ಮಕ್ಕಳಿರಲವ್ವಾ ಮನೆ ತುಂಬಾ.. ಎಂಬ ಮಾತು ಕೇಳಿರುತ್ತೀರಿ. ಅದರಂತೆ ಕೆಲವರಿಗೆ ಅವಳಿ, ಇನ್ನೂ ಕೆಲವರಿಗೆ ತ್ರಿವಳಿ ಮಕ್ಕಳಾಗುವ ಭಾಗ್ಯ ಒಳಿದು ಒಂದಿರುತ್ತದೆ. ಅದರಂತೆ ಇಲ್ಲೊಬ್ಬಳು ತಾಯಿ ಅವಳಿಯು ಅಲ್ಲ, ತ್ರಿವಳಿಯು ಅಲ್ಲ, ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ವಿಶ್ವ ದಾಖಲೆಯಲ್ಲದೆ ಮತ್ತೇನು!.
ಅಂದಹಾಗೆಯೇ, ಈ ಘಟನೆ ನಡೆದದ್ದು ದಕ್ಷಿಣ ಆಫ್ರಿಕಾದಲ್ಲಿ. 37 ವರ್ಷದ ಗೋಸಿಯಾರ್ ತಮಾರಾ ಸಿಥೋಲ್ ಎಂಬ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಏಳು ಗಂಡು ಮತ್ತು ಮೂರು ಹೆಣ್ಣು ಮಕ್ಕಳಾಗಿದ್ದು, ಸಿಜರಿಯನ್ ಮಾಡುವ ಮೂಲಕ ಹೊರತೆಗೆಯಲಾಗಿದೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ತಮಾರಾ ಸಿಥೋಲ್ ಅವಳಿ ಮಕ್ಕಳನ್ನು ಹೆತ್ತಿದ್ದರು, ಆದರೆ ಎರಡನೇ ಭಾರಿ ಗರ್ಭೀಣಿಯಾಗಿ 10 ಮಕ್ಕಳನ್ನು ಹೆತ್ತಿದ್ದಾರೆ. ಒಟ್ಟಿಗೆ 12 ಮಕ್ಕಳ ತಾಯಿಯಾಗಿದ್ದಾರೆ ತಮಾರಾ ಸಿಥೋಲ್.
ತಮಾರಾ ಸಿಥೋಲ್ ಅವರ ಪತಿ ಟೆಬೋಗಿ ತ್ಸೊಟೆಟ್ಸಿ ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಮೊದಲ ಭಾರಿ ಗರ್ಭಿಣಿಯಾದ ಜನಿಸಿದ ಮಕ್ಕಳಿಗಾಗಿ ತೆಗೆದುಕೊಂಡ ಚಿಕಿತ್ಸೆಯಿಂದಾಗಿ ಎರಡನೇ ಭಾರಿ ಗರ್ಭಿಣಿಯಾದಾಗ 10 ಮಕ್ಕಳು ಹುಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಮೊದಲು ಹಲೀಮಾ ಸಿಸ್ಸೆ ಎಂಬಾಕೆ ಮೊರೊಕ್ಕೊದ ಆಸ್ಪತ್ರೆಯೊಂದರಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದಳು. ಹಾಗಾಗಿ ಅತಿಹೆಚ್ಚು ಜನ್ಮ ನೀಡಿದ ಮಹಿಳೆಯ ಪಟ್ಟಿಯಲ್ಲಿ ಆಕೆಯ ಹೆಸರು ಅಚ್ಚಾಗಿತ್ತು. ಆದರೀಗ ತಮಾರಾ ಸಿಥೋಲ್ ಅವರು ಆ ದಾಖಲೆಯನ್ನು ಮುರಿದಿದ್ದಾರೆ. 10 + 2 ಒಟ್ಟು 12 ಮಕ್ಕಳ ತಾಯಿಯಾಗಿದ್ದಾರೆ ತಮಾರಾ ಸಿಥೋಲ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ