Abhinandan Varthaman: ಪಾಕ್​ ಯುದ್ಧ ವಿಮಾನ ಹೊಡೆದುರುಳಿಸಿದ್ದ ಗ್ರೂಪ್​ ಕ್ಯಾಪ್ಟನ್ ಅಭಿನಂದನ್​ ವರ್ಧಮಾನ್​ಗೆ ವೀರ ಚಕ್ರ ಪ್ರದಾನ

ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ F-16 ಅನ್ನು ಹೊಡೆದುರುಳಿಸಿದರು.

ಫೋಟೋ ಕೃಪೆ -ಎಎನ್​ಐ

ಫೋಟೋ ಕೃಪೆ -ಎಎನ್​ಐ

 • Share this:
   2019ರಲ್ಲಿ ಬಾಲ್​​ಕೋಟ್​ ವೈಮಾನಿಕ ದಾಳಿ ವೇಳೆ ವಿಂಗ್​ ಕಮಾಂಡರ್​ ಆಗಿದ್ದ ಅಭಿನಂದನ್ ವರ್ಧಮಾನ್​ ( Abhinandan Varthaman )​ ಅವರು ಪಾಕಿಸ್ತಾನದ F-16 ವಿಮಾನ (Pakistan F-16 Fighter Aircraft ಹೊಡೆದುರುಳಿಸಿ, ಪಾಕ್​ ಸೇನೆ ವಶಕ್ಕೆ ಸಿಕ್ಕರೂ ದಿಟ್ಟತನ ಮರೆದು ಭಾರತೀಯರು ಗರ್ವ ಪಡುವಂತೆ ಮಾಡಿದ್ದರು. ಅವರ ಈ ಶೌರ್ಯಕ್ಕೆ ಅಭಿನಂದನೆ ಸಲ್ಲಿಸಿ ಗ್ರೂಪ್​ ಕ್ಯಾಪ್ಟನ್​ (ಪ್ರಸ್ತುತ ಅವರು ಗ್ರೂಪ್​ ಕ್ಯಾಪ್ಟನ್​) ಅಭಿನಂದನ್ ವರ್ಧಮಾನ್​​ ​ ಅವರಿಗೆ ಇಂದ ರಾಷ್ಟ್ರಪತಿ ರಾಮನಾಥ್​ ಕೋವಿಂದ್ (President Ram Nath Kovind)​ ಅವರು ವೀರ ಚಕ್ರ (Vir Chakra) ಪ್ರದಾನ ಮಾಡಿದ್ದಾರೆ.

  ಅತ್ಯುನ್ನತ ಪರಮವೀರ ಚಕ್ರದ ನಂತರದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ಪದಕ ಇದಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ರಕ್ಷಣಾ ಸಮಾರಂಭದಲ್ಲಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಪಾಕ್​ ಯುದ್ಧ ವಿಮಾನ ಹೊಡೆದುರುಳಿಸಿದ್ದ ಅಭಿನಂದನ್​ 

  ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ F-16 ಅನ್ನು ಹೊಡೆದುರುಳಿಸಿದರು. ಅಭಿನಂದನ್​ ಅವರು ತಮ್ಮ ಮಿಗ್​​ -21 ವಿಮಾನದ ಮೂಲಕವೇ ಶತ್ರು ಪಡೆಗಳಲ್ಲಿ ನಡುಕ ಹುಟ್ಟಿಸಿದ್ದರು. ಪಾಕ್​ ಹೊಡೆದುರುಳಿಸಿದ ನಂತರ  ಪಾಕಿಸ್ತಾನದ ಸೇನೆಯು ವಿಂಗ್​ ಕಮಾಂಡರ್​ ಅಭಿನಂದನ್ ವರ್ಧಮಾನ್​ ಅವರನ್ನು ವಶಕ್ಕೆ ಪಡೆದಿತ್ತು.

  ಪಾಕ್​ ವಶದಲ್ಲಿದ್ದರೂ ದಿಟ್ಟತನ ಮರೆದಿದ್ದ ವರ್ಧಮಾನ್​

  ಈ ವೇಳೆ ಕೂಡ ಶತ್ರುಗಳ ಬೆದರಿಕೆಗೆ ಬಗ್ಗದೇ ದಿಟ್ಟತನ ಮರೆದಿದ್ದರು. ಅವರನ್ನು ವಶಕ್ಕೆ ಪಡೆದಿದ್ದ ಪಾಕಿಸ್ತಾನ ಅಧಿಕಾರಿಗಳು ಬಳಿಕ ಅವರ ಬಿಡುಗಡೆಗೊಳಿಸಿದರು. ಈ ಹಿಂದೆ ವಿಂಗ್​ ಕಮಾಂಡರ್​ ಆಗಿದ್ದ ಅವರನ್ನು ಇತ್ತೀಚೆಗೆ ಭಾರತೀಯ ವಾಯುಪಡೆ ಅವರನ್ನು ಗ್ರೂಪ್​ ಕ್ಯಾಪ್ಟನ್​ ಹುದ್ದೆಗೆ ಮೇಲೆರಿಸಿತ್ತು.

  ಇದನ್ನು ಓದಿ: ಪಾಕಿಸ್ತಾನದಲ್ಲಿ ಹಿಂದು ಬಾಲಕನ ಭೀಕರ ಹತ್ಯೆ, ಬಳಿಕ ಶವದ ಮೇಲೆ ಅತ್ಯಾಚಾರ!

  ಫೆಬ್ರವರಿ 27, 2019 ರಂದು ಪಾಕಿಸ್ತಾನದ ವಾಯುಪಡೆಯ ವೈಮಾನಿಕ ದಾಳಿಯನ್ನು ತಡೆಯುವಲ್ಲಿನ ಪ್ರಮುಖ ಪಾತ್ರವಹಿಸಿದ ಹಿನ್ನಲೆ ಈ ಶೌರ್ಯ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.

  38 ವರ್ಷ ವಯಸ್ಸಿನ ಅಭಿನಂದನ್​ ವರ್ಧಮಾನ್​ ಮೂಲತಃ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯವರು. ಅವರ ತಂದೆ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಧಮಾನ್ ಕೂಡ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಕಾರ್ಗಿಲ್​ ಯುದ್ಧ ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದರು.
  Published by:Seema R
  First published: