Sanath Jayasuriya: ಭಾರತವನ್ನು ‘ದೊಡ್ಡಣ್ಣ’ ಎಂದು ಕರೆದು ಥ್ಯಾಂಕ್ಸ್ ಹೇಳಿದ ಸನತ್ ಜಯಸೂರ್ಯ.. ಕಾರಣವೇನು?

 ನಿಮಗೆ ತಿಳಿದಿರುವಂತೆ, ನಮ್ಮ ನೆರೆಹೊರೆಯ ರಾಷ್ಟಗಳಲ್ಲಿ ಒಂದಾದ ಭಾರತವು ನಮಗೆ ‘ದೊಡ್ಡಣ್ಣನಂತೆ’ ಬಂದು ಸಹಾಯ ಮಾಡುತ್ತಿದ್ದಾರೆ. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ನಾವು ತುಂಬಾನೇ ಆಭಾರಿಯಾಗಿದ್ದೇವೆ ಎಂದು ಜಯಸೂರ್ಯ ಹೇಳಿದ್ದಾರೆ.

ಸನತ್ ಜಯಸೂರ್ಯ

ಸನತ್ ಜಯಸೂರ್ಯ

 • Share this:

  ಶ್ರೀಲಂಕಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು (Sri lanka Financial Crisis) ಸದ್ಯದಲ್ಲಿ ಸರಿಹೋಗುವ ಪರಿಸ್ಥಿತಿ ಕಾಣಿಸುತ್ತಿಲ್ಲ, ಏಕೆಂದರೆ ಆರ್ಥಿಕ ಸಂಕಷ್ಟದ ವಿರುದ್ಧ ದ್ವೀಪ ರಾಷ್ಟ್ರದ ಜನರು ಈಗಾಗಲೇ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಾರ್ವಜನಿಕರ ಪ್ರತಿಭಟನೆಗೆ (Protest) ಬೆಂಬಲ ವ್ಯಕ್ತಪಡಿಸಿ ಮೊನ್ನೆ ಶ್ರೀಲಂಕಾದ ಕ್ರಿಕೆಟಿಗರಾದ ಕುಮಾರ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ, ದೇಶದ ಆರ್ಥಿಕ ಬಿಕ್ಕಟ್ಟು ಜನರ ಜೀವನದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಿದ್ದರು. ಈಗ ಮತ್ತೊಬ್ಬ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಸನತ್ ಜಯಸೂರ್ಯ (Sanath Jayasuriya) ಅವರು ಗುರುವಾರ ತಮ್ಮ ರಾಷ್ಟ್ರದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ ಮತ್ತು ಜನರು ಈ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ದುರದೃಷ್ಟಕರ ಎಂದು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಮಾಜಿ ಕ್ರಿಕೆಟಿಗ ಭಾರತವನ್ನು "ದೊಡ್ಡಣ್ಣ" ಎಂದು ಕರೆದು ಮತ್ತು ಇಂತಹ ಒಂದು ಬಿಕ್ಕಟ್ಟಿನ ನಡುವೆ ಸಹಾಯಕ್ಕೆ ಮುಂದೆ ಬಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.


  ಭಾರತವು ನಮಗೆ ‘ದೊಡ್ಡಣ್ಣನಂತೆ

   ನಿಮಗೆ ತಿಳಿದಿರುವಂತೆ, ನಮ್ಮ ನೆರೆಹೊರೆಯ ರಾಷ್ಟಗಳಲ್ಲಿ ಒಂದಾದ ಭಾರತವು ನಮಗೆ ‘ದೊಡ್ಡಣ್ಣನಂತೆ’ ಬಂದು ಸಹಾಯ ಮಾಡುತ್ತಿದ್ದಾರೆ. ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ನಾವು ತುಂಬಾನೇ ಆಭಾರಿಯಾಗಿದ್ದೇವೆ ಎಂದು ಜಯಸೂರ್ಯ ಹೇಳಿದ್ದಾರೆ.


  ಇದನ್ನೂ ಓದಿ: SriLanka Crisis: ಜನಸಾಮಾನ್ಯರಿಗೆ ಕ್ರಿಕೆಟಿಗರ ಬೆಂಬಲ; ಆಡಳಿತದ ವಿರುದ್ಧ ದನಿ ಎತ್ತಿದ ಸಂಗಕ್ಕಾರ, ಜಯವರ್ಧನೆ

  ಈ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಿದ ಬಗ್ಗೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಕುರಿತು ರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೆಂಬಲಿಸಿದ ಜಯಸೂರ್ಯ, "ಇಂಧನ ಕೊರತೆ ಮತ್ತು ಅನಿಲದ ಕೊರತೆ ಇದೆ, ಕೆಲವೊಮ್ಮೆ 10 ರಿಂದ 12 ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ. ಇದು ಈ ದೇಶದ ಜನರಿಗೆ ನಿಜವಾಗಿಯೂ ತುಂಬಾನೇ ಕಷ್ಟಕರವಾಗಿದೆ. ಅದಕ್ಕಾಗಿಯೇ ಜನರು ರಸ್ತೆಗಿಳಿದು ಪ್ರತಿಭಟಿಸಲು ಪ್ರಾರಂಭಿಸಿದ್ದಾರೆ" ಎಂದು ಅವರು ಹೇಳಿದರು.


  ಜನ ತುಂಬಾನೇ ನೊಂದಿದ್ದಾರೆ


  ಈ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದೆ ಇದ್ದರೆ ವಿಪತ್ತು ಉಂಟಾಗುತ್ತದೆ ಎಂದು ಅವರು ಎಚ್ಚರಿಕೆ ಸಹ ನೀಡಿದರು. "ಇಂತಹ ಘಟನೆಗಳು ನಡೆಯುವುದನ್ನು ನೋಡಲು ನಾವು ಬಯಸುವುದಿಲ್ಲ. ಡೀಸೆಲ್, ಗ್ಯಾಸ್ ಮತ್ತು ಹಾಲಿನ ಪುಡಿಗಾಗಿ 3 ರಿಂದ 4 ಕಿಲೋ ಮೀಟರ್ ವಾಹನಗಳ ದೊಡ್ಡ ಸಾಲಿದೆ. ಇದು ನಿಜವಾಗಿಯೂ ದುಃಖಕರವಾಗಿದೆ ಮತ್ತು ಜನರು ಈ ಸಮಯದಲ್ಲಿ ತುಂಬಾನೇ ನೊಂದಿದ್ದಾರೆ" ಎಂದು ಜಯಸೂರ್ಯ ಹೇಳಿದರು.


  ಶ್ರೀಲಂಕಾವು ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ ಸಿಲುಕಿದ್ದು, ಅದರ ವಿದೇಶಿ ವಿನಿಮಯ ಹಿಡುವಳಿಗಳು ದುರ್ಬಲವಾಗುತ್ತಿದ್ದಂತೆ ಆಮದು ಮತ್ತು ಸೇವಾ ಸಾಲಕ್ಕೆ ಪಾವತಿಸಲು ಹೆಣಗಾಡುತ್ತಿದೆ. ಸರ್ಕಾರವು ಜಾರಿಗೆ ತಂದ ನಂತರ ಮತ್ತು ನಂತರದ ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಆರ್ಥಿಕ ಸಂಕಷ್ಟಗಳು ಮತ್ತಷ್ಟು ಉಲ್ಬಣಗೊಂಡವು ಎಂದು ಹೇಳಲಾಗುತ್ತಿದೆ.


  ಆರ್ಥಿಕ ಬಿಕ್ಕಟ್ಟಿನೊಂದಿಗೆ ರಾಜಕೀಯ ಬಿಕ್ಕಟ್ಟು 

  ಈ ಬಿಕ್ಕಟ್ಟಿನಿಂದಾಗಿ ಇಂಧನ, ಅಡುಗೆ ಅನಿಲ ಮತ್ತು ಕೆಲವು ಔಷಧಿಗಳು ಹಾಗೂ ಅಗತ್ಯ ಆಹಾರ ಪದಾರ್ಥಗಳ ಪ್ರಮುಖ ಕೊರತೆ ಉಂಟಾಗಿದ್ದು, ನಿವಾಸಿಗಳು ಸರ್ಕಾರದ ವಿರುದ್ಧ ಪ್ರತಿಭಟಿಸಲು ಬೀದಿಗಿಳಿಯುವಂತೆ ಮಾಡಿದೆ. ಏಪ್ರಿಲ್ 6 ರಂದು, ದೇಶದ ಮುಖ್ಯ ಸರ್ಕಾರಿ ಸಚೇತಕ ಹಾಗೂ ಹೆದ್ದಾರಿ ಸಚಿವರಾದ ಜಾನ್ಸ್ಟನ್ ಫರ್ನಾಂಡೊ ಅವರು “ಈ ಎಲ್ಲಾ ಪ್ರತಿಭಟನೆಗಳ ಹೊರತಾಗಿಯೂ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ” ಎಂದು ಹೇಳಿದರು.


  ಇದನ್ನೂ ಓದಿ: Explainer: ದಶಕಗಳಲ್ಲೇ ಶ್ರೀಲಂಕಾ ಅನುಭವಿಸುತ್ತಿರುವ ಅತ್ಯಂತ ಭೀಕರ ಅರ್ಥಿಕ ಬಿಕ್ಕಟ್ಟಿಗೆ ಕಾರಣ ಏನು?

  "6.9 ಮಿಲಿಯನ್ ಜನರು ಅಧ್ಯಕ್ಷರಿಗೆ ಮತ ಚಲಾಯಿಸಿದ್ದಾರೆ ಎಂದು ನಾನು ನಿಮಗೆ ನೆನಪಿಸುತ್ತೇನೆ" ಎಂದು ಅವರು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಆಕ್ರೋಶದ ನಡುವೆ ಹೇಳಿದರು. "ಸರ್ಕಾರವಾಗಿ, ಅಧ್ಯಕ್ಷರು ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುವುದಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ನಾವು ಎಂತಹ ಪರಿಸ್ಥಿತಿಯನ್ನು ಸಹ ಎದುರಿಸುತ್ತೇವೆ" ಎಂದು ಜಾನ್ಸ್ಟನ್ ಫರ್ನಾಂಡೋ ಹೇಳಿದರು.


  ಇದೆಲ್ಲದರ ಮಧ್ಯೆ ಶ್ರೀಲಂಕಾವು ತನ್ನ ಪ್ರಸ್ತುತ ಸಾಲದ ಬಿಕ್ಕಟ್ಟನ್ನು ಹೇಗೆ ನಿಭಾಯಿಸಬಹುದು ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಹೊರಗಿನ ಸಾಲದಾತರೊಂದಿಗೆ ಹೇಗೆ ವ್ಯವಹರಿಸಬಹುದು ಎಂದು ಮಾರ್ಗದರ್ಶನ ನೀಡಲು ಸಲಹಾ ಸಮಿತಿಯೊಂದನ್ನು ಬುಧವಾರ ನೇಮಿಸಿದೆ ಎಂದು ಅಧ್ಯಕ್ಷರ ಮಾಧ್ಯಮ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

  Published by:Kavya V
  First published: