• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಅಂತೂ ಕೇಂದ್ರ ಸರ್ಕಾರಿ ನೌಕರರ ಕೈ ಸೇರಲಿರುವ ತುಟ್ಟಿ ಭತ್ಯೆ: ಉದ್ಯೋಗಿಗಳಿಗೆ ಬಂಪರ್ ಕೊಡುಗೆ !

ಅಂತೂ ಕೇಂದ್ರ ಸರ್ಕಾರಿ ನೌಕರರ ಕೈ ಸೇರಲಿರುವ ತುಟ್ಟಿ ಭತ್ಯೆ: ಉದ್ಯೋಗಿಗಳಿಗೆ ಬಂಪರ್ ಕೊಡುಗೆ !

ಕೇಂದ್ರದ ಮುಖ್ಯ ಕಾರ್ಮಿಕ ಆಯುಕ್ತರಾದ ಡಿ.ಪಿ.ಎಸ್​​ ನೇಗಿ

ಕೇಂದ್ರದ ಮುಖ್ಯ ಕಾರ್ಮಿಕ ಆಯುಕ್ತರಾದ ಡಿ.ಪಿ.ಎಸ್​​ ನೇಗಿ

ಕೇಂದ್ರದ ಮುಖ್ಯ ಕಾರ್ಮಿಕ ಆಯುಕ್ತರಾದ ಡಿ.ಪಿ.ಎಸ್​​ ನೇಗಿ ಅವರು ಮಾತನಾಡಿ, ಈ ಹೆಚ್ಚಳವು ತಿಂಗಳಿಗೆ 105 ರೂ ನಿಂದ 210 ರೂ. ವರೆಗೆ ಇದೆ ಎಂದಿದ್ದಾರೆ.

  • Share this:

    ಮೇ ತಿಂಗಳ ಮೊದಲ ವಾರದಲ್ಲಿ ಇಲ್ಲವೇ ಜೂನ್​​ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹೆಚ್ಚಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಮೇ ತಿಂಗಳ ಅಂತ್ಯದ ಸಮೀಪದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ಕಾರ್ಮಿಕ ಉದ್ಯೋಗ ಸಚಿವಾಲಯ ಶುಕ್ರವಾರ 1.5 ಕೋಟಿ ಕಾರ್ಮಿಕರಿಗೆ 105 ರೂ ರಿಂದ 210 ರೂವರೆಗೆ ಡಿಎ ಹೆಚ್ಚಿಸುವುದಾಗಿ ಪ್ರಕಟಿಸಿದೆ.


    ಈ ಹೆಚ್ಚಳವು ಏಪ್ರಿಲ್ 1, 2021 ರಿಂದಲೇ ಜಾರಿಗೆ ಬರಲಿದೆ. ಈ ಬೆಳವಣಿಗೆಯು ಕೇಂದ್ರ ವಲಯದ ನೌಕರರು ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ದರ ಹೆಚ್ಚಳದ ಮೇಲೆಯೂ ಪ್ರಭಾವ ಬೀರಲಿದೆ. ಕೇಂದ್ರ ಸರ್ಕಾರದ ರೈಲ್ವೆ ಆಡಳಿತ, ಗಣಿಗಳು, ತೈಲ ಕ್ಷೇತ್ರ, ಪ್ರಮುಖ ಬಂದರು ಕೇಂದ್ರ ಸರ್ಕಾರ ಸ್ಥಾಪಿಸಿದ ಯಾವುದೇ ನಿಗಮದ ಅಧಿಕಾರದಲ್ಲಿರುವ ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ.


    ಕೇಂದ್ರದ ಮುಖ್ಯ ಕಾರ್ಮಿಕ ಆಯುಕ್ತರಾದ ಡಿ.ಪಿ.ಎಸ್​​ ನೇಗಿ ಅವರು ಮಾತನಾಡಿ, ಈ ಹೆಚ್ಚಳವು ತಿಂಗಳಿಗೆ 105 ರೂ ನಿಂದ 210 ರೂ. ವರೆಗೆ ಇದೆ ಎಂದಿದ್ದಾರೆ.


    ಕೈಗಾರಿಕಾ ಕಾರ್ಮಿಕರಿಗೆ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಪರಿಷ್ಕರಿಸಲಾಗಿದೆ. ಈಗಾಗಲೇ ಕೇಂದ್ರದ ಉದ್ಯೋಗಿಗಳು ಶೇ 17 ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದಾರೆ. ಕೋವಿಡ್​ ಕಾರಣ ತುಟ್ಟಿ ಭತ್ಯೆ ಪಡೆದಿರದ ಜನವರಿ 1, 2020, ಜನವರಿ 1, 2021 ಮತ್ತು ಜುಲೈ 1, 2020 ರ ಅನ್ವಯ ಪರಿಷ್ಕೃತ ತುಟ್ಟಿಭತ್ಯೆ ಜುಲೈ 1, 2021 ಕ್ಕೆ ಉದ್ಯೋಗಿಗಳ ಕೈ ಸೇರಲಿದೆ.


    ಬಹುತೇಕ ಕಾರ್ಮಿಕರು ಈ ಬೆಳವಣಿಗೆಯಿಂದ ನಿರಾಳತೆಯನ್ನು ಅನುಭವಿಸಿದ್ದಾರೆ. ಏಕೆಂದರೆ ಕೋವಿಡ್ 19 ಸಂದರ್ಭದಲ್ಲಿ ಹೆಚ್ಚು ಕೆಲಸಗಳಲ್ಲಿ ತೊಡಗಿಕೊಂಡು ಅವಿರತವಾಗಿ ಶ್ರಮಿಸಿದ ಕಾರ್ಮಿಕ ವರ್ಗಕ್ಕೆ ಇದು ಕೊಂಚ ನೆಮ್ಮದಿಯನ್ನು ತಂದಿದೆ. ತುಟ್ಟಿ ಭತ್ಯೆಯೂ ಪ್ರಸ್ತುತ ಶೇಕಡಾ 17 ರ ದರದಿಂದ 11 ಪ್ರತಿಶತದಷ್ಟು ಹೆಚ್ಚಾಗಿದ್ದು, ಒಟ್ಟು 28 ಪ್ರತಿಶತದಷ್ಟು ಹೆಚ್ಚಳವಾಗಿದೆ.


    Koppal: ಹಳ್ಳಿಗಳಿಗೆ ವ್ಯಾಪಿಸಿದ ಕೊರೋನಾ; ಊರು ತೊರೆದು ಹೊಲಗಳಲ್ಲಿ ವಾಸಿಸಲು ಮುಂದಾದ ಜನರು

    ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದು, '01.07.2021 ರಿಂದ ಬಾಕಿ ಇರುವ ತುಟ್ಟಿ ಭತ್ಯೆಯ ಮುಂದಿನ ಕಂತುಗಳನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದಿದ್ದಾರೆ.


    ಡಿಎ ಹೆಚ್ಚಳವು 2020 ರ ಜನವರಿಯಿಂದ ಜೂನ್ವರೆಗೆ 3 ಪ್ರತಿಶತ, ಜುಲೈನಿಂದ ಡಿಸೆಂಬರ್ 2020 ರವರೆಗೆ 4 ಪ್ರತಿಶತ ಹೆಚ್ಚಳ ಮತ್ತು 2021 ರ ಜನವರಿಯಿಂದ ಜೂನ್ ವರೆಗೆ 4 ಪ್ರತಿಶತದಷ್ಟು ಹೆಚ್ಚಳವನ್ನು ಒಳಗೊಂಡಿರುತ್ತದೆ.


    ಕೇಂದ್ರ ಸರ್ಕಾರದ ಈ ನಿರ್ಧಾರ 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಡಲಿದೆ. 37,000 ರೂ. ಉಳಿತಾಯದ ಪರಿಣಾಮ ಕೇಂದ್ರ ಸರ್ಕಾರಿ ನೌಕರರ ವೇತನ ದುಪ್ಪಟ್ಟಾಗಲಿದೆ. ಸದ್ಯ ಕೇಂದ್ರ ಸರ್ಕಾರದ ಉದ್ಯೋಗಿಳು ಮತ್ತು ಪಿಂಚಣಿದಾರರು ಹೆಚ್ಚಿದ ವೇತನವನ್ನು ಪಡೆಯಲು ಬಹಳ ದಿನ ಕಾಯುವ ಅಗತ್ಯವಿಲ್ಲ.




    ಇತ್ತೀಚೆಗೆ, ಕೇಂದ್ರ ಸರ್ಕಾರವು ಸರ್ಕಾರಿ ಪಿಂಚಣಿದಾರರಿಗೆ ಕುಟುಂಬ ಪಿಂಚಣಿಯ ಗರಿಷ್ಠ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಹೆಚ್ಚಳವು ಸುಮಾರು ಎರಡೂವರೆ ಪಟ್ಟು ಹೆಚ್ಚಾಗುತ್ತದೆ. ಈವರೆಗೆ ಕುಟುಂಬ ಪಿಂಚಣಿಯ ಗರಿಷ್ಠ ಮಿತಿ ತಿಂಗಳಿಗೆ 45,000 ರೂ. ಆಗಿದ್ದು, ಇದೀಗ ಅದನ್ನು ತಿಂಗಳಿಗೆ 1.25 ಲಕ್ಷ ರೂ.ಗೆ ಏರಿಸಲಾಗಿದೆ.

    Published by:Latha CG
    First published: