ಕಾಶ್ಮೀರದ ಬಗ್ಗೆ ಸರ್ಕಾರದಿಂದ ಭಯಹುಟ್ಟಿಸುವ ಕೆಲಸವಾಗುತ್ತಿದೆ; ಗುಲಾಂ ನಬಿ ಆಜಾದ್​

ಉಗ್ರ ದಾಳಿ ಭೀತಿ ಹಿನ್ನೆಲೆ ಅಮರನಾಥ ಯಾತ್ರಿಕರನ್ನು ವಾಪಸ್ಸು ಮರಳುವಂತೆ ಸರ್ಕಾರ ಸೂಚನೆ ನೀಡಿದೆ. ಜೊತೆಗೆ ಅರೆ ಸೇನಾಪಡೆಗಳನ್ನು ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸುವ ಕೆಲಸ ನಡೆಯುತ್ತಿದೆ.

Seema.R | news18
Updated:August 3, 2019, 5:28 PM IST
ಕಾಶ್ಮೀರದ ಬಗ್ಗೆ ಸರ್ಕಾರದಿಂದ ಭಯಹುಟ್ಟಿಸುವ ಕೆಲಸವಾಗುತ್ತಿದೆ; ಗುಲಾಂ ನಬಿ ಆಜಾದ್​
ಗುಲಾಂ ನಭಿ ಆಜಾದ್
Seema.R | news18
Updated: August 3, 2019, 5:28 PM IST
ನವದಹೆಲಿ (ಆ.03): ಅಮರನಾಥ್ ಯಾತ್ರಿಕರ ಪ್ರವಾಸಿಗರ ಯಾತ್ರೆ ಮೊಟಕುಗೊಳಿಸುವ ಮೂಲಕ ಸರ್ಕಾರ ಜನರಲ್ಲಿ ಬಲವಂತವಾಗಿ ಭಯ ಮೂಡಿಸುವ ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಉಗ್ರ ದಾಳಿ ಭೀತಿ ಹಿನ್ನೆಲೆ ಅಮರನಾಥ ಯಾತ್ರಿಕರನ್ನು ವಾಪಸ್ಸು ಮರಳುವಂತೆ ಸರ್ಕಾರ ಸೂಚನೆ ನೀಡಿದೆ. ಜೊತೆಗೆ ಅರೆ ಸೇನಾಪಡೆಗಳನ್ನು ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸುವ ಕೆಲಸ ನಡೆಯುತ್ತಿದೆ.

ಗೃಹ ಸಚಿವಾಲಯದ ವರದಿ ಜನರನ್ನು ಭೀತಿ ಮೂಡಿಸುವ ಕೆಲಸ ನಡೆಯುತ್ತಿದೆ, ಪ್ರವಾಸಿಗರು ಮತ್ತು ಯಾತ್ರಿಕರನ್ನು ಈ ರೀತಿ ಅಸ್ಪಷ್ಟ ಕಾರಣದಿಂದ ಹೊರಡುವಂತಹ ಘಟನೆ ಈ ಹಿಂದೆ ಎಂದು ನಡೆದಿಲ್ಲ. ಸರ್ಕಾರ ಪ್ರವಾಸಿಗರಲ್ಲಿ ಜಮ್ಮು- ಕಾಶ್ಮೀರ ಸುರಕ್ಷಿತವಲ್ಲ ಎಂಬ ಭಾವನೆ ಮೂಡಿಸಲು ಮುಂದಾಗಿದೆ. ಜೊತೆಗೆ ಜನರ ಮಧ್ಯೆ ದ್ವೇಷಭಾವನೆ ಮೂಡುವಂತೆ ಆಗಿದೆ. ಕೇಂದ್ರ ಸರ್ಕಾರದ ಈ ನಿರ್ಣಯವನ್ನು ನಾವು ಖಂಡಿಸುತ್ತೇವೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಆಕ್ರೋಶ ವ್ಯಕ್ತಪಡಿಸಿದರು.

ಯಾತ್ರಿಕರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದರೂ ಈಗ ಮತ್ತೆ ಈ ಪಯಣ ಸುರಕ್ಷಿತವಲ್ಲ ಎಂದು ತಿಳಿಸಿದೆ. ಯಾತ್ರಾರ್ಥಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಿದ ಹಿನ್ನೆಲೆ ಈ ಬಾರಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಪ್ರತಿವರ್ಷ ನೂರರಿಂದ ಸಾವಿರಕ್ಕೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಅಮರನಾಥ ಬಳಿಕ ಈಗ ಎರಡನೇ ಸುಪ್ರಸಿದ್ದ ಪುಣ್ಯಕ್ಷೇತ್ರವಾದ ಮಚಲಿ ಮಠ್​ ಯಾತ್ರಾವನ್ನು ಕೂಡ ರದ್ದು ಮಾಡಲಾಗಿದೆ.

ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ; ಸರ್ಕಾರದಿಂದ ಉತ್ತರಕ್ಕೆ ಆಗ್ರಹಿಸಿದ ಒಮರ್​ ಅಬ್ದುಲ್ಲಾ

ಇಲ್ಲಿನ ಸ್ಥಳೀಯರು ಕೂಡ ಭಯದಿಂದ ಪೆಟ್ರೋಲ್​ ಬಂಕ್​, ಎಟಿಎಂ, ಆಹಾರ ಮಳೆಗೆ ಮುಂದೆ ರಾತ್ರಿ ಇಡೀ ಸಾಲು ನಿಂತಿದ್ದಾರೆ. ಇದಕ್ಕೆಲ್ಲಾ ಕಾರಣ ಸರ್ಕಾರದ ಈ ಆತಂಕದ ಹೇಳಿಕೆ ಎಂದರು.

ಜಮ್ಮು ಕಾಶ್ಮೀರದಲ್ಲಿನ ಈ ಬೆಳವಣಿಗೆ ಕುರಿತು ಮಾಹಿತಿ ಪಡೆಯಲು ಮಾಜಿ ಸಿಎಂ ಒಮರ್​ ಅಬ್ದಲ್ಲಾ ಕೂಡ ಇಂದು ರಾಜ್ಯಪಾಲ ಸತ್ಯಪಾಲ್​ ಸಿಂಗ್​ ಅವರನ್ನು ಭೇಟಿಯಾದರು. ಈ ವೇಳೆ ರಾಜ್ಯದಲ್ಲಿ ಏನಾಗುತ್ತಿದೆ ಎಂಬ ಘಟನೆ ಕುರಿತು ಕೇಂದ್ರ ಉತ್ತರಿಸಬೇಕು ಎಂದು ಆಗ್ರಹಿಸಿದರು.
Loading...

First published:August 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...