• Home
  • »
  • News
  • »
  • national-international
  • »
  • Gujarat Adhiveshan: ಗುಜರಾತ್, ಹಿಮಾಚಲ ಪ್ರದೇಶ​ ಚುನಾವಣೆ ಕರ್ನಾಟಕದ ಮೇಲೂ ಉತ್ತಮ ಪರಿಣಾಮ ಬೀರಲಿದೆ- ಅಮಿತ್​ ಶಾ

Gujarat Adhiveshan: ಗುಜರಾತ್, ಹಿಮಾಚಲ ಪ್ರದೇಶ​ ಚುನಾವಣೆ ಕರ್ನಾಟಕದ ಮೇಲೂ ಉತ್ತಮ ಪರಿಣಾಮ ಬೀರಲಿದೆ- ಅಮಿತ್​ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ

ವಿಶೇಷ ಸಂದರ್ಶನದಲ್ಲಿ ಮಾತಾಡಿದ ಅಮಿತ್​ ಶಾ,  ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳು ಕರ್ನಾಟಕದ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಗುಜರಾತ್​ ಚುನಾವಣೆಯಲ್ಲಿ (Gujarat Election) ಬಿಜೆಪಿ  ಭಾರೀ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ನ್ಯೂಸ್ 18 ನ ಗುಜರಾತ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ (Union Home Minister Amit Shah) ಹೇಳಿದ್ದಾರೆ.  ನೆಟ್‌ವರ್ಕ್ 18 ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ( Network18 Group Editor-in-Chief Rahul Joshi) ಅವರೊಂದಿಗೆ ನಡೆದ ವಿಶೇಷ ಸಂದರ್ಶನದಲ್ಲಿ ಮಾತಾಡಿದ ಅಮಿತ್​ ಶಾ,  ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳು ಕರ್ನಾಟಕದ (Karnataka) ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.


ಕರ್ನಾಟಕದ ಮೇಲೆ ಉತ್ತಮ ಪರಿಣಾಮ ಬೀರಲಿದೆ


ಹಿಮಾಚಲ ಪ್ರದೇಶ ಹಾಗೂ ಗುಜರಾತ್​ ಚುನಾವಣೆಗಳು ಕರ್ನಾಟಕದ ಮೇಲೆ ಉತ್ತಮ ಪರಿಣಾಮ ಬೀರಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಉಂಟಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಮಿತ್​ ಶಾ, ನನಗೆ ಬಂದಿರೋ ಮಾಹಿತಿ ಪ್ರಕಾರ ಆಡಳಿತ ವಿರೋಧಿ ಅಲೆ ಅಂತ ಇಲ್ಲ ಎಂದು ಹೇಳಿದ್ದಾರೆ.


ಕರ್ನಾಟಕದಲ್ಲೂ ಗೆಲುವಿನ ವಿಶ್ವಾಸವಿದೆ


ಗುಜರಾತ್​ ಚುನಾವಣೆ ಬಳಿಕ ಕರ್ನಾಟಕದಲ್ಲೂ ಚುನಾವಣೆ ನಡೆಯಲಿದ್ದು, ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ನಾನಾ ತಂತ್ರ ರೂಪಿಸಿದೆ. ಈ ಬಗ್ಗೆ ಮಾತಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು, ಕಳೆದ ಬಾರಿ ಚುನಾವಣೆಯಲ್ಲಿ 8 ಸೀಟ್​ ಕಡಿಮೆ ಬಂದಿತ್ತು. ಈ ಬಾರಿ ಪೂರ್ಣ ಬಹುಮತ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.ಶೀಘ್ರದಲ್ಲೇ ಚುನಾವಣೆ ನಡೆಯಲಿ


ಶೀಘ್ರದಲ್ಲೇ ಚುನಾವಣೆ ನಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ ಬಯಸುತ್ತಾರೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸರಿಪಡಿಸುತ್ತಿದೆ ಭದ್ರತೆ ಬಗ್ಗೆ ಕೂಡ ಯೋಚಿಸಲಾಗಿದೆ ಎಂದು ಹೇಳಿದ್ರು.


ಬಿಜೆಪಿ ಎಷ್ಟು ಸ್ಥಾನಗಳನ್ನು ಪಡೆಯಲಿದೆ?

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಪಡೆಯಲಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 'ನಮ್ಮ ಮತಗಳ ಪ್ರಮಾಣ ಖಂಡಿತ ಹೆಚ್ಚುತ್ತದೆ. ಸೀಟುಗಳೂ ಹೆಚ್ಚುತ್ತದೆ. ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ರು.


ದಾಖಲೆಗಳನ್ನು ಮುರಿದು ಭರ್ಜರಿ ಗೆಲುವು ಪಕ್ಕಾ!ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ದೊಡ್ಡ ಗೆಲುವು ಪಡೆಯುತ್ತದೆ. ಎಲ್ಲಾ ಚುನಾವಣಾ ದಾಖಲೆಗಳನ್ನು ಮುರಿದು ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ. ನಾವು ಯಾವಾಗಲೂ ಗುಜರಾತಿನ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಂಡಿದ್ದೇವೆ ಎಂದು ಅಮಿತ್​ ಶಾ ಹೇಳಿದ್ದಾರೆ.

ಡಿಸೆಂಬರ್ 1 ಮತ್ತು 5 ರಂದು ಚುನಾವಣೆ


ಗುಜರಾತ್ ವಿಧಾನಸಭಾ ಚುನಾವಣೆಯು ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 8 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) 68 ಸ್ಥಾನಗಳ ಹಿಮಾಚಲಕ್ಕೆ ಚುನಾವಣೆಯನ್ನು ಘೋಷಿಸಿದ ವಾರಗಳ ನಂತರ ಚುನಾವಣೆ ಘೋಷಿಸಿದೆ.


182 ಸದಸ್ಯ ಬಲದ ಗುಜರಾತ್ ವಿಧಾನಸಭೆಯ ಅವಧಿ ಮುಂದಿನ ವರ್ಷ ಫೆಬ್ರವರಿ 18ಕ್ಕೆ ಕೊನೆಗೊಳ್ಳಲಿದೆ. ಗುಜರಾತ್‌ನಲ್ಲಿ ಅಕ್ಟೋಬರ್ 10 ರಂದು ಪ್ರಕಟವಾದ ಮತದಾರರ ಪಟ್ಟಿಯ ಪ್ರಕಾರ, 4.9 ಕೋಟಿಗೂ ಹೆಚ್ಚು ಮತದಾರರು ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ 4.04 ಲಕ್ಷ ಅಂಗವಿಕಲ ಮತದಾರರು, 9.8 ಲಕ್ಷಕ್ಕೂ ಹೆಚ್ಚು 80-ಕ್ಕೂ ಹೆಚ್ಚು ಹಿರಿಯ ನಾಗರಿಕರು ಮತ್ತು 4.61 ಲಕ್ಷ ಮೊದಲ ಬಾರಿಗೆ ಮತದಾರರು ಇದ್ದಾರೆ.

Published by:ಪಾವನ ಎಚ್ ಎಸ್
First published: