ಯುಪಿ, ಮಹಾರಾಷ್ಟ್ರ, ಬಿಹಾರ ಸೇರಿದಂತೆ 5 ರಾಜ್ಯಗಳಲ್ಲಿ ಹೆಚ್ಚು ಕೊರೊನಾ ಲಸಿಕೆ ಬ್ಯಾಲೆನ್ಸ್- 10 ಕೋಟಿಗೂ ಹೆಚ್ಚು ಡೋಸ್ ಬಾಕಿ

Corona Vaccination: ಹಾಗಾಗಿ ಸರ್ಕಾರದ ಮುಂದೆ ಈಗ ಇಂಥಹ ಜನರನ್ನು ಮನವೊಲಿಸಿ ಲಸಿಕೆ ಹಾಕುವ ಸವಾಲಿದೆ ಎಂದರೆ ತಪ್ಪಾಗಲಾರದು.   ಆದರೂ, ನರೇಂದ್ರ ಮೋದಿ ಸರ್ಕಾರದ ಮನೆ-ಮನೆಗೆ ವ್ಯಾಕ್ಸಿನೇಷನ್ ಡ್ರೈವ್ ('ಹರ್ ಘರ್ ದಸ್ತಕ್) ಎಂಬ ವಿಶೇಷ ಯೋಜನೆಯ ಮೂಲಕ ಕೊರೊನಾ ಲಸಿಕೆಗಳನ್ನು ಹೆಚ್ಚು ಜನರಿಗೆ ನೀಡಲು ಸಹಾಯ ಮಾಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ(Uttar Pradesh), ಮಹಾರಾಷ್ಟ್ರ(Maharashtra), ಪಶ್ಚಿಮ ಬಂಗಾಳ(West Bengal), ಬಿಹಾರ(Bihar) ಮತ್ತು ರಾಜಸ್ಥಾನದಲ್ಲಿ(Rajsthan) 10 ಕೋಟಿಗೂ ಹೆಚ್ಚು ಕೊರೊನಾ ಲಸಿಕೆ (Corona Vaccination)ಬ್ಯಾಲೆನ್ಸ್ ಇದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ  ಕೊರೊನಾ ಲಸಿಕೆ ಡೋಸ್ ಹೆಚ್ಚು ಉಳಿಸಿಕೊಂಡ ಮೊದಲ 5 ರಾಜ್ಯಗಳು ಇವು ಎನ್ನಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಸಭೆಯಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಸುಮಾರು 23 ಕೋಟಿ ಕೊರೊನಾ ಲಸಿಕೆ ಡೋಸ್‌ಗಳ ದಾಸ್ತಾನು ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಲಭ್ಯವಿದೆ ಎಂಬ ವಿಚಾರ ಬಹಿರಂಗವಾಗಿದೆ. 

ಸರ್ಕಾರದ ಅಂಕಿ ಅಂಶ ಹೇಳೋದೇನು? 

ಉತ್ತರ ಪ್ರದೇಶವು ಅತಿ ಹೆಚ್ಚು ಬಳಕೆಯಾಗದ ಕೊರೊನಾ ಲಸಿಕೆ ಪ್ರಮಾಣವನ್ನು ಅಂದರೆ 2.9 ಕೋಟಿ ಡೋಸ್ ಹೊಂದಿದೆ, ಉಳಿದ ರಾಜ್ಯಗಳಲ್ಲಿನ ಎಷ್ಟು ಕೊರೊನಾ ಲಸಿಕೆ ಡೋಸ್ ಉಳಿದಿದೆ ಎಂಬ ಪಟ್ಟಿ ಇಲ್ಲಿದೆ. ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳ (2.5 ಕೋಟಿ), ಮಹಾರಾಷ್ಟ್ರ (2.2 ಕೋಟಿ), ಬಿಹಾರ (1.80 ಕೋಟಿ), ರಾಜಸ್ಥಾನ (1.43 ಕೋಟಿ), ತಮಿಳುನಾಡು (1.35 ಕೋಟಿ) ಮತ್ತು ಮಧ್ಯಪ್ರದೇಶ (1.1 ಕೋಟಿ) ಡೋಸ್​ಗಳನ್ನು ಹೊಂದಿದೆ ಎಂದು ಸಚಿವಾಲಯದ ಅಂಕಿ ಅಂಶ ಹೇಳುತ್ತದೆ.

ಅತಿ ಹೆಚ್ಚು ದಾಸ್ತಾನು ಹೊಂದಿರುವ ಕೆಲವು ರಾಜ್ಯಗಳು ಅತಿ ಹೆಚ್ಚು ಲಸಿಕೆ ಹಾಕಿಸಿಕೊಳ್ಳದ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಾಗಿದ್ದು, ಇನ್ನೂ ಎರಡು-ಡೋಸ್ ಕೊರೊನಾ ಲಸಿಕೆಯ ಮೊದಲ ಶಾಟ್ ಅನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಚಿವಾಲಯ ತಿಳಿಸಿದೆ.  ಉದಾಹರಣೆಗೆ, ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶವದಲ್ಲಿ ಸುಮಾರು 3.50 ಕೋಟಿ ಜನರು ಲಸಿಕೆಯನ್ನೇ ಪಡೆದಿಲ್ಲ ಎಂದು ಅಂಕಿ ಅಂಶ ಸೂಚಿಸಿದ್ದು, ನಂತರ ಬಿಹಾರದಲ್ಲಿ 1.89 ಕೋಟಿ ಜನರು ಕೊರೊನಾ ಮೂರನೇ ಅಲೆ ಸಮೀಸುತ್ತಿದ್ದರೂ ಲಸಿಕೆ ಪಡೆಯದೇ ಇದ್ದರೆ ಎಂಬ ಅಂಶ ಬಹಿರಂಗವಾಗಿದೆ.

ಇದನ್ನೂ ಓದಿ: ಇಂಡೋ-ರಷ್ಯಾ ಸ್ನೇಹವನ್ನು ಬಣ್ಣಿಸಿದ ಮೋದಿ- ಶೃಂಗಸಭೆಯಲ್ಲಿ ಹಲವಾರು ಒಪ್ಪಂದಕ್ಕೆ ಸಹಿ

ಇನ್ನು ಲಸಿಕೆ ಪಡೆಯದ ಇತರ ರಾಜ್ಯಗಳ ವಿಚಾರಕ್ಕೆ ಬಂದರೆ  ಮಹಾರಾಷ್ಟ್ರದಲ್ಲಿ ಸುಮಾರು 1.71 ಕೋಟಿ ಜನರು ಲಸಿಕೆ ಪಡೆದಿಲ್ಲ ಮತ್ತು ತಮಿಳುನಾಡಿನಲ್ಲಿ ಒಟ್ಟು 1.24 ಕೋಟಿ ಜನರು ಇನ್ನೂ ಲಸಿಕೆಯನ್ನು ಪಡೆದಿಲ್ಲ ಎಂದು ಸರ್ಕಾರದ ಅಂಕಿ ಅಂಶ ಹೇಳಿದೆ.  100 ಕೋಟಿಗೂ ಹೆಚ್ಚು ಕೊರೊನಾ ಲಸಿಕೆಗಳನ್ನು ನೀಡುವಲ್ಲಿ ಭಾರತವು ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 125 ಕೋಟಿಗೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ.

ಲಸಿಕೆ ಡೋಸ್ ಉಳಿಯಲು ಕಾರಣವೇನು? 

ಆದರೆ ಜನ ಈ ರೀತಿ ಲಸಿಕೆಯ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ಸವಾಲುಗಳನ್ನು ಎದುರಿಸಲು ಮತ್ತು ಉಳಿದ ಜನಸಂಖ್ಯೆಗೆ ಲಸಿಕೆ ಹಾಕಲು ಕಠಿಣವಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಮೊದಲ 10, 20 ಅಥವಾ 70%  ಜನರಿಗೆ ಲಸಿಕೆ ಹಾಕುವುದು ಸುಲಭ, ಆದರೆ ಕೊನೆಯ 10-20%  ಜನರಿಗೆ ಹಾಕುವುದು ಕಷ್ಟಕರ. ಏಕೆಂದರೆ ಇಲ್ಲಿ ನೀವು ಒಂದೆಲ್ಲ ಒಂದು ಕಾರಣದಿಂದ ತಲುಪಲು ಅಥವಾ ಮನವರಿಕೆ ಮಾಡಿಕೊಡಲು ಕಷ್ಟಕರವಾದ ಜನರಿರುತ್ತಾರೆ. ದೇಶದಲ್ಲಿ ಹಲವಾರು ಜನರಲ್ಲಿ ಲಸಿಕೆಯ ಬಗ್ಗೆ ತಪ್ಪು ಮಾಹಿತಿ ಇದ್ದು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ.

ಹಾಗಾಗಿ ಸರ್ಕಾರದ ಮುಂದೆ ಈಗ ಇಂಥಹ ಜನರನ್ನು ಮನವೊಲಿಸಿ ಲಸಿಕೆ ಹಾಕುವ ಸವಾಲಿದೆ ಎಂದರೆ ತಪ್ಪಾಗಲಾರದು.   ಆದರೂ, ನರೇಂದ್ರ ಮೋದಿ ಸರ್ಕಾರದ ಮನೆ-ಮನೆಗೆ ವ್ಯಾಕ್ಸಿನೇಷನ್ ಡ್ರೈವ್ ('ಹರ್ ಘರ್ ದಸ್ತಕ್) ಎಂಬ ವಿಶೇಷ ಯೋಜನೆಯ ಮೂಲಕ ಕೊರೊನಾ ಲಸಿಕೆಗಳನ್ನು ಹೆಚ್ಚು ಜನರಿಗೆ ನೀಡಲು ಸಹಾಯ ಮಾಡಿದೆ.

ಸರ್ಕಾರದ ಮಾಹಿತಿಯ ಪ್ರಕಾರ, ಅಕ್ಟೋಬರ್‌ನಲ್ಲಿ ಲಸಿಕೆ ಹಾಕಲು ಪ್ರಾರಂಭಿಸಿದ ನಂತರ ಮೊದಲ ಡೋಸ್ ಕವರೇಜ್ 5.9% ರಷ್ಟು ಹೆಚ್ಚಾಗಿದೆ ಆದರೆ ಎರಡನೇ ಡೋಸ್ ಕವರೇಜ್ 11.7% ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಫೆಬ್ರವರಿ ವೇಳೆಗೆ ಭಾರತಕ್ಕೆ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ: IIT ವಿಜ್ಞಾನಿ ಎಚ್ಚರಿಕೆ

ಇನ್ನು ದೇಶದಲ್ಲಿ ಈಗಾಗಲೇ ಓಮೈಕ್ರಾನ್ ಸೋಂಕು ಹರಡಲು ಆರಂಭಿಸಿದ್ದು 21ಕಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡು ಜನರಲ್ಲಿ ಆತಂಕ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜನರು ಹೆಚ್ಚು ಲಸಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನುತ್ತದೆ ಸರ್ಕಾರ.
Published by:Sandhya M
First published: