Domestic Flights: ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್; ಶೇ.100ರಷ್ಟು ಅವಕಾಶ ನೀಡಿದ ಸರ್ಕಾರ

ಸಚಿವಾಲಯವು ತನ್ನ ಆದೇಶದಲ್ಲಿ "ಯಾವುದೇ ಸಾಮರ್ಥ್ಯದ ಮಿತಿ ಹಾಗೂ ನಿರ್ಬಂಧವಿಲ್ಲದೆ, ನಿಗದಿತ ದೇಶೀಯ ವಾಯು ಕಾರ್ಯಾಚರಣೆಯನ್ನು ಅಕ್ಟೋಬರ್ 18, 2021ರಿಂದ ಪುನಃ ಆರಂಭಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್-19(COVID-19) ಎಂಬ ಮಹಾಮಾರಿ ಜನರ ಜೀವನವನ್ನು ಹೈರಾಣಗೊಳಿಸಿತ್ತು. ದೇಶದ ಜನರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಸಾರಿಗೆ ಸಂಸ್ಥೆಗಳು ಬಸ್ ಸಂಚಾರಕ್ಕೆ ಕಡಿವಾಣ ಹಾಕಿತ್ತು. ವಿಮಾನಯಾನ ಸಂಸ್ಥೆಗಳು(Airlines) ವಿಮಾನಗಳ(Flights) ಹಾರಾಟವನ್ನು ಸ್ಥಗಿತಗೊಳಿಸಿದವು. ದೇಶದಿಂದ ದೇಶಕ್ಕೆ , ರಾಜ್ಯದಿಂದ ರಾಜ್ಯಕ್ಕೆ ಜನರು ಪ್ರಯಾಣ ಬೆಳೆಸುವುದರಿಂದ ಕೋವಿಡ್-19(Coronavirus) ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇತ್ತು. ಈ ಎಲ್ಲಾ ಅಂಶಗಳನ್ನು ಮನಗಂಡ ವಾಯುಯಾನ ಸಂಸ್ಥೆ ಎಲ್ಲಾ ವಿಮಾನಗಳ ಹಾರಾಟ ನಿಲ್ಲಿಸುವುದರ ಮೂಲಕ ಜನರ ಆರೋಗ್ಯದ ಕಡೆ ಕಾಳಜಿ ತೋರಿತ್ತು. ಇದೀಗ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೌದು, ದೇಶೀಯ ವಿಮಾನಯಾನ ಸಂಸ್ಥೆಗಳು(Domestic Airlines) ಅಕ್ಟೋಬರ್ 18 ರಿಂದ 100 ಪ್ರತಿಶತದಷ್ಟು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಮಂಗಳವಾರ ಸರ್ಕಾರದ ಪ್ರಕಟಣೆ ತಿಳಿಸಿದೆ.

ಮೇ 2020ರಿಂದ, ನಾಗರಿಕ ವಿಮಾನಯಾನ ಸಚಿವಾಲಯವು ದೇಶೀಯ ವಿಮಾನಯಾನ ಸಾಮರ್ಥ್ಯ ಮಿತಿಗೊಳಿಸಿತ್ತು. ಪ್ರಸ್ತುತ, ದೇಶೀಯ ಹಾರಾಟದ ಸಾಮರ್ಥ್ಯದ ಮೇಲಿನ ಮಿತಿಯನ್ನು 85 ಪ್ರತಿಶತಕ್ಕೆ ನಿಗದಿಪಡಿಸಿದೆ. ಅಕ್ಟೋಬರ್‌ 18ರಿಂದ ಇದು ಶೇ. 100ರಷ್ಟಾಗಲಿದೆ.

ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದರಿಂದ ಸರ್ಕಾರವು ಈ ಕ್ರಮಕ್ಕೆ ಮುಂದಾಗಿದ್ದು, ವಿಮಾನಗಳ ಹಾರಾಟದ ಸಂಖ್ಯೆ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ.

ಇದನ್ನೂ ಓದಿ:AAI Recruitment: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡಬೇಕಾ; ಇಲ್ಲಿದೆ ಉತ್ತಮ ಅವಕಾಶ

ಆಗಸ್ಟ್ 12 ಮತ್ತು ಸೆಪ್ಟೆಂಬರ್ 18ರ ನಡುವೆ ವಿಮಾನಯಾನದ ಸಾಮರ್ಥ್ಯದ ಮಿತಿ 72.5 ಪ್ರತಿಶತ, ಜುಲೈ 5 ಮತ್ತು ಆಗಸ್ಟ್ 12 ರ ನಡುವೆ 65 ಪ್ರತಿಶತ ಮತ್ತು ಜೂನ್ 1 ಮತ್ತು ಜುಲೈ 5 ರ ನಡುವೆ 50 ಪ್ರತಿಶತ ಇತ್ತು. ಅಕ್ಟೋಬರ್ 9ರಂದು, ಭಾರತೀಯ ವಿಮಾನಯಾನ ಸಂಸ್ಥೆಗಳು 2,340 ದೇಶೀಯ ವಿಮಾನಗಳನ್ನು ಹಾರಾಟ ಪ್ರಾರಂಭಿಸಿದ್ದು, ಕೋವಿಡ್‍ ಪೂರ್ವ ಮಟ್ಟಕ್ಕಿಂತ ಶೇಕಡಾ 71.5 ರಷ್ಟನ್ನು ಹೊಂದಿವೆ.

ಸಚಿವಾಲಯವು ತನ್ನ ಆದೇಶದಲ್ಲಿ "ಯಾವುದೇ ಸಾಮರ್ಥ್ಯದ ಮಿತಿ ಹಾಗೂ ನಿರ್ಬಂಧವಿಲ್ಲದೆ, ನಿಗದಿತ ದೇಶೀಯ ವಾಯು ಕಾರ್ಯಾಚರಣೆಯನ್ನು ಅಕ್ಟೋಬರ್ 18, 2021ರಿಂದ ಪುನಃ ಆರಂಭಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದೆ.

ಎರಡು ತಿಂಗಳ ವಿರಾಮದ ನಂತರ ಕಳೆದ ವರ್ಷ ಮೇ 25ರಂದು ಸರ್ಕಾರವು ನಿಗದಿತ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸಿದಾಗ, ಸಚಿವಾಲಯವು ಕೋವಿಡ್ ಪೂರ್ವದ ದೇಶೀಯ ಸೇವೆಗಳ 33%ಕ್ಕಿಂತ ಹೆಚ್ಚು ಕಾರ್ಯನಿರ್ವಹಣೆಗೆ ಅನುಮತಿ ನೀಡಿತು. ಡಿಸೆಂಬರ್ 2020ರ ವೇಳೆಗೆ ಕ್ರಮೇಣ 80 ಪ್ರತಿಶತಕ್ಕೆ ಹೆಚ್ಚಿಸಲಾಯಿತು. ಈ ವರ್ಷದ ಜೂನ್ 1ರವರೆಗೆ 80 ಶೇಕಡಾ ಮಿತಿ ಜಾರಿಯಲ್ಲಿದೆ.

ದೇಶಾದ್ಯಂತ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆ, ಪ್ರಯಾಣಿಕರ ದಟ್ಟಣೆ ಮತ್ತು ಪ್ರಯಾಣಿಕರ ಹೊರೆ ಕಡಿಮೆಯಾದ ಕಾರಣ ಮೇ ತಿಂಗಳ ನಿರ್ಧಾರವನ್ನು ಜೂನ್ 1 ರಿಂದ 80 ರಿಂದ 50 ಪ್ರತಿಶತಕ್ಕೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಸಚಿವಾಲಯ ಹೇಳಿದೆ.
Published by:Latha CG
First published: