ಗಾಜಿಯಾಬಾದ್ (ಆಗಸ್ಟ್ 25): "ಫ್ರೀಡಂ 251" ಫೋನ್ ಹಗರಣ ಮತ್ತು 200 ಕೋಟಿ ಡ್ರೈ ಫ್ರೂಟ್ಸ್ ಹಗರಣದ ಪ್ರಮುಖ ಆರೋಪಿಯಾದ ಮೋಹಿತ್ ಗೋಯೆಲ್ ಅವರ ನ್ನು ಸೋಮವಾರ ಗ್ರೇಟರ್ ನೋಯ್ಡಾದಲ್ಲಿ ಮತ್ತೊಂದು ಪ್ರತ್ಯೇಕ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್. 19 ರಂದು ಇಂದಿರಪುರಂ ನಿವಾಸಿ ವಿಕಾಸ್ ಮಿತ್ತಲ್ ಅವರು ಗೋಯಲ್ ಮತ್ತು ಇತರ ಐವರ ವಿರುದ್ಧ 41 ಲಕ್ಷ ವಂಚನೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಿ ದ್ದರು. ಈ ಕೇಸ್ ಆಧರಿಸಿ ಗ್ರೇಟರ್ ನೋಯ್ಡಾದ ಗೋಯೆಲ್ ಅವರ ಮನೆ ಮೇಲೆ ಸೋಮವಾರ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
"ಆರೋಪಿ ಮೋಹಿತ್ ಗೋಯಲ್, ವಿಕಾಸ್ ಮಿತ್ತಲ್ ಗೆ 41 ಲಕ್ಷ ರೂಪಾಯಿ ವಂಚಿಸಿದ್ದಾನೆ ಮತ್ತು ಸಂತ್ರಸ್ತರು ಹಣಕ್ಕಾಗಿ ಆತನನ್ನು ಪ್ರಶ್ನೆ ಮಾಡಿದ್ದಾಗ, ಮೋಹಿತ್ ಗೋಯಲ್ ಜೀವ ಬೆದರಿಕೆ ಹಾಕಿದ್ದಾನೆ. ಆಗಸ್ಟ್ 19 ರಂದು ಆರೋಪಿಗಳು ಮಿತ್ತಲ್ ಅವರ ಮೇಲೆ ಕಾರು ಹರಿಸಿ ಕೊಲ್ಲಲು ಪ್ರಯತ್ನಿಸಿದ್ದರು. ಆದರೆ, ಈ ವೇಳೆ ಮಿತ್ತಲ್ ಅಪಘಾತದಿಂದ ತಪ್ಪಿಸಿಕೊಂಡಿದ್ದರಾದರೂ, ತೀವ್ರ ಗಾಯಗೊಂಡಿದ್ದರು. ಅಲ್ಲದೆ, ಅದೇ ದಿನ ಗೋಯೆಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು" ಎಂದು ಇಂದಿರಾಪುರಂ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್ ಪಾಂಡೆ ತಿಳಿಸಿದ್ದಾರೆ.
ವಿಕಾಸ್ ಮಿತ್ತಲ್ ದೂರಿನ ಅನ್ವಯ, ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 420 (ವಂಚನೆ), 384 (ಸುಲಿಗೆ), 386 (ವ್ಯಕ್ತಿಯನ್ನು ಸಾವಿನ ಭೀತಿಯಲ್ಲಿ ಇರಿಸುವ ಮೂಲಕ ಸುಲಿಗೆ), 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು), 504 (ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇದಲ್ಲದೆ, ಸೆಕ್ಷನ್ 506 (ಬೆದರಿಕೆ), 307 (ಕೊಲೆ ಯತ್ನ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲೂ ಕೇಸ್ ದಾಖಲಿಸಲಾಗಿದೆ.
"ಎಫ್ಐಆರ್ ಅನ್ನು ಅನುಸರಿಸಿ, ಗಾಜಿಯಾಬಾದ್ ಪೊಲೀಸರ ತಂಡವು ಗೋಯೆಲ್ ಮನೆ ಮೇಲೆ ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಇತರ ಐವರನ್ನು ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ" ಎಂದು ಅಧಿಕಾರಿ ಸಂಜಯ್ ಪಾಂಡೆ ತಿಳಿಸಿದ್ದಾರೆ.
2017 ರಲ್ಲಿ ಮೋಹಿತ್ ಗೋಯೆಲ್ "ಫ್ರೀಡಂ 251" ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಲು ಯತ್ನಿಸಿದ್ದರು, ಪ್ರತಿಯೊಂದೂ ಮೊಬೈಲ್ ಕೇವಲ 251 ರೂ. ಗೆ ಮಾರಾಟ ಮಾಡಲು ಮುಂದಾಗಿದ್ದರು. ಮಾರುಕಟ್ಟೆಯಲ್ಲೇ ಅತ್ಯಂತ ಕಡಿಮೆ ಬೆಲೆಗೆ ಫೋನ್ ನೀಡುವುದಾಗಿ ತಿಳಿಸಿ ಜನರಿಂದ ಅಪಾರ ಹಣವನ್ನು ಸಂಗ್ರಹಿಸಿ ವಂಚಿಸಿದ್ದರು, 2018 ರಲ್ಲೂ ಸಹ ಒಂದು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Brijesh Kalappa V/S CT Ravi: ಸಿ.ಟಿ.ರವಿನ ಚಿಕ್ಕಮಗಳೂರಲ್ಲಿ ಲೂಟಿ ರವಿ ಅಂತಾರೆ: ಬ್ರಿಜೇಶ್ ಕಾಳಪ್ಪ ವ್ಯಂಗ್ಯ
ಗೋಯೆಲ್ ನೋಯ್ಡಾದ ಸೆಕ್ಟರ್ 62 ರಲ್ಲಿರುವ ಕಚೇರಿ ಸಂಕೀರ್ಣದಿಂದ ದುಬೈ ಡ್ರೈ ಫ್ರೂಟ್ಸ್ ಮತ್ತು ಸ್ಪೈಸ್ ಹಬ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳ ವ್ಯಾಪಾರಿಗಳಿಂದ ಕಂಪನಿಯ ವಿರುದ್ಧ ವಂಚನೆಯ ಬಗ್ಗೆ ಕನಿಷ್ಠ 40 ಲಿಖಿತ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಯೆಲ್ ವಿರುದ್ಧ ದೇಶಾದ್ಯಂತ 35 ವಂಚನೆ ಮತ್ತು ಇತರ ಅಪರಾಧಗಳ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ