• Home
  • »
  • News
  • »
  • national-international
  • »
  • Vijay Rupani Resignation: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್​ ರೂಪಾನಿ; ಗುಜರಾತ್​ನಲ್ಲಿ ​ಅಚ್ಚರಿಯ ರಾಜಕೀಯ ಬೆಳವಣಿಗೆ

Vijay Rupani Resignation: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್​ ರೂಪಾನಿ; ಗುಜರಾತ್​ನಲ್ಲಿ ​ಅಚ್ಚರಿಯ ರಾಜಕೀಯ ಬೆಳವಣಿಗೆ

ವಿಜಯ್​ ರೂಪಾನಿ.

ವಿಜಯ್​ ರೂಪಾನಿ.

ರಾಜೀನಾಮೆ ಬಳಿಕ ತಾವು ಪಕ್ಷಕ್ಕೆ ಹಾಗೂ ಸೇವೆ ಸಲ್ಲಿಸುತ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಾಯಕತ್ವದಲ್ಲಿ ಪಕ್ಷಕ್ಕಾಗಿ ದುಡಿಯುವುದಾಗಿ ಅವರು ತಿಳಿಸಿದ್ದಾರೆ.

  • Share this:

    ಹಮದಾಬಾದ್​ (ಸೆ. 11): ಪ್ರಧಾನಿ ನರೇಂದ್ರ ಮೋದಿ ತವರು ಇಂದು ಅಚ್ಚರಿಯ ರಾಜಕೀಯ ಬೆಳವಣಿಗೆಗೆ ಸಾಕ್ಷ್ಯವಾಗಿದೆ.. ಗುಜರಾತ್​ನಲ್ಲಿ (Gujarat political development) ನಡೆದ ಅನಿರೀಕ್ಷಿತ ಘಟನೆಗಳ ಬೆಳೆವಣಿಗೆ ಹಿನ್ನಲೆ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್​ ರೂಪಾನಿ (vijay rupani )ರಾಜೀನಾಮೆ ನೀಡಿದ್ದಾರೆ. ಇಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ರಾಜ್ಯಪಾಲ ಆಚಾರ್ಯ ದೆವ್ರತ್​ ಅವರಿಗೆ ಪತ್ರ ಸಲ್ಲಿಸಿದ್ದಾರೆ. ಗಾಂಧಿ ನಗರದಲ್ಲಿ ಗುಜರಾತ್​ ಮಾದರಿ ಸಂಬಂಧ ನಡೆದ ಸಭೆ ಬಳಿಕ ಈ ಘಟನೆ ಘಟಿಸಿದೆ. ವಿಧಾನ ಸಭಾ ಚುನಾವಣೆಗೆ ಇನ್ನೇನು ಕೆಲವೇ  ತಿಂಗಳುಗಳು ಬಾಕಿ ಇರುವ ಸಂದರ್ಭದಲ್ಲಿ ನಡೆದ ಈ ಹಠಾತ್ ಬೆಳವಣಿಗೆಗೆ ಏನು ಕಾರಣ ಎಂಬುದು ನಿಖರವಾಗಿಲ್ಲ.


    ರಾಜೀನಾಮೆ ಪತ್ರ ಸಲ್ಲಿಕೆ ಬಳಿಕ ಮಾತನಾಡಿರುವ ವಿಜಯ್​ ರೂಪಾನಿ, ತಮಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ನೀಡಿದ ಬಿಜೆಪಿ ನಾಯಕರು ಮತ್ತು ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅನಿರೀಕ್ಷಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಸ್ಥಾನದಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ.


    ರಾಜ್ಯ ಹೊಸ ನಾಯಕತ್ವದಲ್ಲಿ ಸಾಗಬೇಕಿದೆ


    ರಾಜೀನಾಮೆ ಬಳಿಕ ಮಾತನಾಡಿದ ಅವರು, ಗುಜರಾತ್ ಅಭಿವೃದ್ಧಿಯ ಪಯಣವನ್ನು ಹೊಸ ನಾಯಕತ್ವದ ಅಡಿಯಲ್ಲಿ ಸಾಗಬೇಕು, ಅದಕ್ಕಾಗಿಯೇ ಅವರು ರಾಜೀನಾಮೆ  ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇನ್ಮುಂದೆ  ತಾವು ಪಕ್ಷಕ್ಕೆ  ಸೇವೆ ಸಲ್ಲಿಸುತ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಾಯಕತ್ವದಲ್ಲಿ ಪಕ್ಷ ಸಂಘಟನೆಗಾಗಿ ದುಡಿಯುವುದಾಗಿ ಅವರು ತಿಳಿಸಿದ್ದಾರೆ.


    ಮಂಗಳವಾರ ನೂತನ ಸಿಎಂ ಆಯ್ಕೆ ಸಾಧ್ಯತೆ


    ವಿಜಯ್​ ರೂಪಾನಿ ದಿಢೀರ್​ ರಾಜೀನಾಮೆ ಹಿನ್ನಲೆ , ಶಾಸಕರೊಂದಿಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಬಿಎಲ್​ ಸಂತೋಷ್​ ಚರ್ಚೆ ನಡೆಸುತ್ತಿದ್ದಾರೆ. ನೂತನ ಮುಖ್ಯಮಂತ್ರಿ ಆಯ್ಕೆಗೆ ಮಂಗಳವಾರ ಗುಜರಾತ್​ ಬಿಜೆಪಿ ಶಾಸಕರು ಸಭೆ ನಡೆಸಲಿದ್ದು, ನೂತನ ಸಿಎಂ ಆಯ್ಕೆ ಮಾಡಲಿದ್ದಾರೆ.


    ಇದನ್ನು ಓದಿ: ಭಾರೀ ಮಳೆಗೆ ತತ್ತರಿಸಿದ ದೆಹಲಿ; ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಜಲಾವೃತ


    ಖಾಲಿಯಾಗಿರುವ ಸಿಎಂ ಹುದ್ದೆಗೆ ಜುಲೈನಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮನ್ಸುಖ್ ಮಾಂಡವಿಯಾ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


    ರೂಪಾನಿ ನಾಯಕತ್ವದ ಬಗ್ಗೆ ಅಪಸ್ವರ


    ವಿಜಯ್​ ರೂಪಾನಿ ಅವರ ಕಾರ್ಯ ಕ್ಷಮತೆ ಕುರಿತು ಕೇಂದ್ರ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ರಾಜ್ಯದಲ್ಲೂ ಅವರ ನಾಯಕತ್ವದಲ್ಲಿ ಅನಿಶ್ಚಿತತೆ ತೋರುತ್ತಿದ್ದರು, ಇದೇ ಕಾರಣ ನಾಯಕತ್ವ ಬದಲಿಸಲು ನಾಯಕರು ಮುಂದಾಗಿದ್ದರು ಎನ್ನಲಾಗಿದೆ


    ಬಿಎಸ್​ವೈ ಬಳಿಕ ಬಿಜೆಪಿಯ ಮೂರನೇ ಸಿಎಂ ಪದತ್ಯಾಗ 


    ಕಳೆದ ಕೆಲವು ವಾರಗಳಿಂದ ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿಗಳ ಪದತ್ಯಾಗ ನಡೆಯುತ್ತಿದೆ. ಈ ರೀತಿ ಪದತ್ಯಾಗ ಮಾಡಿದ ಮೂರನೇ ಸಿಎಂ ವಿಜಯ ರೂಪಾನಿಯಾಗಿದ್ದಾರೆ. ಇದಕ್ಕೂ ಮುನ್ನು ಕರ್ನಾಟಕದಲ್ಲಿ ಬಿಎಸ್​ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಿದ್ದರು. ಇದಾದ ಬಳಿಕ ಉತ್ತರ ಖಂಡ ಸಿಎಂ ತಿರಾಂತ್​ ಸಿಂಗ್​ ರಾವತ್​ ಸಿಎಂ ಸ್ಥಾನಕ್ಕೆ ಅವಧಿ ಮುನ್ನ ರಾಜೀನಾಮೆ ನೀಡಿದ್ದರು

    Published by:Seema R
    First published: