HOME » NEWS » National-international » GRANDMOTHER RUNS OFF WITH PREGNANT DAUGHTER BOYFRIEND STG HG

ಗರ್ಭಿಣಿ ಪುತ್ರಿಯ ಗೆಳೆಯನೊಂದಿಗೆ ಓಡಿಹೋದ ತಾಯಿ..!

ಜೆಸ್ ತಮ್ಮ 2ನೇ ಮಗುವಿಗೆ ಜನ್ಮ ನೀಡಿದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಮನೆಗೆ ಬಂದು ನೋಡಿದಾಗ ರಿಯಾನ್ ಮತ್ತು ಆಕೆಯ ತಾಯಿ ಓಡಿಹೋಗಿರುವುದು ಗೊತ್ತಾಗಿದೆ.

news18-kannada
Updated:February 25, 2021, 3:57 PM IST
ಗರ್ಭಿಣಿ ಪುತ್ರಿಯ ಗೆಳೆಯನೊಂದಿಗೆ ಓಡಿಹೋದ ತಾಯಿ..!
ಜಾರ್ಜಿಯಾ -ಜೆಸ್ ಆಲ್ಡ್ರಿಡ್ಜ್ - ರಿಯಾನ್ ಶೆಲ್ಟನ್
  • Share this:
ತಾಯಿಯೊಬ್ಬಳು ತನ್ನ ಗರ್ಭಿಣಿ ಮಗಳ ಗೆಳೆಯನೊಂದಿಗೆ ಓಡಿಹೋಗಿರುವ ವಿಚಿತ್ರ ಘಟನೆ ನಡೆದಿದೆ. ತಾನು ಓಡಿಹೋಗಿದ್ದಲ್ಲದೇ ‘ಈ ರೀತಿಯ ಘಟನೆಗಳೂ ಸಂಭವಿಸುತ್ತಿರುತ್ತವೆ’ ಎಂದು ಬೇರೆ ಸಮಜಾಯಿಷಿ ನೀಡಿದ್ದಾಳೆ. ಹೌದು 24 ವರ್ಷದ ಜೆಸ್ ಆಲ್ಡ್ರಿಡ್ಜ್ ಎಂಬಾಕೆಯ ಗೆಳೆಯ ರಿಯಾನ್ ಶೆಲ್ಟನ್ ಜೊತೆ 44 ವರ್ಷದ ತಾಯಿ ಜಾರ್ಜಿನಾ ಓಡಿಹೋಗಿದ್ದಾಳೆ. ಗೆಳೆಯನೊಂದಿಗೆ ತಾಯಿ ಓಡಿ ಹೋಗಿದ್ದರಿಂದ ಜೆಸ್ ಇದೀಗ ಎದೆಗುಂದಿದ್ದಾಳೆ. ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಇಂಗ್ಲೆಂಡ್ ನ ಗ್ಲೌಸೆಸ್ಟರ್‌ಶೈರ್‌ನಲ್ಲಿ ಲಾಕ್​ಡೌನ್ ಹೇರಲಾಗಿತ್ತು. ಈ ವೇಳೆ ಸ್ಟೌ-ಆನ್-ದಿ-ವೋಲ್ಡ್ ನಲ್ಲಿರುವ ಮನೆಯಲ್ಲಿ ಕ್ವಾರಂಟೈನ್ ಆಗಲು ರಿಯಾನ್, ಗರ್ಭಿಣಿ ಜೆಸ್, ಜಾರ್ಜಿನಾ ಮತ್ತು ಆಕೆಯ ಪತಿ ಎರಿಕ್ ಸ್ಥಳಾಂತರಗೊಂಡಿದ್ದರು. ಈ ವೇಳೆ ರಿಯಾನ್ ಮತ್ತು ಜಾರ್ಜಿನಾ ನಡುವೆ ಪ್ರೇಮಾಂಕುರವಾಗಿದೆ.

ಜೆಸ್ ತಮ್ಮ 2ನೇ ಮಗುವಿಗೆ ಜನ್ಮ ನೀಡಿದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಮನೆಗೆ ಬಂದು ನೋಡಿದಾಗ ರಿಯಾನ್ ಮತ್ತು ಆಕೆಯ ತಾಯಿ ಓಡಿಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಜೆಸ್ ತನ್ನ ತಾಯಿಯನ್ನು ಪ್ರಶ್ನಿಸಿದಾಗ ‘ನಾವು ಯಾರೊಂದಿಗೆ ಪ್ರೀತಿಯಲ್ಲಿ ಬೀಳುತ್ತೇವೆಯೋ ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ’ವೆಂದು ಹೇಳಿದ್ದಾಳೆ.

ಈ ಬಗ್ಗೆ ಜಾರ್ಜಿಯಾ ಪುತ್ರಿ ಜೆಸ್ ಗೆ ಸರಣಿ ಮೆಸೇಜ್ ಗಳನ್ನು ಕಳುಹಿಸಿದ್ದು, ತನ್ನ ಮೊಮ್ಮಕ್ಕಳ ತಂದೆಯೊಂದಿಗಿನ ಸಂಬಂಧದ ಬಗ್ಗೆ ವಿವರಿಸಿದ್ದಾಳೆ. ‘ನಿಮಗೆ ಸತ್ಯವನ್ನು ತಿಳಿಸುವುದೇನೆಂದರೆ ರಿಯಾನ್ ಕಳೆದ 3 ವರ್ಷಗಳಿಂದ ನನ್ನನ್ನು ಪ್ರೀತಿಸುತ್ತಿದ್ದ. ಕಳೆದ 6 ತಿಂಗಳಿನಿಂದ ನಾನು ಆತನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದೆ. ಪ್ರತಿದಿನವೂ ನೀನು ಆತನಿಗೆ ಕಳುಹಿಸುತ್ತಿದ್ದ ಸಂದೇಶಗಳನ್ನು ನನಗೆ ತೋರಿಸುತ್ತಿದ್ದ ಮತ್ತು ಎಲ್ಲವನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ. ಹೀಗಾಗಿ ನಿನಗೆ ಸಣ್ಣ ಸುಳುವು ಕೂಡ ಸಿಗದಂತೆ ನಾವು ಹತ್ತಿರವಾದೆವು. ಅವನ ಪ್ರೀತಿಯ ಬಗ್ಗೆ ಎಲ್ಲವೂ ನನಗೆ ತಿಳಿದಿದೆ’ ಎಂದು ಹೇಳಿದ್ದಾಳೆ.





ತಾಯಿ ಮತ್ತು ತನ್ನ ಗೆಳೆಯನ ಸಂಬಂಧದ ವಿಚಾರದಲ್ಲಿ ಏನಾಯಿತು ಎಂಬುದರ ಬಗ್ಗೆ ಜೆಸ್ ಇನ್ನು ಅಪನಂಬಿಕೆಯಲ್ಲಿದ್ದಾರೆ. ಈ ಸಂಬಂಧವನ್ನು ‘ದ್ರೋಹ’ವೆಂದು ಕರೆದಿರುವ ಅವರು, ‘ಅವರಿಬ್ಬರು ಓಡಿಹೋಗಿ ಇಬ್ಬರು ಚಿಕ್ಕ ಮಕ್ಕಳನ್ನು ನಾನೊಬ್ಬಳೇ ನೋಡಿಕೊಳ್ಳಲಿ ಎನ್ನುವ ಭಾವನೆ ಹೊಂದಿದ್ದಾರೆಂದು’ ನನಗನಿಸುತ್ತಿದೆ. ಈ ಬಗ್ಗೆ ನನಗೆ ಇನ್ನೂ ನಂಬಿಕೆ ಮೂಡುತ್ತಿಲ್ಲ. ಆದರೆ ನನ್ನ ತಾಯಿ ಕ್ಷಮಿಸಿ ಎಂದು ಹೇಳುವ ವಿಚಾರದ ಬಗ್ಗೆ ಇನ್ನೂ ತಲೆಕೆಡಿಸಿಕೊಂಡಿಲ್ಲವೆಂದು ಹೇಳಿದ್ದಾರೆ.

ತನ್ನ ತಾಯಿ ಮತ್ತು ಗೆಳೆಯನ ನಡುವೆ ಏನಾದರೂ ನಡೆಯುತ್ತಿದೆಯೇ ಎಂಬುದರ ಬಗ್ಗೆ ಜೆಸ್ ಅನೇಕ ಬಾರಿ ಅನುಮಾನಿಸಿದ್ದರು. ಒಮ್ಮೆ ಅವರಿಬ್ಬರು ಅತಿ ಸಲುಗೆಯಿಂದ ಇರುವುದನ್ನು ಕಂಡಿದ್ದರು. ಇದನ್ನು ಪ್ರಶ್ನಿಸಿದಾಗ ಅಂತಹದ್ದೇನೂ ಇಲ್ಲವೆಂದು ಅವರಿಬ್ಬರು ಹೇಳಿದ್ದರು. ‘ನಬ್ಬಿಬ್ಬರ ನಡುವೆ ಏನೂ ಇಲ್ಲವೆಂದೇ ಅವರು ವಾದಿಸುತ್ತಿದ್ದರು. ಆದರೆ ಅವರಿಬ್ಬರ ಸಂಬಂಧದ ಬಗ್ಗೆ ನಾನು ಯಾವಾಗಲೂ ಅನುಮಾನಿಸುತ್ತಿದ್ದೆ. ಅದು ಈಗ ನಿಜವಾಗಿದೆ’ ಎಂದು ಜೆಸ್ ಹೇಳಿದ್ದಾರೆ. ‘ಈ ರೀತಿಯ ಸಂಗತಿಗಳು ಸಂಭವಿಸುತ್ತವೆ’ ಎಂದು ಜಾರ್ಜಿಯಾ ತನ್ನ ಪುತ್ರಿಗೆ ಹೇಳಿದ್ದಾಳೆ.
‘ಜನರು ಏನು ಮಾತನಾಡಿಕೊಳ್ಳುತ್ತಿದ್ದಾರೆಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳವುದಿಲ್ಲ. ನಾನು ಜಾರ್ಜಿನಾಳನ್ನು ಪ್ರೀತಿಸುತ್ತಿದ್ದೇನೆ. ಈ ಬಗ್ಗೆ ಎಲ್ಲರಿಗೂ ಗೊತ್ತಾದರೂ ಕೂಡ ನಾನು ಹೆದರುವುದಿಲ್ಲ. ಜನರ ಅಭಿಪ್ರಾಯಗಳಿಗೆ ನಾನು ಏನೂ ಹೇಳುವುದಿಲ್ಲ. ಏನಾಯಿತು ಎಂಬುದರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಪ್ರತಿಯೊಂದು ಸತ್ಯ ಸಂಗತಿ ಬಗ್ಗೆ ನನಗೆ ತಿಳಿದಿದೆ. ಬೇರೆಯವರು ಇದರ ಬಗ್ಗೆ ಏನು ಹೇಳುತ್ತಾರೆ ಎಂಬುದರ ಬಗ್ಗೆ ನನಗೆ ಚಿಂತೆಯಿಲ್ಲ’ ಎಂದು ರಿಯಾನ್ ಹೇಳಿದ್ದಾನೆ. ಆದರೆ ತನ್ನ ಪತ್ನಿಯು ಪುತ್ರಿಯ ಗೆಳೆಯನೊಂದಿಗೆ ಓಡಿಹೋಗಿರುವ ಬಗ್ಗೆ ಜಾರ್ಜಿಯಾಳ ಪತಿ ಎರಿಕ್ ಬೇಸರಪಟ್ಟುಕೊಂಡಿದ್ದಾರೆ. 2 ವರ್ಷಗಳ ಹಿಂದಷ್ಟೇ ಅವರು ಪತ್ನಿಗೆ ತಮ್ಮ ಮದುವೆಯ ಪ್ರತಿಜ್ಞೆಯನ್ನು ಮಾಡಿದ್ದರು.
Published by: Harshith AS
First published: February 25, 2021, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories