• Home
  • »
  • News
  • »
  • national-international
  • »
  • Gujarat Assembly Election 2022: ಗುಜರಾತ್​ ಚುನಾವಣೆಗೆ ಡೇಟ್​ ಫಿಕ್ಸ್​: ಡಿಸೆಂಬರ್ 1 ಹಾಗೂ 5ಕ್ಕೆ ಮತದಾನ, 8ಕ್ಕೆ ಫಲಿತಾಂಶ ಪ್ರಕಟ!

Gujarat Assembly Election 2022: ಗುಜರಾತ್​ ಚುನಾವಣೆಗೆ ಡೇಟ್​ ಫಿಕ್ಸ್​: ಡಿಸೆಂಬರ್ 1 ಹಾಗೂ 5ಕ್ಕೆ ಮತದಾನ, 8ಕ್ಕೆ ಫಲಿತಾಂಶ ಪ್ರಕಟ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gujarat Assembly Election 2022 Date: ಚುನಾವಣಾ ಆಯೋಗವು ಗುಜರಾತ್ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದೆ. ಈ ಬಾರಿಯೂ ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದ ಜೊತೆಗೆ ಫಲಿತಾಂಶವನ್ನು ಪ್ರಕಟಗೊಳ್ಳಲಿದೆ.

  • News18 Kannada
  • Last Updated :
  • Gujarat, India
  • Share this:

ಅಹಮದಾಬಾದ್(ನ. 03): ಗುಜರಾತ್ ವಿಧಾನಸಭಾ ಚುನಾವಣೆಯ (Gujarat Assembly Elections) ದಿನಾಂಕವನ್ನು ಇಂದು ಪ್ರಕಟಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Chief Election Commissioner Rajiv Kumar) ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣೆ ಕುರಿತು ಮಾಹಿತಿ ನೀಡಿದರು. ಕಳೆದ ಬಾರಿಯಂತೆ ಈ ಬಾರಿಯೂ ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯುಕ್ತ ರಾಜೀವ್‌ಕುಮಾರ್‌ಗೆ ಹೇಳಿದ್ದಾರೆ. ಮೊದಲ ಹಂತದ ಮತದಾನ 1 ಡಿಸೆಂಬರ್ 2023 ರಂದು ಮತ್ತು ಎರಡನೇ ಹಂತದ ಮತದಾನ 5 ಡಿಸೆಂಬರ್ 2023 ರಂದು ನಡೆಯಲಿದೆ. ಹಿಮಾಚಲ ವಿಧಾನಸಭಾ ಚುನಾವಣೆಯ ಫಲಿತಾಂಶದೊಂದಿಗೆ ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿ: ಪಾಂಡಿಚೇರಿ ಸರ್ಕಾರ ಬೀಳಿಸಿದ ಬಿಜೆಪಿ ಕೆಲಸ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ; ಶಿವಸೇನೆ ಎಚ್ಚರಿಕೆ!


ಗುಜರಾತ್ ನಲ್ಲಿ ಈ ಬಾರಿ 4.9 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಚುನಾವಣಾ ಆಯುಕ್ತರ ಪ್ರಕಾರ ಈ ಬಾರಿ 4.6 ಲಕ್ಷ ಹೊಸ ಮತದಾರರು ಮತದಾನ ಮಾಡಲಿದ್ದಾರೆ. 51782 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. 142 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ವಿಕಲಚೇತನರಿಗಾಗಿ 182 ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಮಹಿಳೆಯರಿಗಾಗಿ 1274 ಮತಗಟ್ಟೆಗಳಿವೆ ಎಂದಿದ್ದಾರೆ.


3.2 ಲಕ್ಷ ಹೊಸ ಮತದಾರರು: ಚುನಾವಣಾ ಆಯುಕ್ತ


ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ 3,24,422 ಹೊಸ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಒಟ್ಟು ಮತಗಟ್ಟೆಗಳ ಸಂಖ್ಯೆ 51,782. ರಾಜ್ಯದಲ್ಲಿ ಸ್ಥಾಪಿಸಲಾದ ಕನಿಷ್ಠ 50 ಪ್ರತಿಶತ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರುತ್ತದೆ. ಚುನಾವಣಾ ಆಯೋಗದ ಪ್ರಕಾರ 142 ಮಾದರಿ ಮತಗಟ್ಟೆಗಳಿವೆ. 1274 ಮತಗಟ್ಟೆಗಳಲ್ಲಿ ಮಹಿಳೆಯರನ್ನು ಮಾತ್ರ ನಿಯೋಜಿಸಲಾಗುವುದು ಎಂದಿದ್ದಾರೆ.


ಇದನ್ನೂ ಓದಿ: ಗುಜರಾತ್​ ಮುನ್ಸಿಪಲ್ ಚುನಾವಣೆ; ಕಾಂಗ್ರೆಸ್ ಸ್ಥಾನಗಳನ್ನು ಕಸಿದುಕೊಂಡರಾ ಓವೈಸಿ, ಕೇಜ್ರಿವಾಲ್, ಮಾಯಾವತಿ​?


ಶಿಪ್ಪಿಂಗ್ ಕಂಟೈನರ್ ಕೂಡ ಮತದಾನ ಕೇಂದ್ರವನ್ನಾಗಿ ಮಾಡಲಾಗುವುದು


ಯುವ ಮತಗಟ್ಟೆ ತಂಡದಿಂದ ಈ ಬಾರಿ 33 ಮತಗಟ್ಟೆಗಳು ಕಾರ್ಯನಿರ್ವಹಿಸಲಿದ್ದು, ಯುವಕರು ಮತದಾನ ಮಾಡಲು ಪ್ರೇರೇಪಿಸಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಈ ಬಾರಿ ಶಿಪ್ಪಿಂಗ್ ಕಂಟೈನರ್ ಕೂಡ ಮತದಾನ ಕೇಂದ್ರವನ್ನಾಗಿ ಮಾಡಲಾಗಿದೆ. ಮೊದಲ ಬಾರಿಗೆ, ಶಿಪ್ಪಿಂಗ್ ಕಂಟೈನರ್‌ಗಳು ಮತದಾನ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಒಬ್ಬರೇ ಮತದಾರರಿರುವ ಗಿರ್ ಅರಣ್ಯಕ್ಕೆ ಒಂದು ಮತಗಟ್ಟೆ ಇರುತ್ತದೆ. ಚುನಾವಣಾ ಆಯೋಗದ ಪ್ರತಿನಿಧಿಗಳು ಅಂಚೆ ಮತಕ್ಕಾಗಿ ಹೋಗುತ್ತಾರೆ. ಒಬ್ಬರೇ ಮತದಾರರಿರುವ ಗಿರ್ ಅರಣ್ಯಕ್ಕೆ ಒಂದು ಮತಗಟ್ಟೆ ಇರುತ್ತದೆ ಎಂದಿದ್ದಾರೆ.

Published by:Precilla Olivia Dias
First published: