BJP Vs AAP: ಮೋದಿ ನಿಂದಿಸಿದ ಆಪ್​ ಅಧ್ಯಕ್ಷ: ಇದು ಗುಜರಾತಿಗರಿಗೆ ಅವಮಾನ ಎಂದ ಬಿಜೆಪಿ!

ಪ್ರಧಾನಿ ಮೋದಿ, ದೆಹಲಿ ಸಿಎಂ ಕೇಜ್ರಿವಾಲ್​

ಪ್ರಧಾನಿ ಮೋದಿ, ದೆಹಲಿ ಸಿಎಂ ಕೇಜ್ರಿವಾಲ್​

ಎಎಪಿ ನಾಯಕ ಗೋಪಾಲ್ ಇಟಾಲಿಯಾ ಅವರ ವಿಡಿಯೋ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಮಾಳವಿಯಾ 'ಕೇಜ್ರಿವಾಲ್ ಅವರ ಬಲಗೈ ಮತ್ತು ಎಎಪಿ ಗುಜರಾತ್ ಅಧ್ಯಕ್ಷ ಗೋಪಾಲ್ ಇಟಾಲಿಯಾ, ಕೇಜ್ರಿವಾಲ್ ಮಟ್ಟಕ್ಕೆ ಕುಸಿದಿದ್ದರು, ಪ್ರಧಾನಿ ಮೋದಿಯನ್ನು ನಿಂದಿಸಿದ್ದಾರೆ. ಇಂತಹ ನಿಂದನೀಯ ಪದಗಳನ್ನು ಬಳಸಿ ಗುಜರಾತಿನ ಮತ್ತು ಭೂಪುತ್ರನ ಅಭಿಮಾನವನ್ನು ನಿಂದಿಸುವುದು ಪ್ರತಿಯೊಬ್ಬ ಗುಜರಾತಿಗೂ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ: ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಗೂ (Gujarat Assembly Elections)  ಮುನ್ನವೇ ವಿವಾದಾತ್ಮಕ ಮಾತುಗಳು ಶುರುವಾಗಿದೆ. ಆಮ್ ಆದ್ಮಿ (Aam Aadmi Party) ಪಕ್ಷದ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ನಿಂದಿಸಿರುವ ವಿಡಿಯೋ ಇದೀಗ ಹೊರಬಿದ್ದಿದೆ. ಇದರಲ್ಲಿ ಗೋಪಾಲ್ ಇಟಾಲಿಯಾ ಮಾತುಗಾರಿಕೆಯಲ್ಲಿ ಎಲ್ಲ ಮಿತಿಗಳನ್ನು ದಾಟಿದ್ದಾರೆ. ಗೋಪಾಲ್ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದೆ. ಈ ಸಂಬಂಧ ಬಿಜೆಪಿ ನಾಯಕ ಅಮಿತ್ ಮಾಳವೀಯ (Amit Malaviya) ವಿಡಿಯೋ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಎಎಪಿ ನಾಯಕ ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಭೇಟಿಯನ್ನು ಗಿಮಿಕ್ ಎಂದು ಬಣ್ಣಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದೃಶ್ಯಗಳಿವೆ. ಈ ಹಿಂದೆ ಯಾವೊಬ್ಬ ಪ್ರಧಾನಿಯಾದರೂ ಇಂತಹ ಗಿಮಿಕ್ ಮಾಡಿದ್ದಾರಾ ಎಂದು ಗೋಪಾಲ್ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Hemant Soren Disqualification: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ಗೆ ಅನರ್ಹತೆ ಭೀತಿ!


ಅಮಿತ್ ಮಾಳವೀಯ ಅವರು ಗೋಪಾಲ್ ಇಟಾಲಿಯಾ ಅವರ ವಿಡಿಯೋ ಬಗ್ಗೆ ಬರೆದಿದ್ದು, ಕೇಜ್ರಿವಾಲ್ ಅವರ ಬಲಗೈ ಮತ್ತು ಎಎಪಿ ಗುಜರಾತ್ ಅಧ್ಯಕ್ಷ ಗೋಪಾಲ್ ಇಟಾಲಿಯಾ, ಕೇಜ್ರಿವಾಲ್ ಮಟ್ಟಕ್ಕೆ ಕುಸಿದಿದ್ದರು, ಪ್ರಧಾನಿ ಮೋದಿಯನ್ನು ನಿಂದಿಸಿದ್ದಾರೆ. ಇಂತಹ ನಿಂದನೀಯ ಪದಗಳನ್ನು ಬಳಸಿ ಗುಜರಾತಿನ ಮತ್ತು ಭೂಪುತ್ರನ ಅಭಿಮಾನವನ್ನು ನಿಂದಿಸುವುದು ಪ್ರತಿಯೊಬ್ಬ ಗುಜರಾತಿಗೂ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ.


Government schools in India are worse than junkyards Delhi CM Arvind Kejriwal wrote a letter to the Prime Minister
ಅರವಿಂದ್ ಕೇಜ್ರಿವಾಲ್‌


ಮಹಿಳೆಯರ ಬಗ್ಗೆಯೂ ನಿಂದನೆ


ಮತ್ತೊಂದು ಟ್ವೀಟ್‌ ಮಾಡಿರುವ ಮಾಳವಿಯಾ ಪ್ರಧಾನಿಯನ್ನು ಕೀಳು ಎಂದು ಕರೆಯುವುದು ಎಷ್ಟು ಆಕ್ಷೇಪಾರ್ಹವೋ, ತಪ್ಪು ಪದವನ್ನು ಬಳಸುವುದು ಕೂಡಾ ಅಷ್ಟೇ ಅವಮಾನಕರವಾಗಿದೆ. ಏಕೆಂದರೆ ಇದು ಮಹಿಳೆಯರ ವಿಚಾರ ಬಂದಾಗ ಬಹಳ ಅವಮಾನಕರವಾಗಿದೆ. ಇದು ಭಾರತದ ಮಹಿಳಾ ಶಕ್ತಿಗೆ ಮಾಡಿದ ಅವಮಾನ. ಇದಕ್ಕಾಗಿ ಜನರು ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.


ದೆಹಲಿ ಬಿಜೆಪಿ ಎಫ್‌ಐಆರ್


ಅದೇ ಸಮಯದಲ್ಲಿ, ದೆಹಲಿ ಬಿಜೆಪಿ ನಾಯಕ ಹರೀಶ್ ಖುರಾನಾ ಟ್ವೀಟ್ ಮಾಡಿ ನಾಳೆ ನಾನು ಬಿಜೆಪಿ ಪರವಾಗಿ ಗೋಪಾಲ್ ಇಟಾಲಿಯಾ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದೇನೆ. ನೀವು ಪ್ರಧಾನಿಯನ್ನು ನಿಂದಿಸುತ್ತಿದ್ದೀರಿ. ಸಾರ್ವಜನಿಕವಾಗಿ ಅಸಭ್ಯ ಭಾಷೆ ಬಳಸುತ್ತಿದ್ದೀರಿ ಎಂದು ಗುಡುಗಿದ್ದಾರೆ.


ಇದನ್ನೂ ಓದಿ: Telangana: ಶೀಘ್ರದಲ್ಲೇ ಮಂಡಿಯೂರಲಿದೆ ಸರ್ಕಾರ: ಕೆಸಿಆರ್​ಗೆ ಬಹಿರಂಗ ಎಚ್ಚರಿಕೆ ಕೊಟ್ಟ ಬಿಜೆಪಿ


ವಜಾ ಮಾಡ್ತಾರಾ ಕೇಜ್ರಿವಾಲ್?


ಅದೇ ಸಮಯದಲ್ಲಿ, ಎಎಪಿ ಎಲ್ಲಾ ಮಿತಿಗಳನ್ನು ದಾಟಿದೆ ಎಂದು ಶಹಜಾದ್ ಜೈ ಹಿಂದ್ ಹೇಳಿದ್ದಾರೆ. ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ಮೋದಿ ವಿರುದ್ಧ ಜಾತಿವಾದಿ ಪದಗಳನ್ನು ಬಳಸಿದ್ದಾರೆ. ಹಿಂದೂ ಸಮುದಾಯದ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದು ನಿಮ್ಮ ನಿಜವಾದ ಮುಖ. ಹಿಂದೂಗಳನ್ನು ನಿಂದಿಸಿದ, ಗುಜರಾತ್ ನಿಂದಿಸಿದ, ಪ್ರಧಾನಿ ಹುದ್ದೆಯನ್ನು ನಿಂದಿಸಿದ, ಒಬಿಸಿ ಸಮಾಜವನ್ನು ನಿಂದಿಸಿ ಕೇಜ್ರಿವಾಲ್ ಅವರನ್ನು ವಜಾ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

Published by:Precilla Olivia Dias
First published: