ಗುಜರಾತ್​ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ; 5 ಸಾವು, 40ಕ್ಕೂ ಹೆಚ್ಚು ಕಾರ್ಮಿಕರ ಸ್ಥಿತಿ ಗಂಭೀರ

ಗುಜರಾತ್​ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಉಂಟಾದ ಭಾರೀ ಸ್ಫೋಟದಿಂದ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಮೃತರ ದೇಹಗಳನ್ನು ಹೊರಗೆಳೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Sushma Chakre | news18-kannada
Updated:June 3, 2020, 8:50 PM IST
ಗುಜರಾತ್​ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ; 5 ಸಾವು, 40ಕ್ಕೂ ಹೆಚ್ಚು ಕಾರ್ಮಿಕರ ಸ್ಥಿತಿ ಗಂಭೀರ
ಗುಜರಾತ್​ನ ಕೆಮಿಕಲ್ ಫ್ಯಾಕ್ಟರಿಯ ಸ್ಫೋಟ
  • Share this:
ನವದೆಹಲಿ (ಜೂ. 3): ಗುಜರಾತ್​ನ ಭರೂಚ್ ಜಿಲ್ಲೆಯ ದಹೇಜ್​ನಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಇಂದು ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಕಾರ್ಮಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆ ಸೇರಿದ್ದಾರೆ.

ಇಂದು ಸಂಜೆ ವೇಳೆ ಈ ದುರ್ಘಟನೆ ನಡೆದಿದ್ದು, 10ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಕಾರ್ಖಾನೆಯಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಸುತ್ತಮುತ್ತಲ ಮನೆಗಳಲ್ಲೂ ಹೊಗೆ ಆವರಿಸಿತ್ತು. ಈ ಬಗ್ಗೆ ಗುಜರಾತ್​ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚು ಸಾಧ್ಯತೆಯಿದೆ ಎಂದಿದ್ದಾರೆ.

ಇದನ್ನೂ ಓದಿ: ಚೆನ್ನೈನಲ್ಲಿ ಇಂದು ಒಂದೇ ದಿನ 1,012 ಕೊರೋನಾ ಕೇಸ್ ಪತ್ತೆ; ತಮಿಳುನಾಡಿನ ಸೋಂಕಿತರ ಸಂಖ್ಯೆ 26,000ಕ್ಕೆ ಏರಿಕೆ

ಈಗಾಗಲೇ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಮೃತರ ದೇಹಗಳನ್ನು ಹೊರಗೆಳೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. 40ಕ್ಕೂ ಹೆಚ್ಚು ಜನರಿಗೆ ತೀವ್ರವಾಗಿ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಭರೂಚ್​ನ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆರ್​.ವಿ. ಚೂಡಾಸಾಮ ತಿಳಿಸಿದ್ದಾರೆ.First published: June 3, 2020, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading