ಬಿಹಾರ: ಮದುವೆ (Marriage),ಹುಟ್ಟುಹಬ್ಬ ಅಥವಾ ಯಾವುದೇ ರಾಜಕೀಯ (Political) ಮತ್ತು ಧಾರ್ಮಿಕ ಕಾರ್ಯಕ್ರಮವಾಗಲಿ (Religious event), ಅದರಲ್ಲಿ ಡಿಜೆ (DJ) ಇಲ್ಲದಿದ್ದರೆ ಜನರು ಆಚರಣೆಯನ್ನು ಅಪೂರ್ಣವೆಂದು ಪರಿಗಣಿಸುತ್ತಾರೆ. ಇಂತಹ ಕಾರ್ಯಕ್ರಮಗಳಲ್ಲಿ ಡಿಜೆ ಶಬ್ಧಕ್ಕೆ ಕುಣಿದು ಕುಪ್ಪಳಿಸುತ್ತಾರೆ. ಆದರೆ ಡಿಜೆ ಅಬ್ಬರ ಸಂಭ್ರಮದ ವಾತಾವರಣವನ್ನ ಶೋಕ ಸಾಗರವಾಗಿ ಪರಿವರ್ತಿಸಿದ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ನೀವು ಬಹುಶಃ ಈ ಘಟನೆಯನ್ನು ನಂಬುವುದಿಲ್ಲ, ಆದರೆ ಇದು ನೂರಕ್ಕೆ ನೂರು ಸತ್ಯ. ವಿವಾಹ ಸಮಾರಂಭದಲ್ಲಿ ವಧು-ವರರು ಹಾರಗಳನ್ನು ಬದಲಾಯಿಸಿಕೊಂಡ ಕೆಲವೇ ಕ್ಷಣಗಳಲ್ಲಿ ವರ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾನೆ. ಹೈ ಡೆಸಿಬಲ್ ಡಿಜೆ ಮ್ಯೂಸಿಕ್ ಪರಿಣಾಮ ವರ ಅಸ್ವಸ್ಥನಾಗಿ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ (Hospital)ಸ್ಥಳಾಂತರಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು
ಬುಧವಾರದಂದು ಸುರೇಂದ್ರ ಮತ್ತು ವಧು ಇಬ್ಬರೂ ಮದುವೆಗೆ ಸಿದ್ಧಪಡಿಸಲಾದ ವೇದಿಕೆ ಮೇಲೆ ನಿಂತಿದ್ದರು. ನವಜೋಡಿ ಹಾರ ಬದಲಾಯಿಸಿಕೊಂಡು ಇತರ ಧಾರ್ಮಿಕ ವಿಧಿಗಳನ್ನು ಮುಗಿಸಿದ್ದಾರೆ. ಈ ವೇಳೆ ಸುರೇಂದ್ರ ಅವರು ತಮ್ಮ ಮದುವೆಯ ಮೆರವಣಿಗೆಯಲ್ಲಿ ಪ್ಲೇ ಆಗುತ್ತಿದ್ದ ಡಿಜೆಯ ಭಾರಿ ಶಬ್ದವನ್ನು ತಗ್ಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೂ ಇವರ ಮಾತನ್ನು ಯಾರು ಕೇಳಿಲ್ಲ. ಹಾರ ಬದಲಿಸಿಕೊಂಡ ಕೆಲವೇ ಕ್ಷಣಗಳಲ್ಲಿ, ಸುರೇಂದ್ರ ವೇದಿಕೆಯ ಮೇಲೆ ಕುಸಿದುಬಿದ್ದಿದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು, ಆದರೆ ಸುರೇಂದ್ರ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ನಿಷೇಧದ ಹೊರತಾಗಿಯೂ ಡಿಜೆ ಬಳಕೆ
ಈಗಾಗಲೆ ಸ್ಥಳೀಯ ಆಡಳಿತ ಡಿಜೆ ಮೇಲೆ ಕಟ್ಟುನಿಟ್ಟಾದ ನಿಷೇಧವೇರಿದೆ. ಆದರೂ ಇದರ ಬಳಕೆ ಮಾಡಿರುವುದು ನಿಷೇಧದ ಬಗ್ಗೆ ಹಲವು ಪ್ರಶ್ನೆ ಮೂಡಿಸಿದೆ. ಸಾಮಾಜಿಕ ಕಾರ್ಯಕರ್ತ ಡಾ.ರಾಜೀವ್ ಕುಮಾರ್ ಮಿಶ್ರಾ ಕೂಡ ಡಿಜೆಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Heart Attack: ಬದುಕು ಅನ್ನೋದು ಇಷ್ಟೇ ನೋಡಿ, ಈ ವಿಡಿಯೋ ನೋಡಿದ್ರೆ ನಿಮಗೆ ಅರ್ಥ ಆಗುತ್ತೆ!
ಹೃದಯಾಘಾತದಿಂದ ಸಾವು
ಕುಸಿದು ಬಿದ್ದಿದ್ದ ಸುರೇಂದ್ರನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಖಚಿಪಡಿಸಿದ್ದಾರೆ. ಸುರೇಂದ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಶಂಕಿಸಿದ್ದಾರೆ. ಇತ್ತ ಗ್ರಾಮಸ್ಥರು ಕೂಡ ಸುರೇಂದ್ರ ಹಲವು ಬಾರಿ ಡಿಜೆಯ ಶಬ್ಧವನ್ನು ತಗ್ಗಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಅವರ ಮನವಿಯನ್ನು ಕಡೆಗಣಿಸಲಾಯಿತು. ಜೋರು ಮ್ಯೂಸಿಕ್ನಿಂದಲೇ ಆತನಿಗೆ ಹೃದಯಾಘಾತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅರಿಶಿನಿ ಶಾಸ್ತ್ರದ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವು
ಹೈದರಾಬಾದ್ನಲ್ಲಿ ಹಳದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ಸಾವನ್ನಪ್ಪಿದ ಘಟನೆ ಕಳೆದ ವಾರ ಸಂಭವಿಸಿತ್ತು. ಈ ಸಾವು ವಿವಾಹದ ಸಂಭ್ರಮದಲ್ಲಿರಬೇಕಾದ ಮನೆಯನ್ನ ಸಾವಿನ ಸೂತಕದಲ್ಲಿ ಮುಳುಗುವಂತೆ ಮಾಡಿತ್ತು.
ಫೆಬ್ರವರಿ ಕೊನೆ ವಾರದಲ್ಲಿ ಹೈದರಾಬಾದ್ ನಗರದ ಕಾಲಾ ಪಥರ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. 40 ವರ್ಷದ ಮೊಹಮ್ಮದ್ ರಬ್ಬಾನಿ ಎಂಬ ವ್ಯಕ್ತಿ ಹಳದಿ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದರು. ವರನ ಪಾದಗಳ ಮೇಲೆ ಅರಿಶಿನ ಲೇಪಿಸುತ್ತಿದ್ದ ವ್ಯಕ್ತಿ ಅತಿಥಿಗಳೊಂದಿಗೆ ನಗುತ್ತಾ ಮಾತನಾಡುತ್ತಿದ್ದರು. ಆತ ಸ್ಥಳದಲ್ಲಿ ಹಾಜರಿದ್ದ ಇತರ ಅತಿಥಿಗಳೊಂದಿಗೆ ಹಾಸ್ಯ ಚಟಾಕಿ ಹಾರಿಸುತ್ತಿದ್ದ. ಆದರೆ ನಗು ನಗುತ್ತಲೇ ಅರಿಶಿನ ಹಚ್ಚಲು ಬಾಗಿದಾಗ ಹೃದಯ ಸ್ತಂಭನಕ್ಕೊಳಗಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮಾರನೆಯ ದಿನ ಸಾವನ್ನಪ್ಪಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ