ಭಾರತೀಯ ಸಂಗೀತ ಸಂಯೋಜಕ (Indian Music Director) ರಿಕಿ ಕೇಜ್ (Ricky Kej) ಮೂರನೇ ಗ್ರ್ಯಾಮಿ ಪ್ರಶಸ್ತಿಯನ್ನು (Grammy Awards) ಗೆದ್ದಿದ್ದು ದೇಶಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಯುಎಸ್ ಮೂಲದ ಸಂಗೀತಗಾರ ಬ್ರಿಟೀಷ್ ರಾಕ್ ಬ್ಯಾಂಡ್ ದಿ ಪೋಲೀಸ್‌ನ ಡ್ರಮ್ಮರ್ ಸ್ಟೀವರ್ಟ್ ಕೋಪ್ಲ್ಯಾಂಡ್ ಜೊತೆಗೆ ರಿಕಿ 'ಡಿವೈನ್ ಟೈಡ್ಸ್' ಆಲ್ಬಮ್‌ಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ತಮಗೆ ದೊರೆತ ಪ್ರಶಸ್ತಿ ಹಾಗೂ ಗೌರವವನ್ನು ದೇಶಕ್ಕೆ ಅರ್ಪಿಸಿರುವ ರಿಕಿ ಪ್ರತಿಷ್ಠಿತ ಪ್ರಶಸ್ತಿಯನ್ನು ಮತ್ತೊಮ್ಮೆ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ದೇಶದ ಪ್ರತಿಷ್ಠೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅವಕಾಶ ತಮಗೆ ಒದಗಿ ಬಂದಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್‌ನಲ್ಲಿ ಅನಿಸಿಕೆ ಹಂಚಿಕೊಂಡ ರಿಕಿ
ಗೆಲುವಿನ ಕ್ಷಣಗಳನ್ನು ಮಾತುಗಳಲ್ಲಿ ವರ್ಣಿಸಿರುವ ರಿಕಿ, ಟ್ವಿಟರ್‌ನಲ್ಲಿ ಸಂತೋಷದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. "ಮೂರನೇ ಬಾರಿಗೆ ಗ್ರ್ಯಾಮಿಪ್ರಶಸ್ತಿಯನ್ನು ಪಡೆದುಕೊಂಡಿರುವೆ, ಈ ಅವಕಾಶಕ್ಕೆ ಕೃತಜ್ಞನಾಗಿದ್ದೇನೆ ಹಾಗೂ ಸಂತಸದಿಂದ ಮೂಕನಾಗಿದ್ದೇನೆ.
ನನ್ನ ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ. ದೇಶಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದ್ದು, ಬಾಲಿವುಡ್ ನಟಿ ಕಂಗನಾ ರನೌತ್ ರಿಕಿಯವರ ಗೆಲುವಿನ ಸಂಭ್ರಮದಲ್ಲಿ ಭಾಗಿಯಾಗಿದ್ದು, "ಅಭಿನಂದನೆಗಳು ಸರ್" ಎಂದು ಕಾಮೆಂಟ್ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ದಿಗ್ಗಜರನ್ನು ಸೋಲಿಸಿ ಪ್ರಶಸ್ತಿ ಪಡೆದುಕೊಂಡ ಸಂಯೋಜಕ
ಕಳೆದ ವರ್ಷ ಅತ್ಯುತ್ತಮ ಹೊಸ ಯುಗದ ಆಲ್ಬಮ್ ವಿಭಾಗದಲ್ಲಿ ರಿಕಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದರು. ಕ್ರಿಸ್ಟಿನಾ ಅಗುಲೆರಾ, ದಿ ಚೈನ್ಸ್ಮೋಕರ್ಸ್ (ಮೆಮೊರೀಸ್... ಡೋಂಟ್ ಓಪನ್), ಜೇನ್ ಇರಾಬ್ಲೂಮ್ (ಪಿಕ್ಚರಿಂಗ್ ದಿ ಇನ್ವಿಸಿಬಲ್- ಫೋಕಸ್ 1), ಮತ್ತು ನಿಡಾರೋಸ್ಡೊಮೆನ್ಸ್ ಜೆಂಟೆಕೋರ್‌ರಂತಹ ನಾಮನಿರ್ದೇಶಿತ ಸಂಯೋಜಕರನ್ನು ಸೋಲಿಸಿ ರಿಕಿ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
Just won my 3rd Grammy Award. Extremely grateful, am speechless! I dedicate this Award to India.@copelandmusic
Herbert Waltl Eric Schilling Vanil Veigas Lonnie Park pic.twitter.com/GG7sZ4yfQa
— Ricky Kej (@rickykej) February 6, 2023
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಕುರಿತು ಬೇಸರ ವ್ಯಕ್ತಪಡಿಸಿದ ರಿಕಿ ಕೇಜ್, ಅಷ್ಟಕ್ಕೂ ಆಗಿದ್ದೇನು?
ಒಂಭತ್ತು ಹಾಡುಗಳ ಆಲ್ಬಂ ಡಿವೈನ್ ಟೈಡ್ಸ್
ರಿಕಿಯವರ ಡಿವೈನ್ ಟೈಡ್ಸ್ ಒಂಭತ್ತು-ಹಾಡುಗಳ ಆಲ್ಬಂ ಆಗಿದ್ದು, ಜೀವನದಲ್ಲಿ ಪ್ರತಿಯೊಂದನ್ನು ಸಮಾನವಾಗಿ ಕಾಣಲು ಸಮತೋಲನವನ್ನು ನಿರ್ವಹಿಸುವುದು ಹೇಗೆ ಎಂದು ತಿಳಿಸುವ ಅಂಶವನ್ನು ಒಳಗೊಂಡಿದೆ.
ಮೊದಲ ಗ್ರ್ಯಾಮಿ ಪ್ರಶಸ್ತಿ
ಬೆಸ್ಟ್ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗಾಗಿ ಬೆಂಗಳೂರು ಮೂಲದ ರಿಕಿ ಕೇಜ್ ಅವರು 2015 ರಲ್ಲಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡರು. ದಿ ಪೊಲೀಸ್ ಅವರೊಂದಿಗಿನ ರಿಕಿ ಕೆಲಸದ ಭಾಗವಾಗಿ , ಕೋಪ್ಲ್ಯಾಂಡ್ ಐದು ಗ್ರ್ಯಾಮಿಗಳನ್ನು ಗೆದ್ದಿದ್ದಾರೆ. ಕೇಜ್ ಅವರಿಗೆ ಇದು ಎರಡನೇ ಗ್ರ್ಯಾಮಿ ಪ್ರಶಸ್ತಿಯಾಗಿದೆ.
ನಟಿ ವಿಯೋಲಾ ಡೇವಿಸ್ ತಮ್ಮದೇ ಆತ್ಮಚರಿತ್ರೆಯಾದ ಫೈಂಡಿಂಗ್ ಮಿ ಗಾಗಿ ಅತ್ಯುತ್ತಮ ಆಡಿಯೊಬುಕ್, ನಿರೂಪಣೆ ಮತ್ತು ಸ್ಟೋರಿ ಟೆಲ್ಲಿಂಗ್‌ಗಾಗಿ ರೆಕಾರ್ಡಿಂಗ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ನಟಿ ಈ ಮೊದಲು ಎರಡು ಟೋನಿ ಪ್ರಶಸ್ತಿಗಳು, ಆಸ್ಕರ್ ಮತ್ತು ಎಮ್ಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ಸಂಗೀತಗಾರ
ಕಳೆದ ನವೆಂಬರ್‌ನಲ್ಲಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶಿತಗೊಂಡಿದ್ದ ಅಲ್ಬಂ ಕುರಿತು ಮಾತನಾಡಿದ್ದ ರಿಕಿ ಮೂರನೇ ಬಾರಿಯೂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ರೋಮಾಂಚನಗೊಂಡಿರುವೆ ಎಂದು ತಿಳಿಸಿದ್ದರು.
ತಮ್ಮ ಅಲ್ಬಂ ಡಿವೈನ್ ಟೈಡ್ಸ್ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿದ್ದ ರಿಕಿ, ಈ ಅಲ್ಬಂ ಇಲ್ಲಿಯವರೆಗಿನ ತಮ್ಮ ಸೃಜನಾತ್ಮಕ ಹಾಗೂ ಯಶಸ್ವಿ ಅಲ್ಬಂ ಆಗಿದೆ ಹಾಗೂ ಅಲ್ಬಂಗೆ ದೊರೆತಿರುವ ಪ್ರಶಸ್ತಿ ಹಾಗೂ ಗೌರವಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಡಿವೈನ್ ಟೈಡ್ಸ್ ಕುರಿತು ರಿಕಿ ಮಾತುಗಳು
ಸ್ಟೀವರ್ಟ್ ಕೋಪ್ಲ್ಯಾಂಡ್ ಮತ್ತು ರಿಕಿ ಜೊತೆಯಾಗಿ ಸೇರಿ 'ಡಿವೈನ್ ಟೈಡ್ಸ್' ಅನ್ನು ಅತ್ಯಂತ ಆಕರ್ಷಕ ಹಾಗೂ ತಲ್ಲೀನಗೊಳಿಸುವ ಅನುಭವವಾಗಿ ರಚಿಸಿದ್ದೇವೆ ಎಂದು ತಿಳಿಸಿರುವ ರಿಕಿ ನಮ್ಮ ಸಂಗೀತದ ಮೂಲಕ ಪ್ರೇಕ್ಷಕರನ್ನು ಸುಂದರವಾದ ಸ್ಥಳಗಳಿಗೆ ಮತ್ತು ಭಾವನೆಗಳಿಗೆ ಕೊಂಡೊಯ್ಯಲು ನಾವು ಆಶಿಸಿದ್ದೇವೆ ಎಂದು ತಿಳಿಸಿದ್ದಾರೆ. ತಮ್ಮ ಆಲ್ಬಂಗೆ ದೊರೆತಿರುವ ಗೌರವ ದೇಶಕ್ಕೆ ದೊರೆತಿರುವ ಗೌರವ ಎಂಬುದು ರಿಕಿಯವರ ಹೆಮ್ಮೆಯ ಮಾತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ