HOME » NEWS » National-international » GRETA THUNBERGS NEUTRAL STANCE ON ISRAEL PALESTINE CONFLICT LEAVES TWITTER FUMING STG LG

ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟಿನ ಬಗ್ಗೆ ತಟಸ್ಥ ನಿಲುವು ಪ್ರದರ್ಶಿಸಿದ ಗ್ರೇಟಾ ಥನ್ಬರ್ಗ್​​​; ಆಕ್ರೋಶದಿಂದ ಕುಟುಕಿದ ಟ್ವಿಟ್ಟರ್​​

ಈ ಬಗ್ಗೆ ಟ್ಟಿಟ್ಟರ್‌ನಲ್ಲಿ ಬರೆದಿರುವ ಥನ್ಬರ್ಗ್ ಹಿಂಸಾಚಾರವನ್ನು ಖಂಡಿಸುವಾಗ ನಾನು ಇಸ್ರೇಲ್ ಅಥವಾ ಪ್ಯಾಲೆಸ್ಟೈನ್ ಯಾವುದರ ವಿರುದ್ಧವೂ ಇಲ್ಲ. ಯಾವುದೇ ಭಾಗದಿಂದ, ಯಾವುದೇ ವಿಧದ ಹಿಂಸಾಚಾರವಿರಲಿ ಅಥವಾ ಯಾರ ದಬ್ಬಾಳಿಕೆ ಇರಲಿ ಅದನ್ನು ವಿರೋಧಿಸುವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

news18-kannada
Updated:May 18, 2021, 1:19 PM IST
ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟಿನ ಬಗ್ಗೆ ತಟಸ್ಥ ನಿಲುವು ಪ್ರದರ್ಶಿಸಿದ ಗ್ರೇಟಾ ಥನ್ಬರ್ಗ್​​​; ಆಕ್ರೋಶದಿಂದ ಕುಟುಕಿದ ಟ್ವಿಟ್ಟರ್​​
ಗ್ರೇಟಾ ಥನ್ಬರ್ಗ್​
  • Share this:
ಸ್ವೀಡಿಷ್ ಪರಿಸರ ಕಾರ್ಯಕರ್ತೆ/ ಹವಾಮಾನ ಬಿಕ್ಕಟ್ಟು ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಕರಗುತ್ತಿರುವ ಗ್ಲೇಸಿಯರ್‌ನಿಂದ ಹಿಡಿದು ಇಂಗಾಲದ ನಿಯಂತ್ರಣ ನೀತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ದೇಶದ ಧ್ವನಿಯಾಗಿದ್ದಾರೆ. ಜೊತೆಗೆ ಅನ್ಯ ದೇಶಗಳ ಸಮಸ್ಯೆಗಳ ಬಗ್ಗೆಯೂ ತಮ್ಮ ನಿಲುವನ್ನು ಆಕೆ ಪ್ರದರ್ಶಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ತನ್ನ ಟ್ವಿಟ್ಟರ್ ಖಾತೆಗಳಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ಇಸ್ರೇಲ್ - ಪ್ಯಾಲೆಸ್ಟೈನ್ ಉದ್ವಿಗ್ನತೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್​ನಲ್ಲಿ ಮಂಡಿಸಿದ್ದು, ಆ ಟ್ವೀಟ್ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಜೆರುಸಲೇಂನ ಹಳೆಯ ನಗರದ ಬಳಿ ಪ್ಯಾಲೆಸ್ಟೈನ್ ಪ್ರತಿಭಟನಕಾರರು ಮತ್ತು ಇಸ್ರೇಲ್ ಪೊಲೀಸರ ನಡುವೆ ಒಂದು ವಾರದಿಂದಲೂ ಘರ್ಷಣೆ ನಡೆಯುತ್ತಿದೆ. ಇದು ಯಹೂದಿಗಳು, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಗೆ ಪವಿತ್ರವಾದ ಪ್ರಮುಖ ಧಾರ್ಮಿಕ ತಾಣಗಳ ನೆಲೆಯಾಗಿದೆ ಮತ್ತು ಮಧ್ಯಪ್ರಾಚ್ಯ ಸಂಘರ್ಷದ ಭಾವನಾತ್ಮಕ ಕೇಂದ್ರಬಿಂದುವಾಗಿದೆ.

ಸೋಮವಾರ ಸ್ಟನ್ ಗ್ರೆನೆಡ್ಸ್ ಪವಿತ್ರವಾದ ಬೆಟ್ಟದ ಸುತ್ತಮುತ್ತ ದೊಡ್ಡದಾಗಿ ಸದ್ದು ಮಾಡಿದೆ. ಪ್ರತಿಭಟನ ನಿರತರು ಕಲ್ಲು ತೂರಿದ್ದು ಪೊಲೀಸರು ಅಶ್ರುವಾಯು ಸಿಡಿಸಿದ್ದು, ರಬ್ಬರ್ ಬುಲೆಟ್‌ಗಳನ್ನು ಪ್ರಯೋಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೂರಾರು ಪ್ಯಾಲೆಸ್ಟೀನಿಯರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ.

ಈ ಬಗ್ಗೆ ಟ್ಟಿಟ್ಟರ್‌ನಲ್ಲಿ ಬರೆದಿರುವ ಥನ್ಬರ್ಗ್ ಹಿಂಸಾಚಾರವನ್ನು ಖಂಡಿಸುವಾಗ 'ನಾನು ಇಸ್ರೇಲ್ ಅಥವಾ ಪ್ಯಾಲೆಸ್ಟೈನ್ ಯಾವುದರ ವಿರುದ್ಧವೂ ಇಲ್ಲ. ಯಾವುದೇ ಭಾಗದಿಂದ, ಯಾವುದೇ ವಿಧದ ಹಿಂಸಾಚಾರವಿರಲಿ ಅಥವಾ ಯಾರ ದಬ್ಬಾಳಿಕೆ ಇರಲಿ ಅದನ್ನು ವಿರೋಧಿಸುವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ' ಎಂದು ಬರೆದುಕೊಂಡಿದ್ದಾರೆ.

ಸದ್ಯ ಗ್ರೇಟಾರ ಈ ಪೋಸ್ಟ್‌ಗೆ ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಶೂನ್ಯ ಮತ್ತು ಏನೂ ಇಲ್ಲದ ಖಾಲಿ ಪೋಸ್ಟ್ ಎಂದಿದ್ದಾರೆ. 'ನೀವು ಈ ಅನ್ಯಾಯದ ಸಂದರ್ಭದಲ್ಲಿ ತಟಸ್ಥ ನಿಲುವು ಪ್ರದರ್ಶಿಸಿದರೆ, ನೀವು ದಬ್ಬಾಳಿಕೆಗಾರರ ಪರವಾಗಿದ್ದೀರಿ' ಎನಿಸುತ್ತದೆ ಎಂದು ಬಿಷಪ್ ಡೆಸ್ಮಂಡ್ ಟುಟು ಅವರು ಹೇಳಿದ್ದಾರೆ ಎನ್ನುವ ಕೋಟ್‌ಗಳನ್ನು ಉಲ್ಲೇಖಿಸಿ ಗ್ರೇಟಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆ

'ಈ ವಿಷಯದ ಬಗ್ಗೆ ನನ್ನ ಮೇಲೆ ಹೆಚ್ಚು ಹೊರೆ ಬೇಡ, ನಾನು ಇದನ್ನು ಒಪ್ಪುತ್ತೇನೆ ಎನ್ನುವ ಹಾಗಿದೆ ಈ ಪೋಸ್ಟ್' ಎಂದು ಒಬ್ಬ ಬಳಕೆದಾರರು ತಿಳಿಸಿದ್ದಾರೆ.

'ಈ ರೀತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ತಟಸ್ಥ ನಿಲುವು ಪ್ರದರ್ಶಿಸುವವರಿಗೆ ನರಕದಲ್ಲಿ ಸ್ಥಳ ನಿಗದಿಯಾಗಿರಲಿ' ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.ಇನ್ನು ಕೆಲವರು ಗ್ರೇಟಾ ಅವರ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಹೋರಾಟವನ್ನು ಸೇರಿಸಿ ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.

ಜೆರುಸಲೇಂನ ಹಳೆಯ ನಗರದಲ್ಲಿರುವ ಅಲ್ ಅಕ್ಸಾ ಮಸೀದಿಯ ಸುತ್ತ ಮುತ್ತ ಈ ಗಲಾಟೆ ನಡೆದಿದೆ. ಈ ಮಸೀದಿ ಇಸ್ಲಾಂ ಧರ್ಮದ ಮೂರನೇ ಪವಿತ್ರ ತಾಣವಾಗಿದೆ. ಗೋಡೆಯ ಪ್ಲ್ಯಾಟ್ಯೂ ಯಹೂದಿಗಳಿಗೆ ಪವಿತ್ರ ತಾಣವಾಗಿದೆ. ಇದನ್ನು ಟೆಂಪಲ್ ಮೌಂಟ್ ಎನ್ನುತ್ತಾರೆ. ಇಲ್ಲಿ ಕ್ರಿಸ್ತರ ದೇವಾಲಗಳಿದ್ದವು, 70 ಎ.ಡಿಯಲ್ಲಿ ರೋಮನ್ನರು ಎರಡನೇ ದೇವಾಲಯ ನಾಶಪಡಿಸಿದರು. ಆಗ ಪಾಶ್ಚಿಮಾತ್ಯ ಗೋಡೆ ಮಾತ್ರವೇ ಉಳಿದಿತ್ತು. ಶತಮಾನಗಳ ನಂತರ ಮಸೀದಿ ನಿರ್ಮಿಸಲಾಯಿತು. ಜೋರ್ಡಾನ್ ಉಸ್ತುವಾರಿ ವಹಿಸಿಕೊಂಡಿದ್ದು, ಇದನ್ನು ವಕ್ಫ್ ಎಂದು ಕರೆಯಲಾಗುವ ಇಸ್ಲಾಮಿಕ್ ದತ್ತಿಯಿಂದ ನಿರ್ವಹಿಸಲಾಗುತ್ತದೆ. ಈ ಸ್ಥಳವು ಕೆಲವು ಸಮಯಗಳಲ್ಲಿ ಪ್ರವಾಸಿಗರಿಗೆ ತೆರೆದಿರುತ್ತದೆ. ಆದರೆ ಮುಸ್ಲಿಮರಿಗೆ ಮಾತ್ರ ಇಲ್ಲಿ ಪ್ರಾರ್ಥನೆ ಮಾಡಲು ಅವಕಾಶವಿದೆ. ವೆಸ್ಟರ್ನ್ ವಾಲ್ ಯಹೂದಿಗಳು ಪ್ರಾರ್ಥಿಸುವ ಪವಿತ್ರ ತಾಣವಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಧಾರ್ಮಿಕ ಮತ್ತು ರಾಷ್ಟ್ರೀಯವಾದಿ ಯಹೂದಿಗಳ ಗುಂಪುಗಳು ಪೊಲೀಸರ ರಕ್ಷಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಪೌಂಡ್‌ಗೆ ಭೇಟಿ ನೀಡುತ್ತಿವೆ ಮತ್ತು 1967 ರ ನಂತರ ಇಸ್ರೇಲ್, ಜೋರ್ಡಾನ್ ಮತ್ತು ಮುಸ್ಲಿಂ ಧಾರ್ಮಿಕ ಅಧಿಕಾರಿಗಳು ಸ್ಥಾಪಿಸಿದ ನಿಯಮಗಳನ್ನು ಧಿಕ್ಕರಿಸಿ ಪ್ರಾರ್ಥನೆ ನಡೆಸುತ್ತಿವೆ. ಪ್ಯಾಲೆಸ್ಟೀನಿಯಾದವರು ಯಹೂದಿಗಳ ಭೇಟಿ ಮತ್ತು ಪ್ರಾರ್ಥನೆ ಪ್ರಚೋದನೆ ಕಾರಣವೆಂದು ಪ್ಯಾಲೆಸ್ಟೈನ್‌ ಭಾವಿಸುತ್ತದೆ. ಇದು ಗಂಭೀರ ಸ್ವರೂಪದ ಗಲಾಟೆಗೆ ಕಾರಣವಾಗಿದೆ.
Youtube Video

ಕೆಲವು ಇಸ್ರೇಲಿಯನ್ನರು ಈ ಸ್ಥಳ ಎಲ್ಲಾ ಆರಾಧಕರಿಗೆ ಮುಕ್ತವಾಗಿರಬೇಕು ಎಂದು ಹೇಳುತ್ತಾರೆ. ಆದರೆ ಪ್ಯಾಲೆಸ್ಟೀನಿಯರು ಇದರ ವಿಭಜನೆ ಅಥವಾ ಸ್ವಾಧೀನದ ಭಯದಿಂದ ಈ ನಿರ್ಧಾರವನ್ನು ವಿರೋಧಿಸುತ್ತಾರೆ. ಸದ್ಯ ತೀವ್ರ ತಲ್ಲಣ ಉಂಟು ಮಾಡಿರುವ ಈ ಗಲಾಟೆ ಜಾಗತಿಕ ಸಮಸ್ಯೆಯಾಗಿ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ.
Published by: Latha CG
First published: May 18, 2021, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories