ಗುಜರಾತ್​ ಬಿಜೆಪಿ ಸಂಸದನ ರಾಸಲೀಲೆ ವಿಡಿಯೋ ವೈರಲ್​: ಇಬ್ಬರನ್ನು ಬಂಧಿಸಿದ ಪೊಲೀಸರು

"ನನ್ನ ವ್ಯಕ್ತಿತ್ವದ ಬಗ್ಗೆ ಇಡೀ ಗುಜುರಾತಿಗೆ ತಿಳಿದಿದೆ. ನನ್ನ ಇಡೀ ಜೀವನದಲ್ಲಿ ನಾನು ಯಾವುದೇ ತಪ್ಪುಗಳನ್ನು ಮಾಡಲಿಲ್ಲ. ನನ್ನ ಫೋಟೋವನ್ನು ಎಡಿಟ್ ಮಾಡಿ ವೀಡಿಯೋ ಮಾಡಲು ಬಳಸಿರುವ ಸಾಧ್ಯತೆಯಿದೆ." ಈ ವಿಡಿಯೋಕ್ಕಾಗಿ 2016 ರಿಂದಲೂ ನನ್ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಬಯಸಿದರೆ ಬಿಡುಗಡೆ ಮಾಡಲಿ ಎಂದು ನಾನು ಅವರಿಗೆ ಸವಾಲು ಹಾಕಿದ್ದೆ "ಎಂದು ಲೋಕಸಭಾ ಸಂಸದರು ಹೇಳಿದರು.

ಪರ್ಬತ್​​ಭಾಯ್ ಪಟೇಲ್

ಪರ್ಬತ್​​ಭಾಯ್ ಪಟೇಲ್

 • Share this:
  ಬಿಜೆಪಿ ಸಂಸದ ಪರ್ಬತ್ ಭಾಯ್ ಪಟೇಲ್ ಮಹಿಳೆಯೊಂದಿಗೆ ಸಲಿಗೆಯೊಂದಿಗೆ ಇರುವ ತಿರುಚಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ ನಂತರ ಗುಜರಾತಿನ ಪೊಲೀಸರು ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಬಂಧಿಸಿದ್ದಾರೆ. ಬೇರೆಯದೇ ದೇಶ್ಯಗಳನ್ನು ಸಂಸದರಿಗೆ ಹೋಲಿಸುವಂತೆ ತಿರುಚಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

  ಸಂಸದರ ಪುತ್ರ ಶೈಲೇಶ್ ಪಟೇಲ್ ನೀಡಿದ ದೂರಿನ ಮೇರೆಗೆ ಮಂಗಳವಾರ ಬನಸ್ಕಾಂತ ಜಿಲ್ಲೆಯ ಥರದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ ಎಚ್ ಚೌಧರಿ ತಿಳಿಸಿದ್ದಾರೆ, ಸ್ಥಳೀಯ ಅಪರಾಧ ವಿಭಾಗ (ಎಲ್ ಸಿಬಿ) ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  ಬನಸ್ಕಾಂತದ ಲೋಕಸಭಾ ಸಂಸದ ಪರ್ಬತ್ ಭಾಯ್ ಪಟೇಲ್ (72) ಯಾವುದೇ ತಪ್ಪನ್ನು ನಾನು ಮಾಡಿಲ್ಲ ಎಂದು ವಿಡಿಯೋ ಕುರಿತು ಆರೋಪ ನಿರಾಕರಿಸಿದ್ದಾರೆ ಮತ್ತು ವೀಡಿಯೊವನ್ನು ತಿರುಚಲಾಗಿದೆ ಮತ್ತು ನನ್ನ ಮುಖದ ಹೋಲಿಕೆ ಬರುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ, ಹಣ ವಸೂಲಿ ಮತ್ತು ಅವಹೇಳನ ಮಾಡಲು ಸಂಚು ರೂಪಿಸಿದೆ ಎಂದು ಆರೋಪಿಸಿದರು.  ತನ್ನ ತಂದೆಯ ತಿರುಚಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ, ಇಬ್ಬರು ಆರೋಪಿಗಳಾದ ಮಾಘಾ ಪಟೇಲ್ ಮತ್ತು ಮುಖೇಶ್ ರಜಪೂತ್  ಪೂರ್ವ ಯೋಜಿತ ಪಿತೂರಿಯ ಭಾಗವಾಗಿ ಈ ಕೆಲಸ ಮಾಡಿದ್ದಾರೆ  ಎಂದು ಶೈಲೇಶ್ ಪಟೇಲ್  ಆರೋಪಿಸಿದ್ದಾರೆ.


  "ನಾವು ಐಪಿಸಿ ಸೆಕ್ಷನ್ 389 (ಸುಲಿಗೆ), 500 (ಮಾನನಷ್ಟ), ಕ್ರಿಮಿನಲ್ ಪಿತೂರಿ (120-ಬಿ) ಮತ್ತು ಐಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ" ಎಂದು ಅವರು ಹೇಳಿದರು. ಇದುವರೆಗೆ ಸಂಗ್ರಹಿಸಿದ ಪುರಾವೆಗಳ ಪ್ರಕಾರ ಪಿತೂರಿ ನಡೆದಿದೆ ಎಂದು ಸೂಚಿಸುತ್ತದೆ ಸಂಸದರ ಹೆಸರನ್ನು ಹಾಳುಗೆಡವಲು ಮತ್ತು  ಹಣ ವಸೂಲಿ ಮಾಡಲು ಹೀಗೆ ಮಾಡಲಾಗಿದೆ ಎಂದು ಡಿವೈಎಸ್ಪಿ ಹೇಳಿದರು.


  ಒಂದು ನಿಮಿಷದ ವೀಡಿಯೋದಲ್ಲಿ, ಪರ್ಬತ್ ಭಾಯ್ ಪಟೇಲ್ ಹೋಲುವ ವ್ಯಕ್ತಿ ಸೋಫಾದ ಮೇಲೆ ಮಹಿಳೆಯನ್ನು ಅಪ್ಪಿಕೊಂಡು ಆತ್ಮೀಯವಾಗಿ ಇರುವುದನ್ನು ಕಾಣಬಹುದು. ಪೂರ್ವಯೋಜಿತವಾಗಿ ಚಿತ್ರಿಕರಣ ಮಾಡಿದಂತೆ ಕಂಡು ಬರುತ್ತದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಗಸ್ಟ್​ 15 ರಂದು ನಿಮ್ಮ ವಿಡಿಯೋ ಫೇಸ್​ಬುಕ್​ ಪೇಜಿನಲ್ಲಿ ಹಾಕುವುದಾಗಿ ಹೇಳಲಾಗಿತ್ತು.

  ನಂತರ ಮಂಗಳವಾರ, ಅದೇ ವೀಡಿಯೊವನ್ನು ಪರ್ಬತ್ ಭಾಯ್ ಪಟೇಲ್ ಅವರು ವಾಟ್ಸಾಪ್ ಗ್ರೂಪ್‌ನಲ್ಲಿ ಮುಕೇಶ್ ರಜಪೂತ್ ಹಂಚಿಕೊಂಡಿದ್ದಾರೆ ಎಂದು ಹೇಳಿದರು. "ಇಬ್ಬರ ವಿರುದ್ದ (ಮಾಘ ಪಟೇಲ್ ಮತ್ತು ರಜಪೂತ್) ಎಫ್‌ಐಆರ್‌  ದಾಖಲಿಸಲಾಗಿದೆ. ಎಲ್‌ಸಿಬಿಯಿಂದ ಅವರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ದೂರುದಾರ ನೀಡಿದ ಸಾಕ್ಷ್ಯಗಳು ಮತ್ತು ಪೊಲೀಸರು ಸಾಮಾಜಿಕ ಜಾಲತಾಣಗಳಿಂದ ಸಂಗ್ರಹಿಸಿದ ಸಾಕ್ಷ್ಯಗಳು ಪ್ರಾಥಮಿಕವಾಗಿ ಸಂಸದರ ಹೆಸರನ್ನು ಹಾಳುಗೆಡವಲು ಮತ್ತು ಈ ವಿಡಿಯೋ ಮೂಲಕ ಆತನಿಂದ ಹಣ ವಸೂಲಿ ಮಾಡಲು ಸಂಚು ನಡೆದಿವೆ "ಎಂದು ಡಿವೈಎಸ್ಪಿ ಹೇಳಿದರು.

  ಅದರ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ವಿಡಿಯೊವನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.ಶೈಲೇಶ್ ಪಟೇಲ್ ಸುದ್ದಿಗಾರರಿಗೆ ಈ ವಿಡಿಯೋವನ್ನು ತನ್ನ ತಂದೆಯ ಮಾನಹಾನಿ ಮಾಡಲು ಮತ್ತು ಹಣ ವಸೂಲಿ ಮಾಡಲು ಬಳಸಲಾಗಿದೆ ಎಂದು ಹೇಳಿದರು.


  ಇದನ್ನೂ ಓದಿ: ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡ ಲಂಡನ್‌ ಟವರ್ ಬ್ರಿಡ್ಜ್‌: ಸಂಚಾರ ಅಸ್ತವ್ಯಸ್ತ

  "ನನ್ನ ವ್ಯಕ್ತಿತ್ವದ ಬಗ್ಗೆ ಇಡೀ ಗುಜುರಾತಿಗೆ ತಿಳಿದಿದೆ. ನನ್ನ ಇಡೀ ಜೀವನದಲ್ಲಿ ನಾನು ಯಾವುದೇ ತಪ್ಪುಗಳನ್ನು ಮಾಡಲಿಲ್ಲ. ನನ್ನ ಫೋಟೋವನ್ನು ಎಡಿಟ್ ಮಾಡಿ ವೀಡಿಯೋ ಮಾಡಲು ಬಳಸಿರುವ ಸಾಧ್ಯತೆಯಿದೆ." ಈ ವಿಡಿಯೋಕ್ಕಾಗಿ 2016 ರಿಂದಲೂ ನನ್ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಬಯಸಿದರೆ ಬಿಡುಗಡೆ ಮಾಡಲಿ ಎಂದು ನಾನು ಅವರಿಗೆ ಸವಾಲು ಹಾಕಿದ್ದೆ "ಎಂದು ಲೋಕಸಭಾ ಸಂಸದರು ಹೇಳಿದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: