• Home
 • »
 • News
 • »
 • national-international
 • »
 • ಸಮೋಸ ಕೊಡಿಸುವುದಾಗಿ ಕರೆದೊಯ್ದು ಪುಟ್ಟ ಬಾಲಕಿ ಮೇಲೆ ಅಜ್ಜ, ಮಾವನಿಂದಲೇ ಅತ್ಯಾಚಾರ!

ಸಮೋಸ ಕೊಡಿಸುವುದಾಗಿ ಕರೆದೊಯ್ದು ಪುಟ್ಟ ಬಾಲಕಿ ಮೇಲೆ ಅಜ್ಜ, ಮಾವನಿಂದಲೇ ಅತ್ಯಾಚಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ತಾಯಿಗೆ ಆಘಾತವಾಗಿದೆ. ತಂದೆ, ಸೋದರನೇ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬುವುದು ಘಟನೆ ನಡೆದ ಆರೇಳು ದಿನಗಳ ಬಳಿಕ ಗೊತ್ತಾಗಿದೆ. ಕೂಡಲೇ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 48 ವರ್ಷದ ಅಜ್ಜ ಹಾಗೂ 20 ವರ್ಷದ ಮಾವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಮುಂದೆ ಓದಿ ...
 • Share this:

  ಭೂಪಾಲ್ (ಏ.10): ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾದ್ರೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ನಿತ್ಯ ಹೆಣ್ಣು ಮಕ್ಕಳು ಅತ್ಯಾಚಾರದ ಬೆಂಕಿಯಲ್ಲಿ ಬೇಯುತ್ತಲೇ ಇದ್ದಾರೆ. ಅಪ್ರಾಪ್ತೆಯರ ಮೇಲೆ ಕುಟುಂಬಸ್ಥರೇ ನಡೆಸುವ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದ್ದು, ಮಧ್ಯಪ್ರದೇಶದ ರಾಜಧಾನಿಯಲ್ಲಿ 6 ವರ್ಷದ ಪುಟ್ಟ ಬಾಲಕಿಯ ಮೇಲೆ ಅಜ್ಜ ಹಾಗೂ ಮಾವನೇ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.


  ಸಮೋಸ ಕೊಡಿಸುವುದಾಗಿ ಕರೆದೊಯ್ದು ರೇಪ್..!


  6 ವರ್ಷದ ಪುಟ್ಟ ಬಾಲಕಿ ತನ್ನ ತಮ್ಮನೊಂದಿಗೆ ಎಂದಿನಂತೆ ಆಟವಾಡುತ್ತಿದ್ದಳು. ಬಾಲಕಿಯ ತಾಯಿಯ ಸೋದರನೇ ಆದ ಆರೋಪಿ ಇಬ್ಬರು ಮಕ್ಕಳಿಗೆ ಸಮೋಸ ಕೊಡಿಸುವುದಾಗಿ ಆಸೆ ತೋರಿಸಿದ್ದಾನೆ. ಖುಷಿಯಿಂದಲೇ ಹೊರಟ ಇಬ್ಬರು ಮಕ್ಕಳನ್ನು ಆರೋಪಿ ಮಾವ ಸಂಬಂಧಿಕರ ಮನೆಯೊಂದಕ್ಕೆ ಕರೆ ತಂದಿದ್ದಾನೆ. ಅಲ್ಲಿ ಬಾಲಕಿಯ ತಾಯಿಯ ತಂದೆಯೂ ಇದ್ದನು. ಅಜ್ಜ-ಮಾವನನನ್ನು ಕಂಡು ಸಂಭ್ರಮಿಸುತ್ತಿದ್ದ ಬಾಲಕಿ ಮೇಲೆ ಈ ಕಾಮುಕರಿಗೆ ಕರುಣೆಯೇ ಬಂದಿಲ್ಲ. ಇಬ್ಬರು ದುರುಳರು ಆಟವಾಡುತ್ತಿದ್ದ ಬಾಲಕಿಯ ಮೇಲೆ ಅಮಾನುಷ ಕೃತ್ಯವೆಸಗಿದ್ದಾರೆ.


  ತಮ್ಮನ ಕಣ್ಣೆದುರೇ ಬಾಲಕಿಯ ಮೇಲೆ ಅತ್ಯಾಚಾರ!


  ಮೊಮ್ಮಗಳು ಎಂಬ ಸಂಬಂಧವನ್ನೇ ಮರೆತು ಬಾಲಕಿಯನ್ನು ಕೊಠಡಿಗೆ ಕರೆದೊಯ್ದು ಈ ಹೀನ ಕೃತ್ಯವೆಸಗಿದ್ದಾರೆ. ಬಾಲಕಿಯ ಜೊತೆಯಲ್ಲೇ ಬಂದಿದ್ದ ತಮ್ಮನ ಎದುರಲ್ಲೇ ಅಮಾನುಷವಾಗಿ ವರ್ತಿಸಿದ್ದಾರೆ. ಕೃತ್ಯವೆಸಗಿದ ಬಳಿಕ ಇಬ್ಬರು ಮಕ್ಕಳಿಗೆ ಆರೋಪಿಗಳು ಸಮೋಸ ಕೊಡಿಸಿದ್ದಾರೆ. ಯಾರಿಗೂ ಏನನ್ನೂ ಹೇಳದಂತೆ ಬಾಲಕಿಗೆ 20 ರೂಪಾಯಿ ಕೊಟ್ಟು ಮನೆಗೆ ಕರೆ ತಂದು ಬಿಟ್ಟು ಹೋಗಿದ್ದಾರೆ.


  ಇದನ್ನು ಓದಿ: ಮದ್ಯಪ್ರಿಯರಿಗೆ ಸಂತಸದ ಸುದ್ದಿ; ಲಾಕ್​ಡೌನ್ ವೇಳೆ ಎಣ್ಣೆ ಹೋಂ ಡೆಲಿವರಿಗೆ ಅವಕಾಶ ನೀಡಿದ ಮುಂಬೈ ಸರ್ಕಾರ!


  ಬಾಲಕಿಯ ವರ್ತನೆಯಿಂದ ತಾಯಿಗೆ ಗೊತ್ತಾಯಿತು!


  ಸದಾ ಲವಲವಿಕೆಯಿಂದ ಮುದ್ದು ಮುದ್ದಾಗಿ ಮಾತನಾಡುತ್ತಿದ್ದ ಬಾಲಕಿ ಘಟನೆ ಬಳಿಕ ಮಂಕಾಗಿದ್ದಳು. ಯಾರೊಂದಿಗೆ ಮಾತನಾಡದೇ ಇದ್ದಿದ್ದನ್ನು ಬಾಲಕಿಯ ತಾಯಿ ಗಮನಿಸಿದ್ದಾರೆ. ಏನಾಯಿತು ಎಂದು ಬಾಲಕಿಯನ್ನು ವಿಚಾರಿಸಿದ್ದಾರೆ. ತೀವ್ರವಾಗಿ ಹೆದರಿದ್ದ ಬಾಲಕಿ ಮೊದಲು ಏನನ್ನೂ ಹೇಳಲಿಲ್ಲ. ನಂತರ ತಾಯಿ ಬಳಿ ಅಜ್ಜ, ಮಾವ ತನ್ನೊಂದಿಗೆ ಹೇಗೆ ನಡೆದುಕೊಂಡರು ಎಂದು ಹೇಳಿಕೊಂಡಿದ್ದಾಳೆ.


  ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ತಾಯಿಗೆ ಆಘಾತವಾಗಿದೆ. ತಂದೆ, ಸೋದರನೇ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬುವುದು ಘಟನೆ ನಡೆದ ಆರೇಳು ದಿನಗಳ ಬಳಿಕ ಗೊತ್ತಾಗಿದೆ. ಕೂಡಲೇ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 48 ವರ್ಷದ ಅಜ್ಜ ಹಾಗೂ 20 ವರ್ಷದ ಮಾವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

  • ವರದಿ: ಕಾವ್ಯಾ ವಿ

  Published by:HR Ramesh
  First published: