HOME » NEWS » National-international » GROOM CAME TO KNOW ABOUT PREGNANCY OF HER WIFE AFTER 3 DAYS OF MARRIAGE WHAT HAPPENS NEXT IS SHOCKING ZP

ಮದುವೆಯಾದ ಮೂರನೇ ದಿನಕ್ಕೆ ಹೆಂಡತಿ ಗರ್ಭಿಣಿ: ಗಂಡನಿಗೆ ಕಾದಿತ್ತು ಶಾಕ್

news18-kannada
Updated:March 8, 2020, 6:25 PM IST
ಮದುವೆಯಾದ ಮೂರನೇ ದಿನಕ್ಕೆ ಹೆಂಡತಿ ಗರ್ಭಿಣಿ: ಗಂಡನಿಗೆ ಕಾದಿತ್ತು ಶಾಕ್
ಸಾಂದರ್ಭಿಕ ಚಿತ್ರ
  • Share this:
ಲಕ್ನೋ: ಅಪರಾಧ ಲೋಕದ ಕೆಲವೊಂದು ಪ್ರಕರಣಗಳ ಹಿನ್ನೆಲೆ ನೋಡಿದರೆ ಆಶ್ಚರ್ಯವಾಗುವುದು ಸಾಮಾನ್ಯ. ಆದರೆ ಇಲ್ಲೊಂದು ಪ್ರಕರಣವಿದೆ. ಸುಖಾಂತ್ಯದಿಂದ ದುಃಖಾಂತ್ಯಕ್ಕೆ ಹೊರಳಿದ ಕಹಾನಿ ಇದು. ಉತ್ತರ ಪ್ರದೇಶದ ಬುಲಂದ್​ಶಹರ್​ನ ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು.

ದಾಂಪತ್ಯ ಜೀವನದ ರಸ ನಿಮಿಷಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕೆಂದು ಅಂದುಕೊಂಡಿದ್ದ ಆತನಿಗೊಂದು ಶಾಕ್ ಕಾದಿತ್ತು. ಏಕೆಂದರೆ ಆತ ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದನು. ಮೂರನೇ ದಿನ ಆಗುವಷ್ಟರಲ್ಲೇ ಹೆಂಡತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

ಆಕೆಯನ್ನು ಪರೀಕ್ಷಿಸಿದ ವೈದ್ಯರು ನವದಂಪತಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ನೀವು ತಂದೆಯಾಗುತ್ತಿದ್ದೀರಿ. ನಿಮ್ಮ ಹೆಂಡತಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಚೆನ್ನಾಗಿ ನೋಡಿಕೊಳ್ಳಿ ಎಂದು ವೈದ್ಯರು ತಿಳಿಸಿದ್ದರು. ಡಾಕ್ಟರ್​ ಮಾತು ಕೇಳಿ ಆತನಿಗೆ ಬರ ಸಿಡಿಲು ಬಡಿದಂತಾಗಿದೆ.

ಮದುವೆಯಾಗಿ ಇನ್ನೂ ವಾರ ಕಳೆದಿಲ್ಲ. ಅದಾಗಲೇ ಹೆಂಡತಿ 2 ತಿಂಗಳ ಗರ್ಭಿಣಿ. ಅದೇಗೆ ಸಾಧ್ಯ ಎಂದು ಗಂಡ ಮತ್ತು ಆತನ ಮನೆಯವರು ತಲೆಕೆಡಿಸಿಕೊಂಡಿದ್ದಾರೆ. ಇದೇ ಸಂಶಯದೊಂದಿಗೆ ಪತ್ನಿಯನ್ನು ವಿಚಾರಿಸಿದಾಗ ಮದುವೆಗೂ ಮುಂಚೆ ತನಗೆ ಲೈಂಗಿಕ ಸಂಬಂಧವಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾಳೆ.

ನಾನು ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದೆ ಎಂದು ಹೇಳಿದ್ದಾಳೆ. ನಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಆ ವಿಷಯವನ್ನು ಮುಚ್ಚಿಟ್ಟು ನಿಮ್ಮೊಂದಿಗೆ ಮದುವೆ ಮಾಡಿದ್ದಾರೆ ಎಂದು ಗಂಡನಿಗೆ ತಿಳಿಸಿದ್ದಾಳೆ.

ಹೆಂಡತಿಯ ಮಾತು ಕೇಳಿ ಕಂಗಾಲಾದ ಗಂಡ ಇದೀಗ ಸಿಕಂದರ್​ಬಾದ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಬೇರೊಂದು ಯುವಕನೊಂದಿಗೆ ಪ್ರೀತಿಯಲ್ಲಿದ್ದ ಯುವತಿಯನ್ನು ನನಗೆ ಮೋಸ ಮಾಡಿ ಮದುವೆ ಮಾಡಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ: ಅಂದು ಸಚಿನ್, ರೋಹಿತ್, ಜೈಸ್ವಾಲ್: ಇಂದು ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಯುವ ಆಟಗಾರ್ತಿಸದ್ಯ ಪೊಲೀಸರು ಮಹಿಳಾ ನ್ಯಾಯಾಲಯದಲ್ಲಿ ಸೆಕ್ಷನ್ 164 ರ ಅಡಿಯಲ್ಲಿ ಯುವತಿಯನ್ನು ವಿಚಾರಣೆ ನಡೆಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ನ್ಯಾಯ ಪಡೆಯಲು ಕೋರ್ಟ್​ಗೂ ಯುವಕ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ವಿಚಾರಣೆ ಕೋರ್ಟ್ ಪ್ರಕರಣ ಮುಗಿಯುವವರೆಗೆ ಜಿಲ್ಲಾಡಳಿತ ಯುವತಿಗೆ ಆಶ್ರಯ ಒದಗಿಸುವಂತೆ ಸೂಚನೆ ನೀಡಿದೆ. ಒಟ್ಟಿನಲ್ಲಿ ಸುಂದರ ದಾಂಪತ್ಯದ ಕನಸು ಕಂಡಿದ್ದ ಯುವಕ ಕನಸುಗಳು ದಿನಗಳ ಅಂತರದಲ್ಲೇ ಕಮರಿ ಹೋಗಿರುವುದು ಮಾತ್ರ ವಿಪರ್ಯಾಸ.
Youtube Video
First published: March 8, 2020, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories