ಗಾಂಧಿನಗರ(ಡಿ.08): ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ (Gujarat Assembly Election Result) ಚಿತ್ರಣ ನಿಚ್ಚಳವಾಗಿದ್ದು, ಭಾರತೀಯ ಜನತಾ ಪಕ್ಷ (Bharatiya Janata Party) ಏಳನೇ ಬಾರಿಗೆ ಗೆಲುವು ಸಾಧಿಸುವ ಲಕ್ಷಣ ಕಾಣುತ್ತಿದೆ. ಇಲ್ಲಿಯವರೆಗಿನ ಚುನಾವಣಾ ಫಲಿತಾಂಶಗಳ ಪ್ರಕಾರ, ಗುಜರಾತ್ನಲ್ಲಿ ಬಿಜೆಪಿ ಬಹುಮತ ಪಡೆದಿದ್ದು, ಪಕ್ಷ ಈಗ ಸರ್ಕಾರ ರಚನೆಯ ಕಸರತ್ತಿನಲ್ಲಿ ತೊಡಗಿದೆ. ಇದೇ ವೇಳೆ ಗುಜರಾತ್ನಲ್ಲಿ ಡಿ.12ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಭೂಪೇಂದ್ರಭಾಯಿ ಪಟೇಲ್ (Bhupendrabhai Patel) ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಘೋಷಿಸಿದ್ದಾರೆ.
ಇದನ್ನೂ ಓದಿ: Gujarat Election Results: 2024ರಲ್ಲಿ ಹೇಗಿರುತ್ತೆ ಕಾಂಗ್ರೆಸ್ ಸ್ಥಿತಿ? ನಿರ್ಧರಿಸುತ್ತೆ ಗುಜರಾತ್, ಹಿಮಾಚಲ ಫಲಿತಾಂಶ!
ಮತ್ತೊಂದೆಡೆ ಗುಜರಾತ್ ವಿಧಾನಸಭೆ ಚುನಾವಣೆಗೆ ಜನಾದೇಶ ಸ್ಪಷ್ಟವಾಗಿದೆ ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ, ಎರಡು ದಶಕಗಳಿಂದ ನಡೆಯುತ್ತಿರುವ ಗುಜರಾತ್ನ ಈ ಅಭಿವೃದ್ಧಿ ಯಾತ್ರೆಯನ್ನು ಮುಂದುವರಿಸಲು ಇಲ್ಲಿನ ಜನರು ಮನಸ್ಸು ಮಾಡಿದ್ದಾರೆ. ಇಲ್ಲಿನ ಜನತೆ ಮತ್ತೊಮ್ಮೆ ಬಿಜೆಪಿ ಮೇಲೆ ಅಚಲವಾದ ನಂಬಿಕೆ ಇಟ್ಟಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ಸಂದ ಜಯ ಎಂದರು.
ಇದನ್ನೂ ಓದಿ: Gujarat Election Result 2022: ಈ 10 ಜನಪ್ರಿಯ ನಾಯಕರ ಪ್ರತಿಷ್ಠೆ ಕಣಕ್ಕೆ, ಫಲಿತಾಂಶದಿಂದ ಭವಿಷ್ಯ ನಿರ್ಧಾರ
ಕಾರ್ಯಕರ್ತರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಸಾರ್ವಜನಿಕರ ನಂಬಿಕೆ ಉಳಿಸಿಕೊಂಡಿದ್ದೇವೆ. ನಮ್ಮ ಗೆಲುವಿಗೆ ಮೋದಿ ಮತ್ತು ಅಮಿತ್ ಭಾಯ್ ಶಾ ಅವರ ಮಾರ್ಗದರ್ಶನವೂ ಕಾರಣ. ವಿಜಯೋತ್ಸವ ಆಚರಿಸುವ ಸಮಯವಿದು. ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಬೇಕು. ಗುಜರಾತ್ನಲ್ಲಿ ಎಲ್ಲೆಡೆ ಅಭಿವೃದ್ಧಿಯಾಗಿದೆ. ನಾವು ಕೆಲಸ ಮಾಡದ ರಾಜ್ಯದ ಯಾವುದೇ ಪ್ರದೇಶವಿಲ್ಲ. ಈ ಅಭಿವೃದ್ಧಿ ಪಯಣಕ್ಕೆ ಹೆಚ್ಚಿನ ವೇಗ ನೀಡಲು ಕೆಲಸ ಮಾಡುತ್ತೇನೆ. ಎಲ್ಲರ ಬೆಂಬಲ, ಎಲ್ಲರ ಅಭಿವೃದ್ಧಿ ಎಂಬ ಮಂತ್ರವನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ