Government Schools: ಗುಜರಿಗಿಂತ ಕೆಟ್ಟದಾಗಿವೆ ದೇಶದ ಸರ್ಕಾರಿ ಶಾಲೆಗಳು; ಪ್ರಧಾನಿಗೆ ಪತ್ರ ಬರೆದ ಕೇಜ್ರಿವಾಲ್‌

ದೇಶಾದ್ಯಂತ 14,500 ಶಾಲೆಗಳ ಉನ್ನತೀಕರಣ ಹಾಗೂ ಅಭಿವೃದ್ಧಿ ಮಾಡುವುದಾಗಿ ಮೋದಿ ಘೋಷಿಸಿದ್ದಾರೆ. ಅದರ ಹಿನ್ನೆಲೆಯಲ್ಲಿಯೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶದ 80% ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು "ಗುಜುರಿ ಸಾಮಾನು ಹಾಕುವ ಕೋಣೆಗಳಿಗಿಂತ ಕೆಟ್ಟದಾಗಿವೆ" ಎಂದು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್‌

ಅರವಿಂದ್ ಕೇಜ್ರಿವಾಲ್‌

  • Share this:
ಪ್ರಧಾನಿ ನರೇಂದ್ರ ಮೋದಿ (Narendra Modi) ಭರ್ಜರಿ ಕೊಡುಗೆ ಘೋಷಿಸಿದ್ದಾರೆ. ದೇಶಾದ್ಯಂತ 14,500 ಶಾಲೆಗಳ ಉನ್ನತೀಕರಣ (Upgrading of Schools) ಹಾಗೂ ಅಭಿವೃದ್ಧಿ (Development) ಮಾಡುವುದಾಗಿ ಮೋದಿ ಘೋಷಿಸಿದ್ದಾರೆ. ಅದರ ಹಿನ್ನೆಲೆಯಲ್ಲಿಯೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶದ 80% ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು (Government School) "ಗುಜರಿ ಸಾಮಾನು ಹಾಕುವ ಕೋಣೆಗಳಿಗಿಂತ ಕೆಟ್ಟದಾಗಿವೆ" ಎಂದು ಹೇಳಿದ್ದಾರೆ. ಇದಕ್ಕೆ ಮುಂಚೆ ಮೋದಿ ಅವರು ದೇಶದಾದ್ಯಂತ 14,500 ಶಾಲೆಗಳನ್ನು ಉನ್ನತೀಕರಿಸಲು, ಪ್ರಧಾನ ಮಂತ್ರಿ ಶಾಲೆಗಳ ರೈಸಿಂಗ್ ಇಂಡಿಯಾ (PM-SHRI) ಯೋಜನೆ ಬಗ್ಗೆ ಹೇಳಿದ್ದರು.

ಪ್ರಧಾನಿಗೆ ಬರೆದ ಪತ್ರದಲ್ಲೇನಿತ್ತು?
ಪ್ರಧಾನಿಗೆ ಸಂಬೋಧಿಸಿದ ಪತ್ರದಲ್ಲಿ ಕೇಜ್ರಿವಾಲ್ ಅವರು, “ಪ್ರಧಾನಿ ಮಂತ್ರಿಗಳೇ, ನೀವು 14,500 ಶಾಲೆಗಳ ಆಧುನೀಕರಣಕ್ಕೆ ಯೋಜನೆ ರೂಪಿಸಿದ್ದೀರಿ ಆದರೆ ನಾವು ಈ ವೇಗದಲ್ಲಿ ಶಾಲೆಗಳ ಆಧುನೀಕರಣ ಕೆಲಸ ಮಾಡಿದರೆ, ನಮ್ಮ ಎಲ್ಲಾ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಲು 100 ವರ್ಷಗಳು ಬೇಕಾಗುತ್ತದೆ. ದೇಶದ ಎಲ್ಲಾ 10 ಲಕ್ಷ ಸರ್ಕಾರಿ ಶಾಲೆಗಳ ಪುನರಾಭಿವೃದ್ಧಿಗೆ ಯೋಜನೆಯನ್ನು ಸಿದ್ಧಪಡಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ ”ಎಂದು ಬರೆದಿದ್ದಾರೆ.

ಗುಜರಿ ಸಾಮಾನು ಹಾಕುವ ಕೋಣೆಗಿಂತ ಕೆಟ್ಟದಾಗಿವೆ
ಇದರ ಬಗ್ಗೆ ಮತ್ತಷ್ಟು ವಿವರಿಸುತ್ತಾ “2.7 ಮಿಲಿಯನ್ ವಿದ್ಯಾರ್ಥಿಗಳಲ್ಲಿ 1.8 ಮಿಲಿಯನ್ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದಾರೆ. 80%ಕ್ಕೂ ಹೆಚ್ಚು ಸರಕಾರಿ ಶಾಲೆಗಳ ಸ್ಥಿತಿ ಗುಜರಿ ಸಾಮಾನು ಹಾಕುವ ಕೋಣೆಗಳಿಗಿಂತ ಕೆಟ್ಟದಾಗಿವೆ. ನಮ್ಮ ದೇಶದಲ್ಲಿರುವ ಕೋಟಿಯಷ್ಟು ಮಕ್ಕಳಿಗೆ ಹೀಗೆ ಶಿಕ್ಷಣ ನೀಡಿದರೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವುದು ಹೇಗೆ?” ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: Bharat Jodo Yatra: ದ್ವೇಷದ ರಾಜಕಾರಣದಿಂದ ಅಪ್ಪನನ್ನು ಕಳೆದುಕೊಂಡೆ, ಈಗ ದೇಶವನ್ನು ಬಲಿಯಾಗಲು ಬಿಡಲ್ಲ: ರಾಹುಲ್ ಗಾಂಧಿ!

1947 ರಲ್ಲಿ ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಉತ್ತಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸದೆ ನಮ್ಮ ದೇಶವು ದೊಡ್ಡ ತಪ್ಪು ಮಾಡಿದೆ ಎಂದರು. “ಮುಂದಿನ 75 ವರ್ಷಗಳಲ್ಲಿ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಹರಿಸದಿರುವುದು ದುರದೃಷ್ಟಕರ. ಭಾರತವು ಹೆಚ್ಚು ಸಮಯವನ್ನು ವ್ಯರ್ಥ ಮಾಡುವುದನ್ನು ಮುಂದುವರಿಸುತ್ತದೆಯೇ?” ಎಂಬ ಪ್ರಶ್ನೆಯನ್ನು ಸಹ ಪತ್ರದಲ್ಲಿ ಕೇಳಿದ್ದಾರೆ.

ಶಿಕ್ಷಕರ ದಿನದಂದು ಹೊಸ ಯೋಜನೆ ಘೋಷಣೆ
ಸೋಮವಾರ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಮೋದಿ ಅವರು PM-SHRI ಯೋಜನೆಯಡಿ ಮಾದರಿ ಶಾಲೆಗಳ ಅಭಿವೃದ್ಧಿಯನ್ನು ಘೋಷಿಸಿದರು. PM-SHRI ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿರುವ ಶಾಲೆಗಳು ಹೇಗಿರಲಿದೆ ಎಂಬುದಕ್ಕೆ ಆ ದಿನ ಮೋದಿಯು ಮಾಹಿತಿಯನ್ನು ನೀಡಿದರು.

ಹೊಸ ಯೋಜನೆಯಲ್ಲಿ ಏನೇನೆಲ್ಲಾ ಒಳಗೊಂದಿಗೆ?
ಶಾಲೆಯ ಶಿಕ್ಷಣಗಳು ಆಧುನಿಕತೆಯ ಸ್ಪರ್ಶ ಪಡೆದುಕೊಳ್ಳಲಿವೆ. ಆಧುನಿಕ, ಪರಿವರ್ತನೆಯ ಹಾಗೂ ಸಮಗ್ರ ವಿಧಾನವನ್ನು ಉನ್ನತೀಕರಿಸಿದ ಶಾಲೆಗಳು ಹೊಂದಿರಲಿವೆ. ಆವಿಷ್ಕಾರ ಆಧಾರಿತ ಬೋಧನೆ ಮಾರ್ಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್‌ರೂಮ್, ಕ್ರೀಡೆ ಸೇರಿದಂತೆ ಹಲವು ಮಜಲುಗಳ ಪಠ್ಯ ಹಾಗೂ ಪಠ್ಯೇತರ ಚುಟುವಟಿಕೆ, ತರಬೇತಿಗಳನ್ನು ಈ ಶಾಲೆಗಳಲ್ಲಿ ನೀಡಲಾಗುತ್ತದೆ. ಪ್ರಮುಖವಾಗಿ ಆಧುನಿಕ ಮೂಲಸೌಕರ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ ಎಂದು ಮೋದಿ ಹೇಳಿದ್ದರು.

ಇದನ್ನೂ ಓದಿ:  Rajnath Singh: ರಾಜನಾಥ್ ಸಿಂಗ್​ಗೆ ಮಂಗೋಲಿಯಾ ಕುದುರೆ ಉಡುಗೊರೆ! ಏನಿದರ ವಿಶೇಷತೆ?

PM SHRI ಶಾಲೆಗಳು ಬಹುಭಾಷಾ ಕಲಿಕೆ, ವಿಭಿನ್ನ ಶೈಕ್ಷಣಿಕ ಸಾಮರ್ಥ್ಯ, ಸಮಾನ ಹಾಗೂ ಸಂತೋಷದಾಯಕ ಶಾಲಾ ವಾತವರಣ ಕಲ್ಪಿಸಲಿದೆ. ಉನ್ನತ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸುವ ಕೆಲಸವಾಗಲಿದೆ.

ಪಂಜಾಬ್‌ನಲ್ಲಿ ಸರ್ಕಾರವನ್ನು ರಚನೆ ಮಾಡಿದ AAP  
ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) 'ಮೇಕ್ ಇಂಡಿಯಾ ನಂಬರ್ ಒನ್' ಅಭಿಯಾನವನ್ನು ಹರಿಯಾಣದಿಂದ ಪ್ರಾರಂಭಿಸಲು ಸಿದ್ಧರಾಗಿರುವ ದಿನದಂದು ಪತ್ರ ಬರೆದಿದ್ದಾರೆ. ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. AAP ಪಕ್ಷವು, ಈ ವರ್ಷ ಪಂಜಾಬ್‌ನಲ್ಲಿ ಸರ್ಕಾರವನ್ನು ರಚನೆ ಮಾಡಿದೆ. ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಶಿಕ್ಷಣವನ್ನು ಮುಂದಿಟ್ಟುಕೊಂಡು ಈ ವರ್ಷ ಚುನಾವಣೆಗೆ ಪ್ರಯತ್ನಿಸುತ್ತಿದೆ.
Published by:Ashwini Prabhu
First published: