• Home
 • »
 • News
 • »
 • national-international
 • »
 • GST Collections: ಜಿಎಸ್‍ಟಿ ಪರಿಚಯಿಸಿದಾಗಿನಿಂದ ಜೂನ್​ನಲ್ಲಿ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

GST Collections: ಜಿಎಸ್‍ಟಿ ಪರಿಚಯಿಸಿದಾಗಿನಿಂದ ಜೂನ್​ನಲ್ಲಿ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ತೆರಿಗೆ ಅಡಿಯಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಏನಿಲ್ಲವೆಂದರೂ ತೆರಿಗೆ ಹಣ ಸಂಗ್ರಹದಲ್ಲಿ ಒಟ್ಟಾರೆಯಾಗಿ 55.8% ರಷ್ಟು ಹೆಚ್ಚಳವಾಗಿದ್ದು ಜೂನ್ ತಿಂಗಳಿನಲ್ಲಿ ಸಂಗ್ರಹವಾದ ಮೊತ್ತ 1,44, 616 (ಮೇ ತಿಂಗಳಿನಲ್ಲಾದ ಮಾರಾಟಗಳಿಂದ ಸಂಗ್ರಹವಾದ ಹಣ) ಕೋಟಿ ರೂಪಾಯಿಗಳಾಗಿದ್ದು ಇದು ಜುಲೈ 2017 ರಲ್ಲಿ ಪ್ರಥಮ ಬಾರಿಗೆ ಪರಿಚಯಿಸಲಾಗಿದ್ದ ಸಂದರ್ಭದಲ್ಲಿ ಸಂಗ್ರಹವಾಗಿದ್ದ ಮೊತ್ತಕ್ಕೆ ಹೋಲಿಸಿದಾದ ಎರಡನೇ ಅತಿ ದೊಡ್ಡ ಸಂಗ್ರಹವಾಗಿರುವುದಾಗಿ ಹಣಕಾಸು ಮಂತ್ರಾಲಯವು ಬಿಡುಗಡೆ ಮಾಡಿದ ತನ್ನ ಅಂಕಿ-ಅಂಶದಲ್ಲಿ ತಿಳಿಸಿದೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • , India
 • Share this:

ಕೇಂದ್ರ ಸರ್ಕಾರವು (Central Government) ಪರಿಚಯಿಸಿದ ಗ್ರಾಸ್ ಗೂಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ (ಜಿಎಸ್‍ಟಿ) (GST) ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸದ್ಯ ಈ ತೆರಿಗೆ ಅಡಿಯಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಏನಿಲ್ಲವೆಂದರೂ ತೆರಿಗೆ ಹಣ ಸಂಗ್ರಹದಲ್ಲಿ ಒಟ್ಟಾರೆಯಾಗಿ 55.8% ರಷ್ಟು ಹೆಚ್ಚಳವಾಗಿದ್ದು ಜೂನ್ ತಿಂಗಳಿನಲ್ಲಿ ಸಂಗ್ರಹವಾದ ಮೊತ್ತ 1,44, 616 (ಮೇ ತಿಂಗಳಿನಲ್ಲಾದ ಮಾರಾಟಗಳಿಂದ ಸಂಗ್ರಹವಾದ ಹಣ) ಕೋಟಿ ರೂಪಾಯಿಗಳಾಗಿದ್ದು ಇದು ಜುಲೈ 2017 ರಲ್ಲಿ ಪ್ರಥಮ ಬಾರಿಗೆ ಪರಿಚಯಿಸಲಾಗಿದ್ದ ಸಂದರ್ಭದಲ್ಲಿ ಸಂಗ್ರಹವಾಗಿದ್ದ ಮೊತ್ತಕ್ಕೆ ಹೋಲಿಸಿದಾದ ಎರಡನೇ ಅತಿ ದೊಡ್ಡ ಸಂಗ್ರಹವಾಗಿರುವುದಾಗಿ ಹಣಕಾಸು (Finance) ಮಂತ್ರಾಲಯವು ಬಿಡುಗಡೆ ಮಾಡಿದ ತನ್ನ ಅಂಕಿ-ಅಂಶದಲ್ಲಿ ತಿಳಿಸಿದೆ.


ಹಣದುಬ್ಬರ ಸಮಸ್ಯೆಗೆ ಜಿಎಸ್‍ಟಿ ಕೊಡುಗೆ
ಆರ್ಥಿಕ ಚೇತರಿಕೆ, ತೆರಿಗೆ ತಪ್ಪಿಸಿಕೊಳ್ಳುವ-ವಿರೋಧಿ ಕ್ರಮಗಳು ಅದರಲ್ಲೂ ವಿಶೇಷವಾಗಿ ನಕಲಿ ಬಿಲ್ ಸೃಷ್ಟಿಗಾರರ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳು ಹಾಗೂ ಇತ್ತೀಚೆಗೆ ಕಂಡುಬಂದಿರುವ ಹಣದುಬ್ಬರದ ಒಟ್ಟಾರೆ ಪರಿಣಾಮಗಳು ಇಷ್ಟೊಂದು ಜಿಎಸ್‍ಟಿ ಹೆಚ್ಚಳಕ್ಕೆ ಕೊಡುಗೆ ನೀಡಿವೆ ಎನ್ನಲಾಗಿದೆ.


ಇದಕ್ಕೂ ಮುಂಚೆ ವರ್ಷಾಂತ್ಯದ ವೇಳೆಗೆ ಮಾರ್ಚ್ ನಲ್ಲಾದ ಮಾರಾಟಗಳಿಗೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಿನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿತ್ತು. ಇದು ಐದನೇಯ ಬಾರಿಗೆ ಹಾಗೂ ಮಾರ್ಚ್ 2022 ರಿಂದ ಸತತವಾಗಿ ನಾಲ್ಕನೇ ಬಾರಿಗೆ ಜಿಎಸ್ಟಿ ಸಂಗ್ರಹಣೆಯ ಮೊತ್ತವು 1.4 ಲಕ್ಷ ಕೋಟಿಯ ಮೈಲಿಗಲ್ಲನ್ನು ದಾಟುತ್ತಿದೆ. 2021 ರ ಜೂನ್ ತಿಂಗಳಲ್ಲಿ 92,800 ಕೋಟಿ ರೂಪಾಯಿಗಳಷ್ಟು ಜಿಎಸ್‍ಟಿ ಸಂಗ್ರಹವಾಗಿತ್ತು.


ಐದು ವರ್ಷಗಳಲ್ಲೇ  ಜೂನ್ ತಿಂಗಳಲ್ಲಿ ಜೂನ್ ತಿಂಗಳಲ್ಲಿ ಅತಿ ಹೆಚ್ಚು ಜಿಎಸ್‍ಟಿ ಸಂಗ್ರಹ
ಕಳೆದ ಶುಕ್ರವಾರದಂದು ಜಿಎಸ್‍ಟಿ ದಿನದ ಸಂಭ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಜಿಎಸ್‍ಟಿ ಯನ್ನು ಪರಿಚಯಿಸಿದ ಐದು ವರ್ಷಗಳಲ್ಲೇ ಅದು ತನ್ನ ಸಾಮರ್ಥ್ಯವನ್ನು ತೋರಿಸುತ್ತಿರುವುದಾಗಿ ಹೇಳಿದರು. "ಈ ವರ್ಷದ ಜೂನ್ ತಿಂಗಳಿನಲ್ಲಿ 1,44, 616 ಕೋಟಿ ರೂಪಾಯಿಗಳಷ್ಟು ಜಿಎಸ್‍ಟಿ ಸಂಗ್ರಹವಾಗಿದ್ದು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಸಂಗ್ರಹದಲ್ಲಿ 56% ರಷ್ಟು ಹೆಚ್ಚಳವಾಗಿದೆ. ಈ ಹಿಂದೆ ಮಾತನಾಡುತ್ತಿರುವುದಕ್ಕೆ ವ್ಯತಿರಿಕ್ತವಾಗಿ ಈಗ ಜಿಎಸ್‍ಟಿ ಸಂಗ್ರಹವು 1.4 ಲಕ್ಷ ಕೋಟಿಯ ಆದರ್ಶ ಬೆಂಚ್ ಮಾರ್ಕನ್ನು ಮೂಡಿಸಿದ್ದು ಇದಕ್ಕಿಂತ ಸಂಗ್ರಹ ಕಡಿಮೆಯಾಗದು ಎಂಬುದನ್ನು ಇದು ಸೂಚಿಸುತ್ತದೆ " ಎಂದು ಸಚಿವೆ ಹೇಳಿದರು.


ಇದನ್ನೂ ಓದಿ: Stock Market: 1 ಲಕ್ಷಕ್ಕೆ 90 ಲಕ್ಷ ಲಾಭ! ಈ ಷೇರು ಖರೀದಿಸಿದ್ದವರು ಒಂದೇ ವರ್ಷದಲ್ಲಿ ಲಕ್ಷಾಧಿಪತಿಗಳು


ಮುಂದುವರೆಯುತ್ತ ಅವರು, "ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಆಂಡ್ ಕಸ್ಟಮ್ಸ್ ಪ್ರಾಧಿಕಾರವು ಕೈಗಾರಿಕೆಗಳಿಂದ ಯಾವುದೇ ರೀತಿಯ ಸಲಹೆಗಳಿಗೆ ಮುಕ್ತವಾಗಿದೆ ಹಾಗೂ ಈ ಮುಂಚೆ ಅಂದರೆ ಜಿಎಸ್‍ಟಿ ಬರುವ ಮುಂಚೆ ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದ ಅನಿಯಂತ್ರಿತ ತೆರಿಗೆಯನ್ನು ಪೂರ್ಣವಾಗಿ ತೆಗೆದು ಹಾಕಲಾಗಿದೆ. ಜಿಎಸ್‍ಟಿ ಈಗಾಗಲೇ ಇದ್ದ ಎಲ್ಲ ಅಸ್ಪಷ್ಟತೆಗಳನ್ನು ತೆಗೆದುಹಾಕಿದ್ದು ಈ ದಿಸೆಯಲ್ಲಿ ನಾವು ಇನ್ನೂ ಉತ್ತಮವಾಗಿ ಕೆಲಸ ನಿರ್ವಹಿಸಬೇಕಾಗಿದ್ದು ಬಾಕಿ ಇರುವ ಕೊಂಚ ಪ್ರಮಾಣದ ಅಸ್ಪಷ್ಟತೆ ಇದ್ದರೂ ಸಹ ಅದನ್ನು ತೆಗೆದುಹಾಕಬೇಕಾಗಿದೆ" ಎಂದು ಹೇಳಿದರು.


ಈ ಬಗ್ಗೆ ಪರಿಣಿತರು ಏನು ಹೇಳಿದ್ದಾರೆ
ಆದಾಗ್ಯೂ, ಜಿಎಸ್‍ಟಿಯ ಹೆಚ್ಚಾದ ಬೆಳವಣಿಗೆ ಇನ್ನು ಮುಂದೆ ಕೆಲವು ರಾಜ್ಯಗಳಲ್ಲಿರುವ ಆದಾಯ ಸಂಬಂಧಿ ಕಾಳಜಿಗಳಿಗೆ ಸಮಾಧಾನ ನೀಡಿದರೆ, ಪರಿಹಾರಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿರುವ ರಾಜ್ಯಗಳಿಗೆ ಆರ್ಥಿಕ ವರ್ಷ 2023 ಸಾಕಷ್ಟು ಸವಾಲಿನಿಂದ ಕೂಡಿರಲಿದೆ ಎಂದು ಪರಿಣಿತರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: PM Kisan: ಕೆವೈಸಿ ಅಪ್​ಡೇಟ್​ ಮಾಡಿದ್ರೂ ಇನ್ನೂ ಬಂದಿಲ್ವಾ ಹಣ? ಹೀಗೆ ಮಾಡಿ, 2 ದಿನದಲ್ಲಿ ಅಕೌಂಟ್​ಗೆ ಬರುತ್ತೆ


ಜಿಎಸ್‍ಟಿ (ರಾಜ್ಯಗಳಿಗೆ ಪರಿಹಾರ) ಆಕ್ಟ್ 2017 ಪ್ರಕಾರ, 2015-16 ಅನ್ನು ಬೇಸ್ ವರ್ಷವೆಂದು ಪರಿಗಣಿಸಿ ಪ್ರತಿ ರಾಜ್ಯಗಳಿಗೆ 14% ಕಂಪೌಂಡೆಡ್ ಬಡ್ಡಿದರದಲ್ಲಿ ಐದು ವರ್ಷಗಳ ಕಾಲ ಪರಿಹಾರ ಖಾತರಿಪಡಿಸಲಾಗಿತ್ತು. ಜಿಎಸ್‍ಟಿ ಅನುಷ್ಠಾನದಿಂದ ರಾಜ್ಯದಲ್ಲಿದ್ದ ತೆರಿಗೆ ನೀತಿಯನ್ನು ತೆಗೆಯಲಾಗಿದ್ದರಿಂದ ರಾಜ್ಯಗಳು ಅನುಭವಿಸುವ ನಷ್ಟವನ್ನು ಸರಿದೂಗಿಸುವ ನಿಮಿತ್ತ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು. ಆ ಐದು ವರ್ಷಗಳ ಕಾಲಾವಧಿಯು ಈಗ ಜೂನ್ 30 ರಂದು ಮುಕ್ತಾಯಗೊಂಡಿದೆ. ಆದಾಗ್ಯೂ ಹಲವು ರಾಜ್ಯಗಳು ಪರಿಹಾರ ನೀಡುವುದನ್ನು ಮುಂದುವರಿಸಬೇಕೆಂದು ಒತ್ತಾಯಿಸಿವೆ. ಏತನ್ಮಧ್ಯೆ ನಡೆದಿದ್ದ ಜಿಎಸ್‍ಟಿ ಸಭೆಯಲ್ಲಿ ಈ ಪರಿಹಾರವನ್ನು ನೀಡುವ ಕ್ರಮವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎನ್ನಲಾಗಿದೆ.

Published by:Ashwini Prabhu
First published: