HOME » NEWS » National-international » GOVT NOTIFIES INCOME TAX RETURNS FORMS FOR 2020 21 HERE IS ALL YOU NEED TO KNOW STG LG

IT Returns: 2020-21ರ ಐಟಿ ರಿಟರ್ನ್ಸ್‌ ಅರ್ಜಿ ನಮೂನೆಗಳನ್ನು ಪ್ರಕಟಿಸಿದ ಕೇಂದ್ರ: ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಇಲ್ಲಿದೆ..!

ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ವ್ಯವಹಾರ ಅಥವಾ ವೃತ್ತಿಯಿಂದ ಆದಾಯವನ್ನು ಹೊಂದಿರುವವರು ಮತ್ತು ಸಹಜ್ ಅರ್ಜಿ ಮೂಲಕ ಐಟಿ ರಿಟರ್ನ್ಸ್‌ ಸಲ್ಲಿಸಲು ಅರ್ಹರಲ್ಲದವರು, ಐಟಿಆರ್ -2 ಅನ್ನು ಸಲ್ಲಿಸಬಹುದು. ಆದರೆ ವ್ಯವಹಾರ ಅಥವಾ ವೃತ್ತಿಯಿಂದ ಆದಾಯ ಹೊಂದಿರುವವರು ಐಟಿಆರ್ ಫಾರ್ಮ್ 3 ಅನ್ನು ಸಲ್ಲಿಸಬಹುದು.

news18-kannada
Updated:April 2, 2021, 4:37 PM IST
IT Returns: 2020-21ರ ಐಟಿ ರಿಟರ್ನ್ಸ್‌ ಅರ್ಜಿ ನಮೂನೆಗಳನ್ನು ಪ್ರಕಟಿಸಿದ ಕೇಂದ್ರ: ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಇಲ್ಲಿದೆ..!
ಪ್ರಾತಿನಿಧಿಕ ಚಿತ್ರ
  • Share this:
2020-21ರ ಹಣಕಾಸು ವರ್ಷದ ಐ-ಟಿ ರಿಟರ್ನ್ಸ್ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ನಮೂನೆಗಳನ್ನು ಪ್ರಕಟಿಸಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ಗುರುವಾರ ತಿಳಿಸಿದೆ. ''ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗುತ್ತಿರುವ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಮತ್ತು ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ, ಕಳೆದ ವರ್ಷದ ಐಟಿಆರ್ ಫಾರ್ಮ್‌ಗಳಿಗೆ ಹೋಲಿಸಿದರೆ ಈ ಬಾರಿಯ ಆದಾಯ ತೆರಿಗೆ ರಿಟರ್ನ್ಸ್‌ ಅರ್ಜಿಗಳಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಮಾಡಲಾಗಿಲ್ಲ.

"ಆದಾಯ ತೆರಿಗೆ ಕಾಯ್ದೆ, 1961 ರಲ್ಲಿನ ತಿದ್ದುಪಡಿಗಳ ಕಾರಣದಿಂದಾಗಿ ಅಗತ್ಯವಾದ ಕನಿಷ್ಠ ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ" ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ. ಐಟಿಆರ್ ಫಾರ್ಮ್ 1 (ಸಹಜ್) ಮತ್ತು ಐಟಿಆರ್ ಫಾರ್ಮ್ 4 (ಸುಗಮ್) ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರನ್ನು ಪೂರೈಸುವ ಸರಳ ಅರ್ಜಿಗಳಾಗಿವೆ. 50 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ಮತ್ತು ಸಂಬಳ, ಒಂದು ಮನೆ ಆಸ್ತಿ / ಇತರ ಮೂಲಗಳಿಂದ (ಬಡ್ಡಿ ಇತ್ಯಾದಿ) ಆದಾಯವನ್ನು ಪಡೆಯುವ ವ್ಯಕ್ತಿ ಸಹಜ್ ಅರ್ಜಿಯಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಸಬಹುದು.

ಇದೇ ರೀತಿ, ಸುಗಮ್ ಅನ್ನು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು (ಎಚ್‌ಯುಎಫ್‌ಗಳು) ಮತ್ತು ಸಂಸ್ಥೆಗಳು (ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ಎಲ್‌ಎಲ್‌ಪಿಗಳನ್ನು ಹೊರತುಪಡಿಸಿ) ಒಟ್ಟು ಆದಾಯ 50 ಲಕ್ಷದವರೆಗೆ ಹೊಂದಿರುವವರು ಮತ್ತು ವ್ಯಾಪಾರ, ವೃತ್ತಿಯಿಂದ ಬರುವ ಆದಾಯವನ್ನು ಊಹೆಯ ತೆರಿಗೆ ನಿಬಂಧನೆಗಳ ಅಡಿಯಲ್ಲಿ ಲೆಕ್ಕಹಾಕಬಹುದು.

ಸಾಲ ತೀರಿಸಲು ಪೋಕೆಮಾನ್​ ಕಾರ್ಡ್​ ಕದ್ದು ಹಗ್ಗದ ಸಹಾಯದಿಂದ 6 ಮಹಡಿ ಇಳಿದ ಭೂಪ...!

ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ವ್ಯವಹಾರ ಅಥವಾ ವೃತ್ತಿಯಿಂದ ಆದಾಯವನ್ನು ಹೊಂದಿರುವವರು ಮತ್ತು ಸಹಜ್ ಅರ್ಜಿ ಮೂಲಕ ಐಟಿ ರಿಟರ್ನ್ಸ್‌ ಸಲ್ಲಿಸಲು ಅರ್ಹರಲ್ಲದವರು, ಐಟಿಆರ್ -2 ಅನ್ನು ಸಲ್ಲಿಸಬಹುದು. ಆದರೆ ವ್ಯವಹಾರ ಅಥವಾ ವೃತ್ತಿಯಿಂದ ಆದಾಯ ಹೊಂದಿರುವವರು ಐಟಿಆರ್ ಫಾರ್ಮ್ 3 ಅನ್ನು ಸಲ್ಲಿಸಬಹುದು.

ನಾಗರಿಕರು, ಹಿಂದೂ ಅವಿಭಜಿತ ಕುಟುಂಬಗಳು ಮತ್ತು ಕಂಪನಿಗಳನ್ನು ಹೊರತುಪಡಿಸಿದ ವ್ಯಕ್ತಿಗಳು ಅಂದರೆ ಪಾಲುದಾರಿಕೆ ಸಂಸ್ಥೆ, ಎಲ್‌ಎಲ್‌ಪಿ ಇತ್ಯಾದಿಗಳು ಐಟಿಆರ್ ಫಾರ್ಮ್ 5 ಅನ್ನು ಸಲ್ಲಿಸಬಹುದು. ಕಂಪನಿಗಳು ಐಟಿಆರ್ ಫಾರ್ಮ್ 6 ಅನ್ನು ಸಲ್ಲಿಸಬಹುದು. ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ದತ್ತಿ ಸಂಸ್ಥೆಗಳು ಇತ್ಯಾದಿ ಕಾಯಿದೆಯಡಿ ವಿನಾಯಿತಿ ಪಡೆದ ಆದಾಯವನ್ನು ಐಟಿಆರ್ -7 ಸಲ್ಲಿಸಬಹುದು. "ಕಳೆದ ವರ್ಷಕ್ಕೆ ಹೋಲಿಸಿದರೆ ಐಟಿಆರ್ ಫಾರ್ಮ್‌ಗಳನ್ನು ಸಲ್ಲಿಸುವ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ" ಎಂದು ಸಿಬಿಡಿಟಿ ಹೇಳಿದೆ.

2020-21ರ ಹಣಕಾಸು ವರ್ಷದಲ್ಲಿ, ಐ-ಟಿ ಕಾಯ್ದೆಯ ಸೆಕ್ಷನ್ 115 ಬಿಎಸಿ ಅಡಿಯಲ್ಲಿ ಹೊಸ ತೆರಿಗೆ ಆಡಳಿತವನ್ನು ಆಯ್ಕೆ ಮಾಡಲು ಸರ್ಕಾರವು ತೆರಿಗೆದಾರರಿಗೆ ಅವಕಾಶ ನೀಡಿತ್ತು. ಹೊಸ ಐ-ಟಿ ಸ್ಲ್ಯಾಬ್‌ಗಳು ತೆರಿಗೆ ಉದ್ದೇಶಕ್ಕಾಗಿ ಒಟ್ಟು ಆದಾಯವನ್ನು ಲೆಕ್ಕಾಚಾರ ಮಾಡುವಾಗ ಕೆಲವು ನಿರ್ದಿಷ್ಟ ಕಡಿತಗಳು ಅಥವಾ ವಿನಾಯಿತಿಗಳನ್ನು ಪಡೆಯದ ಅಥವಾ ನಿರೀಕ್ಷಿಸದ ವ್ಯಕ್ತಿಗಳಿಗೆ ಉಪಯೋಗವಾಗುತ್ತದೆ. ಇದರ ಅಡಿಯಲ್ಲಿ 2.5 ಲಕ್ಷ ರೂ.ಗಳವರೆಗಿನ ವಾರ್ಷಿಕ ಆದಾಯವನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. 2.5 ಲಕ್ಷದಿಂದ 5 ಲಕ್ಷ ರೂ.ಗಳವರೆಗೆ ಗಳಿಸುವ ವ್ಯಕ್ತಿಗಳು ಶೇಕಡಾ 5 ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. 5 ರಿಂದ 7.5 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಶೇಕಡಾ 10 ರಷ್ಟು ತೆರಿಗೆ ವಿಧಿಸಿದರೆ, 7.5 ರಿಂದ 10 ಲಕ್ಷ ರೂ. ಗಳವರೆಗಿನ ಆದಾಯಕ್ಕೆ ಶೇಕಡಾ 15 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಇನ್ನು, 10 ರಿಂದ 12.5 ಲಕ್ಷ ರೂ.ಗಳವರೆಗೆ ಆದಾಯ ಗಳಿಸುವವರು ಶೇಕಡಾ 20 ರ ದರದಲ್ಲಿ ತೆರಿಗೆ ಪಾವತಿಸಿದರೆ, 12.5 ರಿಂದ 15 ಲಕ್ಷ ರೂ. ಗಳವರೆಗಿನವರು ಶೇಕಡಾ 25 ದರದಲ್ಲಿ ಪಾವತಿಸುತ್ತಾರೆ. 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯಕ್ಕೆ ಶೇಕಡಾ 30 ರಷ್ಟು ತೆರಿಗೆ ವಿಧಿಸಲಾಗುತ್ತದೆ.
Published by: Latha CG
First published: April 2, 2021, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories