• Home
  • »
  • News
  • »
  • national-international
  • »
  • Morbi Bridge Collapse: ಮೊರ್ಬಿ ಸೇತುವೆ ದುರಂತ, ಸಾವಿನ ಸಂಖ್ಯೆ 137ಕ್ಕೆ ಏರಿಕೆ, 100ಕ್ಕೂ ಅಧಿಕ ಮಂದಿಗೆ ಗಾಯ!

Morbi Bridge Collapse: ಮೊರ್ಬಿ ಸೇತುವೆ ದುರಂತ, ಸಾವಿನ ಸಂಖ್ಯೆ 137ಕ್ಕೆ ಏರಿಕೆ, 100ಕ್ಕೂ ಅಧಿಕ ಮಂದಿಗೆ ಗಾಯ!

ಮೊರ್ಬಿ ತೂಗು ಸೇತುವೆ ದುರಂತ,

ಮೊರ್ಬಿ ತೂಗು ಸೇತುವೆ ದುರಂತ,

Morbi Bridge Collapsed: ಗುಜರಾತ್ ನ ಮೊರ್ಬಿಯಲ್ಲಿ ಭಾನುವಾರ ಸಂಜೆ ನಡೆದ ಐತಿಹಾಸಿಕ ತೂಗುಸೇತುವೆ ಘಟನೆಯಲ್ಲಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ಈ ಸೇತುವೆಯನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸುವ ಮೂಲಕ ಮೊರ್ಬಿ ಆಡಳಿತ ಮತ್ತು ಪುರಸಭೆ ಕೈತೊಳೆದುಕೊಂಡಿತ್ತು.

  • News18 Kannada
  • Last Updated :
  • Gujarat, India
  • Share this:

ಅಹಮದಾಬಾದ್(ಅ.31): ಮೊರ್ಬಿ ಕೇಬಲ್ ಸೇತುವೆ (Gujarat Morbi Cable Bridge Collapsed) ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 137ಕ್ಕೆ ಏರಿಕೆಯಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯದಲ್ಲಿ ಮೃತದೇಹಗಳ ಪತ್ತೆ ಕಾರ್ಯ ನಡೆಯುತ್ತಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (CM Bhupendra Patel) ಭಾನುವಾರ ಅಪಘಾತದ (Accident) ಮಾಹಿತಿಯ ಮೇರೆಗೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮೊರ್ಬಿಗೆ ಬಂದಿದ್ದಾರೆ. ತಡರಾತ್ರಿ ಮೊರ್ಬಿ ತಲುಪಿ, ಮೊದಲು ಘಟನೆಯ ಸ್ಥಳದಲ್ಲಿದ್ದ ಗಾಯಾಳುಗಳಿಗೆ ಸಾಂತ್ವನ ಹೇಳಿ ನಂತರ ಆಸ್ಪತ್ರೆಗೆ ತೆರಳಿದ್ದಾರೆ. 


19ನೇ ಶತಮಾನದ ಸೇತುವೆ


230 ಮೀಟರ್‌ ಉದ್ದದ ಈ ಸೇತುವೆಯನ್ನು 19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದರಿಂದಾಗಿ 6 ತಿಂಗಳು ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಕಳೆದ 5 ದಿನಗಳ ಹಿಂದೆಯಷ್ಟೇ ತೂಗು ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ನಿನ್ನೆ ರಜೆ ಇದ್ದ ಕಾರಣ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಸೇತುವೆ ಮೇಲೆ ಸೇರಿದ್ದರು. ಭಾರ ತಾಳಲಾರದೆ ತೂಗು ಸೇತುವೆ ಮುರಿದು ಬಿದ್ದಿದೆ. NDRF ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.


ಇದನ್ನೂ ಓದಿ:Viral Video: ಅಪ್ಪ ಕಳಿಸಿದ ಪೋಸ್ಟ್​ ಕಾರ್ಡ್​ ಬೆಲೆ ಸರಿಗಟ್ಟೋ ಯಾವ ವಸ್ತುವೂ ಇಲ್ಲ! ಭಾವುಕ ವಿಡಿಯೋ ನೋಡಿ


ದುರಂತಕ್ಕೆ ಯಾರು ಹೊಣೆ?


ಸುಮಾರು ನೂರು ವರ್ಷಗಳ ಕಾಲ ಮೊರ್ಬಿಯ ಹೆಮ್ಮೆಯಾಗಿದ್ದ ಈ ಸೇತುವೆ ಅಪಘಾತಕ್ಕೆ ಬಲಿಯಾಗಿದ್ದು ಹೇಗೆ? ಅಪಘಾತದ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ, ಆದರೆ ಪ್ರಾಥಮಿಕ ತನಿಖೆಯಲ್ಲಿ ಸೇತುವೆಯ ಮೇಲೆ ಭಾನುವಾರ ಹೆಚ್ಚಿನ ಜನರ ಉಪಸ್ಥಿತಿಯು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಸೇತುವೆ ಅಪಘಾತಕ್ಕೆ ಬಲಿಯಾದಾಗ ಜನಸಂದಣಿ ನಿರ್ವಹಣಾ ವ್ಯವಸ್ಥೆಯೂ ಇರಲಿಲ್ಲತ್ತು.


ನಗರಸಭೆ ಅನುಮತಿ ಪಡೆದಿಲ್ಲ


ಮೊರ್ಬಿಯ ಈ ಐತಿಹಾಸಿಕ ಸೇತುವೆ ಗುಜರಾತ್ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಮಾಹಿತಿಯ ಪ್ರಕಾರ, ಈ ಸೇತುವೆಯನ್ನು ಸ್ಥಳೀಯ ಪುರಸಭೆಯು ವರ್ಷಗಳಿಂದ ನಿರ್ವಹಿಸುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸೇತುವೆಯನ್ನು ಆರ್ಥಿಕ ಸಮಸ್ಯೆಯಿಂದ ಮುಚ್ಚಲಾಗಿದೆ. ಇದನ್ನು ಮುಂದಿನ 15 ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನಗರಸಭೆಯು ಒರೆವಾ ಕಂಪನಿಗೆ ಸರಕಾರಿ ಟೆಂಡರ್ ಮೂಲಕ ನೀಡಿತ್ತು.


ಏಳು ತಿಂಗಳ ಬಳಿಕ ತೆರೆಯಲಾಗಿತ್ತು ಈ ಸೇತುವೆ


ಇದಾದ ನಂತರ ಒರೆವಾ ಗ್ರೂಪ್‌ನ ಜೈ ಸುಖ್ ಪಟೇಲ್ ಅವರು ಖಾಸಗಿ ಕ್ಯಾಸಿಟಿಯಿಂದ ಹಣವನ್ನು ಹೂಡಿಕೆ ಮಾಡಿ ಜಿಂದಾಲ್ ಗ್ರೂಪ್‌ನಿಂದ ಈ ಸೇತುವೆಯನ್ನು ನಿರ್ಮಿಸಿದರು. ಇದರ ನಂತರ ಅವರು ಅದಕ್ಕೆ ಒರೆವಾ ಜುಲ್ಟೊ ಸೇತುವೆ ಎಂದು ಹೆಸರಿಸಿದರು. ಮುನ್ನೆಲೆಗೆ ಬಂದಿರುವ ಮಾಹಿತಿ ಪ್ರಕಾರ ಜಿಂದಾಲ್ ಗ್ರೂಪ್ ಗೆ ಒರೆವಾ ಗ್ರೂಪ್ 8 ಕೋಟಿ ರೂ.ಗಳನ್ನು ನವೀಕರಣಕ್ಕಾಗಿ ನೀಡಿದೆ. ಸುಮಾರು ಏಳು ತಿಂಗಳ ಕಾಲ ಮುಚ್ಚಲ್ಪಟ್ಟ ಈ ಸೇತುವೆಯನ್ನು ಹೊಸ ವರ್ಷದಂದು ತೆರೆಯಲಾಯಿತು. ಸೇತುವೆಯ ಮೇಲಿದ್ದ ಜನರಿಗೆ ಟಿಕೆಟ್ ಪಡೆದ ಬಳಿಕ ಪ್ರವೇಶ ನೀಡಲಾಯಿತು. 18 ವರ್ಷ ಮೇಲ್ಪಟ್ಟವರಿಗೆ 17 ರೂ ಮತ್ತು ಹದಿಹರೆಯದವರು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 12 ರೂ. ನಿಗದಿಪಡಿಸಲಾಗಿತ್ತು.


ಇದನ್ನೂ ಓದಿ: Mango Rate: ಒಂದು ಕೆಜಿ ಮಾವಿನ ಹಣ್ಣಿಗೆ 2.70 ಲಕ್ಷ! ಎಲ್ಲಿ ಸಿಗುತ್ತೆ ಈ ಮಾವು?


ಮೃತರಿಗೆ ಪರಿಹಾರ ಘೋಷಣೆ


ಇನ್ನು ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಸೇತುವೆ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿಯವರು ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಹಾಗೂ ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಗೆ ತಲಾ ₹50 ಸಾವಿರ ನೆರವು ಘೋಷಿಸಿದ್ದಾರೆ. ಇನ್ನು ಗುಜರಾತ್ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ಘೋಷಿಸಿದೆ.

Published by:Precilla Olivia Dias
First published: