೇಲ್​, ಮಾಜಿ ಸಚಿವ ಆರ್​.ಸಿಫಾಲ್ದು ಹಿರಿಯ ನಾಯಕ ಪ್ರದೀಪ್​ ಸಿಂಹ ಜಡೇಜಾಗೂ ಟಿಕೆಟ್​ ನೀಡಿಲ್ಲ.


ಇದನ್ನೂ ಓದಿ: Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಬಿಗ್ ಶಾಕ್, 26 ಕೈ ನಾಯಕರು ಬಿಜೆಪಿಗೆ ಸೇರ್ಪಡೆ!


ಹಿರಿಯ ಕೈ ತಪ್ಪಿದ ಟಿಕೆಟ್​


ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ 2023ರ ವಿಧಾನಸಭೆ ಚುನಾವಣೆಗೆ ಹೊಸ ಮುಖಗಳಿಗೆ ಆದ್ಯತೆ ನೀಡಿ ಎಂದು ರಾಜ್ಯಸಭಾ ಬಿಜೆಪಿ ಸಂಸದ ಲೆಹರ್ ಸಿಂಗ್ ಆಗ್ರಹಿಸಿದ್ದಾರೆ. ಈ ಕುರಿತಾಗಿ ಅವರ ಮಾಡಿರುವ ಟ್ವೀಟ್ ರಾಜ್ಯ ಬಿಜೆಪಿ ಪಾಳಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, 182 ಸೀಟುಗಳ ಪೈಕಿ 160 ಕ್ಷೇತ್ರಗಳಲ್ಲಿ 38 ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದೆ. ಹಾಲಿ ಶಾಸಕ ಧರ್ಮೇಂದ್ರ ಸಿನ್ಹ್ ಎಂ ಜಡೇಜಾ ಅವರಿಗೆ ಬಿಜೆಪಿ ಈ ಬಾರಿಕೆ ಟಿಕೆಟ್ ನೀಡಿಲ್ಲ. ಕರ್ನಾಟಕದಲ್ಲಿ ಹಿರಿಯರ ಕೈ ತಪ್ಪುತ್ತು ಟಿಕೆಟ್​ ಅನ್ನೋದನ್ನು ಕಾದು ನೋಡ್ಬೇಕಿದೆ.

Published by:ಪಾವನ ಎಚ್ ಎಸ್
First published: