• Home
 • »
 • News
 • »
 • national-international
 • »
 • Gujarat Elections: ಜಡೇಜಾ ಕುಟುಂಬದಲ್ಲಿ ಬಿರುಕು ಮೂಡಿಸಿದ ಗುಜರಾತ್ ಚುನಾವಣೆ!

Gujarat Elections: ಜಡೇಜಾ ಕುಟುಂಬದಲ್ಲಿ ಬಿರುಕು ಮೂಡಿಸಿದ ಗುಜರಾತ್ ಚುನಾವಣೆ!

ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದ ಪರ ರವೀಂದ್ರ ಜಡೇಜಾ ಪತ್ನಿ ಮತ್ತು ಸಹೋದರಿ ಪ್ರಚಾರ

ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದ ಪರ ರವೀಂದ್ರ ಜಡೇಜಾ ಪತ್ನಿ ಮತ್ತು ಸಹೋದರಿ ಪ್ರಚಾರ

ಒಂದೆಡೆ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರದಿಂದ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಜಡೇಜಾ ಅವರ ಸಹೋದರಿ ನಯನಾಬಾ ಜಡೇಜಾ ಕಾಂಗ್ರೆಸ್‌ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಸಹಜವಾಗಿಯೇ ಕುಟುಂಬದೊಳಗೇ ರಾಜಕೀಯದಿಂದ ಒಡಕು ಮೂಡಿದೆ. ವೋಟ್‌ ಕೂಡ ಹಂಚಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದೆ ಓದಿ ...
 • Trending Desk
 • Last Updated :
 • Ahmadabad (Ahmedabad) [Ahmedabad], India
 • Share this:

  ಅಹಮದಾಬಾದ್(ನ.17): ಗುಜರಾತ್ ವಿಧಾನಸಭಾ ಚುನಾವಣೆ (Gujarat Elections) ಅಖಾಡ ರಂಗೇರಿದೆ, ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಜಾಮ್‌ನಗರ ಉತ್ತರ ಕ್ಷೇತ್ರ (Jamnagar North Constituency). ಈ ಕ್ಷೇತ್ರದಲ್ಲಿ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಕುಟುಂಬದ ನಡುವೆ ರಾಜಕೀಯ ಪೈಪೋಟಿ ನಡೆಯುತ್ತಿದೆ. ಹೌದು, ಒಂದೆಡೆ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು (Rivaba Jadeja) ಭರದಿಂದ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಜಡೇಜಾ ಅವರ ಸಹೋದರಿ ನಯನಾಬಾ ಜಡೇಜಾ ಕಾಂಗ್ರೆಸ್‌ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಸಹಜವಾಗಿಯೇ ಕುಟುಂಬದೊಳಗೇ ರಾಜಕೀಯದಿಂದ ಒಡಕು ಮೂಡಿದೆ. ವೋಟ್‌ ಕೂಡ ಹಂಚಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.


  2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ನಯನಾಬಾ, “ನಾನು ಕೂಡ ಜಾಮ್‌ನಗರದಿಂದ ಟಿಕೆಟ್‌ ಬಯಸಿದ್ದೆ, ಆದರೆ ಪಕ್ಷವು ನಿರಾಕರಿಸಿತು. ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿರುವ ಹಿರಿಯ ನಾಯಕರು ಈ ಕ್ಷೇತ್ರದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ನನಗೆ ಟಿಕೆಟ್ ನೀಡಿದ್ದರೆ, ನನ್ನ ಮತ್ತು ನನ್ನ ಅತ್ತಿಗೆ ನಡುವೆ ಸ್ಪರ್ಧೆ ನಡೆಯುತ್ತಿತ್ತು" ಎಂದಿದ್ದಾರೆ.


  ಭಿಪೇಂದ್ರಸಿನ್ಹ ಜಡೇಜಾ ಪರ ನಯನಾಬಾ ಪ್ರಚಾರ


  ರವೀಂದ್ರ ಜಡೇಜಾ ಅವರಿಗಿಂತ ಹಿರಿಯರಾದ ನಯನಾಬಾ ಅವರು ಕಾಂಗ್ರೆಸ್ ಅಭ್ಯರ್ಥಿ ಭಿಪೇಂದ್ರಸಿನ್ಹ ಜಡೇಜಾ ಅವರನ್ನು ಬೆಂಬಲಿಸಿ ಜಾಮ್‌ನಗರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ.


  Team India cricketer Ravindra Jadeja wife as Gujarat BJP candidate He thanked the Prime Minister for being selected


  “ನಾನು ಕಾಂಗ್ರೆಸ್‌ನ ಸಿದ್ಧಾಂತವನ್ನು ನಂಬುತ್ತೇನೆ. ನನಗೆ ಟಿಕೆಟ್ ಸಿಗಲಿಲ್ಲ, ಆದರೆ ಜಾಮ್‌ನಗರದಲ್ಲಿ ಹಿರಿಯ ಮತ್ತು ಜನಪ್ರಿಯ ನಾಯಕ ಭಿಪೇಂದ್ರಸಿನ್ಹ ಜಡೇಜಾ ಪರವಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ” ಎಂದು ನಯನಾಬಾ ಹೇಳಿದರು.


  "ವೈಯಕ್ತಿಕ ಹೋರಾಟವಲ್ಲ, ರಾಜಕೀಯ ಹೋರಾಟ"


  ಕುಟುಂಬದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಯಾವಾಗಲೂ ಇರುತ್ತವೆ ಮತ್ತು ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಜನರು ತಮ್ಮ ಆಯ್ಕೆ ಮತ್ತು ಅಭಿಪ್ರಾಯವನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ ಎಂದು ನಯನಾಬಾ ಹೇಳಿದರು. “ಒಂದೇ ಕ್ಷೇತ್ರದಲ್ಲಿ ತಂದೆ-ಮಕ್ಕಳು ಪರಸ್ಪರ ಸ್ಪರ್ಧಿಸುವ ಹಲವಾರು ಘಟನೆಗಳಿವೆ. ನಮ್ಮ ವಿಷಯದಲ್ಲೂ ಇದು ವೈಯಕ್ತಿಕ ಹೋರಾಟವಲ್ಲ, ಸೈದ್ಧಾಂತಿಕವಾಗಿದೆ, ”ಎಂದು ನಯನಬಾ ಸ್ಪಷ್ಟನೆ ನೀಡಿದರು.


  "ರಾಜಕೀಯದಿಂದ ಸಂಬಂಧ ಹಾಳಾಗಲು ನಾವು ಬಿಡಲ್ಲ"


  “ನಾನು ಸಹೋದರ ರವೀಂದ್ರ ಜಡೇಜಾ ಅಥವಾ ಅವರ ಪತ್ನಿಯನ್ನು ಭೇಟಿಯಾದಾಗ ಅವರೊಂದಿಗೆ ರಾಜಕೀಯದ ಬಗ್ಗೆ ಚರ್ಚಿಸುವುದಿಲ್ಲ. 2019 ರಿಂದ, ನಾವು ನಮ್ಮ ಪಕ್ಷಗಳನ್ನು ಆಯ್ಕೆ ಮಾಡಿದ್ದೇವೆ, ಆದರೆ ಅದು ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರಲು ನಾವು ಬಿಡಲಿಲ್ಲ. ಅವರು ತಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೆ, ನಾನು ನನ್ನ ಪಕ್ಷಕ್ಕೆ ನಿಷ್ಠೆ ತೋರುತ್ತಿದ್ದೇನೆ, ”ಎಂದು ಅವರು ಹೇಳಿದರು.


  ಇದನ್ನೂ ಓದಿ: Hardik Patel: 'ಬರೀ ಮೋದಿಯನ್ನೇ ಬಯ್ತಾರೆ', ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಾರ್ದಿಕ್ ಪಟೇಲ್


  ಚಿರಪರಿಚಿತ ನಾಯಕಿ ನಯನಾಬಾ


  ನಯನಾಬಾ ಅವರು ತಮ್ಮ ತಂದೆ ಅನಿರುದ್ಧ್‌ಸಿನ್ಹ್ ಜಡೇಜಾ ಅವರೊಂದಿಗೆ ಏಪ್ರಿಲ್ 2019 ರಲ್ಲಿ ವಿರೋಧ ಪಕ್ಷದ ಕಾಂಗ್ರೆಸ್‌ಗೆ ಸೇರಿಕೊಂಡಿದ್ದರು. ಜಡೇಜಾ ಅವರ ಸಹೋದರಿ ನಯನಾಬಾ ಜಾಮ್‌ನಗರದಲ್ಲಿ ಚಿರಪರಿಚಿತರು. ಅವರು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು ಮತ್ತು ಈಗ ಗುಜರಾತ್ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.


  ಮಡದಿ ಪರ ರವೀಂದ್ರ ಜಡೇಜಾ ಪ್ರಚಾರ


  ಈ ಹಿಂದೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾದ ವಿರುದ್ಧದ ಪ್ರತಿಭಟನೆಗಾಗಿ 2018 ರಲ್ಲಿ ಮುನ್ನೆಲೆಯಲ್ಲಿದ್ದ ಕರ್ಣಿ ಸೇನೆಯಲ್ಲಿ ರಿವಾಬಾ ಕಾರ್ಯನಿರ್ವಹಿಸಿದ್ದರು. ಇನ್ನೂ ಪತ್ನಿಗೆ ಬೆಂಬಲವಾಗಿ ಇಂತ ರವೀಂದ್ರ ಜಡೇಜಾ ರಿವಾಬಾ ಸಿಂಗ್ ಪರ ಪ್ರಚಾರಕ್ಕಿಳಿದಿದ್ದಾರೆ. ಜಡೇಜಾ ಅವರ ಪತ್ನಿ ಜಾಮ್‌ನಗರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಅವರ ಪರ ಜಡೇಜಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.


  ಇದನ್ನೂ ಓದಿ: ರಾಜೀವ್ ಗಾಂಧಿ ಹಂತಕರ ರಿಲೀಸ್​: ನಳಿನಿ ಸೇರಿ 6 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಆದೇಶ!


  ಬಿಡುಗಡೆಯಾದ 160 ಅಭ್ಯರ್ಥಿಗಳ ಪಟ್ಟಿಯಲ್ಲಿ ಜಾಮ್‌ನಗರ ಉತ್ತರ ಕ್ಷೇತ್ರಕ್ಕೆ ಬಿಜೆಪಿಯ ರಿವಾಬಾ ಜಡೇಜಾ ಆಯ್ಕೆಯಾಗಿದ್ದರು. ಹಕುಭಾ ಎಂದು ಕರೆಯಲ್ಪಡುವ ಹಾಲಿ ಶಾಸಕ ಧರ್ಮೇಂದ್ರಸಿನ್ಹ್ ಜಡೇಜಾ ಅವರನ್ನು ಪಕ್ಷ ಕೈಬಿಟ್ಟಿದೆ.


  ಗುಜರಾತ್‌ನಲ್ಲಿ 182 ಸದಸ್ಯ ಬಲದ ವಿಧಾನಸಭೆಗೆ ಎರಡು ಹಂತಗಳಲ್ಲಿ ಅಂದರೆ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ಮತ್ತು ಚುನಾವಣೆಯ ಫಲಿತಾಂಶವನ್ನು ಡಿಸೆಂಬರ್ 8 ರಂದು ಪ್ರಕಟಿಸಲಾಗುವುದು.

  Published by:Precilla Olivia Dias
  First published: