ಅಹಮದಾಬಾದ್(ಡಿ.08): ಕಾಂಗ್ರೆಸ್ ಸಂಪೂರ್ಣವಾಗಿ 'ಭಾರತ್ ಜೋಡೋ ಯಾತ್ರೆ'ಯ (Bharat Jodo Yatra) ಮೇಲೆ ಕೇಂದ್ರೀಕೃತವಾಗಿರಬಹುದು, ಆದರೆ ಗುಜರಾತ್ ಮತ್ತು ಹಿಮಾಚಲ (Gujarat And Himachal Pradesh Elections) ಪ್ರದೇಶದ ವಿಧಾನಸಭಾ ಚುನಾವಣೆಗಳ ಮತ ಎಣಿಕೆಯಲ್ಲಿ ಅದು ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿದೆ. ದೇಶದ ಅತ್ಯಂತ ಹಳೆಯ ಪಕ್ಷವು ತನ್ನ ಕುಗ್ಗುತ್ತಿರುವ ಜನ ಬೆಂಬಲ ಉಳಿಸಿಕೊಳ್ಳಲು ನಿರಂತರವಾಗಿ ಹೆಣಗಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಿ ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ (Aam Admi Party) ಅಸ್ತಿತ್ವಕ್ಕೆ ಬಂದರೂ ಪ್ರಮುಖ ವಿರೋಧ ಪಕ್ಷವಾಗಿ ಉಳಿದುಕೊಂಡರೆ ಅದೇ ದೊಡ್ಡ ಸಮಾಧಾನಕರ ವಿಚಾರವಾಗಲಿದೆ.
ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ವಿಫಲವಾದರೆ ಮತ್ತು ಗುಜರಾತ್ನಲ್ಲಿ ಪ್ರಮುಖ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡರೆ ಕಾಂಗ್ರೆಸ್ನ ಬಿಕ್ಕಟ್ಟು ತೀವ್ರಗೊಳ್ಳಬಹುದು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂಬತ್ತು ಸ್ಥಾನಗಳನ್ನು ಗಳಿಸುವ ಮೂಲಕ ಬುಧವಾರ ದೊಡ್ಡ ಹೊಡೆತ ಅನುಭವಿಸಿದೆ. ಆಮ್ ಆದ್ಮಿ ಪಕ್ಷಕ್ಕೆ 134 ಮತ್ತು ಭಾರತೀಯ ಜನತಾ ಪಕ್ಷಕ್ಕೆ 104 ಸ್ಥಾನಗಳು ಲಭಿಸಿವೆ.
ಗುಜರಾತ್-ಹಿಮಾಚಲದತ್ತ ಎಲ್ಲರ ಕಣ್ಣು
ಸೋಮವಾರದಂದು ಹಲವು ಸುದ್ದಿ ವಾಹಿನಿಗಳು ತೋರಿಸಿದ ಎಕ್ಸಿಟ್ ಪೋಲ್ಗಳು ಗುಜರಾತ್ನಲ್ಲಿ ಬಿಜೆಪಿ ಪ್ರಚಂಡ ವಿಜಯ ಗಳಿಸುವ ಭವಿಷ್ಯ ನುಡಿದಿವೆ, ಆದರೆ ಹಿಮಾಚಲದ ಫಲಿತಾಂಶವು ಬಿಜೆಪಿ ಅಥವಾ ಕಾಂಗ್ರೆಸ್ ಪರವಾಗಿ ಹೋಗಬಹುದು. 68 ಸದಸ್ಯರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಧನೆ ಮತ್ತು 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ ಗೌರವಾನ್ವಿತ ಸ್ಥಾನಗಳು ಕಾಂಗ್ರೆಸ್ಗೆ ಸಮಾಧಾನಕರವಾಗಬಹುದು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ ಸಂಜೀವಿನಿ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದರೆ ಅದಕ್ಕೆ ಸಂಜೀವಿನಿಯಾಗಲಿದೆ, ಏಕೆಂದರೆ ಬಹುಕಾಲದ ನಂತರ ತನ್ನದೇ ಆದ ಅರ್ಹತೆಯ ಮೇಲೆ ರಾಜ್ಯದ ಅಧಿಕಾರವನ್ನು ಪಡೆಯಲಿದೆ. ಪ್ರಸ್ತುತ ಇದು ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಸರ್ಕಾರಗಳನ್ನು ಹೊಂದಿದೆ. ಹಿಮಾಚಲ ಪ್ರದೇಶದ ಗೆಲುವು ಕಾಂಗ್ರೆಸ್ಗೆ ಉತ್ತೇಜನ ನೀಡಲಿದೆ ಎಂದು ಕಾಂಗ್ರೆಸ್ನ ಮಾಜಿ ವಕ್ತಾರ ಸಂಜಯ್ ಝಾ ಹೇಳಿದ್ದಾರೆ. ಹಿಮಾಚಲದ ಗೆಲುವು ಕಾಂಗ್ರೆಸ್ಗೆ 2023 ಮತ್ತು 2024 ರಲ್ಲಿ ಗೆಲುವಿನ ಭರವಸೆಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ 'ಭಾರತ್ ಜೋಡೋ ಯಾತ್ರೆ' ನಂತರ ಪಕ್ಷವು ಎಷ್ಟು ಶಕ್ತಿಶಾಲಿಯಾಗುತ್ತದೆ ಎಂಬುವುದೂ ಬಹಳಷ್ಟು ಮಹತ್ವ ಪಡೆದಿದೆ.
ಗುಜರಾತ್ನಲ್ಲಿ ಹೀನಾಯ ಸೋಲಾದರೆ?
ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಆದರೆ ಗುಜರಾತ್ನಲ್ಲಿ ಭಾರೀ ಸೋಲನ್ನು ಎದುರಿಸಬೇಕಾಗುತ್ತದೆ. ‘ಭಾರತ್ ಜೋಡೋ ಯಾತ್ರೆ’ಯತ್ತ ಗಮನಹರಿಸಿದರೂ ಒಂದು ರಾಜ್ಯದಲ್ಲಿ ಚುನಾವಣೆ ಗೆಲ್ಲಬಹುದು, ಆದರೆ ಗುಜರಾತ್ನಲ್ಲಿ ಕೆಟ್ಟ ಸೋಲು ಎದುರಾಳಿ ಪಾಳಯದಲ್ಲಿ ಅವರ ಪಾತ್ರವನ್ನು ಮತ್ತಷ್ಟು ದುರ್ಬಲಗೊಳಿಸಬಹುದು ಎಂದೂ ವಿಶ್ಲೇಷಿಸಲಾಗಿದೆ. ಹಿಮಾಚಲ ಪ್ರದೇಶದ ಸೋಲು ಹಾಗೂ ಗುಜರಾತ್ನಲ್ಲಿ ಹೀನಾಯವಾಗಿ ಸೋತರೆ ಕಾಂಗ್ರೆಸ್ ಅತ್ಯಂತ ಕೆಟ್ಟ ಸ್ಥಿತಿ ತಲುಪಲಿದೆ. ಅಂತಹ ಪರಿಸ್ಥಿತಿಯಲ್ಲಿ ಪಕ್ಷವು ಗಂಭೀರ ಬಿಕ್ಕಟ್ಟು ಎದುರಿಸಲಿದೆ. ಹೀಗಾದರೆ ಆ ಸ್ಥಿತಿಯಿಂದ ಹೊರಬರಲು ತುಂಬಾ ಕಷ್ಟವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ