• Home
 • »
 • News
 • »
 • national-international
 • »
 • Gujarat Elections 2022: ಮೋದಿ ತವರು ರಾಜ್ಯದಲ್ಲಿ ಬಿಜೆಪಿಯನ್ನು ಕಾಡುತ್ತಿದೆ 'ಗುಜರಾತ್‌ ಮಾಡೆಲ್‌'!

Gujarat Elections 2022: ಮೋದಿ ತವರು ರಾಜ್ಯದಲ್ಲಿ ಬಿಜೆಪಿಯನ್ನು ಕಾಡುತ್ತಿದೆ 'ಗುಜರಾತ್‌ ಮಾಡೆಲ್‌'!

ಸಾಂ.ದರ್ಭಿಕ ಚಿತ್ರ

ಸಾಂ.ದರ್ಭಿಕ ಚಿತ್ರ

ಬಿಜೆಪಿ 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆದ್ದುಕೊಂಡಿದ್ದು 1995 ರ ನಂತರದ ಅತ್ಯಂತ ಕಡಿಮೆ ಮೊತ್ತವಾಗಿದೆ ಎಂದು ಬಿಂಬಿತವಾಗಿದೆ. ಕೆಳಮಟ್ಟದ ಗೆಲುವಾಗಿ ಇದು ಕಂಡುಬಂದಿದ್ದು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಯ ನಷ್ಟವನ್ನು ಬಹಿರಂಗಪಡಿಸಿದೆ.

 • Share this:

  ಅಹಮದಾಬಾದ್​(ನ. 07): ಬಿಜೆಪಿಯ (BJP) 2017 ರ ಗುಜರಾತ್ ಅಸೆಂಬ್ಲಿ (Gujarat Assembly) ಗೆಲುವು ರಾಜ್ಯದಲ್ಲಿನ 22 ವರ್ಷಗಳ ಸುದೀರ್ಘ ಆಡಳಿತದ ಪ್ರಾಮಾಣಿಕತೆಯ ಕೊರತೆಯನ್ನೆದುರಿಸಿದೆ. ಪಕ್ಷವು 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆದ್ದುಕೊಂಡಿದ್ದು 1995 ರ ನಂತರದ ಅತ್ಯಂತ ಕಡಿಮೆ ಮೊತ್ತವಾಗಿದೆ ಎಂದು ಬಿಂಬಿತವಾಗಿದೆ. ಕೆಳಮಟ್ಟದ ಗೆಲುವಾಗಿ ಇದು ಕಂಡುಬಂದಿದ್ದು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ (Rural) ಬಿಜೆಪಿಯ ನಷ್ಟವನ್ನು ಬಹಿರಂಗಪಡಿಸಿದೆ. ನಿರುದ್ಯೋಗ, ಕೃಷಿ ಸಂಕಷ್ಟ, ಗ್ರಾಮೀಣ ಹತಾಶೆ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣದ ಕಳಪೆ ಸ್ಥಿತಿ ಆಡಳಿತವನ್ನು ಸಂಕೇತಿಸುತ್ತದೆ.


  ಬಿಜೆಪಿಯನ್ನು ಕಾಡುತ್ತಿರುವ ಸಮಸ್ಯೆಗಳು


  ಕಾಂಗ್ರೆಸ್​ ಮುಂದಿನ 12 ತಿಂಗಳನ್ನು ಗಮನದಲ್ಲಿಟ್ಟುಕೊಂಡು, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿಯ ಸ್ಥಿತಿ ಹದಗೆಡಿಸಲು ಕಾಂಗ್ರೆಸ್​ ತಂತ್ರ ಹೆಣೆದಿದೆ. ಐದು ವರ್ಷಗಳ ನಂತರ, ನವದೆಹಲಿ ಮೂಲದ ಚಿಂತಕರ ಚಾವಡಿ ಸಿಎಸ್‌ಡಿಎಸ್‌ನ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಹಣದುಬ್ಬರ ಮತ್ತು ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ವಿಚಾರಗಳೊಂದಿಗೆ ಪ್ರಸ್ತುತ ಸಮಸ್ಯೆಗಳು ಗುಜರಾತ್‌ನಲ್ಲಿ ಬಿಜೆಪಿಯನ್ನು ಕಾಡುತ್ತಲೇ ಇವೆ.


  ಇದನ್ನೂ ಓದಿ: Gujarat Elections: ಗುಜರಾತ್ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ, ಮಾಜಿ ಆರೋಗ್ಯ ಸಚಿವ ರಾಜೀನಾಮೆ


  ಆದಾಗ್ಯೂ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುಜರಾತ್ ಮೇಲೆ ಹೊಂದಿರುವ ಆಸಕ್ತಿಯ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಪ್ರತಿಪಕ್ಷಗಳು ಬೆಲೆ ಏರಿಕೆ, ಹೆಚ್ಚುತ್ತಿರುವ ಬಡತನ ಮತ್ತು ನಿರುದ್ಯೋಗವನ್ನು ಕೇಂದ್ರದ ವೈಫಲ್ಯಗಳನ್ನೇ ಮುಂದಿಟ್ಟುಕೊಂಡು ಪಕ್ಷಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿವೆ. ಬಿಜೆಪಿಯು ಆರ್ಥಿಕ ಸಮಸ್ಯೆಗಳಿಂದ ಹಿಂದುತ್ವವ್ನಅಸ್ತ್ರವನ್ನೇ ಗಮನ ಹರಿಸುತ್ತಿದೆ.


  ಮುದ್ರಾಯೋಜನೆಗೆ ಪ್ರಧಾನಿ ಸಾಥ್


  ಪ್ರತಿಪಕ್ಷದ ಪ್ರಚಾರವನ್ನು ತಟಸ್ಥಗೊಳಿಸುವ ಉದ್ದೇಶದಿಂದ. ಗುಜರಾತ್ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ, ಮೋದಿ ಅವರು ನೆರೆಯ ಮಹಾರಾಷ್ಟ್ರದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು, ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಮುದ್ರಾ ಯೋಜನೆಯಡಿಯಲ್ಲಿ ತಮ್ಮ ಸರಕಾರ 20 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಿದೆ ಎಂದು ತಿಳಿಸಿದ್ದಾರೆ.


  ಡಿಸೆಂಬರ್ 2023 ರ ವೇಳೆಗೆ 10 ಲಕ್ಷ ಉದ್ಯೋಗ


  ಡಿಸೆಂಬರ್ 2023 ರ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಮೋದಿ ಪುನರುಚ್ಛರಿಸಿದರು. ಅವರು ಅಕ್ಟೋಬರ್ 17 ರಂದು ಪಿಎಂ ಕಿಸಾನ್ ನಿಧಿಯ 12 ನೇ ಕಂತನ್ನು ಬಿಡುಗಡೆ ಮಾಡಿದರು. 2017 ರ ಚುನಾವಣಾ ತೀರ್ಪಿನ ನಂತರ ಜಾಗರೂಕವಾಗಿರುವ ಪಕ್ಷ, ಗುಜರಾತ್ ಫಲಿತಾಂಶಗಳು ಕರ್ನಾಟಕ ಮತ್ತು ಉತ್ತರ ಭಾರತದ ಮೂರು ರಾಜ್ಯಗಳ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಂಡಿದೆ.


  ಗುಜರಾತ್‌ನ ನಾಲ್ಕು ನಗರ ಕೇಂದ್ರಗಳಲ್ಲಿ ಬಿಜೆಪಿ ಸೋಲಿನಿಂದ ಪಾರು


  2017 ರಲ್ಲಿ, ಗುಜರಾತ್‌ನ ನಾಲ್ಕು ನಗರ ಕೇಂದ್ರಗಳಲ್ಲಿ ಬಿಜೆಪಿ ಸೋಲಿನಿಂದ ಪಾರಾಗಿದ್ದು, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಅಹಮದಾಬಾದ್‌ನಲ್ಲಿ 55 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಗುಜರಾತ್‌ನ 127 ಅರೆ ನಗರ ಮತ್ತು ಗ್ರಾಮೀಣ ಸ್ಥಾನಗಳಲ್ಲಿ 72 ರಲ್ಲಿ ಬಿಜೆಪಿಯ 55 ಸ್ಥಾನಗಳನ್ನು ಗೆದ್ದಿದ್ದವು.


  ಎಚ್ಚರಿಇಕೆಯಿಂದ ಹೆಜ್ಜೆ ಇಡುತ್ತಿರುವ ಬಿಜೆಪಿ


  ಆದಾಗ್ಯೂ, ಗುಜರಾತ್‌ನಲ್ಲಿ ಅಂದಿನಿಂದ ಬಹಳಷ್ಟು ಬದಲಾಗಿದೆ ಎಂದೇ ಹೇಳಬಹುದು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಗುಜರಾತ್ ಮೇಲೆ ಪರಿಣಾಮ ಬೀರಿಲ್ಲ. ಕೇಜ್ರಿವಾಲ್ ನೇತೃತ್ವದ ಎಎಪಿ ಮೇಲುಗೈ ಸಾಧಿಸುತ್ತಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ದುರ್ಬಲವಾಗಿದೆ. ಇಲ್ಲಿ ಮೋದಿಯವರು ಗುಜರಾತ್‌ನ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ನ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸವನ್ನು ಹೊಂದದ ರೀತಿಯಲ್ಲಿ ಮೌನವಾಗಿ ಪ್ರಚಾರ ಕುರಿತು ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ.


  ಇದನ್ನೂ ಓದಿ: ಪಾಂಡಿಚೇರಿ ಸರ್ಕಾರ ಬೀಳಿಸಿದ ಬಿಜೆಪಿ ಕೆಲಸ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ; ಶಿವಸೇನೆ ಎಚ್ಚರಿಕೆ!


  ಮೈಯೆಲ್ಲಾ ಎಚ್ಚರವಾಗಿದೆ ಬಿಜೆಪಿ


  2017 ರಿಂದ ಸಾರ್ವಜನಿಕ ಆರೋಗ್ಯ ಸೇವೆಗಳು ಮತ್ತು ಶಿಕ್ಷಣವು ಸುಧಾರಿಸಿದೆ ಮತ್ತು ಸರಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ತನ್ನ ಪರವಾಗಿರುತ್ತದೆ ಎಂಬುವುದು ಪಕ್ಷದ ಗ್ರಹಿಕೆ. ವಿಜಯ್ ರೂಪಾನಿ ಮತ್ತು ಅವರ ಇಡೀ ಸಚಿವ ಸಂಪುಟವನ್ನು ಬಿಜೆಪಿ ವಜಾಗೊಳಿಸಿರುವುದು ಸಹ ಸಹಾಯ ಮಾಡಿದೆ. ಮೇಲ್ನೋಟಕ್ಕೆ, ಗುಜರಾತ್‌ನ ಗೆಲುವು ಬಿಜೆಪಿಗೆ ಸುಲಭವಾಗಿ ದೊರೆಯುವಂತಿರಬೇಕು, ಆದರೆ ಉನ್ನತ ನಾಯಕತ್ವವು ಸಣ್ಣ ಮಟ್ಟಿಗಿನ ಲೋಪದೋಷವೂ ಉಂಟಾಗದಂತೆ ಮೈಯೆಲ್ಲಾ ಎಚ್ಚರವಾಗಿದೆ.

  Published by:Precilla Olivia Dias
  First published: