Grandchild: ಮುಂದಿನ ವರ್ಷ ಮೊಮ್ಮಗು ನೀಡಿ ಇಲ್ಲವೇ 5 ಕೋಟಿ ರೂ. ಪರಿಹಾರ ಕೊಡಿ! ಕೋರ್ಟ್ ಮೆಟ್ಟಿಲೇರಿದ ಪೋಷಕರು

ಸಾಮಾನ್ಯವಾಗಿ ಮಕ್ಕಳಾದವರು ತಮ್ಮ ಪೋಷಕರ ವಿರುದ್ಧ ಆಸ್ತಿ ಕೊಡಬೇಕೆಂದು ಹೋರಾಟ ನಡೆಸುವ ಪ್ರಕರಣಗಳೇ ಇರುತ್ತವೆ. ಆದರೆ, ತಾಯಿ-ತಂದೆಯೇ ಸ್ವತಃ ತಮ್ಮ ಮಗ ಹಾಗೂ ಸೊಸೆ ವಿರುದ್ಧ ಅರ್ಜಿ ಹಾಕಿ ಕೋರ್ಟ್ ಮೆಟ್ಟಿಲೇರಿದ್ದನ್ನು ಬಹುಶಃ ನೀವು ಕೇಳಿರಿಲಿಕ್ಕಿಲ್ಲ. ಆದರೆ, ಈಗ ಅಂತಹ ಘಟನೆಯೊಂದು ನಡೆದಿದ್ದು ವರದಿಯಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ದಿನಮಾನಗಳಲ್ಲಿ ಏನೆನೆಲ್ಲ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿವೆ ಎಂದು ಹೇಳಲು ಸಾಧ್ಯವೇ ಇಲ್ಲ. ಹಿಂದೆ ಎಂದೂ ಕೇಳರಿಯದಂತಹ ವಿವಾದಗಳು ಇಂದು ಸೃಷ್ಟಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಪೋಷಕರು (Parents) ಹಾಗೂ ಮಕ್ಕಳ ನಡುವಿನ ಆಸ್ತಿ ವಿವಾಗಳಂತಹ ಸಮಸ್ಯೆಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಾಗ ತಲೆ ಎತ್ತುತ್ತಿರುತ್ತವೆ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಮಕ್ಕಳಾದವರು (Children) ತಮ್ಮ ಪೋಷಕರ ವಿರುದ್ಧ ಆಸ್ತಿ ಕೊಡಬೇಕೆಂದು ಹೋರಾಟ ನಡೇಸುವ ಪ್ರಕರಣಗಳೇ ಇರುತ್ತವೆ. ಆದರೆ, ತಾಯಿ-ತಂದೆಯೇ (Mother- Father) ಸ್ವತಃ ತಮ್ಮ ಮಗ ಹಾಗೂ ಸೊಸೆ ವಿರುದ್ಧ ಅರ್ಜಿ ಹಾಕಿ ಕೋರ್ಟ್ (Court) ಮೆಟ್ಟಿಲೇರಿದ್ದನ್ನು ಬಹುಶಃ ನೀವು ಕೇಳಿರಿಲಿಕ್ಕಿಲ್ಲ. ಆದರೆ, ಈಗ ಅಂತಹ ಘಟನೆಯೊಂದು ನಡೆದಿದ್ದು ವರದಿಯಾಗಿದೆ.

ಉತ್ತರಾಖಂಡದಲ್ಲಿ ಹರಿದ್ವಾರ ಮೂಲದ ಹಿರಿಯ ದಂಪತಿಯೊಂದು ತಮ್ಮ ಮಗ ಹಾಗೂ ಸೊಸೆ ವಿರುದ್ದ ಕೋರ್ಟ್ ಮೆಟ್ಟಿಲು ಏರಿದ್ದು ತಮ್ಮ ಅರ್ಜಿಯಲ್ಲಿ ಅವರು ತಮ್ಮ ಮಗ ಹಾಗೂ ಸೊಸೆ ಇನ್ನೊಂದು ವರ್ಷದಲ್ಲೇ ತಮಗೆ ಮೊಮ್ಮಗ ನೀಡಬೇಕೆಂದೂ ಇಲ್ಲದೆ ಹೋದಲ್ಲಿ ಇಬ್ಬರು ತಲಾ 2.5 ಕೋಟಿ ರೂ.ಗಳಂತೆ ಒಟ್ಟು ಐದು ಕೋಟಿ ರೂ. ಗಳನ್ನು ತಮಗೆ ಪರಿಹಾರವಾಗಿ ನೀಡಬೇಕೆಂದು ಕೋರಿದ್ದಾರೆ.

ಐದು ಕೋಟಿ ರೂ ಯಾಕೆ ಗೊತ್ತಾ?
ತಮ್ಮ ಅರ್ಜಿಯಲ್ಲಿ ತಿಳಿಸಿರುವಂತೆ ಈ ಹಿರಿಯ ದಂಪತಿ ತಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಹಣ ಹಾಕಿದ್ದಲ್ಲದೆ ಮನೆಯನ್ನೂ ಸಹ ಸಾಲದಲ್ಲಿ ನಿರ್ಮಾಣ ಮಾಡಿದ್ದು ಇದೀಗ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ, ಹಾಗಾಗಿ ತಮ್ಮ ಮಗ ಮತ್ತು ಸೊಸೆಯಿಂದ ಒಟ್ಟಾಗಿ ಐದು ಕೋಟಿ ರೂಪಾಯಿಗಳ ಪರಿಹಾರ ಬೇಕೆಂದು ಕೋರಿದ್ದಾರೆನ್ನಲಾಗಿದೆ.



ಮುಂದುವರೆಯುತ್ತ ಆ ದಂಪತಿಗಳು 2016 ರಲ್ಲಿ ನಾವು ಅವರಿಬ್ಬರ ಮದುವೆ ಮಾಡಿದೆವು, ನಾವು ಅವರಿಂದ ನಮಗೆ ಗಂಡಾಗಲಿ ಅಥವಾ ಹೆಣ್ಣಾಗಲಿ ಒಟ್ಟು ಒಬ್ಬ ಮೊಮ್ಮಗ ಇಲ್ಲವೆ ಮೊಮ್ಮಗಳನ್ನು ಪಡೆಯುತ್ತೇವೆ ಎಂದು ಆಶಿಸಿದ್ದೇವು ಎಂದು ಅರ್ಜಿದಾರರಾಗಿರುವ ಎಸ್.ಆರ್ ಪ್ರಸಾದ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ವಯುಕ್ತಿಕ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು
ಈ ಸಂದರ್ಭದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತ, "ನಾನು ನನ್ನ ಮಗನಿಗಾಗಿ ನನ್ನೆಲ್ಲ ಹಣ ವ್ಯಯ ಮಾಡಿದೆ, ಅಮೆರಿಕದಲ್ಲಿ ಅವನಿಗೆ ತರಬೇತಿ ಕೊಡಿಸಿದೆ. ಈಗ ನನ್ನ ಬಳಿ ಏನೂ ಹಣವಿಲ್ಲ, ಮನೆ ನಿರ್ಮಾಣಕ್ಕಾಗಿ ನಾವು ಬ್ಯಾಂಕ್ ನಿಂದ ಸಾಲ ಪಡೆದೆವು. ಈಗ ನಾವು ವೈಯಕ್ತಿಕವಾಗಿ ಹಾಗೂ ಆರ್ಥಿಕವಾಗಿ ಹಣವಿಲ್ಲದೆ ಸಂಕಷ್ಟದಲ್ಲಿದ್ದೇವೆ. ಹಾಗಾಗಿ ನಮ್ಮ ಅರ್ಜಿಯಲ್ಲಿ ನಾವು ನಮ್ಮ ಮಗ ಹಾಗೂ ನಮ್ಮ ಸೊಸೆ ಇಬ್ಬರಿಂದಲೂ ತಲಾ 2.5 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಕೋರಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Photo: ಆಗಷ್ಟೇ ಪದವಿ ಪಡೆದ ತಂದೆಯ ಫೋಟೋವನ್ನು ಹೆಮ್ಮೆಯಿಂದ ಕ್ಲಿಕ್ಕಿಸಿದ ಪುಟಾಣಿ

ವಿಶಿಷ್ಟವಾದ ಕೋರ್ಟ್ ಪ್ರಕರಣ
ಈ ದಂಪತಿಗಳ ಪರವಾಗಿ ವಾದ ಮಂಡಿಸುತ್ತಿರುವ ವಕೀಲರಾದ ಎ.ಕೆ ಶ್ರೀವಾಸ್ತವ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನಮ್ಮ ಕಕ್ಷಿದಾರರು ತಮ್ಮ ಮಗ ಹಾಗೂ ಸೊಸೆಯಿಂದ ಇನ್ನೊಂದು ವರ್ಷದಲ್ಲಿ ಮೊಮ್ಮಗ/ಮೊಮ್ಮಗಳು ಬೇಕೆಂತಲೂ ಇಲ್ಲದೆ ಹೋದಲ್ಲಿ ಇಬ್ಬರೂ ಸೇರಿ ಐದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ದಾವೆ ಹೂಡಿದ್ದಾರೆ ಎಂದು ಹೇಳಿದ್ದಾರೆ. ಮುಂದುವರೆದಂತೆ ಶ್ರೀವಾಸ್ತವ ಅವರು ಈ ರೀತಿ ಹೇಳುತ್ತಾರೆ, "ಇದು ಪ್ರಸ್ತುತ ನಮ್ಮ ಸಮಾಜದ ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ, ನಾವು ನಮ್ಮ ಮಕ್ಕಳು ಪ್ರಬುದ್ಧರಾಗಿ ಉತ್ತಮ ಸಂಸ್ಥೆಗಳಲ್ಲಿ ಕೈತುಂಬ ದುಡಿಯುವಂತೆ ಸಮರ್ಥರನ್ನಾಗಿ ಮಾಡಲು ಹಣ ವ್ಯಯಿಸುತ್ತೇವೆ. ಹಾಗಾಗಿ ಮಕ್ಕಳಾದವರಿಗೆ ತಮ್ಮ ಪೋಷಕರಿಗೆ ನೀಡಲು ಕನಿಷ್ಠ ಅಥವಾ ಮೂಲ ಆರ್ಥಿಕ ನೆರವಿನ ಋಣವಿರುತ್ತದೆ".

ಇದನ್ನೂ ಓದಿ: Ambanis Host Event: ಭಾವಿ ಸೊಸೆ ರಾಧಿಕಾಗಾಗಿ ಸಮಾರಂಭ ಆಯೋಜಿಸಿದ ಅಂಬಾನಿ ದಂಪತಿ, ತಾರೆಯರು ಭಾಗಿ

ಇದೊಂದು ರೀತಿಯಲ್ಲಿ ವಿಶಿಷ್ಟವಾದ ಕೋರ್ಟ್ ಪ್ರಕರಣವಾಗಿದ್ದು ಈ ಹಿರಿಯ ದಂಪತಿಗಳ ಆಸೆಯನ್ನು ಮಗ ಹಾಗೂ ಸೊಸೆ ಒಂದು ವರ್ಷದಲ್ಲೇ ಮೊಮ್ಮಗ/ಮೊಮ್ಮಗಳು ನೀಡುವ ಮೂಲಕ ಈಡೇರಿಸುವರೋ ಅಥವಾ ತಮ್ಮ ಪೋಷಕರು ಕೇಳಿರುವಂತೆ ಧನ ಪರಿಹಾರವನ್ನೇ ನೀಡುವರೋ ಎಂಬುದನ್ನು ಕಾದು ನೋಡಬೇಕು.
Published by:Ashwini Prabhu
First published: