ಸಣ್ಣ ಉದ್ದಿಮೆದಾರರಿಗೆ ಸಿಹಿಸುದ್ದಿ, ಜಿಎಸ್​ಟಿ ತೆರಿಗೆ ವಿನಾಯಿತಿ ದುಪ್ಪಟ್ಟು; 2 ವರ್ಷಗಳವರೆಗೆ ಕೇರಳಕ್ಕೆ ಶೇ.1 ಸೆಸ್​

ಜಿಎಸ್​ಟಿ ವಿನಾಯಿತಿ ಮಿತಿಯನ್ನು ಈಶಾನ್ಯ ರಾಜ್ಯಗಳಲ್ಲಿ 20 ಲಕ್ಷದವರೆಗೆ ಹಾಗೂ ದೇಶದ ಉಳಿದ ಭಾಗಗಳಲ್ಲಿ 40 ಲಕ್ಷದವರೆಗೆ ದ್ವಿಗುಣಗೊಳಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದರು.

HR Ramesh | news18
Updated:January 10, 2019, 5:06 PM IST
ಸಣ್ಣ ಉದ್ದಿಮೆದಾರರಿಗೆ ಸಿಹಿಸುದ್ದಿ, ಜಿಎಸ್​ಟಿ ತೆರಿಗೆ ವಿನಾಯಿತಿ ದುಪ್ಪಟ್ಟು; 2 ವರ್ಷಗಳವರೆಗೆ ಕೇರಳಕ್ಕೆ ಶೇ.1 ಸೆಸ್​
ಅರುಣ್​ ಜೇಟ್ಲಿ
  • News18
  • Last Updated: January 10, 2019, 5:06 PM IST
  • Share this:
ನವದೆಹಲಿ: ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಗುರುವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದು ನಡೆದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ವಿನಾಯಿತಿ ತೆರಿಗೆ ಮಿತಿಯನ್ನು ದ್ವಿಗುಣಗೊಳಿಸಿ ಸಣ್ಣ ಉದ್ದಿಮೆದಾರರಿಗೆ ಸಿಹಿಸುದ್ದಿ ನೀಡಿದೆ.

ಜಿಎಸ್​ಟಿ ವಿನಾಯಿತಿ ಮಿತಿಯನ್ನು ಈಶಾನ್ಯ ರಾಜ್ಯಗಳಲ್ಲಿ 20 ಲಕ್ಷದವರೆಗೆ ಹಾಗೂ ದೇಶದ ಉಳಿದ ಭಾಗಗಳಲ್ಲಿ 40 ಲಕ್ಷದವರೆಗೆ ದ್ವಿಗುಣಗೊಳಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದರು.

ಸಣ್ಣ ವ್ಯಾಪಾರಿಗಳ ವ್ಯವಹಾರಗಳ ಮೌಲ್ಯದ ಸೇರ್ಪಡೆಗೆ ಬದಲಾಗಿ, ವಹಿವಾಟಿನ ಆಧಾರದ ಮೇಲೆ ತೆರಿಗೆ ಪಾವತಿಸುವ ಅವಕಾಶ ಮಾಡಿಕೊಡಲಾಗಿದೆ. ಜಿಎಸ್​ಟಿ ಸಂಯೋಜನೆ ವ್ಯಾಪ್ತಿಯನ್ನು ಪ್ರಸ್ತುತ 1 ಕೋಟಿಯಿಂದ 1.5 ಕೋಟಿಗೆ ಏರಿಕೆ ಮಾಡಲಾಗಿದೆ. ಈ ತೀರ್ಮಾನದಿಂದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಜೇಟ್ಲಿ ತಿಳಿಸಿದರು.

ಇದನ್ನು ಓದಿ: ಕಡಿಮೆ ಬೆಲೆಗೆ ಸಿಗಲಿದೆ ಟಿವಿ, ವಿಡಿಯೋ ಗೇಮ್​, ಸಿನೆಮಾ ಟಿಕೆಟ್​; ಜಿಎಸ್​ಟಿ ಕಡಿತಗೊಳಿಸಿ ಕೇಂದ್ರ ಆದೇಶ
ಕೇರಳದಲ್ಲಿ ಕಳೆದ ವರ್ಷ ಉಂಟಾದ ಭೀಕರ ಪ್ರವಾಹದಿಂದಾಗಿ ಆ ರಾಜ್ಯದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಬಗ್ಗೆ ಜಿಎಸ್​ಟಿ ಮಂಡಳಿಯಲ್ಲಿ ಚರ್ಚೆ ನಡೆಸಲಾಗಿದ್ದು, ಅಂತರರಾಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಶೇ.1ರಷ್ಟು ಸೆಸ್​ ಅನ್ನು  ಎರಡು  ವರ್ಷದವರೆಗೆ ವಿಸ್ತರಿಸಲಾಗಿದೆ. ಇದರಿಂದ ಆ ರಾಜ್ಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕ ಹೊರೆ ತಗ್ಗಲಿದೆ ಎಂದು ಹೇಳಿದರು.


ಸರಕು ಮತ್ತು ಸೇವಾ ತೆರಿಗೆಗಳ ಅಡಿಯಲ್ಲಿ ರಿಯಲ್ ಎಸ್ಟೇಟ್ ಮತ್ತು ಲಾಟರಿ ಸೇರಿದಂತೆ ವಿವಿಧ ಸೇವೆಗಳ ಸೇರ್ಪಡೆ ಕುರಿತು ಒಮ್ಮತದ ಅಭಿಪ್ರಾಯ ಮೂಡಲು ಸಾಧ್ಯವಾಗದ ಕಾರಣ ಏಳು ಮಂದಿ ಸದಸ್ಯರ ವಿಶೇಷ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಅರುಣ್ ಜೇಟ್ಲಿ ತಿಳಿಸಿದರು.


First published:January 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading