• Home
  • »
  • News
  • »
  • national-international
  • »
  • Government School: ಈ ಸರ್ಕಾರಿ ಶಾಲೆ ಶಾಪವಲ್ಲದೆ ಬೇರೇನೂ ಅಲ್ಲವಂತೆ! ಯಾಕಂತ ನೀವೇ ನೋಡಿ

Government School: ಈ ಸರ್ಕಾರಿ ಶಾಲೆ ಶಾಪವಲ್ಲದೆ ಬೇರೇನೂ ಅಲ್ಲವಂತೆ! ಯಾಕಂತ ನೀವೇ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಂದು ಸರ್ಕಾರಿ ಶಾಲೆ ಇದೆ ನೋಡಿ, ಅದರಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಕಷ್ಟ ಪಡುತ್ತಿದ್ದದ್ದನ್ನು ಅರ್ಥ ಮಾಡಿಕೊಂಡು ಶಾಲೆಯ ಪ್ರಾಂಶುಪಾಲರು ಖುದ್ದು ಗ್ರಾಮಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

  • News18 Kannada
  • Last Updated :
  • Tamil Nadu, India
  • Share this:

ನಮ್ಮ ದೇಶವು ಎಷ್ಟೇ ಪ್ರಗತಿ ಹೊಂದಿದ್ದರೂ ಸಹ ಇನ್ನೂ ನಮಗೆ ಅಕ್ಷರ ಕಲಿಸುವ ಕೆಲವು ಸರ್ಕಾರಿ ಶಾಲೆಗಳು (Government School)) ಮಾತ್ರ ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲದೆ ಕೊರಗುತ್ತಿವೆ. ಇಲ್ಲಿ ಸಹ ಅಂತಹದೇ ಒಂದು ಸರ್ಕಾರಿ ಶಾಲೆ ಇದೆ ನೋಡಿ, ಅದರಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು (Students) ಕಷ್ಟ ಪಡುತ್ತಿದ್ದದ್ದನ್ನು ಅರ್ಥ ಮಾಡಿಕೊಂಡು ಶಾಲೆಯ ಪ್ರಾಂಶುಪಾಲರು ಖುದ್ದು ಗ್ರಾಮಸಭೆಯಲ್ಲಿ ವಿಷಯವನ್ನುಪ್ರಸ್ತಾಪಿಸಿದ್ದಾರೆ.  ತಮಿಳುನಾಡಿನ (Tamil Nadu) ಕೃಷ್ಣಗಿರಿ ಜಿಲ್ಲೆಯಲ್ಲಿ ಗ್ರಾಮಸಭೆಯನ್ನುದ್ದೇಶಿಸಿ ಮಾತನಾಡಿದ ಸರ್ಕಾರಿ ಶಾಲೆಯ ಪ್ರಾಂಶುಪಾಲರು, ಸರ್ಕಾರಿ ಶಾಲೆಯನ್ನು ಏಕೆ ಶಾಪಗ್ರಸ್ತ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದಾಗ ದುಃಖ ಅವರಲ್ಲಿ ಉಮ್ಮಳಿಸಿ ಬರುತ್ತಿತ್ತು. 


ಗ್ರಾಮಸಭೆಯಲ್ಲಿ ಶಾಲೆಯ ದುಸ್ಥಿತಿಯ ಬಗ್ಗೆ ಹೇಳಿಕೊಂಡ ಪ್ರಾಂಶುಪಾಲರು
ಕೃಷ್ಣಗಿರಿ ಜಿಲ್ಲೆಯ ಮಾಥುರ್ ಪಟ್ಟಣದ ಸಾಲಮರತುಪಟ್ಟಿ ಗ್ರಾಮದಲ್ಲಿ ಗ್ರಾಮಸಭೆ ನಡೆಯಿತು. ಓಲೈಪಟ್ಟಿಯ ಸರ್ಕಾರಿ ಶಾಲೆಯ ಪ್ರಾಂಶುಪಾಲರಾದ ಶಕ್ತಿ ಅವರು, ಶಾಲೆಯಲ್ಲಿ 95 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೂಲ ಸೌಕರ್ಯಗಳ ಕೊರತೆಯಿದೆ ಮತ್ತು ಅವುಗಳನ್ನು ಪಡೆಯಲು ನಾನು ಕಚೇರಿಯಿಂದ ಕಚೇರಿಗೆ ಓಡಾಡಬೇಕಾಯಿತು ಎಂದು ಹೇಳಿದರು. ಆದರೂ ಸಹ ತನ್ನ ಎಲ್ಲಾ ಪ್ರಯತ್ನಗಳು ನಿಷ್ಪ್ರಯೋಜಕವಾದವು ಎಂದು ಅವರು ತುಂಬಾನೇ ಬೇಸರದಿಂದ ಹೇಳಿಕೊಂಡರು.


ಒಂದೇ ಕೋಣೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆಯಂತೆ!
60 ವರ್ಷಗಳಷ್ಟು ಹಳೆಯದಾದ ಸರ್ಕಾರಿ ಶಾಲೆಯ ಕಟ್ಟಡವನ್ನು ನೆಲಸಮಗೊಳಿಸಿದ ನಂತರ, ಎಲ್‌ಕೆಜಿ ಯಿಂದ 3ನೇ ತರಗತಿಯವರೆಗೆ ಒಂದೇ ಕೋಣೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.


4 ಮತ್ತು 5ನೇ ತರಗತಿಗಳ ಮಕ್ಕಳನ್ನು ಒಂದೇ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು ಮತ್ತು 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸಹ ಒಳ್ಳೆಯ ಸ್ಥಳವಿಲ್ಲ ಎಂದು ಅವರು ಹೇಳಿದರು.


ಮಕ್ಕಳ ಸುರಕ್ಷತೆಯ ಬಗ್ಗೆ ಭಯ ಶುರುವಾಗಿದೆಯಂತೆ..
"ಪೋಷಕರು ಉತ್ತಮ ಕಟ್ಟಡ ಇರುವ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಬಯಸುತ್ತಾರೆ. ನಾನು ಈ ವಿಷಯವನ್ನು ಗ್ರಾಮಸಭೆಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದೇನೆ. ನಮಗೆ ಕಟ್ಟಡಗಳು, ಸ್ನಾನಗೃಹಗಳು, ಕಾಂಪೌಂಡ್ ಗೋಡೆ ಮತ್ತು ಮೈದಾನಗಳು ಬೇಕು.


ಇದನ್ನೂ ಓದಿ: Cute Baby Video: ಮಲಗಿದ್ದ ಅಮ್ಮನಿಗೆ ಕಾಟ ಕೊಟ್ಟು ಎಬ್ಬಿಸಿದ ಪುಟಾಣಿ, ಫುಲ್ ವೈರಲ್ ಆಗ್ತಿದೆ ವಿಡಿಯೋ


ವಿದ್ಯಾರ್ಥಿಗಳು 8ನೇ ತರಗತಿಯವರೆಗೆ ಓದುತ್ತಿದ್ದಾರೆ, ಅಂದರೆ ಅವರು 13 ವರ್ಷ ವಯಸ್ಸಿನವರಾಗಿರುತ್ತಾರೆ. ಅವರು ಆರೋಗ್ಯಕರವಾಗಿ ಬೆಳೆಯಲು ಮತ್ತು ರೋಗಗಳಿಂದ ಮುಕ್ತರಾಗಲು ಅವರು ಚೆನ್ನಾಗಿ ಆಟವನ್ನು ಆಡಬೇಕು. ಆದರೆ, ನಮ್ಮ ಶಾಲೆಗಳಲ್ಲಿ ಅಂತಹ ಯಾವುದೇ ಆಟದ ಮೈದಾನ ಸಹ ಇಲ್ಲ" ಎಂದು ಶಕ್ತಿ ಅವರು ಹೇಳಿದರು. ಶಾಲೆಯ ಎರಡು ಕಟ್ಟಡಗಳಲ್ಲಿ ಒಂದಕ್ಕೆ ಸರಿಯಾದ ವಿದ್ಯುತ್ ಪಡೆಯಲು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಹೇಗೆಲ್ಲಾ ಓಡಾಡಬೇಕಾಯಿತು ಎಂಬುದನ್ನು ವಿವರಿಸುವಾಗ ಪ್ರಾಂಶುಪಾಲರು ವೇದಿಕೆ ಮೇಲೆಯೇ ಕಣ್ಣೀರು ಹಾಕಿದರು.


“ವೈರಿಂಗ್ ಅನ್ನು 500 ಮೀಟರ್ ವರೆಗೆ ಮಾಡಬೇಕಾಗಿತ್ತು ಮತ್ತು ಯಾವುದೇ ತಂತಿಯನ್ನು ಹಾಕಿದರೂ ಅದು ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ, ಇದು 'ಅರ್ಥ್ ಶಾಕ್' ಗೆ ಕಾರಣವಾಯಿತು ಎಂದು ಶಕ್ತಿ ಹೇಳಿದರು. ಮಕ್ಕಳ ಸುರಕ್ಷತೆಯ ಬಗ್ಗೆ ನನಗೆ ತುಂಬಾನೇ ಹೆದರಿಕೆಯಿದೆ” ಎಂದು ಶಕ್ತಿ ಅವರು ಹೇಳಿದರು.


'ಈ ಸರ್ಕಾರಿ ಶಾಲೆ ಶಾಪವಲ್ಲದೆ, ಬೇರೇನೂ ಅಲ್ಲ'
"ನಾನು ಬಿಡಿಒ ಕಚೇರಿಗೆ ಹೋಗಿ ಪತ್ರವನ್ನು ನೀಡಿದೆ ಆದರೆ ಅವರು 25,000 ರಿಂದ 30,000 ರೂಪಾಯಿಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು ಮತ್ತು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಕೆಲಸವನ್ನು ಮುಗಿಸಿ ಕೊಡಲು ನನ್ನ ಆದಾಯವನ್ನು ಬಳಸುವಂತೆ ಅವರು ನನ್ನನ್ನು ಕೇಳಿದರು. ನಾವು ನಮ್ಮ ಕೆಲಸಕ್ಕೆ ಕಮಿಷನ್ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿದೆಯೇ? ನಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.


ನಾವು ಮೋಟಾರ್ ಪಂಪ್ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆ ಶಾಪಗ್ರಸ್ತವಲ್ಲದೆ ಬೇರೇನೂ ಅಲ್ಲ. ಈ ರೀತಿ ಭಿಕ್ಷೆ ಬೇಡುವ ಬದಲು ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದು ಉತ್ತಮ" ಎಂದು ಪ್ರಾಂಶುಪಾಲರು ವಿಷಾದಿಸಿದರು.


ಇದನ್ನೂ ಓದಿ: Birthday Celebration: 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪವಾಡ ಹುಡುಗ, ಈತನ ಬಗ್ಗೆ ತಾಯಿ ಏನು ಹೇಳಿದ್ದಾರೆ ನೋಡಿ


ಒಂದು ಕಡೆ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಬೆಳಿಗ್ಗೆ ಉಪಾಹಾರವನ್ನು ಒದಗಿಸಲು ಮತ್ತು ಇತರ ಹಲವಾರು ಫಲಾನುಭವಿ ಯೋಜನೆಗಳೊಂದಿಗೆ ಶಾಲೆಗೆ ಹಾಜರಾಗಲು ಮಕ್ಕಳನ್ನು ಪ್ರೋತ್ಸಾಹಿಸಲು ಹಣವನ್ನು ಹಂಚಿಕೆ ಮಾಡಿದ್ದೇವೆ ಅಂತ ಹೇಳುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಸರ್ಕಾರಿ ಶಾಲೆಯ ಪ್ರಾಂಶುಪಾಲರಾದ ಶಕ್ತಿ, ತನ್ನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ.

Published by:Ashwini Prabhu
First published: