• Home
  • »
  • News
  • »
  • national-international
  • »
  • Gujarat Election Result 2022: ಈ 10 ಜನಪ್ರಿಯ ನಾಯಕರ ಪ್ರತಿಷ್ಠೆ ಕಣಕ್ಕೆ, ಫಲಿತಾಂಶದಿಂದ ಭವಿಷ್ಯ ನಿರ್ಧಾರ

Gujarat Election Result 2022: ಈ 10 ಜನಪ್ರಿಯ ನಾಯಕರ ಪ್ರತಿಷ್ಠೆ ಕಣಕ್ಕೆ, ಫಲಿತಾಂಶದಿಂದ ಭವಿಷ್ಯ ನಿರ್ಧಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gujarat Assembly Elections: ಎಲ್ಲ ಅಭ್ಯರ್ಥಿಗಳ ಭವಿಷ್ಯ ಸದ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಇಂದು ಎರಡು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಹೀಗಿರುವಾಗ ಇಡೀ ದೇಶದ ಚಿತ್ತ ಈ ಎರಡು ರಾಜ್ಯಗಳ ಮೇಲೆ ನೆಟ್ಟಿದೆ. ಅದರಲ್ಲೂ ವಿಶೇಷವಾಗಿ ಹಿಮಾಚಲಕ್ಕಿಂತ ಹೆಚ್ಚು, ಗುಜರಾತ್ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಹಲವರದ್ದಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Gujarat, India
  • Share this:

ಅಹಮದಾಬಾದ್(ಡಿ.08): ಡಿಸೆಂಬರ್ 8 ರಂದು ಅಂದರೆ ಇಂದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ (Himachal Pradesh Election Results)  ಬರಲಿದೆ. ಎಲ್ಲ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಸಿಲುಕಿಕೊಂಡಿದೆ. ಎರಡು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಬರಬೇಕಿದೆ, ಆದರೆ ಎಲ್ಲರ ದೃಷ್ಟಿ ಹಿಮಾಚಲಕ್ಕಿಂತ ಹೆಚ್ಚು ಗುಜರಾತ್ (Gujarat Elections) ಮೇಲೆ ನೆಟ್ಟಿದೆ. ಗುಜರಾತ್ ಅನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಗೃಹ ಸಚಿವ ಅಮಿತ್ ಶಾ ಅವರ ಭದ್ರಕೋಟೆ ಎಂದು ಪರಿಗಣಿಸಿರುವುದು ಇದಕ್ಕೆ ಕಾರಣ.


ಆದರೆ, ಫಲಿತಾಂಶ ಏನೇ ಇರಲಿ, ಈ ಚುನಾವಣೆಗಳಲ್ಲಿ ಕೆಲವು ಮುಖಗಳು ಜನಮನದಲ್ಲಿ ಛಾಪು ಮೂಡಿಸಿವೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಯುವ ನಾಯಕ ಹಾರ್ದಿಕ್ ಪಟೇಲ್ ಅಥವಾ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಹೀಗೆ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ 10 ಅಭ್ಯರ್ಥಿಗಳ ವಿವರ ಇಲ್ಲಿದೆ ನೋಡಿ.


* ಜಿಗ್ನೇಶ್ ಮೇವಾನಿ


ವಡ್ಗಾಮ್ ವಿಧಾನಸಭಾ ಕ್ಷೇತ್ರದಿಂದ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದಲಿತ ಯುವ ನಾಯಕರಾಗಿ ಹೊರಹೊಮ್ಮಿದ್ದ ಜಿಗ್ನೇಶ್ 2017ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ಮೇವಾನಿ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಬಾರಿ ಅವರು ಎಎಪಿ ಜೊತೆಗಿನ ಕಠಿಣ ಹೋರಾಟದ ನಡುವೆ ಮುಸ್ಲಿಂ ಮತ್ತು ದಲಿತ ಮತ ಬ್ಯಾಂಕ್‌ಗಳನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದಾರೆ. ಅವರು ಬಿಜೆಪಿಯ ಮಣಿಭಾಯ್ ಜೇತಾಭಾಯಿ ವಘೇಲಾ ಮತ್ತು ಎಎಪಿಯ ದಲ್ಪತ್ ಭಾಟಿಯಾ ವಿರುದ್ಧ ಕಣಕ್ಕಿಳಿದಿದ್ದಾರೆ.
* ಭೂಪೇಂದ್ರಭಾಯಿ ಪಟೇಲ್


ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಘಟ್ಲೋಡಿಯಾ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಮಿಬೆನ್ ಯಾಗ್ನಿಕ್ ಮತ್ತು ಆಪ್ ವಿಜಯ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. 60 ವರ್ಷದ ಭೂಪೇಂದ್ರಭಾಯಿ ಪಟೇಲ್ 2017ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಭಾರೀ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಗುಜರಾತ್‌ನಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭೂಪೇಂದ್ರಭಾಯಿಯೇ ಆಗಿದ್ದಾರೆ.


ಇದನ್ನೂ ಓದಿ: Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್​ ಪ್ಲಾನ್!
* ರಿವಾಬಾ ಜಡೇಜಾ


ಭಾರತೀಯ ಜನತಾ ಪಕ್ಷದ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಕಣದಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿರುವ ಪ್ರಮುಖ ಕ್ಷೇತ್ರಗಳಲ್ಲಿ ಜಾಮ್‌ನಗರ ಉತ್ತರವೂ ಒಂದು. ಈ ಕ್ಷೇತ್ರದಲ್ಲಿ ಬಿಜೆಪಿಯ ರಿವಾಬಾ ಜಡೇಜಾ, ಕಾಂಗ್ರೆಸ್‌ನ ಬಿಪೇಂದ್ರ ಸಿಂಗ್ ಜಡೇಜಾ ಮತ್ತು ಎಎಪಿಯ ಕರ್ಸನ್ ಕರ್ಮುರ್ ನಡುವೆ ತೀವ್ರ ಪೈಪೋಈಟಿ ಏರ್ಪಟ್ಟಿದೆ.
* ಅಲ್ಪೇಶ್ ಠಾಕೂರ್


ಗಾಂಧಿನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯುವ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಅವರನ್ನು ಕಣಕ್ಕಿಳಿಸಿದೆ, ಕಾಂಗ್ರೆಸ್ ತನ್ನ ವಕ್ತಾರ ಮತ್ತು ಪಾಟಿದಾರ್ ನಾಯಕ ಹಿಮಾಂಶು ಪಟೇಲ್ ಮತ್ತು ಎಎಪಿ ದೌಲತ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಠಾಕೋರ್ ಮತದಾರರು ಈ ಸ್ಥಾನದಲ್ಲಿ ಬಹುಸಂಖ್ಯಾತರಾಗಿದ್ದಾರೆ, ನಂತರ ಪಾಟಿದಾರರು ಮತ್ತು ಮೂರನೇ ಸ್ಥಾನದಲ್ಲಿ ದಲಿತ ಸಮುದಾಯವಿದೆ.
* ಹಾರ್ದಿಕ್ ಪಟೇಲ್


ಅಹಮದಾಬಾದ್‌ನ ವಿರಾಮಗಾಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಫೈರ್‌ಬ್ರಾಂಡ್ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಹಾರ್ದಿಕ್ ಪಟೇಲ್ ಕೂಡ ಒಬ್ಬರು. ಅವರು ಜೂನ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ್ದರು. ಅವರ ಮೊದಲ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಶಾಸಕ ಲಖಾಭಾಯಿ ಭಾರವಾಡ್ ಮತ್ತು ಎಎಪಿಯ ಅಮರಸಿಂಗ್ ಠಾಕೂರ್ ವಿರುದ್ಧವಾಗಿದೆ. ಇದಲ್ಲದೆ, ಖ್ಯಾತ ದಲಿತ ಕಾರ್ಯಕರ್ತ ಕಿರೀಟ್ ರಾಥೋಡ್ ಕೂಡ ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
* ಹರ್ಷ ಸಾಂಘ್ವಿ


ರ್ಷ ಸಾಂಘ್ವಿ ಗುಜರಾತ್‌ನ ಗೃಹ ಸಚಿವರು. ಅವರು ಸೂರಜ್ ಜಿಲ್ಲೆಯ ಮಜುರಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಬಿಜೆಪಿ ಅವರನ್ನು ಈ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರನ್ನಾಗಿ ಮಾಡಿದೆ. ಆಮ್ ಆದ್ಮಿ ಪಕ್ಷವು ಪಿವಿಎಸ್ ಶರ್ಮಾ ಅವರನ್ನು ಮತ್ತು ಕಾಂಗ್ರೆಸ್ ಬಲವಂತ್ ಶಾಂತಿಲಾಲ್ ಜೈನ್ ಅವರನ್ನು ಈ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.


* ಪರಸೊತ್ತಂಬಾಯಿ ಸೋಲಂಕಿ


ಭಾವನಗರ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯು ಐದು ಬಾರಿ ಶಾಸಕರಾಗಿರುವ ಮತ್ತು ಕೋಲಿ ಸಮುದಾಯದ ಹಿರಿಯ ಮುಖಂಡರಾದ ಪರಸೊತ್ತಂಬಾಯಿ ಸೋಲಂಕಿ ಅವರ ಮೇಲೆ ನಂಬಿಕೆ ಇಟ್ಟಿದೆ. ಗುಜರಾತ್ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ. ಪರಸೊತ್ತಮ್ ಕೋಲಿ ಸಮಾಜದ ದೊಡ್ಡ ನಾಯಕರಲ್ಲಿ ಒಬ್ಬರು. ಕೋಲಿ ಸಮುದಾಯದ ಪ್ರಾಬಲ್ಯದ ಈ ಸ್ಥಾನವು 2012 ರಲ್ಲಿ ಡಿಲಿಮಿಟೇಶನ್ ನಂತರ ಅಸ್ತಿತ್ವಕ್ಕೆ ಬಂದಿತು. ರೇವತ್ ಸಿಂಗ್ ಗೋಹಿಲ್‌ಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಖುಮಾನ್ ಸಿಂಗ್ ಗೋಹಿಲ್‌ಗೆ ಟಿಕೆಟ್ ನೀಡಿದೆ.


* ಇಸುದನ್ ಗಧ್ವಿ


ಮಾಜಿ ಪತ್ರಕರ್ತ ಮತ್ತು ಟಿವಿ ನಿರೂಪಕ ಇಸುದನ್ ಗಧ್ವಿ ಅವರು ಆಮ್ ಆದ್ಮಿ ಪಕ್ಷದಿಂದ ಗುಜರಾತ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಅವರು ದ್ವಾರಕಾ ಜಿಲ್ಲೆಯ ಖಂಭಾಲಿಯಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿದ್ದಾರೆ. ಈ ಸ್ಥಾನಕ್ಕೆ ಬಿಜೆಪಿ ಮುಲುಭಾಯ್ ಬೇರಾ ಮತ್ತು ಕಾಂಗ್ರೆಸ್ ವಿಕ್ರಂಭಾಯ್ ಮೇಡಂ ಅವರ ಹೆಸರನ್ನು ಸೂಚಿಸಿದೆ.


* ಭೀಮಾಭಾಯಿ ಚೌಧರಿ


ದೇವದಾರ್ ವಿಧಾನಸಭಾ ಕ್ಷೇತ್ರವು ಬನಸ್ಕಾಂತ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ. ಈ ಸ್ಥಾನಕ್ಕೆ ಸ್ಪರ್ಧಿಸಿದ್ದ ಜನಪ್ರಿಯ ಅಭ್ಯರ್ಥಿಗಳ ಪೈಕಿ AAP ಗುಜರಾತ್ ಉಪಾಧ್ಯಕ್ಷ ಭೀಮಾಭಾಯಿ ಚೌಧರಿ ಕೂಡಾ ಒಬ್ಬರು. ಗುಜರಾತ್‌ನಲ್ಲಿ ಆಫ್​ ಪ್ರಾರಂಭವಾದಾಗಿನಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಬಿಜೆಪಿಯ ಕೇಶಾಜಿ ಶಿವಾಜಿ ಚೌಹಾಣ್ ಮತ್ತು ಕಾಂಗ್ರೆಸ್‌ನ ಭೀಮಾಭಾಯ್ ರಗ್ನಾಥಭಾಯಿ ಚೌಧರಿ ವಿರುದ್ಧ ಸ್ಪರ್ಧಿಸಿದ್ದಾರೆ. 2017ರ ಚುನಾವಣೆಯಲ್ಲಿ ಐಎನ್‌ಸಿಯ ಭೂರಿಯಾ ಶಿವಭಾಯಿ ಅಮರಭಾಯಿ ಅವರು ಬಿಜೆಪಿಯ ಚೌಹಾಣ್ ಕೇಶಜಿ ಶಿವಾಜಿ ಅವರನ್ನು 972 ಮತಗಳಿಂದ ಸೋಲಿಸಿದ್ದರು.


ಇದನ್ನೂ ಓದಿ: Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಬಿಗ್ ಶಾಕ್, 26 ಕೈ ನಾಯಕರು ಬಿಜೆಪಿಗೆ ಸೇರ್ಪಡೆ!


* ಕಾಂತಿಲಾಲ್ ಅಮೃತೀಯ


ಮೊರ್ಬಿ ಸೇತುವೆ ಅಪಘಾತದ ನಂತರ ನಡೆದ ಚರ್ಚೆ ಬಳಿಕ ಬಿಜೆಪಿ ಕಾಂತಿಲಾಲ್ ಅಮೃತಿಯವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಮೊರ್ಬಿ ಸೇತುವೆ ಅಪಘಾತದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಲು ಸಹಾಯ ಮಾಡಿದವರು ಕಾಂತಿಲಾಲ್. ಈ ಘಟನೆಯ ನಂತರವೇ ಕಾಂತಿಲಾಲ್ ಬೆಳಕಿಗೆ ಬಂದರು.

Published by:Precilla Olivia Dias
First published: