ರಾಜ್ಯಸಭೆ ಉಪಚುನಾವಣೆ: ಗುಜರಾತ್​ನಲ್ಲಿ ಹೈಡ್ರಾಮಾ; ರಾತ್ರೋರಾತ್ರಿ ಕಾಂಗ್ರೆಸ್ ಶಾಸಕರು ರೆಸಾರ್ಟ್​ಗೆ ಶಿಫ್ಟ್

ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರಿಂದ ತೆರವಾದ 2 ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿಯಿಂದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಜಿಂಗ್ಲಜಿ ಠಾಕೂರ್ ಅವರು ಸ್ಪರ್ಧಿಸಿದ್ದಾರೆ.

Vijayasarthy SN | news18
Updated:July 4, 2019, 9:18 PM IST
ರಾಜ್ಯಸಭೆ ಉಪಚುನಾವಣೆ: ಗುಜರಾತ್​ನಲ್ಲಿ ಹೈಡ್ರಾಮಾ; ರಾತ್ರೋರಾತ್ರಿ ಕಾಂಗ್ರೆಸ್ ಶಾಸಕರು ರೆಸಾರ್ಟ್​ಗೆ ಶಿಫ್ಟ್
ಪ್ರಾತಿನಿಧಿಕ ಚಿತ್ರ
  • News18
  • Last Updated: July 4, 2019, 9:18 PM IST
  • Share this:
ಗಾಂಧಿನಗರ: ಬಜೆಟ್ ದಿನವಾದ ಶುಕ್ರವಾರಂದು ಗುಜರಾತ್​ನಲ್ಲಿ 2 ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಆ ರಾಜ್ಯದಲ್ಲಿ ಮತ್ತೊಮ್ಮೆ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಕಾಂಗ್ರೆಸ್​ನ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲಾಗುತ್ತಿದೆ. ಕ್ರಾಸ್ ವೋಟಿಂಗ್ ನಡೆಯುವ ಸಾಧ್ಯತೆ ಇರುವುದರಿಂದ ರೆಸಾರ್ಟ್ ರಾಜಕೀಯ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಹಲವು ಶಾಸಕರು ಮೊದಲ ಬಾರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅವರಿಗೆ ಮತ ಚಲಾಯಿಸುವ ವಿಧಾನಗಳ ಕುರಿತು ತರಬೇತಿ ನೀಡಲು ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ಕಾಂಗ್ರೆಸ್ ವರಿಷ್ಠರು ಹೇಳುತ್ತಾರೆ.

ಮೂಲಗಳ ಪ್ರಕಾರ, ಉತ್ತರ ಗುಜರಾತ್ ಮತ್ತು ರಾಜಸ್ಥಾನದ ಸಮೀಪವಿರುವ ಮೌಂಟ್ ಅಬು ಅಥವಾ ಯಾವುದಾದರೂ ರೆಸಾರ್ಟ್​​ಗೆ ಕಾಂಗ್ರೆಸ್ ಶಾಸಕರನ್ನಿಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆಯವರೆಗೂ ಅವರು ಅಲ್ಲಿದ್ದು ಆನಂತರ ನೇರವಾಗಿ ವಿಧಾನಸಭೆಗೆ ಬಂದು ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಬೆಳಗ್ಗೆ 9ರಿಂದ 4 ಗಂಟೆಯವರೆಗೂ ಮತದಾನ ನಡೆಯಲಿದೆ. ಸಂಜೆ 5ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳನ್ನು ಬ್ಯಾಟ್​ನಿಂದ ಥಳಿಸಿದ್ದ ಶಾಸಕನಿಗೆ ಶೋಕಾಸ್​ ನೋಟಿಸ್​ ನೀಡಿದ ಬಿಜೆಪಿ

ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಅವರಿಬ್ಬರ ಸ್ಥಾನ ತೆರವಾಗಿತ್ತು. ಅದಕ್ಕೆ ಈಗ ಉಪಚುನಾವಣೆಯಾಗುತ್ತಿದೆ. ಬಿಜೆಪಿಯಿಂದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಹಿಂದುಳಿದ ವರ್ಗಗಳ ಪ್ರಭಾವಿ ಮುಖಂಡ ಜುಗ್ಲಜಿ ಠಾಕೂರ್ ಅವರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ನಿಂದ ಚಂದ್ರಿಕಾ ಚುಡಾಸಮ ಮತ್ತು ಗೌರವ್ ಪಾಂಡ್ಯ ಅಭ್ಯರ್ಥಿಗಳಾಗಿದ್ದಾರೆ.

ಬಿಜೆಪಿಯ ಇಬ್ಬರಿಗೂ ಗೆಲುವು ಗ್ಯಾರಂಟಿ:

ಗುಜರಾತ್​ ವಿಧಾನಸಭೆ 182 ಸದಸ್ಯಬಲ ಹೊಂದಿದೆ. ಅದರಲ್ಲಿ ಸದ್ಯಕ್ಕೆ 178 ಶಾಸಕರಿದ್ದಾರೆ. ಅವರ ಪೈಕಿ ಮೂವರು ಶಾಸಕರು ವಿವಿಧ ಕಾರಣಕ್ಕೆ ಅನರ್ಹಗೊಂಡಿದ್ದಾರೆ. ಅಲ್ಲಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹವಿರುವ 175 ಶಾಸಕರಿದ್ದಾರೆ. ಇವರ ಪೈಕಿ ಬಿಜೆಪಿ 100 ಮತ್ತು ಕಾಂಗ್ರೆಸ್ 71 ಶಾಸಕರನ್ನು ಹೊಂದಿವೆ.

ಇದನ್ನೂ ಓದಿ: ಕಳಪೆ ರಸ್ತೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಮಣ್ಣು ಸುರಿದ ಮಹಾರಾಷ್ಟ್ರದ ಕಾಂಗ್ರೆಸ್​ ಶಾಸಕಇನ್ನು, ರಾಜ್ಯಸಭೆಯ ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿಯೇ ಮತದಾನವಾಗುತ್ತದೆ. 88 ಮತ ಪಡೆಯುವ ಅಭ್ಯರ್ಥಿ ಗೆಲ್ಲುತ್ತಾರೆ. ಬಿಜೆಪಿಯು ನಿಚ್ಚಳ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಅದರ ಇಬ್ಬರೂ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಬಾಧಕ ಇರುವುದಿಲ್ಲ.

ಕಾಂಗ್ರೆಸ್ಸಿಗರು ರೆಸಾರ್ಟ್​ಗೆ ಹೋಗಲು ಕಾರಣವೇನು?

ಗುಜರಾತ್ ಕಾಂಗ್ರೆಸ್ ಇತ್ತೀಚೆಗೆ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಅದರ ಅನೇಕ ಮುಖಂಡರು ಮತ್ತು ಶಾಸಕರು ಪಕ್ಷಾಂತರ ಮುಖಿಯಾಗಿದ್ಧಾರೆ. ಬಂಡಾಯ ಕಾಂಗ್ರೆಸ್ಸಿಗ ಅಲ್ಪೇಶ್ ಠಾಕೂರ್ ಅವರ ಪರವಾಗಿ ಅನೇಕ ಶಾಸಕರಿದ್ದಾರೆನ್ನಲಾಗಿದೆ. ಇವರೆಲ್ಲರೂ ಬಿಜೆಪಿ ಪರವಾಗಿ ಕ್ರಾಸ್ ವೋಟಿಂಗ್ ಮಾಡುವ ಭಯ ಕಾಂಗ್ರೆಸ್ ವರಿಷ್ಠರಿಗೆ ಕಾಡುತ್ತಿದೆ. ತಮ್ಮ ಪಕ್ಷದ ಶಾಸಕರನ್ನು ಒಗ್ಗೂಡಿಸಿ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಪಕ್ಷ ಅವರೆಲ್ಲರನ್ನೂ ರೆಸಾರ್ಟ್​ಗೆ ಕರೆದೊಯ್ಯುತ್ತಿದೆ ಎಂಬ ಮಾತಿದೆ.

ಇದನ್ನೂ ಓದಿ: 21 ವರ್ಷಗಳ ಬಳಿಕ ನೆಹರು-ಗಾಂಧಿ ಕುಟುಂಬದವರನ್ನು ಬಿಟ್ಟು ಹೊರಗಿನವರಿಗೆ ಕಾಂಗ್ರೆಸ್​ ಅಧ್ಯಕ್ಷ ಪಟ್ಟ!

ಎರಡು ವರ್ಷಗಳ ಹಿಂದೆ ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲೇ ಗುಜರಾತ್​ನ ಕಾಂಗ್ರೆಸ್ ಶಾಸಕರು ರಾಮನಗರದ ಈಗಲ್ಟನ್ ರೆಸಾರ್ಟ್​ಗೆ ಬಂದು ಬೀಡುಬಿಟ್ಟಿದ್ದರು. ಡಿಕೆ ಶಿವಕುಮಾರ್ ಬಹಳ ನಿಗಾವಹಿಸಿ ಅವರಿಗೆ ಭದ್ರತೆ ಒದಗಿಸಿದ್ದರು. ಬಿಜೆಪಿಯವರು ಗುಜರಾತ್ ಕಾಂಗ್ರೆಸ್ ಶಾಸಕರ ಸಂಪರ್ಕಕ್ಕೆ ಮಾಡಿದ ಅನೇಕ ಪ್ರಯತ್ನಗಳಿಗೆ ಡಿಕೆಶಿ ತಡೆಗೋಡೆಯಾಗಿ ನಿಂತಿದ್ದರು. ಹೈಕಮಾಂಡ್​ನ ಮೆಚ್ಚುಗೆಗೆ ಪಾತ್ರವಾಗಿದ್ದರು. ಕೇಂದ್ರದ ಕೆಂಗಣ್ಣಿಗೂ ಗುರಿಯಾಗಿದ್ದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published: July 4, 2019, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading