ನವದೆಹಲಿ(ಜ.25): ಕೆಂಪು ಕೋಟೆಯಂತೆ (Red Fort) ದೇಶದ 1000 ಪಾರಂಪರಿಕ ಕಟ್ಟಡಗಳನ್ನು (Heritage Sites) ಖಾಸಗಿಯವರ ಕೈಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಮೊದಲನೆಯದಾಗಿ, ಆಗಸ್ಟ್ 15 ರೊಳಗೆ ಎಎಸ್ಐನ 500 ಕಟ್ಟಡಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಯೋಜನೆ ಇದೆ. ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ, ಖಾಸಗಿ ಕುಟುಂಬಗಳು ಈ ಪಾರಂಪರಿಕ ತಾಣಗಳ ನಿರ್ವಹಣೆ (Maintenance) , ಶುಚಿಗೊಳಿಸುವಿಕೆ, ಪ್ರೊಜೆಕ್ಷನ್ ಮ್ಯಾಪಿಂಗ್ ಕೆಲಸವನ್ನು ನೋಡಿಕೊಳ್ಳುತ್ತವೆ. ಈ ಪಾರಂಪರಿಕ ಕಟ್ಟಡಗಳ ಜವಾಬ್ದಾರಿ ವಹಿಸಿಕೊಳ್ಳುವ ಖಾಸಗಿ ಸಂಸ್ಥೆಗಳು ತಮ್ಮ CSR ನಿಧಿಯ ಅಡಿಯಲ್ಲಿ ಒಂದು ಬಾರಿ ಹೂಡಿಕೆ ಮಾಡುತ್ತವೆ.
ಕೆಲವು ವರ್ಷಗಳ ಹಿಂದೆ, ಕೇಂದ್ರ ಸರ್ಕಾರವು ಎಎಸ್ಐನ ಪರಂಪರೆಯನ್ನು ಸ್ಮಾರಕ ಮಿತ್ರದ ಅಡಿಯಲ್ಲಿ ಖಾಸಗಿ ಕೈಗೆ ಹಸ್ತಾಂತರಿಸಲು ನಿರ್ಧರಿಸಿತ್ತು, ಅದರ ಅಡಿಯಲ್ಲಿ ದೆಹಲಿಯ ಕೆಂಪು ಕೋಟೆಯನ್ನು ದಾಲ್ಮಿಯಾ ಗ್ರೂಪ್ಗೆ ನೀಡಲಾಯಿತು. ಇಲ್ಲಿನ ಉತ್ತಮ ನಿರ್ವಹಣೆಯಿಂದ ಪ್ರಭಾವಿತಗೊಂಡ ಕೇಂದ್ರ ಸರ್ಕಾರವು ದೇಶದ 1000 ASI ರಕ್ಷಿತ ಕಟ್ಟಡಗಳನ್ನು ಖಾಸಗಿ ಕೈಗಳಿಗೆ ಹಸ್ತಾಂತರಿಸಲು ಆಯ್ಕೆ ಮಾಡಿದೆ. ಇಲ್ಲಿಯವರೆಗೆ ಮಿತ್ರ ಸ್ಮಾರಕದ ಜವಾಬ್ದಾರಿಯನ್ನು ಪ್ರವಾಸೋದ್ಯಮ ಸಚಿವಾಲಯದಲ್ಲಿತ್ತು, ಆದರೆ ಇತ್ತೀಚೆಗೆ ಅದನ್ನು ಸಂಸ್ಕೃತಿ ಸಚಿವಾಲಯಕ್ಕೆ ವಹಿಸಲಾಗಿದೆ.
ಇದನ್ನೂ ಓದಿ: Building Demolition: 9 ಸೆಕೆಂಡ್ಗಳಲ್ಲಿ ಕೊನೆಯಾಗಲಿದೆ 9 ವರ್ಷಗಳ ಹೋರಾಟ, ಇದು ಅವಳಿ ಕಟ್ಟಡದ ಕತೆ!
ಎಎಸ್ಐನ ಪರಂಪರೆಯನ್ನು ಸರಿಯಾಗಿ ನಿರ್ವಹಿಸುವುದು. ಅವರ ಬ್ರ್ಯಾಂಡಿಂಗ್ ಸರಿಯಾಗಿ ನಡೆಯಬೇಕು ಮತ್ತು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳು ಸಿಗಬೇಕು ಎಂಬುವುದು ಕೇಂದ್ರ ಸರ್ಕಾರದ ಸ್ಮಾರಕ ಮಿತ್ರ ಯೋಜನೆಯ ಹಿಂದಿನ ಗುರಿಯಾಗಿದೆ.
ಇದರೊಂದಿಗೆ, ಸಂಸ್ಕೃತಿ ಸಚಿವಾಲಯವು ಶಿಥಿಲಾವಸ್ಥೆಯಲ್ಲಿರುವ ಅಥವಾ ಕೆಲವು ಅವಶೇಷಗಳನ್ನು ಹೊಂದಿರುವ ಸ್ಮಾರಕಗಳಲ್ಲಿ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲು ಯೋಜಿಸಿದೆ, ಇದರಿಂದ ಪ್ರವಾಸಿಗರು ಆ ಸ್ಥಳಗಳ ಇತಿಹಾಸವನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳಬಹುದು.
ಇದನ್ನೂ ಓದಿ: US Consulate: ಹೈದರಾಬಾದ್ನಲ್ಲಿ ತಲೆ ಎತ್ತಲಿದೆ ಏಷ್ಯಾದ ಅತಿದೊಡ್ಡ ಯುಎಸ್ ರಾಯಭಾರ ಕಚೇರಿ, ಇದರ ವಿಶೇಷತೆಗಳೇನು?
ಇಷ್ಟೇ ಅಲ್ಲ, G20 ಅಡಿಯಲ್ಲಿ ಭಾರತದ 5,000 ವರ್ಷಗಳ ಹಿಂದಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ತೋರಿಸುವ ಯೋಜನೆಯನ್ನು ಸಂಸ್ಕೃತಿ ಸಚಿವಾಲಯ ಹೊಂದಿದೆ. ಇದೇ ಕಾರಣಕ್ಕೆ ವಿವಿಧ ಪಾರಂಪರಿಕ ತಾಣಗಳಲ್ಲಿ ಜಿ20ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ವರ್ಷ ಭಾರತವು G20 ಅನ್ನು ಆಯೋಜಿಸುತ್ತಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಭಾರತವು ತನ್ನ ಅತಿಥಿಗಳಿಗೆ ಭಾರತ ದರ್ಶನವನ್ನು ನೀಡುವಲ್ಲಿ ಸಂಪೂರ್ಣವಾಗಿ ಗಮನಹರಿಸುತ್ತಿದೆ ಎಂಬುವುದು ಉಲ್ಲೇಖನೀಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ