ಕೇಂದ್ರ ಬಿಜೆಪಿ ಸರ್ಕಾರ ಎದುರಾಳಿಗಳನ್ನು ದೂಷಿಸುವುದಕ್ಕೆ ಅಂಟಿಕೊಂಡಿದೆ; ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕೆ

ಮಹಾರಾಷ್ಟ್ರ ಚುನಾವಣೆಲ್ಲಿ ಆರ್ಟಿಕಲ್ 370 ವಿಷಯವನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಮತ್ತೆ ಹರಿಹಾಯ್ದ ಮನಮೋಹನ್ ಸಿಂಗ್ ಅವರು, ಬಿಜೆಪಿ ಅಥವಾ ಆರ್​ಸಿಸಿನಿಂದ ಕಾಂಗ್ರೆಸ್​ಗೆ ದೇಶಭಕ್ತಿಯ ಪ್ರಮಾಣಪತ್ರದ ಅವಶ್ಯಕತೆ ಇಲ್ಲ ಎಂದು ಹೇಳಿದರು.

HR Ramesh | news18-kannada
Updated:October 17, 2019, 3:51 PM IST
ಕೇಂದ್ರ ಬಿಜೆಪಿ ಸರ್ಕಾರ ಎದುರಾಳಿಗಳನ್ನು ದೂಷಿಸುವುದಕ್ಕೆ ಅಂಟಿಕೊಂಡಿದೆ; ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕೆ
ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​
  • Share this:
ನವದೆಹಲಿ: ಮಾಜಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿಯಲ್ಲೂ ಬ್ಯಾಂಕುಗಳು ಬಿಕ್ಕಟ್ಟಿಗೆ ಸಿಲುಕಿದ್ದವು ಎಂದು ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ ಹೇಳಿಕೆಗೆ ತಿರುಗೇಟು ನೀಡಿರುವ ಡಾ.ಮನಮೋಹನ್ ಸಿಂಗ್ ಅವರು, ಕೇಂದ್ರ ಸರ್ಕಾರ ಎದುರಾಳಿಯನ್ನು ದೂಷಿಸುವುದಕ್ಕೆ ಅಂಟಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಕೇಂದ್ರ ಸರ್ಕಾರ ಜನಪರ ನೀತಿಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಮನಮೋಹನ್ ಸಿಂಗ್ ಈ ವೇಳೆ ಆರೋಪಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳನ್ನಷ್ಟೇ ನಾನು ನೋಡಿದ್ದೇನೆ. ಅವರ ಹೇಳಿಕೆಗಳಿಗೆ ನಾನು ಟೀಕೆ ಮಾಡಲು ಇಷ್ಟಪಡುವುದಿಲ್ಲ. ಆದರೆ, ಕೇಂದ್ರ ಸರ್ಕಾರ ಆರ್ಥಿಕ ಕುಸಿತದ ಸಮಸ್ಯೆಗೆ ಪರಿಹಾರ ಹುಡುಕುವುದರ ಬದಲು ಎದುರಾಳಿಗಳನ್ನು ದೂಷಿಸುವುಕ್ಕೆ ಜೋತು ಬಿದ್ದಿದೆ ಎಂದು ಮುಂಬೈನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಪಿಎಂಸಿ ಬ್ಯಾಂಕ್​ ಬಿಕ್ಕಟ್ಟಿನ ಬಗ್ಗೆಯೂ ಮಾತನಾಡಿದ ಮನಮೋಹನ್ ಸಿಂಗ್ ಅವರು, ಆರ್​ಬಿಐ ಮತ್ತು ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಪಿಎಂಸಿ ಬ್ಯಾಂಕ್​ ಬಿಕ್ಕಟ್ಟಿಗೆ ಸೂಕ್ತ ಪರಿಹಾರವನ್ನು ನೀಡಬೇಕು. 16 ಲಕ್ಷ ಜನ ಹೂಡಿಕೆದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದರು.

ಬಿಜೆಪಿ ಆರ್ಥಿಕತೆ ಅಸಮರ್ಪಕ ನಿರ್ವಹಣೆಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರದ ಅತಿದೊಡ್ಡ ಕಾರ್ಖಾನೆ ಮುಚ್ಚಿಹೋಗಿದೆ. ಪದವೀಧರರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೂಡಿಕೆದಾರರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಹಿಂದೆ ಮಹಾರಾಷ್ಟ್ರ ಹೂಡಿಕೆದಾರರನ್ನು ಆಕರ್ಷಿಸುವ ನಂಬರ್​ ಒನ್ ರಾಜ್ಯವಾಗಿತ್ತು. ಆದರೆ, ಇದೀಗ ರೈತರ ಆತ್ಮಹತ್ಯೆಯಲ್ಲಿ ನಂಬರ್ 1 ರಾಜ್ಯವಾಗಿದೆ ಎಂದು ಬಿಜೆಪಿ ಸರ್ಕಾರದ ಕಾರ್ಯವೈಖರಿವನ್ನು ಟೀಕಿಸಿದರು.

ಮಹಾರಾಷ್ಟ್ರ ಚುನಾವಣೆಲ್ಲಿ ಆರ್ಟಿಕಲ್ 370 ವಿಷಯವನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಮತ್ತೆ ಹರಿಹಾಯ್ದ ಮನಮೋಹನ್ ಸಿಂಗ್ ಅವರು, ಬಿಜೆಪಿ ಅಥವಾ ಆರ್​ಸಿಸಿನಿಂದ ಕಾಂಗ್ರೆಸ್​ಗೆ ದೇಶಭಕ್ತಿಯ ಪ್ರಮಾಣಪತ್ರದ ಅವಶ್ಯಕತೆ ಇಲ್ಲ ಎಂದು ಹೇಳಿದರು.

370ನೇ ವಿಧಿಯನ್ನು ರದ್ದುಗೊಳಿಸಿದ್ದರ ಪರವಾಗಿ ಕಾಂಗ್ರೆಸ್​ ಇದೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆರ್ಟಿಕಲ್ 370 ತಾತ್ಕಾಲಿಕ ಮಾಪನ ಅಷ್ಟೇ. ಅದನ್ನು ಬದಲಾವಣೆ ಮಾಡಬೇಕಿದ್ದರೆ ಜಮ್ಮು-ಕಾಶ್ಮೀರ ಜನರ ಅಭಿಪ್ರಾಯ ಪಡೆದು ಉತ್ತಮ ರೀತಿಯಲ್ಲಿ ಅನುಷ್ಠಾನಕ್ಕೆ ತರಬಹುದಿತ್ತು. ಆದರೆ, ಬಿಜೆಪಿಯವರು ಹಾಗೆ ಮಾಡಲಿಲ್ಲ. ಇವರು ಅನುಷ್ಠಾನಕ್ಕೆ ತಂದ ರೀತಿಗೆ ಬಗ್ಗೆ ನಮಗೆ ವಿರೋಧವಿದೆ ಎಂದು ಹೇಳಿದರು.
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading