Pegasus snooping: ಗೂಢಚರ್ಯೆ ಮಾಡುತ್ತಿರುವ ಬಿಜೆಪಿಗೆ ಪ್ಲಾಸ್ಟರ್ ಹಾಕಬೇಕು: ಮಮತಾ ಬ್ಯಾನರ್ಜಿ ಆಕ್ರೋಶ

ಕೈಯಲ್ಲಿದ್ದ ಮೊಬೈಲ್​​​ ಫೋನ್​ನ ತೋರಿಸಿದ ದೀದಿ, ನನ್ನ ಮೊಬೈಲ್​ಗೆ ಪ್ಲಾಸ್ಟರ್​ ಹಾಕಿದ್ದೇನೆ. ಕೇಂದ್ರ ಸರ್ಕಾರಕ್ಕೂ ಪ್ಲಾಸ್ಟರ್​ ಹಾಕಬೇಕು. ಇಲ್ಲವಾದರೆ ಭಾರತವನ್ನು ಗೂಢಾಚರ್ಯೆ ಮೂಲಕ ಹಾಳು ಮಾಡುತ್ತೆ ಎಂದು ಕಿಡಿಕಾರಿದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

  • Share this:
ಕೊಲ್ಕತ್ತಾ: ಪೆಗಾಸಸ್​​​ ಗೂಢಾಚರ್ಯೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. ಹುತಾತ್ಮರ ಗೌರವ ದಿನದ ಅಂಗವಾಗಿ ವರ್ಚುವಲ್​​ ಮೂಲಕ ಮಾತನಾಡಿದ ದೀದಿ, ಗೂಢಾಚರ್ಯೆ ಮೂಲಕ ಕೇಂದ್ರ ಸರ್ಕಾರ ಇಡೀ ಭಾರತದ ವ್ಯವಸ್ಥೆಯನ್ನು ಹಾಳು ಮಾಡಿದೆ. ಪ್ರತಿಪಕ್ಷ ನಾಯಕರ ಜೊತೆ ಫೋನ್​ನಲ್ಲಿ ಮಾತನಾಡಲು ಸಾಧ್ಯವಾಗದಂತೆ ಮಾಡಿದೆ. ಕೇಂದ್ರ ಸರ್ಕಾರ ಪೆಗಾಸಸ್​​ ಬಳಸಿಕೊಂಡು ರಾಹುಲ್​​ ಗಾಂಧಿ, ಪ್ರಶಾಂತ್​ ಕಿಶೋರ್​ ಸೇರಿದಂತೆ ಹಲವು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ವಿಜ್ಞಾನಿಗಳ ಫೋನ್​ ಕದ್ದಾಲಿಕೆ ಮಾಡಿದೆ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆ ವೇಳೆ ಟಿಎಂಸಿ ಸ್ಲೋಗನ್​ ಆಗಿದ್ದ ಕೇಲ್​ ಹೂಬೆ ದೇಶಾದ್ಯಂತ ಮುಂದುವರಿಯಬೇಕು. ದೇಶದಿಂದ ಬಿಜೆಪಿಯನ್ನು ಸಂಪೂರ್ಣವಾಗಿ ಕಿತ್ತೊಗೆದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕಿತೊಗೆದ ದಿನ ಅಂದರೆ ಆ.16ರಂದು ಕೇಲ್​​ ದಿವಸ್​​ ಆಗಿ ಆಚರಿಸೋಣ ಎಂದು ಕರೆ ನೀಡಿದರು. ಕೈಯಲ್ಲಿದ್ದ ಮೊಬೈಲ್​​​ ಫೋನ್​ನ ತೋರಿಸಿದ ದೀದಿ, ನನ್ನ ಮೊಬೈಲ್​ಗೆ ಪ್ಲಾಸ್ಟರ್​ ಹಾಕಿದ್ದೇನೆ. ಕೇಂದ್ರ ಸರ್ಕಾರಕ್ಕೂ ಪ್ಲಾಸ್ಟರ್​ ಹಾಕಬೇಕು. ಇಲ್ಲವಾದರೆ ಭಾರತವನ್ನು ಗೂಢಾಚರ್ಯೆ ಮೂಲಕ ಹಾಳು ಮಾಡುತ್ತೆ ಎಂದು ಕಿಡಿಕಾರಿದರು.

ನಮ್ಮ ಫೋನ್​ಗಳನ್ನು ಟ್ರ್ಯಾಪ್​​ ಮಾಡಲಾಗುತ್ತಿದೆ. ನನಗೆ ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಗೂಢಾಚರ್ಯೆ ಮೇಲೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. ಬಿಜೆಪಿ ತನ್ನ ಮಂತ್ರಿಗಳನ್ನೇ ನಂಬುವುದಿಲ್ಲ, ತನಿಖಾ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಳ್ಳುತ್ತಿದೆ. ಇನ್ನು ಪೆಗಾಸಸ್​​ನ ಇಸ್ರೇಲಿ ಎನ್​​ಎಸ್​​ಓ ಗ್ರೂಪ್​​ ಸೃಷ್ಟಿಸಿದೆ. ಅದನ್ನು ಭಾರತದ 100ಕ್ಕೂ ಹೆಚ್ಚು ನಾಯಕರ ಮೇಲೆ ಗೂಢಾಚರ್ಯೆ ಮಾಡಲು ಬಳಸಲಾಗಿದೆ ಎಂದು ಮಮತಾ ಕೇಂದ್ರದ ವಿರುದ್ಧ ಕಿಡಿಕಾರಿದರು.

ಪೆಗಾಸಸ್​​ ಸ್ಪೈಯಿಂಗ್​ ವಿರುದ್ಧ ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್​ ನಾಯಕರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ, ಗೂಢಾಚರ್ಯೆ ಮೂಲಕವೇ ಹಿಂದಿನ ಕಾಂಗ್ರೆಸ್​-ಜೆಡಿಎಸ್​ ಸರ್ಕಾರವನ್ನು ಉರುಳಿಸಿದ್ದಾರೆ ಎಂದು ಆರೋಪಿದರು. ಬಿಜೆಪಿ ಸಾಕಷ್ಟು ರಾಜ್ಯಗಳಲ್ಲಿ ಆಪರೇಷನ್​ ಕಮಲ ನಡೆಸಿ ಅಧಿಕಾರಕ್ಕೆ ಬಂದಿದ್ದರ ಹಿಂದೆ ಪೆಗಾಸಸ್​​​ ಜಾಲವಿದೆ ಎಂದು ಕಾಂಗ್ರೆಸ್​ ನಾಯಕರು ದೂರಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: