ಮೋದಿ ಸರ್ಕಾರ ಆರ್​​ಟಿಐ ಅರ್ಜಿ ಸಲ್ಲಿಕೆ ಅಗತ್ಯವನ್ನೇ ಕಡಿಮೆಗೊಳಿಸಿದೆ; ಕೇಂದ್ರ ಗೃಹ ಸಚಿವ ಅಮಿತ್​ ಶಾ

ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳು ಹೆಚ್ಚಿನ ಸಂಖ್ಯೆಯಲ್ಲಿ ಆರ್​ಟಿಐಗೆ ಅರ್ಜಿಗಳು ಸಲ್ಲಿಕೆಯಾದವು ಎಂದಲ್ಲಿ ನಮ್ಮ ಸರ್ಕಾರ ಏನು ಸಾಧನೆ ಮಾಡಿಲ್ಲ ಎಂದು ಭಾವಿಸಬಹುದು- ಅಮಿತ್​​ ಶಾ

news18-kannada
Updated:October 13, 2019, 9:12 PM IST
ಮೋದಿ ಸರ್ಕಾರ ಆರ್​​ಟಿಐ ಅರ್ಜಿ ಸಲ್ಲಿಕೆ ಅಗತ್ಯವನ್ನೇ ಕಡಿಮೆಗೊಳಿಸಿದೆ; ಕೇಂದ್ರ ಗೃಹ ಸಚಿವ ಅಮಿತ್​ ಶಾ
ಅಮಿತ್ ಶಾ
news18-kannada
Updated: October 13, 2019, 9:12 PM IST
ನವದೆಹಲಿ(ಅ.12): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರ ಈಗಾಗಲೇ ಎಷ್ಟು ಸಾಧ್ಯವೋ ಅಷ್ಟು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಬಗ್ಗೆ ತಿಳಿದುಕೊಳ್ಳಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳು ಸಲ್ಲಿಸಬೇಕಾದ ಅಗತ್ಯವನ್ನೇ ಕಡಿಮೆಗೊಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಇಂದು ನಗರದಲ್ಲಿ ಕೇಂದ್ರ ಮಾಹಿತಿ ಆಯೋಗದ 14ನೇ ವಾರ್ಷಿಕ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಭಾಗಿಯಾಗಿದ್ದರು. ಈ ವೇಳೆ ಸಮ್ಮೇಳನವನ್ನುದ್ದೇಶಿ ಮಾತಾಡಿದ ಅವರು, ನಮ್ಮ ಅವಧಿಯಲ್ಲಿ ಆರ್‌ಟಿಐ ಅರ್ಜಿಗಳ ಸಂಖ್ಯೆ ಕಡಿಮೆಯಾಗಿದೆ. ಮಾಹಿತಿಗಾಗಿ ಆರ್​​ಟಿಐಗೆ ಅರ್ಜಿ ಸಲ್ಲಿಸಲು ಸಾಕಷ್ಟು ಅವಕಾಶಗಳಿವೆ. ಆದರೂ, ಯಾರು ಮಾಹಿತಿಗಾಗಿ ಆರ್​​ಟಿಐಗೆ ಅರ್ಜಿಯೇ ಸಲ್ಲಿಸುತ್ತಿಲ್ಲವಂದರೇ ಕೇಂದ್ರ ಸರ್ಕಾರದ ಕಾರ್ಯವೂ ಜನರಿಗೆ ತಲುಪಿದೆ ಎಂದರ್ಥ ಎಂದರು.

ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳು ಹೆಚ್ಚಿನ ಸಂಖ್ಯೆಯಲ್ಲಿ ಆರ್​ಟಿಐಗೆ ಅರ್ಜಿಗಳು ಸಲ್ಲಿಕೆಯಾದವು ಎಂದಲ್ಲಿ ನಮ್ಮ ಸರ್ಕಾರ ಏನು ಸಾಧನೆ ಮಾಡಿಲ್ಲ ಎಂದು ಭಾವಿಸಬಹುದು. ಹೆಚ್ಚಿನ ಆರ್‌ಟಿಐ ಅರ್ಜಿಗಳು ಸರ್ಕಾರದ ಯಶಸ್ಸನ್ನು ಪ್ರತಿನಿಧಿಸುವುದಿಲ್ಲ. ಪ್ರಧಾನಿ ಮೋದಿ ಡಿಜಿಟಲ್​​ ಇಂಡಿಯಾದ ವ್ಯವಸ್ಥೆಯಿಂದಾಗಿ ಜನ ಸರ್ಕಾರದ ಯೋಜನೆಗಳ ಕುರಿತಾದ ಮಾಹಿತಿ ಆನ್‌ಲೈನ್‌ ಮೂಲಕ ಪಡೆಯಬಹುದು ಎಂದು ತಮ್ಮ ಸರ್ಕಾರದ ಸಾಧನೆಯನ್ನು ಕೊಂಡಾಡಿದರು.

ಇದನ್ನೂ ಓದಿ: ನ್ಯೂಯಾರ್ಕ್​​​​ ಬ್ರೂಕ್ಲಿನ್​​ನಲ್ಲಿ ಗುಂಡಿನ ಸದ್ದು: ನಾಲ್ಕು ಮಂದಿ ಬಲಿ; ಮೂವರಿಗೆ ತೀವ್ರ ಗಾಯ

ಆರ್​​ಟಿಐ ಕಾಯ್ದೆ ಬಗ್ಗೆ ಇಂದಿಗೂ ಹೆಚ್ಚು ಜನರಿಗೆ ಅರಿವೇ ಇಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರದ ಪ್ರತಿ ಯೋಜನೆ ಬಗ್ಗೆಯೂ ಮಾಹಿತಿ ಕೇಳಿ ಪಡೆಯುವುದು ಭಾರತೀಯ ನಾಗರೀಕರ ಮೂಲಭೂತ ಹಕ್ಕು. ಈ ಹಿಂದೆ ಕೇಂದ್ರ ಸರ್ಕಾರ 2005ರಲ್ಲಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಸರ್ಕಾರದ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ.

ಪ್ರತಿ ಸರ್ಕಾರವೂ ಸಾರ್ವಜನಿಕ ಮಾಹಿತಿ ನೀಡಲೆಂದೇ ಸಂಪರ್ಕಾಧಿಕಾರಿಯಾಗಿ ಕೆಲವರನ್ನು ನೇಮಿಸಿರುತ್ತದೆ. ಈ ಅಧಿಕಾರಿಗಳು ಆರ್​​ಟಿಐ ಅರ್ಜಿಗಳನ್ನು ಸ್ವೀಕರಿಸಿ ವಿವಿಧ ಇಲಾಖೆಗಳಿಗೆ ತಲುಪಿಸುತ್ತಾರೆ. ಬಳಿಕ ಈ ಸಂಬಂಧ ಮಾಹಿತಿ ಪಡೆದು ಅರ್ಜಿದಾರರಿಗೆ ಒದಗಿಸುತ್ತಾರೆ. ಈ ಮಾಹಿತಿ ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಸಂಬಂಧಪಟ್ಟ ಇಲಾಖೆ ಉತ್ತರಿಸಬೇಕಾಗುತ್ತದೆ.
-------
Loading...

First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...