ಹೆಲಿಕಾಪ್ಟರ್​ ಪತನದಲ್ಲಿ ಬದುಕುಳಿದಿದ್ದು ಕೇವಲ ಪೈಲಟ್​; ಹೇಗೆ ಸಾಧ್ಯ ಆಯಿತು ಗೊತ್ತಾ?

ಕಳೆದ ವರ್ಷ ತೇಜಸ್​ ಯುದ್ಧ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ನಡುವೆಯೂ ಅವರು ಧೈರ್ಯವಾಗಿ ಎಚ್ಚರಿಕೆಯಿಂದ ಧೃತಿಗೆಡದೇ ಸುರಕ್ಷಿತಾಗಿ ವಿಮಾನವನ್ನು ಕೆಳಗಿಳಿಸಿದ್ದರು

ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್

ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್

 • Share this:
  ಸಿಡಿಎಸ್​ ಜನರಲ್ ಬಿಪಿನ್ ರಾವತ್ (Gen Bipin Rawat )ಅವರು ಸಾಗುತ್ತಿದ್ದ
  ಬುಧವಾರ ತಮಿಳುನಾಡಿನ ಕುನೂರಿನಲ್ಲಿ ನಡೆದ IAF Mi-17V5 ಹೆಲಿಕಾಪ್ಟರ್ ಪತನದಲ್ಲಿ ಸಿಡಿಎಸ್​ ಜನರಲ್ ಬಿಪಿನ್ ರಾವತ್ (Gen Bipin Rawat ) ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಪೈಲಟ್ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಮಾತ್ರ ಬದುಕುಳಿದಿದ್ದಾರೆ. ಸದ್ಯ ಗಂಭೀರ ಸ್ಥಿತಿಯಲ್ಲಿರುವ ಅವರ ಸ್ಥಿತಿ ಸ್ಥಿರವಾಗಿದ್ದು, ಲೈಫ್​ ಸಪೋರ್ಟ್​ ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಇಂದು ಸಂಸತ್​​ನಲ್ಲಿ ತಿಳಿಸಿದ್ದಾರೆ.

  ಸಿಡಿಎಸ್​ ಸಾವಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಬದುಕುಳಿಸಲು ಎಲ್ಲಾ ಪ್ರಯತ್ನವನ್ನು ಮಾಡಲಾಗಿದೆ. ಅವರು ತೀವ್ರತರದ ಸುಟ್ಟುಗಾಯಗಳಿಂದ ಬಳಲಿದ್ದು, ವೆಲ್ಲಿಗ್ಟಂನ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.

  ಶೌರ್ಯ ಚಕ್ರ ಭಾಜನ ವಿಂಗ್​ ಕಮಾಂಡರ್​​

  ಕಳೆದ ವರ್ಷ ತೇಜಸ್​ ಯುದ್ಧ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ನಡುವೆಯೂ ಅವರು ಧೈರ್ಯವಾಗಿ ಎಚ್ಚರಿಕೆಯಿಂದ ಧೃತಿಗೆಡದೇ ಸುರಕ್ಷಿತಾಗಿ ವಿಮಾನವನ್ನು ಕೆಳಗಿಳಿಸಿದ್ದರು. ಅವರ ಈ ಸಾಹಸಕ್ಕೆ ಮೆಚ್ಚಿ ಕಳೆದ ಆಗಸ್ಟ್​ನಲ್ಲಿ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು.

  ಜನರಲ್ ರಾವತ್ ವೆಲ್ಲಿಂಗ್ಟನ್​ ಸಂಸ್ಥೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುಲು ನಿನ್ನೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಜನರಲ್​ ರಾವತ್​ ಅವರನ್ನು ಜನರಲ್ ರಾವತ್ ಅವರನ್ನು ಸ್ವಾಗತಿಸಲು ಮತ್ತು ಅವರನ್ನು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಸೇನಾ ಹೆಲಿಕ್ಯಾಪ್ಟರ್​ನಲ್ಲಿ ಗ್ರೂಪ್​ ಕ್ಯಾಪ್ಟನ್​ ಸಿಂಗ್​​ ಕರೆದೊಯ್ಯಲು ಸೂಲೂರಿಗೆ ಹೋಗಿದ್ದರು

  ಇದನ್ನು ಓದಿ: Bipin Rawat ಯಾರು? ಭಾರತದ ಮೊದಲ ಸಿಡಿಎಸ್ ಕುಟುಂಬ ಎಂದೇ ಖ್ಯಾತಿ ಪಡೆದ ಈ ಫ್ಯಾಮಿಲಿ ಹಿನ್ನೆಲೆ ಏನು? ಫುಲ್ ಡೀಟೆಲ್ಸ್ ಇಲ್ಲಿದೆ

  ವೆಲ್ಲಿಂಗ್ಟನ್ ಕಂಟೋನ್ಮೆಂಟ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರ ತಂದೆ ಕೆ ಪಿ ಸಿಂಗ್ ಪೂರ್ವ ಉತ್ತರ ಪ್ರದೇಶದ ಡಿಯೋರಿಯಾ ಗ್ರಾಮದವರಾಗಿದ್ದು ಅವರು ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾಗಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್ ಅವರ ಚಿಕ್ಕಪ್ಪ ಆಗಿದ್ದಾರೆ. ಘಟನೆಯಲ್ಲಿ ತೀವ್ರ ಸುಟ್ಟಗಾಯಗಳಾಗಿದ್ದ ಅವರನ್ನುದ್ದು, ಚಿಕಿತ್ಸೆಗಾಗಿ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಇದನ್ನು ಓದಿ: ಬಿಪಿನ್ ರಾವತ್ ಮತ್ತು ಇತರರಿಗೆ ಮೊದಲು ತಮಿಳುನಾಡಿನಲ್ಲಿ ಗೌರವ ನಮನ

  ಎಂಐ 17ವಿ5 ಹೆಲಿಕಾಪ್ಟರ್​(Helicopter) ಅತ್ಯುತ್ತಮ ಗುಣಮಟ್ಟದ ಕಾಪ್ಟರ್​. ಅಪಘಾತವಾದ ಉದಾಹರಣೆ ತೀರ ಕಡಿಮೆ. ಹಾಗಿದ್ದರೂ ಈ ಚಾಪರ್(Chopper)​ ಅಪಘಾತಾಗಲು ಅಸಲಿ ಕಾರಣಕ್ಕೆ ತನಿಖೆಗೆ ಸರ್ಕಾರ ಮುಂದಾಗಿದೆ. ಪ್ರತ್ಯಕ್ಷದರ್ಶಿಗಳು ಹೆಲಿಕಾಪ್ಟರ್ ಟರ್ನ್(Turn) ಪಡೆದು ಹಲಸಿನ ಮರಕ್ಕೆ ಡಿಕ್ಕಿ ಹೊಡೆದು ಕಾಪ್ಟರ್ ಪತನವಾಗಿದೆ. ಎಂದು ಹೇಳಿದ್ದರು

  ಟೇಕ್​ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತ

  ಹೆಲಿಕಾಪ್ಟರ್ ಗಾಳಿಯಲ್ಲಿ ಹೆಚ್ಚು ಹೊತ್ತು ಹಾರಾಟ ನಡೆಸಿಲ್ಲ. ಸೂಲೂರಿನಿಂದ ವೆಲ್ಲಿಂಗ್​ಟನ್​ಗೆ 80 ಕಿ.ಮೀ. ದೂರ ಇದೆ. ಸೂಲೂರಿನಿಂದ ಅರ್ಧ ಗಂಟೆಯಲ್ಲಿ ತಲುಪಬಹುದು. 20 ರಿಂದ 25 ನಿಮಿಷ ಮಾತ್ರ ಹೆಲಿಕಾಪ್ಟರ್ ಹಾರಾಡಿದೆ. ಕಡಿಮೆ ಅವಧಿಯಲ್ಲೇ ಹೆಲಿಕಾಪ್ಟರ್ ಕ್ರ್ಯಾಶ್ ಆಗಿದೆ. ಇನ್ನೂ ಹೆಲಿಕಾಪ್ಟರ್​ ದಟ್ಟ ಮಂಜಿನೊಳಗೆ ಹೋಗುವ ದೃಶ್ಯ ಸ್ಥಳೀಯರ ಮೊಬೈಲ್​ ದೃಶ್ಯದಲ್ಲಿ ಸೆರೆಯಾಗಿದೆ. ಹೆಲಿಕಾಪ್ಟರ್​ ತುಂಬಾ ಎತ್ತರದಲ್ಲೂ ಹಾರಾಟ ನಡೆಸಿಲ್ಲ. ಕಡಿಮೆ ಎತ್ತರದಲ್ಲೇ ಹಾರಾಟ ನಡೆಸಿದೆ ಎಂಬುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ

  ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಪಾರ್ಥಿವ ಶರೀರಗಳನ್ನು ಕೂನೂರಿನಲ್ಲಿರುವ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ತಮಿಳುನಾಡು ಸರ್ಕಾರದಿಂದ ಇಂದು ಗೌರವ ಸಲ್ಲಿಕೆಯಾಗಲಿದೆ.
  Published by:Seema R
  First published: