ಗ್ರಾಹಕರಿಗೆ ಸಿಹಿಸುದ್ದಿ: ಗಗನಕ್ಕೇರಿದ ಈರುಳ್ಳಿ ದರ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

ಈ ವಾರ ಈರುಳ್ಳಿ ಪ್ರತಿ ಕೆ.ಜಿ.ಗೆ ದೆಹಲಿಯಲ್ಲಿ 100 ರೂ., ಮುಂಬೈನಲ್ಲಿ 80 ರೂ, ಕೊಲ್ಕತ್ತಾದಲ್ಲಿ 75 ರೂ, ಚೆನ್ನೈನಲ್ಲಿ 70 ರೂ, ಗುರುಗ್ರಾಮದಲ್ಲಿ 90 ರೂ.ನಂತೆ ಮಾರಾಟವಾಗುತ್ತಿತ್ತು. ವ್ಯಾಪಾರ ವಹಿವಾಟಿನ ಅಂಕಿ-ಅಂಶದ ಪ್ರಕಾರ ಈ ವಾರ 90ರಿಂದ 100 ರೂ.ನಂತೆ ಮಾರಾಟವಾಗುತ್ತಿದೆ.

news18india
Updated:November 10, 2019, 10:56 AM IST
ಗ್ರಾಹಕರಿಗೆ ಸಿಹಿಸುದ್ದಿ: ಗಗನಕ್ಕೇರಿದ ಈರುಳ್ಳಿ ದರ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ
ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್.
  • Share this:
ನವದೆಹಲಿ(ನ.10): ದೇಶಾದ್ಯಂತ ಈರುಳ್ಳಿ ಬೆಲೆ ಮತ್ತೆ ಗಗನಕ್ಕೇರಿದೆ. ಸೋಮವಾರ ಅಂಗಡಿಗಳಲ್ಲಿ ಒಂದು ಕೆ.ಜಿ ಈರುಳ್ಳಿ 100 ರೂ.ಗೆ ಮಾರಾಟ ಮಾಡಲಾಗ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾದ ಕಾರಣ ಬೆಲೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳ ಹಿಂದೆ ಈರುಳ್ಳಿ ತುಸು ಕಡಿಮೆಯಾಗಿತ್ತು. ಇದೀಗ ದಿಢೀರ್​​​​ ಈರುಳ್ಳಿ ಬೆಲೆ ಶೇ.10ರಷ್ಟು ಹೆಚ್ಚಾಗಿದೆ. ಸದ್ಯ ಕೆ.ಜಿ ಈರುಳ್ಳಿ ಬೆಲೆ 100 ರೂ.ಗೆ ತಲುಪಲಿದ್ದು, ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಗಗನಕ್ಕೇರುತ್ತಿರುವ ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಈರುಳ್ಳಿ ಬೆಲೆಯೇರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ದುಬಾರಿ ದರ ನಿಯಂತ್ರಣಕ್ಕೆ  ಮುಂದಾಗಿರುವ ಕೇಂದ್ರ ಸರ್ಕಾರ ಒಂದು ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಮೊದಲನೇ ಹಂತದಲ್ಲಿ 2 ಸಾವಿರ ಟನ್ ಈರುಳ್ಳಿ ಶೀಘ್ರವೇ ಬರಲಿದ್ದು, ಎರಡನೇ ಹಂತದ ಸರಕು ಡಿಸೆಂಬರ್ ಅಂತ್ಯದಲ್ಲಿ ಭಾರತದ ಬಂದರು ತಲುಪಲಿದೆ ಎಂದು ಗ್ರಾಹಕ ವ್ಯವಹಾರ ಮತ್ತು ವಿತರಣಾ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್​ ಮಾಡಿದ್ದಾರೆ.

ಸ್ಯಾಹಾರವೇ ಇರಲಿ ಮಾಂಸಾಹಾರವೇ ಇರಲಿ ಈರುಳ್ಳಿ ಇದ್ದರೆ ಮಾತ್ರ ಅಡುಗೆ ಪರಿಪೂರ್ಣವಾಗುತ್ತದೆ. ಆದರೆ, ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಕಳೆದ ವಾರ 70-80 ರೂ ಇದ್ದ ಈರುಳ್ಳಿ ಬೆಲೆ ಈಗ 100ಕ್ಕೇರಿದೆ. ಈರುಳ್ಳಿ ಬೆಲೆ ಹೆಚ್ಚಾಗಿ, ಮಂಡಿಗಳಲ್ಲಿ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ತರಕಾರಿ ಮಂಡಿಗಳಲ್ಲಿ ಈರುಳ್ಳಿ ಸಂಗ್ರಹವನ್ನು ಹೆಚ್ಚಿಸಲು ಚಿಂತನೆ ನಡೆಸಿತ್ತು.

ಇದನ್ನೂ ಓದಿ: ನ.12ಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಸರ್ಕಾರಿ ಕಚೇರಿ ಮತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಈ ವಾರ ಈರುಳ್ಳಿ ಪ್ರತಿ ಕೆ.ಜಿ.ಗೆ ದೆಹಲಿಯಲ್ಲಿ 100 ರೂ., ಮುಂಬೈನಲ್ಲಿ 80 ರೂ, ಕೊಲ್ಕತ್ತಾದಲ್ಲಿ 75 ರೂ, ಚೆನ್ನೈನಲ್ಲಿ 70 ರೂ, ಗುರುಗ್ರಾಮದಲ್ಲಿ 90 ರೂ.ನಂತೆ ಮಾರಾಟವಾಗುತ್ತಿತ್ತು. ವ್ಯಾಪಾರ ವಹಿವಾಟಿನ ಅಂಕಿ-ಅಂಶದ ಪ್ರಕಾರ ಈ ವಾರ 90ರಿಂದ 100 ರೂ.ನಂತೆ ಮಾರಾಟವಾಗುತ್ತಿದೆ.

ಇದುವರೆಗೂ ಮಂಡಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಈರುಳ್ಳಿ ಬೆಳೆಗಳು ದೇಶಾದ್ಯಂತ ಸರಬರಾಜಾಗಿ ಮಾರಾಟವಾಗಿವೆ. ಬೇಸಿಗೆಯಲ್ಲಿ ಬೆಳೆಯಲಾದ ಈರುಳ್ಳಿಗಳು ನವೆಂಬರ್​ ನಂತರ ಮಾರುಕಟ್ಟೆ ಪ್ರವೇಶಿಸಲಿವೆ. ಈ ಬಾರಿ ಮಳೆಯೂ ಹೆಚ್ಚಾಗಿದ್ದರಿಂದ ಬಹುಪಾಲು ಈರುಳ್ಳಿ ಬೆಳೆ ಕೊಳೆತುಹೋಗಿದೆ. ನವೆಂಬರ್​ವರೆಗೆ ಬೇಕಾಗುವಷ್ಟು ಈರುಳ್ಳಿ ಸಂಗ್ರಹ ದೇಶದಲ್ಲಿಲ್ಲ. ಹೀಗಾಗಿ, ಈರುಳ್ಳಿ ಬೆಲೆ ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿದೆ. ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯವಾದ ಮಹಾರಾಷ್ಟ್ರವನ್ನು ಏಷ್ಯಾದ ವಿಸ್ತಾರವಾದ ಈರುಳ್ಳಿ ಮಾರುಕಟ್ಟೆಯೆಂದು ಪರಿಗಣಿಸಲಾಗಿದೆ. ಆದರೆ, ಈ ಬಾರಿ ಮುಂಬೈನಲ್ಲಿ ಉಂಟಾದ ಪ್ರವಾಹದಿಂದ ಈರುಳ್ಳಿ ಕೊಳೆತು ರೈತರು ಸಂಕಷ್ಟದಲ್ಲಿದ್ದಾರೆ.
----------
First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ