14 ಗಂಟೆಗಳ ವಿಚಾರಣೆ ಬಳಿಕ ಮತ್ತೆ ಇಡಿ ಮುಂದೆ ಹಾಜರಾದ ವಾದ್ರಾ; ಪ್ರಿಯಾಂಕಾ ನಡೆ ಮೇಲೆ ಎಲ್ಲರ ಕಣ್ಣು

ತನಿಖೆ ಸಂಬಂಧ ಫೆ.6 ಮತ್ತು 7ರಂದು ಕೂಡ ಇಡಿ ಮುಂದೆ ವಾದ್ರಾ ಹಾಜರಾಗಿದ್ದರು. ಮೊದಲ ದಿನ ಐದುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಎರಡನೇ ದಿನ 9ಗಂಟೆಗಳ ಕಾಲ ತನಿಖೆ ನಡೆಸಿದ್ದರು.

Seema.R | news18
Updated:February 9, 2019, 2:18 PM IST
14 ಗಂಟೆಗಳ ವಿಚಾರಣೆ ಬಳಿಕ ಮತ್ತೆ ಇಡಿ ಮುಂದೆ ಹಾಜರಾದ ವಾದ್ರಾ; ಪ್ರಿಯಾಂಕಾ ನಡೆ ಮೇಲೆ ಎಲ್ಲರ ಕಣ್ಣು
ರಾಬರ್ಟ್​ ವಾದ್ರಾ
Seema.R | news18
Updated: February 9, 2019, 2:18 PM IST
ನವದೆಹಲಿ (ಫೆ.9): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನವೂ ಜಾರಿ ನಿರ್ದೇಶನಾಲಯ ಉದ್ಯಮಿ ರಾಬರ್ಟ್​ ವಾದ್ರಾ ವಿಚಾರಣೆ ನಡೆಸಿದೆ.

ಇಲ್ಲಿನ ಜಾಮ್​ನಗರ್​ಹೌಸ್​ನಲ್ಲಿನ ಕಚೇರಿಗೆ ಆಗಮಿಸಿದ ರಾಬರ್ಟ್​ ವಾದ್ರಾ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಅನೇಕ ಪ್ರಶ್ನೆಗಳಿಗೆ ವಾದ್ರಾರಿಂದ ಉತ್ತರ ಬೇಕಾಗಿದೆ. ಈ ಹಿನ್ನಲೆಯಲ್ಲಿ ಮತ್ತೆ ವಿಚಾರಣೆ ಮಾಡಲು ಮುಂದಾಗಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ

ತನಿಖೆ ಸಂಬಂಧ ಫೆ.6 ಮತ್ತು 7ರಂದು ಕೂಡ ಇಡಿ ಮುಂದೆ ವಾದ್ರಾ ಹಾಜರಾಗಿದ್ದರು. ಮೊದಲ ದಿನ ಐದುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ಎರಡನೇ ದಿನ 9ಗಂಟೆಗಳ ಕಾಲ ತನಿಖೆ ನಡೆಸಿದ್ದರು.

ಮಂಗಳವಾರ ತನಿಖೆ ನಡೆಸಿದ ಅಧಿಕಾರಿಗಳು ವಾದ್ರಾ ಮತ್ತು ಸುಮಿತ್​ ಚಂದ್​ ನಡುವೆ ನಡೆದ ಇಮೇಲ್​ ಸಂಭಾಷಣೆ ಕುರಿತು ಪ್ರಶ್ನಿಸಿದ್ದರು. ಸಂಜಯ್​ ಭಂಡಾರಿ ವಾದ್ರಾ ಸಂಬಂಧಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಸಿದಂತೆ ಹಲವು ದಾಖಲೆಗಳನ್ನು ವಾದ್ರಾ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿರುವ ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಅವರು ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.

ಲಂಡನ್​ನ ಬ್ರಿಯಾನ್​ಸ್ಟನ್​ನಲ್ಲಿ ಆಸ್ತಿ ಖರೀದಿಗಾಗಿ ವಾದ್ರಾ ಸುಮಾರು 18 ಕೋಟಿರೂ ಅಕ್ರಮ ವಹಿವಾಟು ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಹಣ ಹಾಗೂ ಲಂಡನ್​ನಲ್ಲಿ ಅವರು ಹೊಂದಿರುವ ಆಸ್ತಿ ಕುರಿತು ಇಡಿ ವಿಚಾರಣೆ ನಡೆಸುತ್ತಿದೆ.

ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ನೀಡಿರುವ ಬೆನ್ನಲ್ಲೇ  ಇಡಿ ತನಿಖೆ ಹೆಚ್ಚು ಗಮನ ಸೆಳೆದಿದೆ.  ಉತ್ತರ ಪ್ರದೇಶದ ಪೂರ್ವ ಉಸ್ತುವಾರಿಯಾಗಿರುವ ಪ್ರಿಯಾಂಕಾ ಗಾಂಧಿ,   ಮೊದಲ ದಿನದ ವಿಚಾರಣೆಗೆ ವಾದ್ರಾ ಅವರನ್ನು ಕಾರಿನಲ್ಲಿ ಡ್ರಾಪ್​ ಮಾಡಿದ್ದರು.
Loading...

ಇದನ್ನು ಓದಿ: ಉತ್ತಮವಾಗಿ ಕೆಲಸ ಮಾಡು, ನಿನ್ನ ಜೊತೆ ನಾನಿದ್ದೇನೆ; ರಾಬರ್ಟ್​ ವಾದ್ರಾ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ ಗಾಂಧಿ, ಈ ತನಿಖೆಯಿಂದಾಗಿ ನನಗೆ ಯಾವುದೇ ತೊಂದರೆಯಿಲ್ಲ. ಪ್ರಕರಣದ ಕುರಿತು ವಾದ್ರಾ ಅಥವಾ ಚಿದಂಬರಂ ಅವರನ್ನು ವಿಚಾರಣೆ ಮಾಡಲಿ. ಆದರೆ, ಇದರ ಜೊತೆಗೆ ರಫೇಲ್​ ಹಗರಣವನ್ನು ಅವರು ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಪ್ರಕರಣದ ಬೆನ್ನಲ್ಲೆ ಬೈಕನೆರ್​ ಹಣದ ವ್ಯವಹಾರದ ಕುರಿತು ಕೂಡ ಅವರು ತನಿಖೆಗೆ ಒಳಗಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣದಲ್ಲಿ ಸಹಕರಿಸುವಂತೆ ರಾಜಸ್ಥಾನ ಹೈ ಕೋರ್ಟ್​ ವಾದ್ರಾಗೆ ಸೂಚನೆ ನೀಡಿದೆ.

First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...