ಗಾಂಧಿ ಕುಟುಂಬ ಸೇರಿ ಮಾಜಿ ಪ್ರಧಾನಿಗಳಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆ ವಾಪಸ್ ಪಡೆಯಲು ನಿರ್ಧಾರ?

ಸಿಪಿಆರ್​ಎಫ್​ನ ತರಬೇತಿ ಪಡೆದ ಕಮಾಂಡೊಗಳು ಭದ್ರತೆ ಜವಾಬ್ದಾರಿ ಹೊತ್ತಿದ್ದಾರೆ. ಇತ್ತೀಚಿನ ದಿನಗಲ್ಲಿ ಗಾಂಧಿ ಕುಟುಂಬಕ್ಕೆ ನೇರ ಬೆದರಿಕೆ ಇಲ್ಲದ ಕಾರಣಕ್ಕೆ ಅವರಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆಯನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

HR Ramesh | news18-kannada
Updated:November 8, 2019, 3:19 PM IST
ಗಾಂಧಿ ಕುಟುಂಬ ಸೇರಿ ಮಾಜಿ ಪ್ರಧಾನಿಗಳಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆ ವಾಪಸ್ ಪಡೆಯಲು ನಿರ್ಧಾರ?
ಸೋನಿಯಾ ಗಾಂಧಿ, ರಾಹುಲ್ ಗಾಂಧಿ.
  • Share this:
ನವದೆಹಲಿ: ಗಾಂಧಿ ಕುಟುಂಬ ಸೇರಿ  ಮಾಜಿ ಪ್ರಧಾನಿಗಳಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆಯನ್ನು ವಾಪಸ್​ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಎಸ್​ಪಿಜಿ ಭದ್ರತೆ ನೀಡದಿರಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದಾಗಿ ಸಿಎನ್​ಎನ್​ ನ್ಯೂಸ್ 18ಗೆ ಉನ್ನತ ಮೂಲಗಳು ಖಚಿತಪಡಿಸಿವೆ.

ಗಾಂಧಿ ಕುಟುಂಬದ ರಕ್ಷಣೆಗೆ ಯಾವುದೇ ಧಕ್ಕೆ ಇಲ್ಲ. ಅವರಿಗೆ ನೀಡಲಾಗಿರುವ ಝಡ್​ ಪ್ಲಸ್ ಭದ್ರತೆ ಮುಂದುವರೆಯಲಿದೆ. ಈಗ ಸಿಪಿಆರ್​ಎಫ್​ನ ತರಬೇತಿ ಪಡೆದ ಕಮಾಂಡೊಗಳು ಭದ್ರತೆ ಜವಾಬ್ದಾರಿ ಹೊತ್ತಿದ್ದಾರೆ. ಇತ್ತೀಚಿನ ದಿನಗಲ್ಲಿ ಗಾಂಧಿ ಕುಟುಂಬಕ್ಕೆ ನೇರ ಬೆದರಿಕೆ ಇಲ್ಲದ ಕಾರಣಕ್ಕೆ ಅವರಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆಯನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ಬಳಿಕ ಮಾಜಿ ಪ್ರಧಾನಿಗಳು ಸೇರಿದಂತೆ ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ಒದಗಿಸಲಾಗಿತ್ತು. ಎಲ್ಲಾ ಮಾಜಿ ಪ್ರಧಾನಿಗಳ ಭದ್ರತೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯವಿದ್ದಾಗ ಅದನ್ನು ಇಳಿಕೆ ಮಾಡಲಾಗುತ್ತದೆ. ಇತ್ತೀಚೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿತ್ತು.

  • ವಿಶೇಷ ವರದಿ; ಮನೋಜ್ ಗುಪ್ತಾ


 
First published: November 8, 2019, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading